ಹಲ್ಲೆ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ : ದಿನಾಂಕ 28.11.2016 ರಂದು ಶ್ರೀ. ಮಹ್ಮದ್
ರಫೀಕ್ ಈತನು ತನ್ನ ಹೇಳಿಕೆ ಫಿರ್ಯಾದಿಯಲ್ಲಿ ದಿನಾಂಕ 27.11.2016 ರಂದು ಮುಂಜಾನೆ ತನಗೆ ಮತ್ತು ಪ್ರತಾಪ್‌ಸಿಂಗ್ ನ ಮಕ್ಕಳ ಮಧ್ಯ 20 ರೂಪಾಯಿ
ಸೆಂಗಾ ಕೊಡುವ ವಿಷಯದಲ್ಲಿ ಜಗಳ ಆಗಿದ್ದು ಅದೇ ವಿಷಯಕ್ಕೆ ನಾನು ಮನೆಯಲ್ಲಿ ಇರುವಾಗ ಪ್ರತಾಪ್
ಸಿಂಗ್ ಮತ್ತು ಆತನ ಹೆಂಡತಿ ಮತ್ತು ಮಕ್ಕಳು ಕೂಡಿಕೊಂಡು ನನ್ನ ಮನೆಗೆ ಬಂದು ನನಗೆ ಅವಾಚ್ಯವಾಗಿ
ಬೈದು ಕೈಯಿಂದ, ಬಡಿಗೆಯಿಂದ, ರಾಡಿನಿಂದ ನನಗೆ ಹೊಡೆದು ರಕ್ತಗಾಯ
ಗೊಳಿಸಿ ಜೀವದ ಬೆದರಿಕೆ ಹಾಕಿದ ಬ್ಗಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರಗಿ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ:28/11/2016 ರಂದು ಶ್ರೀ
ರಾವುತಪ್ಪ ತಂದೆ ನಿಂಗಪ್ಪ ಮುಗಳಿ ಸಾ: ಕವಲಗಾ(ಕೆ) ರವರು ಠಾಣೆಗೆ ಹಾಜರಾಗಿ ದಿನಾಂಕ
27/11/2016 ರಂದು ಸಾಯಂಕಾಲ ತನ್ನ
ಮನೆಯಲ್ಲಿರುವಾಗ ಈ ಮೊದಲು ನಮ್ಮ ಮೇಲೆ ವೈಮನಸ್ಸು ಹೊಂದಿದ್ದ 1] ಸಿದ್ದಪ್ಪ
ಗೋಟುರು 2)
ಸಾಯಬಣ್ಣ ತಂದೆ ಶರಣಪ್ಪ ಗೋಟುರ 3)
ಕಲ್ಲಪ್ಪ ತಂದೆ ಶರಣಪ್ಪ ಗೋಟುರ 4] ಶರಣಪ್ಪ ತಂದೆ ಸಾಯಬಣ್ಣ ಗೋಟುರ 5] ಸಿದ್ದಪ್ಪ ತಂದೆ ಅಯ್ಯಪ್ಪ
ಹರವಾಳ 6] ಲಕ್ಷ್ಮಿ ಬಾಯಿ ಗಂಡ ಕಲ್ಲಪ್ಪ 7] ಭೀಮಬಾಯಿ ಗಂಡ ಸಾಯಬಣ್ಣ 8] ಮಲ್ಲಮ್ಮ ಗಂಡ ಯಲ್ಲಪ್ಪ
9] ಕಾವೇರಿ ಗಂಡ ಶರಣಪ್ಪ 10] ಯಲ್ಲಪ್ಪ ತಂದೆ ಸಾಯಬಣ್ಣ ಎಲ್ಲರೊ ಕೂಡಿಕೊಂಡು ಬಂದು ವಿನಾಳ ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಕೊಲೆ
ಮಾಡುವ ಉದ್ದೇಶದಿಂದ ಬಡಿಗೆಯಿಂದ ಹೋಡೆಯುತ್ತಿರುವಾಗ
ಬಿಡಿಸಲು ಬಂದ ನನ್ನ ತಾಯಿ ತಾಯಿ
ಭಾಗಮ್ಮಳಿಗೆ ಒದ್ದು
ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಬಡಿಗೆಯಿಂದ
ನನಗೆ ಹೊಡೆಯುತ್ತಿರುವಾಗ ನಾನು
ತಪ್ಪಿಸಿಕೊಂಡಿದಕ್ಕೆ ನಮ್ಮ ತಾಯಿಯ ಬಲಗಾಲು ತೋಡೆಗೆ ಬಡಿಗೆ ಏಟು ಬಿದ್ದಿರುತ್ತದೆ. ನಮ್ಮ
ಅಣ್ಣದಿರಾದ ಶಂಕರ ಮಾಳಪ್ಪ ನನ್ನ ಹೆಂಡತಿ ಲಕ್ಷ್ಮಿಬಾಯಿ ನಮ್ಮ ಅತ್ತಿಗೆ ನೀಲಮ್ಮ ಗಂಡ ಮಾಳಪ್ಪ
ಬಿಡಿಸಲು ಬಂದಾಗ ಅವರಿಗೆ ಸಹ
ಕೈಯಿಂದ ಮುಷ್ಠಿ ಮಾಡಿ ಹೋಡೆದು ಅವಾಚ್ಯ
ಶಬ್ದಗಳಿಂದ ಬಯ್ಯುತ್ತಿರುವಾಗ ಅಲ್ಲಿಯೆ ಇದ್ದ ಹ್ರಾಮದ ಜನರು ಬಿಡಿಸಿದ್ದು ಇನ್ನೂ
ಮುಂದೆ ನೀವು ಎಲ್ಲಿ
ಸಿಕ್ಕರೂ ಜೀವ ಸಹಿತ ಇಡುವುದಿಲ್ಲಾ ಅಂತಾ ಹೆದರಿಸಿದ್ದು
ಕಾರಣ ಸದರಿ ನನಗೆ ಕೊಲೆಗೆ ಯತ್ನಿಸಿ
ಬಡಿಗೆಯಿಂದ ಹೋಡೆದು ಬೈದು ರಕ್ತ ಗಾಯ, ಗುಪ್ತಗಾಯಗೊಳಿಸಿ ಜೀವದ ಭಯ ಹಾಕಿದವರ ಮೇಲೆ
ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂಧ ಫರಹತಾಬಾದ ಠಾಣೇಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರೈತ ಆತ್ಮಹತ್ಯೆ :-
ಆಳಂದ ಪೊಲೀಸ್ ಠಾಣೆ: ದಿನಾಂಕ: 28/11/2016 ರಂದು ಶ್ರೀಮತಿ. ಹಿರಾಬಾಯಿ ಗಂಡ
ಮಲ್ಲಿನಾಥ ಕೋರೆ ಮು:ನಿರಗುಡಿ ಇವರು ಠಾಣೆಗೆ ಹಾಜರಾಗಿ ತನಗೆ
ನಾಲ್ಕು ಜನ ಮಕ್ಕಳಿದ್ದು ನಿರಗುಡಿ ಸೀಮಾಂತರದಲ್ಲಿ ನನ್ನ ಗಂಡನ ಹೆಸರಿನಲ್ಲಿ 5 ಎಕರೆ ಜಮೀನು
ಇದ್ದು ಅದನ್ನು ನನ್ನ ಗಂಡ
ಒಕ್ಕಲುತನ ಮಾಡುತ್ತಾ ಉಪಜೀವಿಸುತ್ತಿದ್ದೆವು ಆ ಹೊಲದ
ಮೇಲೆ SBH ಬ್ಯಾಂಕ ನಿರಗುಡಿಯಲ್ಲಿ 80,000/- ಸಾವಿರ ಸಾಲ ಪಡೆದಿದ್ದು
ಕಳೆದ ವರ್ಷ ಮಳೆ ಬರದಿದ್ದರಿಂದ ಬರಗಾಲ ಬಿದ್ದು ಬಿತ್ತನೆ ಮಾಡಿದ
ಬೆಳೆ ಹಾನಿಯಾಗಿದ್ದರಿಂದ ಗ್ರಾಮದಲ್ಲಿ ಜನರಿಂದ ಕೈಗಡವಾಗಿ 04-05 ಲಕ್ಷ
ರೂಪಾಯಿ ತಗೆದುಕೊಂಡಿದ್ದು ಇದನ್ನು ಹೇಗೆ ತಿರಿಸುವದು ಅಂತಾ ಆಗಾಗ ವಿಚಾರ
ಮಾಡುತ್ತಾ ಕುಳಿತುಕೊಳ್ಳುತ್ತಿದ್ದರು ಹೇಗಾದರು ಮಾಡಿ ತಿರಿಸಿದರಾಯಿತು ಅಂತಾ
ಅವರಿಗೆ ಸಮಾಧಾನದ ಮಾತು
ಹೇಳುತ್ತಾ ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ:28/11/2016 ರಂದು ಮದ್ಯಾಹ್ನ 02 ಗಂಟೆ
ಸುಮಾರಿಗೆ ನನ್ನ ಗಂಡ ಮಲ್ಲಿನಾಥನು ಬೇಜಾರದಿಂದಲೆ ಹೊಲಕ್ಕೆ ಹೋಗುತ್ತೇನೆ
ಅಂತಾ ಮನೆಯಿಂದ ಹೋಗಿದ್ದು. ಮಧ್ಯಾನ್ನ 3 ಗಂಟೆ ಸುಮಾರಿಗೆ ಸಿದ್ರಾಮಪ್ಪಾ
ತಂದೆ ಶಿವರುದ್ರ ಕೋರೆ ಅವರು ನಮ್ಮ ಮನೆಗೆ ಬಂದು ನಮ್ಮ ಹೊಲದಲ್ಲಿ ನನ್ನ ಗಂಡ ಮಲ್ಲಿನಾಥ
ಇವರು ನೇಣುಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ತಿಳಿಸಿದಾಗ ನಾನು ಹಾಗೂ ಗ್ರಾಮದ ಜನರು ಹೊಲಕ್ಕೆ ಹೋಗಿ
ನೋಡಲು ನನ್ನ ಗಂಡನು ತನಗಾದ ಸಾಲ ಹೇಗೆ ತಿರಿಸುವದು ಅಂತಾ ಮನಸ್ಸಿನ ಮೇಲೆ ಪರಿಣಾಮ
ಮಾಡಿಕೊಂಡು ನಮ್ಮ ಹೊಲದಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು. ಮುಂದಿನ ಕ್ರಮ ಜರುಗಿಸುವಂತೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
No comments:
Post a Comment