ನರೋಣಾ ಠಾಣೆ : ದಿನಾಂಕ: 05/11/2016 ರಂದು 8;45
ಪಿ.ಎಂ.ಕ್ಕೆ ನಾನು ಠಾಣೆಯಲ್ಲಿ ಇದ್ದಾಗ
ಬಾತ್ಮಿ ಬಂದಿದ್ದೇನಂದರೆ. ಚಿಂಚನಸೂರ ಗ್ರಾಮದ ಸೀಮಾಂತರದ ಬಾಳಪ್ಪಾ ಇವರಿಗೆ ಸೇರಿದ ಹೊಲದಲ್ಲಿ
ರಾತ್ರಿ ಸಮಯದಲ್ಲಿ ಅನಧಿಕೃತವಾಗಿ ಪ್ರಾಣಿಗಳ ಕೊಳೆತು ನಾರುತ್ತಿರುವ ಮಾಂಸ (ಕರಳು) ಮತ್ತು
ಮೂಳೆಗಳನ್ನು ಸಂಗ್ರಹಿಸಿದ್ದು ಸದರಿ ಸ್ಥಳದಲ್ಲಿ ಕೊಳೆತ ಮಾಂಸ ಹಾಗೂ ಮೂಳೆಗಳನ್ನು ಕುದಿಸಲು
ನಾಲ್ಕು ದೊಡ್ಡ ಕಡಾಯಿಗಳನ್ನು ಇಟ್ಟು ಕಡಾಯಿಗಳಲ್ಲಿ ಮಾಂಸ ಹಾಗೂ ಮೂಳೆಗಳನ್ನು ಕುದಿಸಿ ಅದರಿಂದ
ದ್ರವ ರೂಪದ ವಸ್ತುವನ್ನು ತಯಾರು ಮಾಡುತ್ತಿದ್ದು ಇದರಿಂದ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶ
ದುರ್ವಾಸನೆಯಿಂದ ಕಲುಶಿತಗೊಂಡು ಸಾರ್ವಜನಿಕರ ಆರೊಗ್ಯ ಹಾನಿಯುಂಟಾಗುವ, ರೋಗ ಹರಡುವ ಮತ್ತು ವಾಯು
ಮಾಲಿನ್ಯಗೊಳಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ಕುರಿತು ಮಾನ್ಯ ಸಿ,ಪಿ,ಐ ಆಳಂದ ಮತ್ತು ಡಿ,ಎಸ್,ಪಿ ಸಾಹೇಬರು ಆಳಂದರವರ
ಮಾರ್ಗದರ್ಶನದಲ್ಲಿ ನಾನು ಹಾಗೂ ಸಿಬ್ಬಂದಿಯವರಾದ ಹೆಚ್,ಸಿ 128 ಲಕ್ಷೀಕಾಂತ, ಪಿಸಿ 860
ಶಿವಾಜಿ, ಪಿಸಿ 904
ಚಂದ್ರಕಾಂತ, ಮಲ್ಲಿಕಾರ್ಜುನ ಸಿಪಿಸಿ-576
ಹಾಗೂ ಆನಂದ ಸಿಪಿಸಿ-1258
ಮತ್ತು ಪಂಚರಾದ ಬಸವರಾಜ ತಂದೆ
ಜಗದೇವಪ್ಪಾ ವಾಲಿ, ವ:
30ವರ್ಷ, ಸಾ: ನರೋಣಾ ಮತ್ತು ಶ್ರೀಮಂತ ತಂದೆ
ಶಂಕ್ರೆಪ್ಪಾ ಡೆಂಕಿ, ವ:
55ವರ್ಷ ಸಾ:
ನರೋಣಾ ಇವರುಗಳನ್ನು ಠಾಣಾ ಜೀಪ ನಂ. ಕೆಎ32 ಜಿ-352 ನೇದ್ದರಲ್ಲಿ ಕರೆದುಕೊಂಡು 9;00
ಪಿ,ಎಮ್ ಕ್ಕೆ ಹೊರಟು ಬಾತ್ಮಿ ಬಂದ
ಸ್ಥಳದಲ್ಲಿ 9:40 ಪಿ.ಎಮ್
ಕ್ಕೆ ದೂರದಲ್ಲಿ ನಿಂತು ನೋಡಲಾಗಿ ಪತ್ರಾದ ಶೆಡ್ ನಲ್ಲಿ ಸುಮಾರು ಜನರು ಕೂಡಿಕೊಂಡು ನಾಲ್ಕು
ಕಡಾಯಿಗಳಲ್ಲಿ ಕೊಳೆತ ಮಾಂಸ ಮತ್ತು ಎಲಬುಗಳನ್ನು ಹಾಕಿ ಕುದಿಸುತ್ತಿರುವದನ್ನು ಖಚಿತಪಡಿಸಿಕೊಂಡು
ಅವರ ಮೇಲೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಅಲ್ಲಿ ಕೆಲಸ ಮಾಡುತ್ತಿದ್ದ
ಅವರಲ್ಲಿ 5 ಜನರು
ಸಿಕ್ಕಿದ್ದು ಇನ್ನೂ ಇತರರು ಓಡಿ ಹೋಗಿರುತ್ತಾರೆ ಸಿಕ್ಕಿರುವ 5 ಜನರನ್ನು ವಿಚಾರಿಸಲಾಗಿ ನಾವುಗಳು
ಪ್ರಾಣಿಗಳ ಕೊಳೆತ ಮಾಂಸ ಹಾಗೂ ಮೂಳೆಗಳನ್ನು ಕುದಿಸಿ ಅದರಿಂದ ದ್ರವ ರೂಪದ ವಸ್ತುವನ್ನು ತಯಾರು
ಮಾಡುತ್ತಿದ್ದೇವೆ ಈ ದ್ರವ ರೂಪದ ವಸ್ತುವನ್ನು ತಯಾರಿಸಿ ಮಾರಾಟ ಮಾಡುತ್ತೇವೆಂದು ಮತ್ತು ಈ
ಸ್ಥಳವು ಬಾಳಪ್ಪಾ ಸಾ: ಜವಳಗಾ (ಬಿ) ಇವರಿಂದ ನಮ್ಮ ಮಾಲೀಕನಾದ ಮೊದಿನ ಸಾ: ಸೊಲಾಪೂರ ಇವರು
ಬಾಡಿಗೆಗೆ ಪಡೆದಿರುತ್ತಾರೆ ಅಂತಾ ತಿಳಿಸಿದ್ದು ಅವರಿಗೆ ಸಂಬಂದಪಟ್ಟವರಿಂದ ಪರವಾನಿಗೆ
ಪಡೆದುಕೊಂಡು ಮಾಡುತ್ತಿದ್ದಿರಾ ಹೇಗೆ? ಈ ದ್ರವರೂಪದ ವಸ್ತುವನ್ನು ತಯಾರಿಸಿ ಏನು ಮಾಡುತ್ತಿರಿ? ಅಂತಾ ವಿಚಾರಿಸಲಾಗಿ ಅವರೆಲ್ಲರು ನಮ್ಮ
ಮಾಲೀಕ ಮೊದಿನ ಸೊಲಾಪೂರಕ್ಕೆ ಹೊಗಿದ್ದಾರೆ ಅದರ ಬಗ್ಗೆ ನಮಗೆ ಏನು ಗೊತ್ತಿರುವುದಿಲ್ಲಾ ಸದ್ಯ
ನಮ್ಮ ಹತ್ತಿರ ಯಾವುದೇ ಪರವಾನಿಗೆ ವಗೈರೆ ಇರುವದಿಲ್ಲಾ ಅಂತಾ ತಿಳಿಸಿದ್ದು ಸದರಿಯವರ ಹೆಸರು
ವಿಳಾಸ ವಿಚಾರಿಸಲಾಗಿ 1) ಮಹಿಬೂಸಾಬ
ತಂದೆ ವಜೀರ ಮುಜಾವಾರ ವ: 36 ವರ್ಷ, ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ:
ಜವಳಗಾ (ಬಿ) 2) ಸಲೀಂ ತಂದೆ ಮಹ್ಮದ ಮುಸ್ಲಿಂ ಶೇಖ ವ: 28 ಜಾ ಮುಸ್ಲಿಂ ಉ: ಕೂಲಿ ಕೆಲಸ ಸಾ:
ಫಿರೋಜಾಪೂರ ಪೋ: ಲೊಗಾಯ ತಾ: ಮಹಾಗಾಮ ಜಿ: ಗೊಡ್ಡಾ (ಝಾರಖಂಡ) 3) ಮಹ್ಮದ ಅಫ್ಸರ ಆನಮ್ ತಂದೆ ಮಹ್ಮದ
ಖೈರುದ್ದೀನ ವ: 26 ಜಾ:
ಮುಸ್ಲಿಂ ಉ: ಕೂಲಿ ಕೆಲಸ ಸಾ: ಶಾಕಿನ ಪೊಬನಾ ಪೋ: ಸರಾಯಿಕುರಿ ತಾ: ಪವಾಖಾಲಿ ಜಿ: ಕಿಶನಗಂಜ
(ಬಿಹಾರ) 4) ಮಹ್ಮದ
ಸಜ್ಜಾದ ತಂದೆ ಮಹ್ಮದ ನಸೀರುದ್ದೀನ ಶೇಖ ವ: 21 ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಫಿರೋಜಾಪೂರ ಪೋ:
ಲೊಗಾಯ ತಾ: ಮಹಾಗಾಮ ಜಿ: ಗೊಡ್ಡಾ (ಝಾರಖಂಡ) 5) ಮಹ್ಮದ ನಸೀಮ ಅಕ್ತರ ತಂದೆ ಮಹ್ಮದ ಕುರುಬಾನ ಅಲಿ ವ: 21 ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ:
ಶಾಕಿನ ಪೊಬನಾ ಪೋ: ಸರಾಯಿಕುರಿ ತಾ: ಪವಾಖಾಲಿ ಜಿ: ಕಿಶನಗಂಜ (ಬಿಹಾರ) ಅಂತಾ ತಿಳಿಸಿದ್ದು ಶೆಡ್
ಒಳಗಡೆ ಗ್ಯಾಸ್ ಬತ್ತಿಯ ಬೆಳಕಿನ ಸಹಾಯದಿಂದ ಪರಿಶೀಲಿಸಿ ನೋಡಲಾಗಿ ಪ್ರಾಣಿಗಳ ಮೂಳೆಗಳು
ಬಿದ್ದಿದವು, ಪ್ರಾಣಿಗಳ
ಕೊಳೆತ ಮಾಂಸದಿಂದ ತಯಾರಿಸಲ್ಪಟ್ಟ ದ್ರವರೂಪದ ವಸ್ತುವನ್ನು 95 ಬ್ಯಾರಲ್ಲಗಳಲ್ಲಿ ಸಂಗ್ರಹಿಸಿಟ್ಟಿದ್ದು
ಈ ಎಲ್ಲಾ ಬ್ಯಾರಲ್ಲಗಳಿಗೆ ಕ್ರ.ಸಂ 1 ರಿಂದ 95 ವರೆಗೆ ಗುರುತು ಮಾಡಲಾಯಿತು ಮತ್ತು ತಯಾರಿಸಲು
ಉಪಯೋಗಿಸಿದ 4 ಕಡಾಯಿಗಳನ್ನು, ಅಲ್ಲಿ ಬಿದ್ದಿದ್ದ ಪ್ರಾಣಿಗಳ ಮೂಳೆಗಳ 10 ತುಂಡುಗಳನ್ನು ಒಂದು ಪ್ಲಾಸ್ಟಿಕ್
ಚೀಲದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದು ಇವುಗಳನ್ನು ಕೇಸಿನ ಪುರಾವೆಗಾಗಿ ಜಪ್ತಿಪಡಿಸಿಕೊಂಡಿದ್ದು
ಅಲ್ಲದೆ ಬ್ಯಾರಲ್ ದಲ್ಲಿ ಸಂಗ್ರಹಿಸಿಟ್ಟಿದ್ದ ದ್ರವರೂಪದ ವಸ್ತುವನ್ನು ಒಂದು ಬ್ಯಾರಲ್ಲಿನಿಂದ
ಸುಮಾರು 5 ಲೀಟರನಷ್ಟು 5 ಲೀಟರ ಗಾತ್ರದ ಒಂದು ಪ್ಲಾಸ್ಟಿಕ್
ಕ್ಯಾನ್ ನಲ್ಲಿ ಪರೀಕ್ಷೆಗೆ ಕಳುಹಿಸಲು ಶಾಂಪಲ್ ತೆಗೆಯಲಾಗಿದೆ ಈ ಬಗ್ಗೆ 9-50
ಪಿ.ಎಮ. ದಿಂದ 11-50
ಪಿ.ಎಮ.ವರೆಗೆ ಪಂಚನಾಮೆಯನ್ನು ಗ್ಯಾಸ್
ಬತ್ತಿಯ ಬೆಳಕಿನ ಸಹಾಯದಿಂದ ಕೈಕೊಂಡು ಜಪ್ತಿ ಪಡೆಸಿಕೊಂಡ ಮುದ್ದೆ ಮಾಲನ್ನು ಕತ್ತಲಾಗಿದ್ದರಿಂದ
ಠಾಣೆಗೆ ತರಲು ಸಾದ್ಯವಾಗದೆ ಇರುವುದರಿಂದ ಸ್ಥಳದಲ್ಲಿಯೆ ಬೆಂಗಾವಲು ಕುರಿತು ಪಿಸಿ-860
ಶಿವಾಜಿ &
ಪಿಸಿ-904
ಚಂದ್ರಕಾಂತ ಇವರುಗಳಿಗೆ ನೇಮಕಮಾಡಿ
ಆರೋಪಿತರೊಂದಿಗೆ ಮರಳಿ ಠಾಣೆಗೆ 01:00 ಎ.ಎಮ್ ಕ್ಕೆ ಠಾಣೆಗೆ ಅಸಲು ಜಪ್ತಿ ಪಂಚನಾಮೆ ಹಾಜರು
ಪಡಿಸಿದ್ದು ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಂಡ ಬಗ್ಗೆ ವರದಿ ಅದೆ.
ನರೋಣಾ ಠಾಣೆ : ದಿನಾಂಕ:- 05/11/2016 ರಂದು
ಠಾಣೆಗೆ ಹಾಜರಾಗಿ ಮಾಣೀಕಪ್ಪ ತಂದೆ ನಿಂಗಪ್ಪ ಸೋನದಿ ಸಾ: ಕಿಣ್ಣಿ(ಸದಕ) ಗ್ರಾಮ ಇವರ ಈ ಲಿಖಿತ ದೂರನ್ನು
ಹಾಜರು ಪಡಿಸಿದ್ದು ಈ ದೂರಿನ ಸಾರಾಂಶವೇನೆಂದರೆ ನನಗೆ ಒಟ್ಟು ಒಬ್ಬ ಗಂಡು ಮಗಾ ಹಾಗೂ 5 ಜನ ಹೆಣ್ಣು ಮಕ್ಕಳಿದ್ದು ಎಲ್ಲರದು ಮದುವೆ ಯಾಗಿರುತ್ತದೆ.
ಹೆಣ್ಣು ಮಕ್ಕಳ ತಮ್ಮ ಗಂಡನ ಮನೆಯಲ್ಲಿಯೆ ಇರುತ್ತಾರೆ ಪ್ರತಿ ವರ್ಷದಂತೆ ಈ ವರ್ಷಕುಡ ಗೋಳಾ(ಬಿ) ಗ್ರಾಮದ
ಲಕ್ಕಮ್ಮದೇವಿಯ ಜಾತ್ರೆ ಇದ್ದ ಪ್ರಯುಕ್ತ ನಿನ್ನೆ ದಿನಾಂಕ:- 04/11/2016 ರಂದು ಬೆಳಿಗ್ಗೆ
11:00 ಗಂಟೆ ಸಮಯಕ್ಕೆ
ನಮ್ಮ ಊರಿನಿಂದ ನಾನು ಹಾಗೂ ನನ್ನ ಹೆಂಡತಿಯಾದ ಸುಂದ್ರಮ್ಮ ಹಾಗೂ ನನ್ನ ಮಕ್ಕಳಾದ ಮಾಪಣ್ಣ ಹಾಗೂ ಹೆಣ್ಣು
ಮಕ್ಕಳ ಪೈಕಿ 1) ಇಂದಮ್ಮ
ಗಂಡ ಶಿವರಾಯ ನೌಲೆ, 2) ಶೋಭಾ
ಗಂಡ ವಿಠಲ ಜೌಳಗಿ, 3) ಶಾಂತಬಾಯಿ
ಗಂಡ ಮಲ್ಲಪ್ಪ ರಾಮಪೂರ ಹಾಗೂ ನನ್ನ ಸೊಸೆಯಾದ 4) ಚಿನ್ನಮ್ಮ ಮತ್ತು ಸಣ್ಣ ಅಳಿಯನಾದ 5) ಅನೀಲ ತಂದೆ ಬಾಬುರಾವ ಗಾಮಸಕರ ಇವರೆಲ್ಲರು ಕೂಡಿಕೊಂಡು ನಮ್ಮ ಊರಿನಿಂದ ಒಂದು ಖಾಸಗಿ
ವಾಹನದಲ್ಲಿ ಗೋಳಾ(ಬಿ) ಗ್ರಾಮಕ್ಕೆ ಹೋಗಿದ್ದು ಅಲ್ಲಿ ಎಲ್ಲರು ಕೂಡಿ ಲಕ್ಕಮ್ಮದೇವಿಯ ದರ್ಶನ ಮಾಡಿಕೊಂಡು
ಲಕ್ಕಮ್ಮ ದೇವಿಯ ಗುಡಿಯ ಮುಂದಿನ ರೋಡ್ ಆಚೆ ಬಯಲು ಜಾಗದಲ್ಲಿ ನಾವು ಎಲ್ಲರು ಕೂಡಿಕೊಂಡು ಊಟ ಮಾಡುತ್ತಾ
ಕುಳಿತುಕೊಂಡಿರುವಾಗ ಅಲ್ಲಿಯ ಬಯಲು ಜಾದಲ್ಲಿ ಕೆಲವೊಂದು ವಾಹನಗಳು ನಮ್ಮ ದೂರದಲ್ಲಿ ನಿಂತಿದ್ದವು ನಾವು
ಊಟ ಮಾಡುತ್ತ ಕುಳಿತಿದ್ದಾಗ ನಮ್ಮ ಬಾಜು ಕಡೆಯಿಂದ ಅಂದರೆ ಲಕ್ಕಮ್ಮದೇವಿ ಕಡೆಯಿಂದ ಒಬ್ಬ ಟಾಟಾ ಇಂಡಿಕಾ
ಕಾರು ಚಾಲಕನೂ ತನ್ನ ವಾಹನವನ್ನು ಅತೀವೇಗದಿಂದ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನನ್ನ ಎಡಗಾಲ
ಮೊಳಕಾಲ ಕೇಳಗಡೆ ಬಾರಿ ಜೋರಾಗಿ ಡಿಕ್ಕಿ ಪಡಿಸಿದ್ದು ಅದರಿಂದ ನನಗೆ ಮೊಳಕಾಲ ಕೆಳಗಡೆ ಭಾರಿ ಗಾಯವಾಗಿ
ರಕ್ತ ಗಾಯವಾಗಿ ರಕ್ತ ಬರುತ್ತಿತ್ತು ಅದನ್ನು ನೋಡಿ ಅಲ್ಲೆ ಊಟಮಾಡುತ್ತ ಕುಳಿತ ಮಕ್ಕಳೆಲ್ಲರು ಹಾಗೂ
ಸಣ್ಣ ಅಳಿಯ ಅನೀಲ ಈತನು ನೋಡಿ ನನಗೆ ಎಬ್ಬಿಸುತ್ತಿದ್ದು ನನಗೆ ಎಳುವುದಕ್ಕೆ ಬಂದಿರುವುದಿಲ್ಲ ಈ ಘಟನೆಯಾದಾಗ
ಅಂದಾಜು ಸಾಯಂಕಾಲ 4:30 ಗಂಟೆಯಾಗಿರುತ್ತದೆ, ನನಗೆ ಅಪಘಾತ ಪಡಿಸಿದ ಕಾರ ನಂ. ನೋಡಲಾಗಿದೆ ಅದರ
ನಂ. ಕೆಎ25 ಪಿ-2962 ಇದ್ದು ಅದು ಟಾಟಾ ಇಂಡಿಕಾ ಕಂಪನಿಯದ್ದು ಇರುತ್ತದೆ.
ಅಪಘಾತ ಮಾಡಿದ ಕಾರು ಚಾಲಕನು ಅಲ್ಲಿದ್ದ ಜನರು ಸೇರುವುದನ್ನು ಕಂಡು ತನ್ನ ವಾಹನ ತೆಗೆದುಕೊಂಡು ಹೋಗಿರುತ್ತಾನೆ
ಆತನಿಗೆ ನೋಡಿದ್ದು ಮತ್ತೆ ನೋಡಿದರೆ ಗುರುತಿಸುತ್ತೇನೆ ನಂತರ ನನಗೆ ನನ್ನ ಮಗಾ ಹಾಗೂ ನನ್ನ ಅಳಿಯ ಅನೀಲ
ಮತ್ತು ಎಲ್ಲ ಹೆಣ್ಣು ಮಕ್ಕಳು ಕುಡಿಕೊಂಡು ಬೇರೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ
ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ಟಾಟಾ ಇಂಡಿಕಾ ಕಾರ ನಂ. ಕೆಎ25 ಪಿ-2962 ನೇದ್ದರ ಚಾಲನು ಅತೀವೇಗ ದಿಂದ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನನ್ನ ಎಡಗಾಲ
ಮೋಳಕಾಲ ಕೇಳಕಡೆ ಡಿಕ್ಕಿ ಪಡಿಸಿ ಭಾರಿಗಾಯ ಪಡಿಸಿ ತನ್ನ ವಾಹನ ಸಮೇತ ಅಲ್ಲಿಂದ ಹೋಗಿದ್ದು ಆತನ ಮೇಲೆ
ಕಾನೂನು ಕ್ರಮ ಕೈಕೊಳ್ಳಬೇಕೆಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಪ್ರಕರಣ ಬಗ್ಗೆ ವರದಿ.
ಯಡ್ರಾಮಿ ಠಾಣೆ : ದಿನಾಂಕ 05-11-2016 ರಂದು 1;30 ಪಿ ಎಂ ಕ್ಕೆ
ಶ್ರೀಮತಿ ಮಹಾದೇವಿ ಗಂಡ ಯಲ್ಲಪ್ಪ
ಸಗರದವರ ವಯ; 25 ವರ್ಷ ಜಾ; ಕುರುಬರ ಉ; ಹೊಲ ಮನೆ ಕೆಲಸ ಸಾ|| ಬಳಬಟ್ಟಿ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ
ಸಲ್ಲಿಸಿದ್ದರ ಸಾರಾಂಶವೆನೆಂದರೆ, ಈಗ ನಾನು 4 ವರ್ಷದ ಹಿಂದೆ ಯಲ್ಲಪ್ಪ ಸಗರದವರೊಂದಿಗೆ ಮದುವೆಯಾಗಿರುತ್ತೆನೆ. ಸದ್ಯ ನಮಗೆ ಯಾವುದೆ ಮಕ್ಕಳು
ಆಗಿರುವುದಿಲ್ಲಾ, ನಮ್ಮೂರ ಸಿಮೇಯಲ್ಲಿ ಹೊಲ ಸರ್ವೆ ನಂ 16/1 ನೇದ್ದರಲ್ಲಿ 6 ಎಕರೆ 33 ಗುಂಟೆ
ಜಮೀನು ನನ್ನ ಮತ್ತು ನನ್ನ ಗಂಡನ ಹೆಸರಿನಲ್ಲಿ ಇರುತ್ತದೆ. ಈಗ ಸದ್ಯ ನಮ್ಮ ಹೊಲದಲ್ಲಿ ತೊಗರಿ
ಬೆಳೆ ಹಾಕಿದ್ದು ಇರುತ್ತದೆ. ನನ್ನ ಗಂಡ ಹೊಲದ ಸಲುವಾಗಿ ನಮ್ಮೂರ ಕೆ.ಜಿ.ಬಿ ಬ್ಯಾಂಕನಲ್ಲಿ
77,000/- ರೂ ಹಾಗು ಖಾಸಗಿಯಾಗಿ 4,00,000/- ರೂ ಸಾಲ ಮಾಡಿಕೊಂಡಿರುತ್ತಾರೆ. ಈ ವರ್ಷ ಸರಿಯಾಗಿ
ಮಳೆ ಆಗದೆ ಇದ್ದುದ್ದರಿಂದ ಅರ್ದದಷ್ಟು ತೊಗರಿ ಬೆಳೆ ಒಣಗಿರುತ್ತದೆ. ನನ್ನ ಗಂಡ ಆಗಾಗ ಚಿಂತೆ
ಮಾಡುತ್ತಾ ಈ ವರ್ಷ ಬೆಳೆ ಸರಿಯಾಗಿ ಬೆಳೆದಿಲ್ಲಾ. ಸಾಲ ತಿರೀಸುವುದು ಹೇಗೆ, ಊರಲ್ಲಿ ನಾನು ಮುಖ
ಎತ್ತಿ ತಿರುಗಾಡುವುದು ಹೇಗೆ, ನಾನು ಇರುವುದಕ್ಕಿಂತ ಸಾಯುವುದೆ ಲೇಸು ಅಂತಾ ಅನ್ನುತಿದ್ದರು. ಆಗ
ನಾನು ಅವರಿಗೆ ಸಮಾಧಾನ ಹೇಳುತ್ತಿದ್ದೆ. ಇಂದು ದಿನಾಂಕ 05-11-2016 ರಂದು ಬೆಳಿಗ್ಗೆ 11;30
ಗಂಟೆಗೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಗಂಡ ಕೂಡಿದ್ದು, ನಂತರ ನಾನು ನೀರು ತರಲು ಹೋದೆನು.
ಮರಳಿ ಬಂದು ನೋಡುವಷ್ಟರಲ್ಲಿ ನನ್ನ ಗಂಡ ಒಂದು ಸೀರೆಯಿಂದ ಮನೆಯ ಜಂತಿ ಕೊಂಡಿಗೆ ನೇಣು
ಹಾಕಿಕೋಂಡಿದನು. ನಂತರ ನಾನು ಚೀರಾಡುತ್ತಿದ್ದಾಗ, ಅಲ್ಲೇ ರಸ್ತೆಯ ಮೇಲೆ ಹೋಗುತ್ತಿದ್ದ ಸಂಗಣ್ಣ
ತಂದೆ ಬಸಪ್ಪ ದೊರೆ, ಮತ್ತು ರಾವತಪ್ಪ ಗೊಳಸಂಗಿ ರವರು ಬಂದು ನೇಣು ಹಾಕಿಕೊಂಡ ನನ್ನ ಗಂಡನಿಗೆ
ಬಿಚ್ಚಿ ಕೆಳಗೆ ಹಾಕುವಷ್ಟರಲ್ಲಿ ನನ್ನ ಗಂಡ ಮೃತ ಪಟ್ಟಿದ್ದನು. ಕಾರಣ ನನ್ನ ಗಂಡ ಸಾಲ ಹೇಗೆ ತೀರಿಸಬೇಕು ಅಂತಾ ಚಿಂತೆ
ಮಾಡುತ್ತಾ ಮರಿಯಾದೆಗೆ ಅಂಜಿ ಅಂದಾಜ 11;30 ಎ.ಎಂ ದಿಂದ 11;45 ಎ,ಎಂ ಮದ್ಯದಲ್ಲಿ ಸಿರೇಯಿಂದ
ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ಇರುವುದಿಲ್ಲಾ.
ಆದ್ದರಿಂದ ಮಾನ್ಯರವರು ಮುಂದಿನ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ
ಯು.ಡಿ.ಆರ್ ನಂ 11/2016 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣಬಗ್ಗೆ ವರದಿ.
ಅಫಜಲಪೋರ ಠಾಣೆ : ದಿನಾಂಕ 05-11-2016 ರಂದು 12:45 ಪಿಎಮ್ ಕ್ಕೆ ಫಿರ್ಯಾದಿದಾರರಾದ ಸಂತೋಷ ತಂದೆ
ರೇವಣಸಿದ್ದಪ್ಪ ಸಲಗರ ಸಾ|| ಮಾಶಾಳ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ
ಸಾರಂಶವೇನೆಂದರೆ ನಾನು ಮೇಲೆ ಹೇಳಿದ
ವಿಳಾಸದವನಿದ್ದು ಟ್ಯಾಕ್ಟರ ಚಾಲಕ ಅಂತಾ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ.
ಈಗ ಸುಮಾರು 2 ತಿಂಗಳ ಹಿಂದೆ ನಾನು ಅಫಜಲಪೂರಕ್ಕೆ ಬಂದಾಗ
ನನಗೆ ಪರಿಚಯದವನಾದ ನಮ್ಮೂರಿನ ಮಾಹಾಂತೇಶ ತಂದೆ ಅರ್ಜುನ ಉಜನಿ ಈತನ ಅಫಜಲಪೂರದಲ್ಲಿರುವ ಮನೆಯ
ಮುಂದೆ ಹೋಗುತ್ತಿದ್ದಾಗ, ಅವನ ಮನೆಯವರು ನನ್ನನ್ನು ನೋಡಿ ನನಗೆ ಮಾತಾಡಿಸಿ ಮನೆಯಲ್ಲಿ ಕರೆದ
ಮೇರೆಗೆ ನಾನು ಮನೆಯಲ್ಲಿ ಹೋಗಿ ಚಹಾ ಕುಡಿದು ಬಂದಿರುತ್ತೇನೆ. ಅದರಿಂದ ಸದರಿ ಮಾಹಾಂತೇಶನು ನನಗೆ
ನಾನು ಮನೆಯಲ್ಲಿ ಇಲ್ಲದಿರುವುವಾಗ ನಮ್ಮ ಮನೆಯಲ್ಲಿ ಏಕೆ ಹೋಗಿದಿ ಅಂತಾ ನನ್ನ ಮೇಲೆ ಸಿಟ್ಟು
ಮಾಡಿಕೊಂಡು ದ್ವೇ಼ಷ ಸಾದಿಸುತ್ತಿರುತ್ತಾನೆ. ದಿನಾಂಕ 03-11-2016 ರಂದು ಮದ್ಯಾಹ್ನ 12:00 ಗಂಟೆ ಸುಮಾರಿಗೆ ನಾನು ನಮ್ಮೂರಿನ ಬಸ್
ನಿಲ್ದಾಣದ ಹತ್ತಿರ ಇದ್ದ ಹೊಟೇಲದಲ್ಲಿ ಚಹಾ ಕುಡಿದು ಮನೆಗೆ ಬರುತ್ತಿದ್ದಾಗ ನನ್ನೊಂದಿಗೆ ಜಗಳ
ಮಾಡಿದ ಮಾಹಾಂತೇಶ ಉಜನಿ ಹಾಗೂ ಅವನ ಅಳಿಯನಾದ ತಿಪ್ಪಣ್ಣ ಸಾ|| ಉಡಚಾಣ ಹಟ್ಟಿ ಇಬ್ಬರು ನನ್ನ ಹತ್ತಿರ ಬಂದು
ನನಗೆ ನಿಲ್ಲಿಸಿ ಏನೊ ಬೋಸಡಿ ಮಗನೆ ದಿನಾಲು ನಮ್ಮ ಮನೆಯ ಕಡೆಗೆ ಯಾಕೆ ಬರುತ್ತಿ ಅಂತಾ ಕೈಯಿಂದ
ಕಪಾಳ ಮೇಲೆ ಹೊಡೆದನು. ಆಗ ಅಲ್ಲಿದ್ದ ನಮ್ಮ ದೊಡ್ಡಪ್ಪನಾದ ಚಂದ್ರಶಾ ಸಲಗರ ಹಾಗೂ ನಮ್ಮ ಮಾವ
ಅಪ್ಪಾಶಾ ರೋಡಗಿ ಇವರು ನನಗೆ ಹೊಡೆಯುವುದನ್ನು ಬಿಡಿಸಿ ಕಳುಹಿಸಿರುತ್ತಾರೆ, ನಂತರ ನಾನು ಅಲ್ಲಿಂದ ಮನೆಗೆ ಬಂದು ನಮ್ಮ ಮನೆಯಲ್ಲಿ ನನ್ನ ತಾಯಿಯಾದ ಮಾಹಾನಂದ ಹಾಗೂ
ತಂಗಿಯಾದ ಕನ್ಯಾಕುಮಾರಿ, ದೊಡ್ಡವ್ವಳಾದ ಗುರುಬಾಯಿ ಇವರಿಗೆ ನಡೆದ ಘಟನೆಯ ಬಗ್ಗೆ
ಹೇಳುತ್ತಿದ್ದಾಗ ಮದ್ಯಾಹ್ನ 1:30 ಗಂಟೆ ಸುಮಾರಿಗೆ ಬಸ್ ನಿಲ್ದಾಣದಲ್ಲಿ ನನ್ನೊಂದಿಗೆ ಜಗಳ ಮಾಡಿದ ಮಾಹಾಂತೇಶ ಹಾಗೂ
ತಿಪ್ಪಣ್ಣ ಇಬ್ಬರು ನಮ್ಮ ಮನೆಯಲ್ಲಿ ನುಗ್ಗಿ, ಬೋಸಡಿ ಮಗನೆ ನಿನ್ನದು ತಿಂಡಿ ಬಾಳ ಆಗ್ಯಾದ
ಅಂತಾ ಬೈದು ಇಬ್ಬರು ಕೂಡಿ ನನ್ನನ್ನು ಏಳೆದು ನೆಲಕ್ಕೆ ಹಾಕಿ ನನ್ನ ಹೊಟ್ಟೆಯ ಮೇಲೆ ಬಲ
ಪಕ್ಕೆಲುಬಿನ ಹತ್ತಿರ ಕಾಲಿನಿಂದ ಒದ್ದರು, ಆಗ ನನ್ನ ತಾಯಿ ನನಗೆ ಹೊಡೆಯುವುದನ್ನು
ಬಿಡಿಸಲು ಬಂದಾಗ ನನ್ನ ತಾಯಿಗೆ ಮಾಹಾಂತೇಶ ಮತ್ತು ತಿಪ್ಪಣ್ಣ ಇಬ್ಬರು ತಳ್ಳಿದರು, ಆಗ ನನ್ನ ತಾಯಿ ಎದ್ದು ಪುನ ಬಿಡಿಸಲು ಬಂದಾಗ
ಅವಳ ಸೀರೆ ಹಿಡಿದು ಎಳೆದಾಡಿ ಅವಳಿಗೂ ಸಹ ಒದ್ದರು. ಆಗ ನನ್ನ ದೊಡ್ಡವ್ವ ಮತ್ತು ನನ್ನ ತಂಗಿ ಇವರು
ಕೂಡಿ ಹೊಡೆಯುವುದನ್ನು ಬಿಡಿಸಿದರು. ಆಗ ಸದರಿಯವರು ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಅಲ್ಲಿಂದ ಹೊದರು, ಸದರಿಯವರು ನನಗೆ ಹೊಡೆದರಿಂದ ನನ್ನ ಹೊಟ್ಟೆಗೆ ತಿವ್ರವಾದ ಒಳಪೆಟ್ಟು ಆಗಿರುತ್ತದೆ. ನನ್ನ
ತಾಯಿಗೆ ಅಷ್ಟೆನು ಗಾಯಗಳು ಆಗಿರುವುದಿಲ್ಲ, ನನ್ನ ತಾಯಿ ಖಾಸಗಿ ಉಪಚಾರ
ಪಡೆದುಕೊಂಡಿರುತ್ತಾಳೆ. ನನಗೆ ಆದ ಗಾಯಗಳ ಚಿಕಿತ್ಸೆ ಕುರಿತು ನಾನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ
ಸೇರಿಕೆಯಾಗಿದ್ದು, ಅಲ್ಲಿ ಎಮ್.ಎಲ್.ಸಿ ಆದ ಮೇರೆಗೆ ತಮ್ಮ ಪೊಲೀಸರು ಬಂದಾಗ ನಾನು ನನ್ನ ತಾಯಿಯೊಂದಿಗೆ
ವಿಚಾರಿಸಿ ನಡೆದ ಘಟನೆಯ ಬಗ್ಗೆ ತಿಳಿಸುತ್ತೇನೆ ಅಂತಾ ಹೇಳಿಕೆ ನಿಡಿರುತ್ತೇನೆ. ಅದರಂತೆ ನಾನು
ಇಂದು ನನ್ನ ತಾಯಿಯೊಂದಿಗೆ ತಡವಾಗಿ ಠಾಣೆಗೆ ಬಂದು ನನ್ನ ಹೇಳಿಕೆ ನಿಡುತ್ತಿದ್ದೇನೆ. ಕಾರಣ ನನಗೆ
ತಡೆದು ನಿಲ್ಲಿಸಿ ಹಾಗೂ ನಮ್ಮ ಮನೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ
ಬೈದು, ಕೈಯಿಂದ ಹೊಡೆದು ಕಾಲಿನಿಂದ ಒದ್ದು ಹೊಟ್ಟೆಗೆ ತಿವ್ರವಾದ ಗುಪ್ತಗಾಯ ಪಡಿಸಿ ಜೀವ
ಬೆದರಿಕೆ ಹಾಕಿದ ಮತ್ತು ನನ್ನ ತಾಯಿಗೆ ಒದ್ದು ಅವಳ ಸೀರೆ ಹಿಡಿದು ಎಳೆದಾಡಿ ಮಾನಹಾನಿ ಮಾಡಿದ 1) ಮಾಹಾಂತೇಶ ತಂದೆ ಅರ್ಜುನ ಉಜನಿ ಸಾ|| ಮಾಶಾಳ 2) ತಿಪ್ಪಣ್ಣ ಸಾ|| ಉಡವಾಣ ಹಟ್ಟಿ ಇವರ ಮೇಲೆ ಕಾನೂನು ಕ್ರಮ
ಜರೂಗಿಸಬೇಕು ಅಂತ ಹೇಳಿಕೆ ನೀಡಿದ್ದು ಸದರಿ
ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 219/2016 ಕಲಂ 341,448.323.325.354 (ಬಿ).504,506 ಸಂ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆಕೈಕೊಂಡೆನು.
ರಾಘವೇಂದ್ರ ನಗರ : 02/11/16
ರಂದು
ಬೆಳಗ್ಗೆ 8.00 ಗಂಟೆಯ ಸೂಮಾರಿಗೆ ನಮ್ಮ ಮನೆಗೆ ಬೀಗ ಹಾಕಿ ನನ್ನ ಮಗನಾದ ಅರವಿಂದ ಪಾಟೀಲ ಇತನ ನಿಸ್ಚಿತಾರ್ಥ ಕಾರ್ಯಕ್ರಮ ಕುರಿತು
ನಾನು ನನ್ನ ಸಹ ಕುಟುಂಬದೊಂದಿಗೆ ಹೋಗಿರುತ್ತೇನೆ ಅಲ್ಲಿ
ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ 8.30 ಗಂಟೆಗೆ ಮನೆಗೆ ಬಂದು ನಾನು ಮೇಲ ಅಂತಸ್ತಿನ ಮೇಲೆ ಹೋಗಿದ್ದು ಮನೆಯ ಮುಖ್ಯ ಬಾಗೀಲ ಕೊಂಡಿ
ಮುರದಿದ್ದು ಇದ್ದು ನಾನು ಒಳಗೆ ಹೋಗಿ ನೋಡಲು ಬೆಡ್ಡರೂಮಿನ ಎಲ್ಲಾ
ಕಪಾಟಗಳು ತೆರೆದಿದ್ದು ಇದ್ದು ಒಳಗಡೆಯಿಂದ ಎಲ್ಲಾ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ
ಬಿದ್ದಿದ್ದವು ಕಪಾಟದಲ್ಲಿ ಇಟ್ಟಿದ್ದ 1) 30 ಗ್ರಾಂ ಬಂಗಾರದ ಲಿಂಗದ ಕಾಯಿ, ಅ||ಕಿ||
87000/-ರೂ 2) 50 ಗ್ರಾಂ ದ 1 ಬಂಗಾರದ ಚಪಲ ಹಾರ ಅ||ಕಿ||
145000/-ರೂ 3) 40 ಗ್ರಾಂ ಬಂಗಾರದ ಚಪಲಾ ಹಾರ ಅ||ಕಿ||
116000/ ರೂ 4) 10 ಗ್ರಾಂ ಬಂಗಾರದ 1 ಉಂಗೂರ ಅ||
ಕಿ||
29000/--ರೂ 5) ತಲಾ 5 ಗ್ರಾಂ ಬಂಗಾರದ 3 ಉಂಗೂರುಗಳು ಒಟ್ಟು 15 ಗ್ರಾಂ ಅ||ಕಿ||
43500/- ರೂ 6) 10 ಗ್ರಾಂ ಬಂಗಾರದ ಮಂಗಳ ಸೂತ್ರ ಅ|| ಕಿ||
29000/-ರೂ 7) ತಲಾ 5 ಗ್ರಾಂ, ದ ಬಂಗಾರದ 3 ಜೋತೆ ಕೀವಿ ಬೆಂಡೋಲಿಗಳು ಒಟ್ಟು 15
ಗ್ರಾಂ ಅ||ಕಿ||
43500/- ರೂ ಮತ್ತು ನಮ್ಮ ಪೈನಾನ್ಸದ 3,09779/ರೂ ನಗದು ಹಣ ಇಟ್ಟಿದ್ದು ಅದು
ಕೂಡಾ ಇರಲಿಲ್ಲಾ ಯಾರೋ ಕಳ್ಳರು ನಮ್ಮ ಮನೆಯ ಬಾಗೀಲು ಕೀಲಿ ಮುರಿದು ಒಳಗೆ
ಪ್ರವೇಶ ಮಾಡಿ ಅ||ಕಿ|| 170 ಗ್ರಾಂ ಬಂಗಾರದ ಅಭರಣಗಳು ಅವುಗಳ ಅ||ಕಿ||
493000/- ರೂ ಬೆಲೆಬಾಳುವುದು ಅಭರಣಗಳು ಮತ್ತು ನಗದು ಹಣ 3,09779/ರೂ ಕಳುವು ಮಾಡಿಕೊಂಡು
ಹೋಗಿದ್ದು ಈ ಬಗ್ಗೆ ವರದಿ.
No comments:
Post a Comment