ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-01-2017
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ
ನಂ. 07/17 ಕಲಂ 279, 338 ಐಪಿಸಿ ;-
ದಿ:28/01/2017 ರಂದು 1700 ಗಂಟೆಗೆ
ಹುಮನಾಬಾದ ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದ ಮೇರೆಗೆ
ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹತ್ತಿರ ಹಾಜರಿದ್ದ ಜಗನ್ನಾಥ
ಸಾ:ಧುಮ್ಮನಸೂರ ರವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ದಿ:28/01/52017 ರಂದು ಸಾಯಂಕಾಲ ಫಿರ್ಯಾದಿ ಹಾಗು ಅವನ ಗೆಳೆಯನಾದ ಜೈಭೀಮ
ತಂದೆ ಅರ್ಜುನ ಮೇಟಿ ಇಬ್ಬರು ಕೂಡಿಕೊಂಡು ಜೈಭೀಮ ಈತನ ಮೋ,ಸೈ
ನಂ ಕೆಎ.39.ಎಲ.1558 ನೇದರ
ಮೇಲೆ ಧುಮ್ಮನಸೂರದಿಂದ ಹುಮನಾಬಾದಕ್ಕೆ ಬರುತ್ತಿರುವಾಗ ಸದರಿ ಮೋ.ಸೈ ಜೈಭೀಮ ಈತನು
ನಡೆಸುತ್ತಿದ್ದು 1630 ಗಂಟೆಯ ಸುಮಾರಿಗೆ ರಾ.ಹೆ. 50 ರ ಮೇಲೆ ಧುಮ್ಮನಸೂರ ಕೋಳಿ ಫಾರಮ ಹತ್ತಿರ ಬಂದಾಗ
ನಮ್ಮ ಎದರುರಿನಿಂದ ಬಂದ ಒಂದು ಕಾರ ನಂ ಕೆಎ.27.ಎಂ.2940 ನೇದರ
ಚಾಲಕನಾದ ಸೋಮಶೇಖರ ತಂದೆ ಶಾಂತಯ್ಯಾ ಪುರಾಣಿಕ ಸಾ:ಕಲಬುರ್ಗಿ ಈತನು ತನ್ನ ಕಾರನ್ನು ಅತಿ ಜೋರಾಗಿ
ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಮೋ.ಸೈ ಗೆ ಡಿಕ್ಕಿ ಹೊಡೆದು ಅಪಘಾತ
ಮಾಡಿರುತ್ತಾನೆ. ಸದರಿ ಅಪಘಾತದಿಂದ ಜೈಭೀಮ ಈತನ ಎಡ ಕಾಲಿನ ಪಾದದ ಮೇಲೆ ಭಾರಿ
ರಕ್ತಗಾಯವಾಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಹಳ್ಳಿಖೇಡ್ ಪೊಲೀಸ್ ಠಾಣೆ ಗುನ್ನೆ ನಂ. 15/17 ಕಲಂ 279, 337 ಐಪಿಸಿ ಜೊತೆ 187 ಐಎಮ್.ವಿ
ಕಾಯ್ದೆ :-
ದಿನಾಂಕ-28-01-2017 ರಂದು ಮುಂಜಾನೆ 1100 ಗಂಟೆಗೆ ಹುಮನಾಬಾದ ಸರಕಾರಿ ಆಸ್ಪತ್ರೆಯಿಂದ
ಮಾಹಿತಿ ಬಂದಿದ ಮೇರೆಗೆ ಸಿಎಚ್.ಸಿ. ರವರು ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು
ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಹೇಮಣ್ಣಾ ತಂದೆ ಬಾಬು ಜಮಾದಾರ ಸಾ: ಸದಲಾಪೂರ ಈತನ ಫಿರ್ಯಾದು ಹೇಳಿಕೆ ಬರೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ : 28/01/2017 ರಂದು ಮುಂಜಾನೆ 1000 ಗಂಟೆ ಸುಮಾರಿಗೆ ಫಿರ್ಯಾದಿ ಹೇಮಣ್ಣಾ ಮತ್ತು
ಅವರ ಚಿಕ್ಕಮ್ಮಳಾದ ಶಶಿಕಲಾ ಇಬ್ಬರು ಹಿರೊ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ: ಕೆಎ-56/ಹೆಚ್-5572 ನೇದ್ದರ ಮೇಲೆ ಮನ್ನಾಏಖೆಳಿ
ಗ್ರಾಮಕ್ಕೆ ಹೋಗುವಾಗ ಹಿಪ್ಪರಗಾ ಕ್ರಾಸ್ ಹತ್ತಿರ ರೋಡಿನ ಮೇಲೆ ಫಿರ್ಯಾದಿತನು ತನ್ನ ಸೈಡಿಗೆ ತಾನು
ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಹಿಪ್ಪರಗಾ ಕಡೆಯಿಂದ ಒಂದು ಮೋಟಾರ ಸೈಕಲ ನೇದ್ದರ ಚಾಲಕ ಸದರಿ
ಮೋಟಾರ ಸೈಕಲ ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿತನ ಮೋಟಾರ ಸೈಕಲಿಗೆ
ಡಿಕ್ಕಿ ಮಾಡಿ ಮೋಟಾರ ಸೈಕಲ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ. ಡಿಕ್ಕಿಯ
ಪರಿಣಾಮ ಮೋಟಾರ ಸೈಕಲ ಚಲಾಯಿಸುತ್ತಿದ್ದ ಫಿರ್ಯಾದಿ ಹೇಮಣ್ಣಾ ಮತ್ತು ಮೋಟಾರ ಸೈಕಲ ಹಿಂದೆ ಕುಳಿತ ಶಶಿಕಲಾ
ರವರಿಗೆ ಕಾಲಿಗೆ, ಕೈಗೆ ಮತ್ತು ಭುಜಕ್ಕೆ ಹಾಗು ಅಲ್ಲಲ್ಲಿ ಹತ್ತಿ ರಕ್ತಗಾಯ
ಹಾಗು ಗುಪ್ತಗಾಯಗಳು ಆಗಿರುತ್ತವೆ. ನಂತರ ಡಿಕ್ಕಿ ಮಾಡಿದ ಮೋಟಾರ ಸೈಕಲ ನೋಡಲು
ಹಿರೊ ಹೊಂಡಾ ಗ್ಲಾಮರ್ ಇದ್ದು ಅದರ ನಂ: ಕೆಎ-32/ವ್ಹಿ-2545 ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ
ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment