Police Bhavan Kalaburagi

Police Bhavan Kalaburagi

Thursday, January 19, 2017

KALABURAGI DISTRICT POLICE PRESS NOTE


ಪತ್ರಿಕಾ ಪ್ರಕಟಣೆ
ಅಶೋಕ ನಗರ ಪೊಲೀಸ್ ಠಾಣೆ ಕೊಲೆ ಆರೋಪಿತರ ಬಂಧನ

     ದಿನಾಂಕ 18/01/2017 ರಂದು ಶ್ರೀ ಮಹ್ಮದ ಹನೀಫ್ ಇವರು ತಮ್ಮ ಫಿಯಾದಿಯಲ್ಲಿ ದಿನಾಂಕ:18.01.2017 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಮ್ಮ ತಮ್ಮ ನನಗೆ ತಿಳಿಸಿದ್ದೆನೆಂದರೆ, ಸಾಯಂಕಾಲ 07:30 ಗಂಟೆ ಸುಮಾರಿಗೆ ನನ್ನ ಮಗ ಮೊಹ್ಮದ ಮೊಸೀನ ಇತನಿಗೆ  7-8 ಜನರು ಬಂದು ಚಾಕುವಿನಿಂದ ಹೊಡೆದಿದ್ದು, ಉಪಚಾರಕ್ಕಾಗಿ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ  ಮಾಡಿದಾಗ ಚಿಕಿತ್ಸೆ ಫಲಕಾರಿ ಆಗದೆ ರಾತ್ರಿ 8:30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ನಂತರ ನನಗೆ ತಿಳಿದಿದ್ದೆನೆಂದರೆ, ನನ್ನ ಮಗ ಮೊಹ್ಮದ ಮೊಸೀನ ಈತನ ಕುಮ್ಮಕ್ಕಿನಿಂದಲೆ ಆತನ ಗೆಳೆಯರು ಈಗ ಸುಮಾರು 5-6 ದಿವಸಗಳ ಹಿಂದೆ  ಶಿವಶರಣ ತಂದೆ ಕೆಂಚಪ್ಪಾ ಹದಗಲ ಸಾ: ಬ್ರಹ್ಮಪೂರ ಕಲಬುರಗಿ ಈತನಿಗೆ ಹೊಡೆಬಡೆ ಮಾಡಿದ್ದು ಅದೇ ವೈಷಮ್ಯದಿಂದ ಇಂದು ದಿನಾಂಕ:18.01.2017 ರಂದು 07:30 ಪಿ.ಎಂ.ಕ್ಕೆ ನಮ್ಮ ಮಗ ಮೊಹ್ಮದ ಮೊಸೀನ ಈತನು ಸಜ್ಜನ ಬಿಲ್ಡಿಂಗ ಹತ್ತಿರ ತನ್ನ ಗೆಳೆಯರೊಂದಿಗೆ ಇದ್ದಾಗ ಶಿವಶರಣ ಹದಗಲ ಇವರ ತಮ್ಮನಾದ 1) ಅಮರ ತಂದೆ ಕೆಂಚಪ್ಪ ಹಡಗಲ ಮತ್ತು ಅವನ ಗೆಳೆಯರಾದ 2) ಯೋಗಿ ತಂದೆ ಮಲ್ಲಿಕಾರ್ಜುನ ದೊಡ್ಡಮನಿ   3) ಪ್ರಮೋದ @ ಗುಂಡ್ಯಾ ತಂದೆ ಲಿಂಗರಾಜ ಪೂಜಾರಿ  4) ಸಾಗರ ತಂದೆ ಮಲ್ಲೇಶಿ ಬೆಳಕೋಟೆ 5) ಶಾಂತು ತಂದೆ ಹಣಮಂತ ನಾಯ್ಕೋಡಿ  6) ಪ್ರಮೋದ ತಂದೆ ಬಸವರಾಜ 7) ವಿಠಲ ಹಾಗೂ ಇತರರು ಗುಂಪು ಕಟ್ಟಿಕೊಂಡುಬಂದು ನನ್ನ ಮಗ ಮೊಹ್ಮದ ಮೊಸೀನ ಈತನ ಹೊಟ್ಟೆಗೆ ಹಾಗೂ ದೇಹದ ಇತರ ಕಡೆಗೆ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 02/2017 ಕಲಂ 143, 147, 148, 302, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ಈ ಪ್ರಕರಣವನ್ನು  ಮಾನ್ಯ ಎಸ್.ಪಿ ಸಾಹೇಬರು ಗಂಭಿರವಾಗಿ ಪರಿಗಣಿಸಿ ಕೊಲೆಗಾರರ ಪತ್ತೆಮಾಡುವ ಸಲುವಾಗಿ ಮಾನ್ಯ ಆರಕ್ಷಕ ಅಧೀಕ್ಷಕು ಕಲಬುರಗಿ ಮತ್ತು ಮಾನ್ಯ ಅಪರ ಎಸ್.ಪಿ. ಕಲಬುರಗಿ ರವರ ಮಾರ್ಗದರ್ಶನದಲ್ಲಿ, ಮಾನ್ಯ ಡಿ.ಎಸ್.ಪಿ. ಉಪ ವಿಭಾಗ ಕಲಬುರಗಿ ಪಿ.ಐ. ಅಶೋಕ ನಗರ, ಪಿ.ಐ.  ಚೌಕ, ಪಿ.ಐ ಸ್ಟೇಷನ ಬಜಾರ, ಪಿ.ಐ. ಬ್ರಹ್ಮಪೂರ, ಮತ್ತು ಸಿಬ್ಬಂದಿ ಜನರನ್ನು ಕೂಡಿ  ತಂಡವನ್ನು ರಚಿಸಿದ್ದು, ತನಿಖಾ ತಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ಸಾರ್ವಜನಿಕರಿಂದ ಹಾಗೂ ಪೊಲೀಸ ಬಾತ್ಮಿದಾರರಿಂದ ಅಪರಾಧಿಗಳ ಬಗ್ಗೆ ನೀಡಿದ ಮಾಹಿತಿಯನ್ನು ಆಧರಿಸಿ  ದಿನಾಂಕ:19.01.2017 ರಂದು ಮದ್ಯಾನ್ಹ 12:30 ಗಂಟೆಗೆ ಪ್ರಕರಣದ ಆರೋಪಿತರು ಪಟ್ಟಣ ಟೋಲ್ ನಾಕಾದ ಹತ್ತಿರ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಸ್ಥಳಕ್ಕೆ ಹೋದಾಗ ಪೊಲೀಸರನ್ನು ನೋಡಿ   ಮಹ್ಮದ ಮೊಸೀನ ಈತನಿಗೆ ಕೊಲೆ ಮಾಡಿದ 9 ಜನ ಆರೋಪಿತರು ಓಡಿ ಹೋಗುತ್ತಿದ್ದಾಗ ಅವರನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ತೆಗೆದುಕೊಂಡು ಕೊಲೆಗಾರರಾದ 1) ಅಮರ ತಂದೆ ಕೆಂಚಪ್ಪ ಹದಗಲ ಉ: ವಿದ್ಯಾರ್ಥಿ ಸಾ: ಕನಕ ನಗರ ಬ್ರಹ್ಮಪೂರ ಕಲಬುರಗಿ 2) ವಿಠಲ ತಂದೆ ಅಂಬಣ್ಣಾ ಪರಿಟ್ ಉ: ಖಾಸಗಿ ಕೆಲಸ ಸಾ: ಧನಗರ ಗಲ್ಲಿ ಬ್ರಹ್ಮಪೂರ ಕಲಬುರಗಿ. 3) ಸಾಗರ ತಂದೆ ಮಲ್ಲೇಶಿ ಬಾಳೆ ಉ: ಅಡುಗೆ ಕೆಲಸ ಸಾ: ಕನಕ ನಗರ ಕಲಬುರಗಿ. 4) ಶಾಂತು @ ಶಾಂತಲಿಂಗ ತಂದೆ ಹಣಮಂತ ನಾಯ್ಕೋಡಿ ಉ: ಗೌಂಡಿ ಕೆಲಸ ಸಾ: ಸಮತಾ ಕಾಲೋನಿ ಬ್ರಹ್ಮಪೂರ ಕಲಬುರಗಿ 5) ಯೋಗಿ @ ಯೋಗಿರಾಜ ತಂದೆ ಮಲ್ಲಿಕಾರ್ಜುನ ದೊಡ್ಡಮನಿ ಉ: ವಿದ್ಯಾರ್ಥಿ ಸಾ: ಧನಗರ ಗಲ್ಲಿ ಬ್ರಹ್ಮಪೂರ ಕಲಬುರಗಿ 6) ಪ್ರಮೋದ @ ಗುಂಡ್ಯಾ ತಂದೆ ಲಿಂಗರಾಜ ಪೂಜಾರಿ ಉ: ವಿದ್ಯಾರ್ಥಿ ಸಾ: ಸಮತಾ ಕಾಲೋನಿ ಕಲಬುರಗಿ  7) ಪ್ರಮೋದ ತಂದೆ ಬಸವರಾಜ ದಾಳಿಂಬ ಉ: ವಿದ್ಯಾರ್ಥಿ ಸಾ: ಸಮತಾ ಕಾಲೋನಿ ಕಲಬುರಗಿ 8) ಶರಣು @ ಶರಣಪ್ಪ ತಂದೆ ಬಂಡಪ್ಪ ದಣ್ಣೂರ ಉ: ವಾಟರ ಸಪ್ಲಾಯ್ ಕೆಲಸ ಸಾ: ಸಮತಾ ಕಾಲೋನಿ ಕಲಬುರಗಿ ಮತ್ತು 9) ಶಿವಪ್ರಸಾದ ತಂದೆ ಶರಣಬಸಪ್ಪ ಕುಂಬಾರ ಉ: ವಿದ್ಯಾರ್ಥಿ ಸಾ: ಕುಂಬಾರಗಲ್ಲಿ ಬ್ರಹ್ಮಪೂರ ಕಲಬುರಗಿ ಇವರನ್ನು  ಹಿಡಿಯುವಲ್ಲಿ ಪೊಲೀಸ ತಂಡವು ಯಶಶ್ವಿಯಾಗಿದ್ದು ಇರುತ್ತದೆ.
          Cದರಂತೆ ಸದರಿ ಘಟನೆಗೆ ಸಂಬಂಧಿಸಿದ ರಾಘವೇಂದ್ರ ನಗರ ಪೊಲೀಸ್ ಠಾಣೆ ಗುನ್ನೆ. ನಂ. 05/17 ಕಲಂ. 143,147,148,323,324,504,506 ಮತ್ತು 149 .ಪಿ.ಸಿ. ಪ್ರಕರಣದಲ್ಲಿ ಬಾತ್ಮಿದಾರರ ಮಾಹಿತಿಯಂತೆ ಆರೋಪಿಗಳಾದ 1) ಮುvÀÄðಜಾ ಅಲಿ ಉ: ವಿದ್ಯಾರ್ಥಿ ಸಾ: ಕಲಬುರಗಿ, 2) ಶ್ಯಾಂಡಿ ಸಂತು ಉ: ವಿದ್ಯಾರ್ಥಿ ಸಾ: ಕಲಬುರಗಿ, 3) ಸಾಗರ ಎಂ.ಬಿ. : ವಿದ್ಯಾರ್ಥಿ ಸಾ: ಕಲಬುರಗಿ, 4) ¥sÁð: ವಿದ್ಯಾರ್ಥಿ ಸಾ: ಕಲಬುರಗಿ, 5) ಸೂಫಿಯಾನ ಉ: ವಿದ್ಯಾರ್ಥಿ ಸಾ: ಕಲಬುರಗಿ. ಇವರುಗಳನ್ನು ತನಿಖಾ ತಂಡವು ವಶಕ್ಕೆ ಪಡೆದಿರುತ್ತಾರೆ
                       ಈ ಪ್ರಕರಣಗಳ ಆರೋಪಿತರನ್ನು ಹಿಡಿಯುವಲ್ಲಿ ಸಾರ್ವಜನಿಕರು, ಪೊಲೀಸ ಬಾತ್ಮಿದಾರರು ಮತ್ತು ಮಾದ್ಯಮದವರುಯ ಸಹಕರಿಸಿದಕ್ಕೆ ಅವರನ್ನು ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ಶ್ಲಾಘಿಸಿ  ಧನ್ಯವಾದಗಳನ್ನು  ತಿಳಿಸಿರುತ್ತಾರೆ ಮತ್ತು ತನಿಖಾ ತಂಡದ  ಅಧಿಕಾರಿ ಸಿಬ್ಬಂದಿಯವರಿಗೆ  ಪ್ರಸಂಶಿಸಿರುತ್ತಾರೆ. 

No comments: