ಅತ್ಯಾಚಾರ ಮಾಡಿದ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀಮತಿ ಇವರಿಗೆ ತಾಜಸುಲ್ತಾನಪೂರ
ಗ್ರಾಮದ ಶಿವಶರಣಪ್ಪ @ ಶರಣಪ್ಪ ಬೆಡಜರ್ಗಿ
ಆಟೋಚಾಲಕನು ದಿನಾಲು ನಮ್ಮ ಮನೆಯ ಎದರುಗಡೆಯಿಂದ ಹೋಗುವದು ಬರುವದು ಮಾಡುತ್ತಿದ್ದಾಗ ನನಗೆ
ದಿಟ್ಟಿಸಿ ನೋಡುವದು ನಮ್ಮ ಬಟ್ಟೆ ಅಂಗಡಿಗೆ ಬಂದು ಮಾತಾಡುವದು ಮಾಡುವದಲ್ಲದೆ ನನ್ನ ಫೋನ ನಂಬರ
ಕೇಳುವುದು ಚಿಡಾಯಿಸುವದು ಮಾಡುತ್ತಿದ್ದನು ,
ನನ್ನ ಗಂಡ ಅತ್ತೆಗೆ ಹೇಳಿದರೆ ತಪ್ಪಾಗಿ ಭಾವಿಸಿ ತೊಂದರೆಯಾಗ ಬಹುದೆಂದು ಯಾರಿಗೂ
ಹೇಳಿರುವದಿಲ್ಲಾ. ಕಳೆದ 3-4 ದಿವಸಗಳಿಂದ ನನಗೆ ಫೋನ ಮಾಡಿ ಮನೆಗೆ ಬರುತ್ತೇನೆ ಬಾಗಿಲು
ತೆರೆಯಬೇಕು ಇಲ್ಲದಿದ್ದರೆ ರಸ್ತೆ ಮೇಲೆ ಹೋಗುವಾಗ
ನಿನ್ನ ಮಕ್ಕಳ ಮೇಲೆ ಆಟೋ ಹಾಯಿಸಿಕೊಂಡು ಹೋಗುತ್ತೆನೆ ಅಂತಾ ಬೆದರಿಕೆ ಹಾಕುತಿದ್ದನು ಅದಕ್ಕೆ ನಾನು ನನ್ನ ಮದುವೆಯಾಗಿದೆ ಇಬ್ಬರು ಮಕ್ಕಳು
ಇರುತ್ತಾರೆ ದಯವಿಟ್ಟು ಸತಾಯಿಸಬೇಡಾ ತೊಂದರೆ ಕೋಡಬೇಡಾ ಅಂತಾ ಪರಿಪರಿಯಾಗಿ ಬೇಡಿಕೊಂಡರು
ಸತಾಯಿಸುತಿದ್ದನು. ದಿನಾಂಕ. 18-1-2017 ರಂದು ಸಂಜೆ 8-00 ಗಂಟೆಯಸುಮಾರಿಗೆ ಸದರಿ ಶಿವಶರಣಪ್ಪಾ
@ ಶರಣಪ್ಪ ಬೆಡಜಿರಗಿ ಇತನು ನಮ್ಮ ಮನೆಯ ಮುಂದಿನಿಂದ ಆಟೋ ತೆಗೆದುಕೊಂಡು ಹೋಗುತ್ತಿರುವಾಗ ನಮ್ಮ
ಮನೆಯ ಎದರುಗಡೆ ಆಟೋನಿಲ್ಲಿಸಿ ನಮ್ಮ ಅಂಗಡಿಯ ಹತ್ತಿರ ಬಂದು ಇಂದು ಮದ್ಯರಾತ್ರಿ 2-00 ಗಂಟೆಯ ಸುಮಾರಿಗೆ ಮನೆಗೆ ಬರುತ್ತೇನೆ ಎದ್ದು ಬಾಗಿಲು ತೆರೆಯ ಬೇಕು ತೆಗೆಯದಿದ್ದರೆ
ಬೆಳಗ್ಗೆ ನಿಮ್ಮ ಮನೆಗೆ ಬಂದು ಗಲಾಟೆ ಮಾಡಿ ದಿನಾಲು ಫೋನ ಮಾಡಿತಿದ್ದಾಳೆ ಎಂದು ನಿನ್ನ
ಗಂಡ ಮತ್ತು ಮನೆಯವರೆಲ್ಲರಿಗೂ ಹೇಳುತ್ತೇನೆ ಅಂತಾ
ಹೇಳಿ ಹೋದನು . ದಿನಾಂಕ. 19-01-2017 ರಂದು ಮದ್ಯ ರಾತ್ರಿ 01:30 ಎ.ಎಂ.ದ ಸುಮಾರಿಗೆ ನಮ್ಮ
ಬಾಗಿಲು ಬಡಿದ ಸಪ್ಪಳ ಬಂತು ಆಗ ಮನೆಯಲ್ಲಿ ನನ್ನ
ಗಂಡ ನನ್ನ ಮಗು ಹಾಗೂ ಇನ್ನೊಂದು ಕಡೆ ನಮ್ಮ ನದನಿಯ ಮಗಳಾದ ಅರ್ಚನಾ ಮಲಗಿರುವದನ್ನು ನೋಡಿ ಎದ್ದು
ಹೋಗಿ ಬಾಗಿಲ ಮರೆಯಲ್ಲಿ ನಿಂತು ನೋಡಲು ಶಿವಶರಣಪ್ಪಾ @ ಶರಣಪ್ಪ ಇತನು ಇದ್ದನು ಮನೆಗೆ ಬರಬೇಡಾ ತೊಂದರೆಯಾಗುತ್ತದೆ ನಿನ್ನ ಕೈ
ಮುಗಿಯುತ್ತೆನೆ ಅಂತಾ ಹೇಳಿದರು ಆತನು ಸ್ವಲ್ಪ ಮಾತನಾಡಿ ಹೋಗುತ್ತೇನೆ ನೀನು ಬಾಗಿಲು ತೆಗೆಯ ಬೇಕು
ಇಲ್ಲ ಅಂದರೆ ನಾನು ಚೀರುತ್ತೇನೆ ರಂಡಿ , ಭೋಸಡಿ ಅಂತಾ ಹೆದರಿಸಿ ಜಬರದಸ್ತಿಯಿಂದ ಬಾಗಿಲನ್ನು
ತೆರೆಯಿಸಿ ಮನೆಯ ಒಳಗಡೆ ಬಂದು ನನಗೆ ಕೈಹಿಡಿದು ಜಬರದಸ್ತಿಯಿಂದ ಎಳೆದುಕೊಂಡು ಬಟ್ಟೆ ಅಂಗಡಿಯ
ಒಳಗೆ ಕರೆದುಕೊಂಡು ಹೋಗಿ ನನಗೆ ಜಬರದಸ್ತಿಯಿಂದ
ನನ್ನ ಬಟ್ಟೆಗಳನ್ನು ತೆಗೆದು ಬೇಡವೆಂದರೂ ಒತ್ತಾಯ ಪೂರ್ವಕವಾಗಿ ನನ್ನ ಬಾಯಿ ಒತ್ತಿ ಹಿಡಿದು ನನ್ನನ್ನು ಕೆಳಗೆ ಕೆಡವಿ
ಜಬರಿಯಿಂದ ಹಠಸಂಭೋಗ ಮಾಡಿರುತ್ತಿರುವಾಗ ಒತ್ತಿ ಹಿಡಿದ ಬಾಯಿಯನ್ನು ಬಿಡಿಸಿಕೊಂಡು ಚೀರಾಡುವಾಗ ನನ್ನ
ಗಂಡ ಮಲ್ಲಯ್ಯಾ ಮಠಪತಿ ಮತ್ತು ನನ್ನ ನಾದನಿಯ ಮಗಳಾದ ಅರ್ಚನಾ ಇವರು ಬಂದು ಘಟನೆಯನ್ನು ನೋಡಿದರು
ಹಾಗೆ ಚೀರಾಡುತ್ತಿರುವಾಗ ಪಕ್ಕದ ಮನೆಯ ಶರಣಯ್ಯ ತಂದೆ ಉಗರಯ್ಯ ಅವರ ಹೆಂಡತಿ ಸವಿತಾ ಹಾಗೂ ಸಂತೋಷ
ಅಂಬಲಗಿ ಹಾಗೂ ಇವರ ತಾಯಿ ಶರಣಮ್ಮ ಮತ್ತು ಚಂದ್ರಶೇಟ್ಟಿ ಅಂಬಲಗಿ ಇವರು ಓಡಿ ಬಂದಿದ್ದು ಆಗ ಶಿವಶರಣಪ್ಪಾ @ ಶರಣಪ್ಪ ಈತನು
ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಆತನನ್ನು ನನ್ನ ಗಂಡನವರು ಹಿಡಿದುಕೊಂಡಿದ್ದು, ಆದರು
ಆತನು ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಬಸವರಾಜ ತಂದೆ ಅಣ್ಣರಾವ ಖ್ಯಾಡಗಿ
ಸಾ
: ಬಸನಾಳ ತಾ : ಜಿ : ಕಲಬುರಗಿ ರವರಿಗೆ ದಿನಾಂಕ 18-01-2017 ರಮದು ರಾತ್ರಿ ಲಕ್ಷ್ಮಣ ತಂದೆ ಅಣ್ಣರಾವ
ಖೆಡಗಿ ಸಂಗಡ ಇನ್ನು ಮೂರು ಜನರು ಸಾ : ಎಲ್ಲರೂ ಬಸನಾಳ ಕುಡಿಕೊಂಡು
ನಿನ್ನೆ ನೀನು ವಿನಾಕರಣ ನಮ್ಮ ಮಗನಿಗೆ ಹೊಡೆದಿದಿ
ಮಗನೆ ಅಂತಾ ತಡೆದು ನಿಲ್ಲಿಸಿ ಕೈಯಿಂದ ಮತ್ತು ಬಡಿಗಡಯಿಂದ ಹೊಡೆ,ಬಡೆ
ಮಾಡಿ ತಲೆಗೆ ರಕ್ತಗಾಯ ಗೋಳಿಸಿ ಜೀವದ ಬೆದರಿಕೆ ಹಕಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಶಬಿನಾ ಗಂಡ ನಬಿ ಪಟೇಲ ಕೂಡಿ ಸಾ :
ಕೋಳ್ಳುರ ತಾ:ಜಿ: ಕಲಬುರಗಿ ಇವರ ಗಂಡ ನಬಿಪಟೇಲ ತಂದೆ ಚಾಂದ ಪಟೆಲ ಕಕೂಡಿ ಸಾ : ಕೋಳ್ಲುರ
ಇತನಿಗೆ ಈಗ 2 ವರ್ಷಗಳಿಮದ ಹೊಟ್ಟೆ ಕಡಿತದ ಬೇನೆ ಇದ್ದು ಅದರ ತ್ರಾಸ ತಾಳದೆ ದಿನಾಮಕ 02-01-2017 ರಂದು ತನ್ನ ಮನೆಯಲ್ಲಿ ವಿಷ ಸೇವನೆ
ಮಡಿದ್ದು ಚಿಕಿತ್ಸೆಯಲ್ಲಿ ಗುಣಮುಖನಾಗದೆ ದಿನಾಂಕ 19-01-2017 ರಂದು ರಾತ್ರಿ 1 ಗಂಟೆಗೆ ಸರ್ಕರಿ
ಅಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment