ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ
24/01/2017 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ನನ್ನ ಗಂಡನಾದ ಸಂತೋಷ ತಂದೆ ಸಿದ್ದಾರಾಮ ಕಿರಣಗಿ ಇವರು ಮಣುರ ಗ್ರಾಮದಲ್ಲಿ ಸ್ವಲ್ಪ ಕೆಲಸ ಇದೆ ಹೋಗಿ ಬರುತ್ತೇನೆ ಮತ್ತು ಬರುವಾಗ ಕರಜಗಿ ಗ್ರಾಮದಲ್ಲಿರುವ ಅಕ್ಕನನ್ನು ಬೆಟ್ಟಿಯಾಗಿ ಬರುತ್ತೇನೆ ಅಂತಾ ಹೇಳಿ ತನ್ನ ಗೆಳೆಯನ ಮೋಟರ ಸೈಕಲ ನಂ ಕೆಎ-28 ಯು-8073 ನೇದ್ದರ ಮೇಲೆ ಮಣೂರ ಗ್ರಾಮಕ್ಕೆ ಹೋಗಿರುತ್ತಾನೆ. ರಾತ್ರಿ 7:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮೋಬೈಲಿಗೆ ನನ್ನ ಗಂಡನ ಮೋಬೈಲನಿಂದ ಅಪ್ಪಾರಾಯ ತಂದೆ ಭಿಮಶಾ ಕಲಶೇಟ್ಟಿ ಸಾ|| ಕರಜಗಿ ಎಂಬುವವರು ಪೋನ ಮಾಡಿ ತಮ್ಮ ಹೆಸರನ್ನು ಹೇಳಿ ಈ ಮೋಬೈಲ ಹೊಂದಿದವರು ಸಾಯಂಕಾಲ 7:30 ಗಂಟೆ ಸುಮಾರಿಗೆ ಅಫಜಲಪೂರ – ಕರಜಗಿ ರೋಡಿಗೆ ಇರುವ ನಮ್ಮ ಹೊಲದ ಹತ್ತಿರ ರೋಡಿನ ಮೇಲೆ ಮೋಟರ ಸೈಕಲ ಸ್ಕೀಡ್ ಆಗಿ ಬಿದ್ದಿರುತ್ತಾನೆ. ಸದರಿಯವನಿಗೆ ಬಹಳ ಪೆಟ್ಟಾಗಿರುತ್ತದೆ ಅಂತಾ ತಿಳಿಸಿದ ಮೇರೆಗೆ ನಾನು ಕರಜಗಿ ಗ್ರಾಮದಲ್ಲಿರುವ ನಮ್ಮ ನಾದನಿಯ ಗಂಡ ಗುರು ಕಲಶೆಟ್ಟಿ ರವರಿಗೆ ಪೋನ ಮಾಡಿ ಸ್ಥಳಕ್ಕೆ ಹೋಗಲು ತಿಳಿಸಿದೆನು. ನಂತರ ನಾನು ಮತ್ತು ನಮ್ಮ ಮಾವ ಸಿದ್ದಾರಾಮ ಹಾಗೂ ಅತ್ತೆ ಶಿವಕಾಂತಾಬಾಯಿ ಮೂರು ಜನರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ, ನನ್ನ ಗಂಡನ ತಲೆಗೆ ಮತ್ತು ಹಣೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ
ಅಂತಾ ಶ್ರೀಮತಿ ಸುರೇಖಾ ಗಂಡ ಸಂತೋಷ ಕಿರಣಗಿ ಸಾ|| ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment