ವರದಕ್ಷಣೆ ಕಿರುಕಳ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಮೋನಿಕಾ ಗಂಡ ದತ್ತಾತ್ರೇಯ ಮುನಗಾ ಪಾಟೀಲ ಸಾ:ಶಹಾಬಾದ. ರವರು
ತಾನು & ತನ್ನ ಗಂಡ ದತ್ತಾತ್ರೇಯ
ಇಬ್ಬರೂ ಒಬ್ಬರಿಗೋಬ್ಬರು ಪ್ರಿತಿಸಿ ದಿನಾಂಕ 14/11/2014 ರಂದು ಮದುವೆಯಾಗಿದ್ದು, ನಂತರ 6-7 ತಿಂಗಳವರೆಗೆ ಪಿರ್ಯಾಧಿ ಗಂಡ, ಅತ್ತೆ, ಬಾವ, ನೆಗಣಿ ಇವರೆಲ್ಲರೂ ಚನ್ನಾಗಿ ನೋಡಿಕೊಂಡು ನಂತರ ಎಲ್ಲರೂ
ಕೂಡಿಕೊಂಡು ನನಗೆ ಮದುವೆಯಲ್ಲಿ ಬಂಗಾರ & ವರದಕ್ಷಿಣೆ ನೀಡಿರುವುದಿಲ್ಲಾ ಪುಕ್ಕಟಿಯಾಗಿ ಖರ್ಚು
ವೆಚ್ಚ ಎಲ್ಲದೆ ಮದುವೆಯಾಗಿದಿ. ತವರು ಮನೆಯಿಂದ ಹಣ & ಬಂಗಾರ ತೆಗೆದುಕೊಂಡು ಬಾ ಅಂತಾ ಕಿರುಕುಳ
ಕೊಟ್ಟಿದ್ದರಿಂದ ನಾನು ನನ್ನ ಗಂಡನಿಗೆ ಒಂದು ಲಕ್ಷ ರೂ ತಂದು ಕೊಟ್ಟಿದ್ದರೂ ಸಹ ಇನ್ನೂ ಹಣ ಬಂಗಾರ
ವರದಕ್ಷಿಣೆ ತೆಗೆದುಕೊಂಡು ಬರಬೇಕು ಎಂದು ಮಾನಸಿಕ & ದೈಹಿಕ ಕಿರುಕುಳ ಕೊಡುತ್ತಿದ್ದರು ನಾನು ಸಹಿಸಿಕೊಂಡು
ಬಂದಿರುತ್ತೇನೆ. ಒಂದು ವೇಳೆ ನೀನು ಹಣ ಬಂಗಾರ
ತರದಿದ್ದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಜೀವದ ಭಯ ಹಾಕಿ ಅವಾಚ್ಯವಾಗಿ ಬೈದಿರುತ್ತಾರೆ. ನಾನು ದಿನಾಂಕ 17/1/16 ರಂದು ಕಲಬುರಗಿಯಿಂದ ಶಹಾಬಾದಕ್ಕೆ
ಬಂದು ಮನೆಗೆ ಹೋಗುವ ಸಂದರ್ಭದಲ್ಲಿ ನನ್ನ ಗಂಡ ಕೈಯಿಂದ ಹೊಡೆಬಡೆ ಮಾಡಿರುತ್ತಾನೆ. ಕಾರಣ ನನಗೆ ವರದಕ್ಷಿಣೆ ತರುವಂತೆ ಮಾನಿಕ & ದೈಹಿಕ ಕಿರುಕುಳ ಕೊಟ್ಟು ಅವಾಚ್ಯವಾಗಿ ಬೈದು ಜೀವದ ಭಯ
ಹಾಕಿ ಹೊಡೆ ಬಡೆ ಮಾಡಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ
ಶಿವಪುತ್ರ ತಂದೆ ಸಾಯಿಬಣ್ಣ ಸಾ: ದೇವನ ತೆಗನೂರ ಇವರು ಅದೇ ಗ್ರಾಮದ ಭೀಮರಾಯ ತಂದೆ ನಾಗಪ್ಪ ಇತನ
ಮಗನಾದ ರಾಕೇಶ ಇತನಿಗೆ ವೈಯಕ್ತಿಕ ಸಾಲದ ಸಲುವಾಗಿ ಒಂದು ತೊಲೆ ಬಂಗಾರ ಕೊಟ್ಟಿದ್ದು ಅದನ್ನು ವಾಪಸ
ಕೊಡಲು ಕೇಳಿದರೆ ಅರೋಪಿತರಾದ ಭೀಮರಾಯ ,ಅವನ ಹೆಂಡತಿ ತಾರಾಬಾಯಿ , ಅವನ
ಮಗ ಸತೀಶ ರವರೆಲ್ಲರು ಕೂಡಿ ಪಿರ್ಯಾದಿಗೆ
ದಿನಾಂಕ: 02/08/2016 ರಂದು ಮದ್ಯಾಹ್ನ 12-30 ಗಂಟೆಗೆ ದೇವನ ತೆಗನೂರ ಗ್ರಾಮದ ಕರಿಗೂಳಿಶ್ವರ
ಗುಡಿಯ ಹತ್ತಿರ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂಥಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment