Police Bhavan Kalaburagi

Police Bhavan Kalaburagi

Tuesday, February 28, 2017

KALABURAGI DISTRICT REPORTED CRIME

ಅಪಘಾತ ಪ್ರಕರಣಗಳು:
ಕಾಳಗಿ ಪೊಲೀಸ ಠಾಣೆ :- ದಿನಾಂಕ 28/02/17 ರಂದು ಶ್ರೀ ಈರಭದ್ರಪ್ಪ ಪಂಡರಗೇರಿ ಸಾ:ಹುಳಗೇರಾ ಇವರು ಠಾಣೆಗೆ ಹಾಜರಾಗಿ  ದಿನಾಂಕ 27/02/2017 ರಂದು ಕೋರವಾರ ಅಣ್ಣವೀರಪ್ಪ ದೇವರ ಥೇರು ಇರುವುದರಿಂದ ನಮ್ಮ ಗ್ರಾಮದಿಂದ ನಾನು ನನ್ನ ಹೆಂಡತಿ ಶಾಂತಾಬಾಯಿ ನನ್ನ ಮಗ ಶಿವುಕುಮಾರ ಸಾಯಂಕಾಲ ದೇವಸ್ಥಾನಕ್ಕೆ ಹೋಗಿದ್ದು ನನ್ನ ಇನ್ನೊಬ್ಬ ಮಗ ಆನಂದನು ಹುಳಗೇರಾದಿಂದ ಯಾರದೋ ಮೋಟಾರ ಸೈಕಲ್  ತೆಗೆದುಕೊಂಡು ಕಾಳಗಿಗೆ ಬಂದು ಕಾಳಗಿಯಿಂಧ  ತನ್ನ  ಗೆಳೆಯನಾದ ಮಡಿವಾಳಪ್ಪ ತಂದೆ ರವೀಂದ್ರ ನಡಗಟ್ಟಿ ಇತನೊಂದಿಗೆ ಅಣವೀರಪ್ಪನ ದೇವಸ್ಥಾನಕ್ಕೆ ನನ್ನ ಮಗ ಮತ್ತು ಆತನ ಗೆಳೆಯ ಮಡಿವಾಳಪ್ಪ ಮೋಟಾರ ಸೈಕಲ್ ನಂ. ಕೆಎ-28 ಕ್ಯೂ-5105 ನೇದ್ದರ ಮೇಲೆ ಬರುತ್ತಿದ್ದಾಗ ಕಾಳಗಿ ಹತ್ತಿರದ ಗೋಟುರ ಕಡೆಯ ರಸ್ತೆ ಯಲ್ಲಿ ಕಲಬುರಗಿ ಕಡೆಯಿಂದ ಬರುತ್ತಿದ್ದ ಟಾಟಾ ಸುಮೋ ನಂ. ಕೆಎ-32 ಎ-5133 ನೇದ್ದರ ಚಾಲಕ ವಾಹನವನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸುತ್ತಾ ನನ್ನ ಮಗರ ಮತ್ತು ಆತನ ಗೆಳೆಯ ಬರುತ್ತಿದ್ದ ಮೋಟಾರ ಸೈಕಲ್ ಕ್ಕೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ಎರಡು ಕಿವಿಯಿಂದ ರಕ್ತ ಸೋರಿರುತ್ತದೆ. ಎರಡು ಕಾಲುಗಳಿಗೆ ತರಚಿತ ಗಾಯಗಳಾಗಿದ್ದು. ಆತನ ಗೆಳೆಯ ಮಡಿವಾಳಪ್ಪನಿಗೆ ಕಾಲು ಮುರಿದಿದ್ದು ಮಡಿವಾಳಪ್ಪನಿಗೆ ಖಾಸಗಿ ವಾಹನದಲ್ಲಿ  ಸರಕಾರಿ ಆಸ್ಪತ್ರೆ ಕರೆದುಕೊಂಢು ಹೋಗಿದ್ದು. ನನ್ನ ಮಗ ಆನಂದನು ಮೃತ ಪಟ್ಟಿದ್ದು . ಅಪಘಾತ ಪಡಿಸಿದ ಟಾಟಾ ಸುಮೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಮುಧೋಳ ಪೊಲೀಸ್ ಠಾಣೆ :- ದಿನಾಂಕ: 27.02.2017 ರಂದು ಶ್ರೀಮತಿ ಅನುಸುಜಮ್ಮ @ ಅನಸಮ್ಮ ಗಂಡ ನರಸಿಂಹಲು ಮಾಲಾಮೀದಿ ಸಾ: ಕೊಡಚರ್ಲಾ ಮಂಡಲ: ಬಸೀರಾಬಾದ (ಟಿ.ಎಸ್. ರಾಜ್ಯ) ಇವರು ಹೇಳಿಕೆ ಫೀರ್ಯಾದಿಯಲ್ಲಿ ಇಂದು ದಿನಾಂಕ: 27-02-2017 ರಂದು ತಮಗಮ ಊರಿನಿಂದ ತಾನು ಮತ್ತು ನನ್ನ ಗಂಡ ನರಸಿಂಹಲು ಮೇದಕ್ ಗ್ರಾಮಕ್ಕೆ ನಮ್ಮ ಮೊ/ಸೈ ನಂ OR-05-V-0954 ನೇದ್ದರ ಮೇಲೆ ಸಂಬಂದಿಕರಾದ ವೆಂಕಟೇಶ ತಂದೆ ಶಾಮಪ್ಪ ಸಾ: ಮೇದಕ ಇವರ ಮನೆಗೆ ಬಂದಿದ್ದು. ನನ್ನ ಗಂಡ ಮೇದಕ ಗ್ರಾಮದ ನಮ್ಮ ಸಂಬಂದಿಕರ ಮನೆಯಲ್ಲಿ ನನಗೆ ಬಿಟ್ಟು ಕಾನಕುರ್ತಿ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಮೊ/ಸೈನ್ನು ನಂ OR-05-V-0954  ನೇದ್ದರ ಮೇಲೆ ಹೋಗಿದ್ದು. ಸಾಯಂಕಾಲ ನನ್ನ ಗಂಡನ ಫೋನ ದಿಂದ ನನಗೆ ಫೋನ ಮಾಡಿ ನಿನ್ನ ಗಂಡ ಕಾನಕುರ್ತಿಯಿಂದ ಮೇದಕ ಕಡೆಗೆ ಮೊ/ಸೈ ನಂ OR-05-V-0954 ನೇದ್ದರ ಮೇಲೆ ಬರುತ್ತಿದ್ದಾಗ  ಗಂಗಾರಾವಲಪಲ್ಲಿ ಗೇಟ ದಾಟಿ ಸುಮಾರು 1 ಕಿಮಿ ದೂರದ ಅಂತರದಲ್ಲಿ ನಿನ್ನ ಗಂಡ ಮೊ/ಸೈ ನ್ನು ಅತಿವೇಗ ಹಾಗು ನಿಷ್ಕಾಳಜೀತನಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಮೊ/ಸೈ ಸ್ಕಿಡ್ಡಾಗಿ ರೋಡಿನ ಮೇಲೆ ಬಿದ್ದಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬರುತ್ತಿದೆ ಅಂತಾ ತಿಳಿಸಿದಾಗ ನಾನು ಮತ್ತು ನಮ್ಮ ಸಂಬಂದಿಕರಾದ ವೆಂಕಟೇಶ ತಂದೆ ಶಾಮಪ್ಪ ಇಬ್ಬರು ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ತಲೆಗೆ ಹಿಂದುಗಡೆ ಭಾರಿ ರಕ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತಬರುತ್ತಿದ್ದು ಉಪಚಾರ ಕುರಿತು 108 ಅಂಬುಲೇನ್ಸನಲ್ಲಿ ಸರಕಾರಿ ಆಸ್ಪತ್ರೆ ಗುರುಮಠಕಲ್ ಗೆ ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಆಸ್ಪತ್ರೆಗೆ ತೆಗೆದುಕೊಂಡು ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಆಡಕಿ ಗ್ರಾಮದ ಹತ್ತಿರ ಮೃತ ಪಟ್ಟಿದ್ದು ಇತನ ಮೃತ ದೇಹವನ್ನು ಸರಕಾರಿ ಆಸ್ಪತ್ರೆ ಸೇಡಂಕ್ಕೆ ತಂದಿದ್ದು. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

No comments: