ಅಪಘಾತ ಪ್ರಕರಣ :
ಮುಧೋಳ
ಠಾಣೆ : ದಿನಾಂಕ 07-04-2017 ರಂದು ಸಾಯಾಂಕಲ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರ ಹುಸೇನಪ್ಪಾ ತಂದೆ ಶರಣಪ್ಪಾ ಹರಿಜನ ಇವರು ನನಗೆ ಪೋನ್ ಮಾಡಿ ನಮ್ಮುರ ದಿಂದ ಗಾಡದಾನ ಗ್ರಾಮಕ್ಕೆ
ಹೊಗುವ ರಸ್ತೆಯಲ್ಲಿ ಚಾಂದ ಮುತ್ಯಾ ಇವರ ಹೊಲದ ಹತ್ತಿರ ರಸ್ತೆಯಲ್ಲಿ ಟ್ರಾಕ್ಟರ ಪಲ್ಟಿಯಾಗಿದ್ದು ಇದರಿಂದ ಸದರಿ ಟ್ರಾಕ್ಟರದಲ್ಲಿ ಕುಳಿತಿದ್ದ ನಿಮ್ಮ ಬಾಬು ಅಣ್ಣನ ಮಕ್ಕಳಿಬ್ಬರ ಮೇಲೆ ಕಲ್ಲುಗಳು ಬಿದ್ದು ಭಾರಿಗಾಯಗಳಾಗಿರುತ್ತವೆ ಅಂತಾ ತಿಳಿಸಿದ್ದು ತಕ್ಷಣ ನಾನು ಮತ್ತು ನಮ್ಮುರ ನಮ್ಮ ಮಾವನಾದ ಹುಸೇನಪ್ಪಾ ತಂದೆ ಆಶಪ್ಪಾ ಆಶಪಗೋಳ ಮತ್ತು ಇತರರು ಸೇರಿ ನಮ್ಮೂರ ಹತ್ತಿರ ಇರುವ ಚಾಂದ ಮುತ್ಯಾ ಇವರ ಹೋಲದ ಹತ್ತೀರ ಹೋಗಿ ನೋಡಲಾಗಿ ಅಲ್ಲಿ ರಸ್ತೇಯ ಮೇಲೆ ನಮ್ಮೂರ ಭೀಮಶಪ್ಪಾ ರಾಯಪ್ಪಗೋಳ
ಇವರ ಟ್ರಾಕ್ಟರ ಪಲ್ಟಿಯಾಗಿ ಬಿದ್ದಿದ್ದು ನಮ್ಮ ಅಣ್ಣನ ಮಕ್ಕಳಾದ 1] ನರಸಿಂಹ ಮತ್ತು 2] ಮಂಜೂಳ ಹಾಗು ನಮ್ಮರ 3] ಹುಸನಪ್ಪಾ ತಂದೆ ಹುಸನಪ್ಪಾ ಹರಿಜನ ಇವರುಗಳ ಮೆಲೆ ಟ್ರಾಕ್ಟರದಲ್ಲಿದ್ದ ಗುಂಡುಕಲ್ಲುಗಳು ಬಿದ್ದಿದ್ದು ಆಗಾ ನಾವು ಮತ್ತು ಸದರಿ ಸುದ್ದಿ ತಿಳಿದು ನಮ್ಮ ಅಣ್ಣನಾದ ಬಾಬು ಇತನು ಅಲ್ಲಿಗೆ ಬಂದಿದ್ದು ನಾವು ಹಾಗು ರಸ್ತೆಯಿಂದ
ಹೊಗಿ ಬರುವ ಜನರು ಕೂಡಿ ಗುಂಡು ಕಲ್ಲಿನ ಒಳಗಿದ್ದ ನಮ್ಮ ಅಣ್ಣನ ಮಕ್ಕಳಾದ ನರಸಿಂಹ ತಂದೆ ಬಾಬು ವ|| 10 ವರ್ಷ ಮತ್ತು ಮಂಜುಳಾ ತಂದೆ ಬಾಬು ವ|| 8 ವರ್ಷ ಹಾಗು ನಮ್ಮೂರ ಹುಸೇನಪ್ಪಾ ತಂದೆ ಹುಸೇನಪ್ಪಾ ಕುಂಟಸಾಯಪಗೋಳ ಇವರೆಲ್ಲರಿಗೆ ಮೆಲ್ಲೆತ್ತಿ ನೋಡಲಾಗಿ ನರಸಿಂಹ ಮತ್ತು ಮಂಜುಳಾ ಇವರ ತಲೆಗೆ ಹಾಗು ಮುಖಕ್ಕೆ ಮತ್ತು ಇತರಕಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಹುಸೇನಪ್ಪಾ ಇವರಿಗೆ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯ ಹಾಗು ಎರಡು ಕಾಲುಗಳಿಗೆ ಮತ್ತು ಇತರಕಡೆ ರಕ್ತಗಾಯ ಗುಪ್ತಗಾಯವಾಗಿ 3 ಜನರು ಬೇಹೋಸಾಗಿ ಬಿದ್ದಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಈ ಬಗ್ಗೆ ನಮ್ಮ ಅಣ್ಣ ಬಾಬು ಇತನಿಗೆ ವಿಚಾರಿಸಲಾಗಿ ಅವನು ಹೇಳಿದ್ದನೆಂದರೆ ಇಂದು ಬೆಳಗ್ಗೆ ನಾನು ನನ್ನ ಇಬ್ಬರು ಮಕ್ಕಳಾದ ನರಸಿಂಹ ಮತ್ತು ಮಂಜುಳಾ ಇವರನ್ನು ನನ್ನ ಜೋತೆಗೆ ಕುರಿ ಕಾಯಲು ನಮ್ಮ ಹೋಲಕ್ಕೆ ಕರೆದುಕೊಂಡು ಹೋಗಿದ್ದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ನನ್ನ ಮಕ್ಕಳನ್ನು ಕರೆದುಕೊಂಡು ವಾಪಾಸ ಮನೆಗೆ ಬರುತ್ತಿದ್ದಾಗ ನಮ್ಮೂರ ನರಸಿಂಹಲು ತಂದೆ ಸೈಬಣ್ಣ ಹದಗಲ ಇತನು ನಮ್ಮೂರ ಅಡವಿಯಿಂದ ತನ್ನ ಟ್ಯಾಕ್ಟರ ನಂ ಎಪಿ 22 ವೈ 6569,-6568 ನೆದ್ದರಲ್ಲಿ ಗುಂಡು ಕಲ್ಲನ್ನು ತುಂಬಿಕೊಂಡು ಕೊಲ್ಕುಂದಾಕ್ಕೆ ಹೋಗುತ್ತಿದ್ದಾಗ ಸದರಿ ಟ್ಯಾಕ್ಟರನ್ನು ನಿಲ್ಲಿಸಿ ನನ್ನ ಮಕ್ಕಳಾದ ನರಸಿಂಹಲು ಮತ್ತು ಮಂಜುಳಾ ಇವರನ್ನು ಟ್ಯಾಕ್ಟರದಲ್ಲಿ ಕುರಿಸಿ ಊರಿಗೆ ಕಳುಯಿಸಿದ್ದು ಸದರಿ ಟ್ಯಾಕ್ಟರದಲ್ಲಿ ನಮ್ಮೂರ ಹುಸೇನಪ್ಪಾ ತಂದೆ ಹುಸೇನಪ್ಪಾ ಕುಂಟಸಾಯಪ್ಪೋಳ ಇತನು ಕೂಡ ಕುಳಿತುಕೊಂಡಿದ್ದು ಅವರು ಸದರಿ ಟ್ಯಾಕ್ಟರದಲ್ಲಿ ಕುಳಿತು ಹೋಗಿದ್ದು ನಾನು ನಮ್ಮ ಕುರಿಗಳನ್ನು ಹೋಡೆದುಕೊಂಡು ನಡೆದುಕೊಂಡು ಹಿಂದುಗಡೆ ಊರಕಡೆ ಬರುತ್ತಿದ್ದಾಗ ರಸ್ತೆಯಂದ ಬರುತಿದ್ದ ಯಾರೊ ಒಬ್ಬ ವ್ಯ್ತಕಿ ಮುಂದೆ ರಸ್ತಯಲ್ಲಿ
ಕಲ್ಲು ತುಂಬಿದ ಟ್ರಾಕ್ಟರ ಪಲ್ಟಿಯಾಗಿದೆ ಸಣ್ಣ ಮಕ್ಕಳಿಗೆ ಬಹಳ ಪೆಟ್ಟಾಗಿದೆ ಅಂತಾ ತಿಳಿಸಿದ್ದು ತಕ್ಷಣ ನಾನು ಇಲ್ಲಿಗೆ ಓಡಿ ಬಂದಿರುತ್ತೇನೆ ಅಂತಾ ತಿಳಿಸಿರುತ್ತಾನೆ.ನಂತರ ನಾವು ಸದರಿ ನಮ್ಮ ಅಣ್ಣನ ಇಬ್ಬರು ಮಕ್ಕಳಿಗೆ ಮತ್ತು ಹುಸನಪ್ಪಾ ಇವರಿಗೆ ನಾನು ನಮ್ಮ ಅಣ್ಣ ಬಾಬು ಮತ್ತು ನಮ್ಮ ಮಾವ ಹುಸೇನಪ್ಪಾ ಇತರರು ಸೇರಿ ದಾರಿಯಲ್ಲಿ ಬರುತ್ತಿದ್ದ ನಮ್ಮುರ ದೇವಿಂದ್ರಪ್ಪಾ ಆಡಕಿ ಇವರ ಜೀಪಿನಲ್ಲಿ ಹಾಕಿಕೊಂಡು ಕೊಲ್ಕುಂದಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಉಪಚಾರ ಮಾಡಿಸಿದ್ದು ಇಲ್ಲಿ ಡಾಕ್ಟರವರು ನಮ್ಮ ಅಣ್ಣನ ಮಕ್ಕಳಾದ ನರಸಿಂಹ ಮತ್ತು ಮಂಜುಳಾ ಇವರಿಗೆ ಪರಿಕ್ಷೆಮಾಡಿ ಇವರಿಗೆ ಬಹಳ ಸೀರಿಯಸ್ ಇದೆ ಹೆಚ್ಚಿನ ಉಪಚಾರ ಕುರಿತು ಸರಕಾರಿ ಅಸ್ಪತ್ರೆ ಕಲಬುರಗಿಗೆ
ತೆಗೆದುಕೊಂಡು ಹೊಗಿರಿ ಅಂತಾ ತಿಳಿಸಿದ್ದರಿಂದ ನಮ್ಮ ಅಣ್ಣನ ಇಬ್ಬರು ಮಕ್ಕಳಿಗೆ ನಾವು ಅಂಬುಲೆನ್ಸದಲ್ಲಿ ಹಾಕಿಕೊಂಡು ಸೇಡಂ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಅಲ್ಲಿ ವೈಧ್ಯರು ಸದರಿಯವರನ್ನು ನೋಡಿ ಕಲಬುರ್ಗಿಗೆ ಕರೆದುಕೊಂಡು ಹೋಗಿರಿ ಅಂತಾ ತಿಳಿಸಿದ್ದರಿಂದ ಸದರಿ ನಮ್ಮ ಅಣ್ಣಾ ಬಾಬು ಹಾಗು ಇತರರು ಕೂಡಿ ನಮ್ಮ ಅಣ್ಣನ ಇಬ್ಬರು ಮಕ್ಕಳಿಗೆ ಸೇಡಂದಿಂದ ಅಂಬುಲೆನ್ಸದಲ್ಲಿ ಹಾಕಿಕೊಂಡು ಕಲಬುರಗಿ ದವಾಖನೆಗೆ ತೆಗೆದುಕೊಂಡು ಹೊಗಿದ್ದು ನಾನು ಮತ್ತು ನಮ್ಮ ಮಾವ ಹುಸೇನಪ್ಪಾ
ಇಬ್ಬರೂ ಸೇರಿ ಮುಧೊಳ ಪೊಲೀಸ ಠಾಣೆಗೆ ಕೇಸ್ ಮಾಡುವದಕ್ಕೆ ಬರುತ್ತಿದ್ದಾಗ ಇಗ ರಾತ್ರಿ 8 -00 ಗಂಟೆ ಸುಮಾರಿಗೆ ನಮ್ಮ ಅಣ್ಣನದ ಬಾಬು ಇತನು ಕಲಬುರಗಿಯಿಂದ ನನಗೆ ಪೋನಮಾಡಿ ಹೇಳಿದ್ದೆನೆಂದರೆ ನನ್ನ ಮಕ್ಕಳಾದ ನರಸಿಂಹಲು ಮತ್ತು ಮಂಜುಳಾ ಇವರಿಗೆ ಇಂದು ರಾತ್ರಿ 7-40 ಗಂಟೆಯ ಸುಮಾರಿಗೆ ಕಲಬುರ್ಗಿಯ ಯುನೈಟೇಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೆರಿಕೆಮಾಡಿದಾಗ ಡಾಕ್ಟರವರು ನನ್ನ ಮಗಳಾದ ಮಂಜುಳಾ ಇವಳಿಗೆ ಪರಿಕ್ಷೆ ಮಾಡಿ ಇವಳು ಅಸ್ಪತ್ರೆಗೆ ತರುವಸ್ಟರಲ್ಲಿ ದಾರಿಯಲ್ಲಿಯೇ ಮೃತಪಟ್ಟಿದ್ದು ನೀವು ಇವಳ ಮೃತ ದೆಹಾವನ್ನು ಸರಕಾರಿ ದವಖಾನೆ ಕಲಬುರಗಿಗೆ
ತೆಗೆದುಕೊಂಡು ಹೊಗಿರಿ ಅಂತಾ ಹೇಳಿದ್ದು ಮತ್ತು ನನ್ನ ಮಗನಾದ ನರಸಿಂಹ ಇತನಿಗೆ ಸದರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿಕೊಂಡು ಉಪಚಾರಪಡಿಸುತ್ತಿದ್ದು ನಮ್ಮ ಮಗಳು ಮಂಜುಳಾ ಇವಳ ಮೃತದೇಹವನ್ನು ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತೆಗೆದುಕೊಂಡು ಹೋಗುತ್ತಿರುವದಾಗಿ ತಿಳಿಸಿರುತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು
ಶಾಹಾಬಾದ
ನಗರ ಠಾಣೆ : ಶ್ರೀ ಸುನೀಲ ತಂದೆ ರಾಮಚಂದ್ರ ಬೆಣ್ಣೂರ ಸಾ:
ಮರತೂರ ಇವರು ಮತ್ತು ಅಣ್ಣ ಹಣಮಂತ ಇಬ್ಬರೂ ಕೂಡಿ ಕಲ್ಲು ತೆಗೆಯುತ್ತಿರುವಾಗ ಶ್ರೀನಿವಾಸ ತಂದೆ ಶರಣಪ್ಪ ಸಂಗಡ 06 ಜನರು ಸಾ: ಮರತೂರ ಗುಂಪು
ಕಟ್ಟಿಕೊಂಡು ಬಂದು ಫಿರ್ಯಾದಿಗೆ ತಡೆದು ನಿಲ್ಲಿಸಿ ರಸ್ತೆಯಲ್ಲಿ ಹಾಕಿದ ಕಲ್ಲು ಯಾಕೆ
ತೆಗೆಯುತ್ತಿರಿ ಬೋಸಡಿ ಮಕ್ಕಳೆ ಅಂತಾ
ಅವಾಚ್ಯವಾಗಿ ಬೈದಾಗ ನಾನು ಯಾಕೆ ಬೈಯುತ್ತಿರಿ ನಮ್ಮ ಮನೆಯಲ್ಲ ತೊಟ್ಟಿಲು ಕಾರ್ಯಕ್ರಮ
ಇದೆ ಕಲ್ಲುಗಳು ತೆಗೆದರೆ ನಿಮಗೇನಾಯಿತು ಅಂತಾ ಅಂದಿದ್ದಕ್ಕೆ ಕೈಯಿಂದ , ಕಲ್ಲಿನಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ ಅವಮಾನ ಮಾಡಿ ಜೀವ ಭಯ ಹಾಕಿರುತ್ತಾರೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ: 07/04/217 ರಂದು ಮುಂಜಾನೆ ಮನೆಯಲ್ಲಿದ್ದಾಗ
ಎದುರು ಮನೆಯ ರಾಮಚಂದ್ರ ತಂದೆ ಶರಣಪ್ಪ ಬೆಣ್ಣೂರ
2) ನಾಗಮ್ಮ ಗಂಡ ರಾಮಚಂದ್ರ 3) ಹಣಮಂತ ತಂದೆ ರಾಮಚಂದ್ರ ಬೆಣ್ಣುರ 4) ಸುನೀಲ ತಂದೆ
ರಾಮಚಂದ್ರ 5) ಅನೀಲ ತಂದೆ ರಾಮಚಂದ್ರ 6) ಶರಣಪ್ಪ ತಂದೆ ರಾಮಚಂದ್ರ 7) ಶಿವಕುಮಾರ ತಂದೆ
ಮಲ್ಲಿಕಾರ್ಜುನ 8) ಅಣವೀರಮ್ಮಾ ಗಂಡ ಸುನೀಲ ಇವರೆಲ್ಲಾರೂ ಗುಂಪು ಕಟ್ಟಿಕೊಂಡು ಬಂದು ರಸ್ತೆಯ
ಕಲ್ಲುಗಳು ತೆಗೆಯತ್ತಿದ್ದಾಗ ಯಾಕೆ ಕಲ್ಲು ತೆಗೆಯುತ್ತಿರಿ ಜಾಗ ನಮ್ಮದು ಇದೆ ಕಲ್ಲು ತೆಗೆಯಬೇಡಿ
ಅಂತಾ ಕೇಳಿದಕ್ಕೆ ನನಗೆ ಮತ್ತು ನನ್ನ ತಾಯಿ ಕಾಂತಮ್ಮ ಇವಳಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ
ಬಡೆ ಮಾಡಿ ಕೈ ಹಿಡಿದು ಎಳೆದಾಡಿ ಅವಮಾನ ಮಾಡಿರುತ್ತಾರೆ ಅಂತಾ ಶ್ರೀಮತಿ ಎಲಿಜಬಾಯಿ ತಂದೆ ಶರಣಪ್ಪ ಕುರಿ ಸಾ: ಮರತೂರ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನೆಲೋಗಿ
ಠಾಣೆ : ದಿನಾಂಕ: 7/04/2017 ರಂದು ಸಾಯಂಕಾಲ ನಮ್ಮೂರಿನ ಆನಂದ ತಂದೆ ರಮೇಶ ಚನ್ನಯ್ಯಾ ತಂದೆ ಸಂಗಯ್ಯಾ, ಅಮರ ತಂದೆ ರಮೇಶ, ಅಶೋಕ ತಂದೆ ನಿಂಗಪ್ಪ ಕೂಡಿಕೊಂಡು ಟವೇರಾ
ಜೀಪ ನಂ: ಕೆ,ಎ 51 ಬಿ 9866 ಇದನ್ನು ತಗೆದುಕೊಂಡು ರಂಜಣಗಿ ಗ್ರಾಮಕ್ಕೆ
ಹೋಗಿದ್ದು ಹಣಮಂತ ನಾಟಿಕಾರ ಇವನು ನಡುಸುತ್ತಿದ್ದ ನಾವು ಪ್ರಚಾರ ಕುರಿತು ರಂಜಣಗಿ ಗ್ರಾಮಕ್ಕೆ
ಹೊದಾಗ ನಮ್ಮ ಟವೇರಾ ಜೀಪಿನಿಂದ ಅಮರ ತಂದೆ ರಮೇಶ, ಅಶೋಕ ತಂದೆ ನಿಂಗಪ್ಪ
ಇವರು ಇಳಿದು ಕಾರ್ಯಕ್ರಮದ ಕರ ಪತ್ರಗಳನ್ನು ಹಂಚುತ್ತಾ ಊರಲ್ಲಿ ಹೋಗಿದ್ದು ನಾನು ಮತ್ತು ಆನಂದ
ತಂದೆ ರಮೇಶ ಚನ್ನಯ್ಯಾ ತಂದೆ ಸಂಗಯ್ಯಾ ಇವರು ಟವೇರಾ ಜೀಪಿನಲ್ಲಿದ್ದು ನಾವು ಕೂಡಾ ಹಾದಿಯಲ್ಲಿ
ಬರುವ ಜನರಿಗೆ ಕರ ಪತ್ರಗಳನ್ನು ಕೊಡುತ್ತಾ ಊರಲ್ಲಿ ಹೋಗುತ್ತಿದ್ದಾಗ ಹರಿಜನವಾಡಾ ಕರೆಪ್ಪನ ಮನೆಯ
ಮುಂದಿನ ರಸ್ತೆಯ ಮೇಲೆ ಹೋಗುತ್ಗಿದ್ದಾಗ ಸುಮಾರು 15-20 ಜನರು ಗುಂಪು ಕಟ್ಟಿಕೊಂಡು ಕೈಯಲ್ಲಿ
ಕಲ್ಲು ಬಡಿಗೆ ಹಿಡಿದುಕೊಂಡು ನಮ್ಮಲ್ಲಿ ಬಂದು ಭೋಸಡಿ ಮಕ್ಕಳೆ ನಿಮ್ಮೂರಿನಲ್ಲಿ ಕಾರ್ಯಕ್ರಮ
ಇದ್ದರೆ ನಮ್ಮೂರಿಗೆ ಬಂದು ಪ್ರಚಾರ ಮಾಡುತ್ತಿರಿ ಭೋಸಡಿ ಮಕ್ಕಳೆ ಎಂದು ಬೈಯುತ್ತಾ ಖಾಜಾ ಪಟೇಲ
ತಂದೆ ರುಕುಂ ಪಟೇಲ ಈತನು ತನ್ನ ಕೈಯಲ್ಲಿ
ಬಡಿಗೆಯಿಂದ ಎಡಗೈ ಮೇಲೆ ಎಡಗಾಲಿನ ತೋಡೆಯ ಮೇಲೆ ಬಡಿಗೆಯಿಂದ ಹೋಡೆದನು. ಚನ್ನಯ್ಯಾ ತಂದೆ ಸಂಗಯ್ಯಾ
ಇತನಿಗೂ ಅಜಮೀರ ಪಟೇಲ ತಂದೆ ಗುಲಾಬಬಾಷಾ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗೈ ಬೆರಳಿನ
ಮೇಲೆ ಹೋಡೆದು ಗಾಯಗೋಳಿಸಿದನು ಮತ್ತು ಎಡಗಡೆ ಬೆನ್ನಿನ ಮೇಲೆ ಹೋಡೆದನು ಆಗ ಅಮರ ತಂದೆ ರಮೇಶ ಈತನು
ಬಿಡಿಸಲು ಬಂದಾಗ ಅಜೀಜ ಪಟೇಲ ತಂದೆ ಖಾಜಾ ಪಟೇಲ ಇವನು ಕೈಯಿಂದ ದಬ್ಬಿದನು ಬಸೀರ ಪಟೇಲ ತಂದೆ
ಇಬ್ರಾಹಿಂ ಪಟೇಲ, ಮಹ್ಮದ ಪಟೇಲ ತಂದೆ ಇಬ್ರಾಹಿಂ ಪಟೇಲ, ಸಾಹೇಬ ಪಟೇಲ ತಂದೆ ರುಕುಂ ಪಟೇಲ, ಸುಭಾನ ಪಟೇಲ ತಂದೆ ಸಾಹೇಬ
ಪಟೇಲ, ರುಕುಂ ಪಟೇಲ ತಂದೆ ಮೈದುನ ಪಟೇಲ, ರಫೀಕ
ಪಟೇಲ ತಂದೆ ರುಕುಂ ಪಟೇಲ, ಶಬ್ಬೀರ ಪಟೇಲ ತಂದೆ ಖಾಸಿಂ ಪಟೇಲ, ಖಾಸಿಂ ಪಟೇಲ ಹೊಸಮನಿ, ಗಪೂರ ಪಟೇಲ ತಂದೆ ಅಕ್ತರ ಪಟೇಲ,
ರಜ್ಜಬಖಾನ ತಂದೆ ಖಾನಖಾಸಿಂ ಖಾನ, ಶಬ್ಬೀರ ಪಟೇಲ ತಂದೆ
ಬಾವಾ ಪಟೇಲ, ಮೀರಾ ಪಟೇಲ ತಂದೆ ಖಾಸಿಂ ಪಟೇಲ, ರಾಜಾ ಪಟೇಲ ತಂದೆ ಗುಲಾಬಾಷ, ಮೀರಾ ಪಟೇಲ ತಂದೆ ಖಾಜಾ ಪಟೇಲ, ಫಯಾಜ ತಂದೆ ಮೀರಾ ಪಟೇಲ,
ಸಾಹೇಬ ಪಟೇಲ ತಂದೆ ಮೀರಾ ಪಟೇಲ, ಇವರೆಲ್ಲರೂ ಇದ್ದು
ಭೋಸಡಿ ಮಕ್ಕಳ್ಯಾ ನಿಮ್ಮೂರಲ್ಲಿ ಪ್ರಚಾರ ಮಾಡುವದನ್ನು ಬಿಟ್ಟು ನಮ್ಮೂರಿಗೆ ಬಂದು ಕರ ಪತ್ರ
ಹಂಚ್ಚುತ್ತಿರು ಭೋಸಡಿ ಮಕ್ಕಳ್ಯಾ ಎಂದು ನಮ್ಮ ಮೇಲೆ ಅವರ ಕೈಯಲ್ಲಿದ್ದ ಕಲ್ಲುಗಳನ್ನು ನಮ್ಮ ಮೇಲೆ
ಹೋಡೆಯ ಹತ್ತಿದರು ಆಗ ಅಮರ ತಂದೆ ರಮೇಶ ವಿಜಾಪೂರ, ಅಶೋಕ ವಿಜಾಪೂರ ,
ಇವರು ಜಗಳವನ್ನು ಬಿಡಿಸಲು ಬಂದಿದ್ದು ಮತ್ತು ನೀವು ಇಲ್ಲಿ ಕರ ಪತ್ರ ಹಂಚ ಬೇಡಾ
ಏಂದರೆ ನಾವು ಇಲ್ಲಿಂದ ಹೋರಟು ಹೋಗುತ್ತೇವೆಂದ ಅವರಿಗೆ ಕೈ ಮುಗಿದರು ಅವರು ನಮಗೆ ಬಡಿಗೆಯಿಂದ
ಹೊಡೆ ಹತ್ತಿದ್ದರು ಆಗ ನಾವು ತಗೆದುಕೊಂಡು ಹೋದ ವಾಹನ ಚಾಲಕ ಹಣಮಂತನಿಗೂ ಕೂಡಾ ಮಗನೇ ನೀನು ಅವರ
ಮಾತು ಕೇಳಿ ಜೀಪು ಇಲ್ಲಿಗೆ ತಗೆದುಕೋಂಡು ಬಂದಿದಿ ನೀನಗೂ ಮತ್ತು ನಿನ್ನ ಜೀಪಿಗೆ ಸುಟ್ಟು
ಹಾಕುತ್ತೇವೆ ಎಂದು ಭೋಸಡಿ ಮಗನೆ ಎಂದು ಬಶೀರ ಪಟೇಲ ತಂದೆ ಮಹ್ಮದ ಪಟೇಲ ಇವರು ಕೈಯಿಂದ ಹೊಡೆದು
ಕಾಲಿನಿಂದ ಒದೆ ಹತ್ತಿದರು ಆಗ ಅವನು ಜೀಪನ್ನು ಅಲ್ಲಿಯೇ ಬಿಟ್ಟು ಹಣಮಂತ ನಾಟಿಕಾರ ಇವರನ್ನು
ಕರೆದುಕೊಂಡು ಹೋದರು ನಾವು ರಾಮನವಮಿ ಹನುಮ ಜಯಂತಿ ಪ್ರಚಾರಕ್ಕಾಗಿ ಹೋದಾಗ ನಮ್ಮನ್ನು ತಡೆದು
ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಹೋಡೆದು ಕಲ್ಲುಗಳಿಂದ ಹೊಡೆದು ಜೀವದ ಬೇದರಿಕೆ
ಹಾಕಿ ಅವಾಚ್ಯ ಶಬ್ದಗಳಿಂದ ಬೈದವರ ವಿರುದ್ದ ಕಾನೂನಿನ ಕ್ರಮ ಜರಗಿಸಬೇಕು ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ
ಠಾಣೆ : ಶ್ರೀ ಪಂಪಣ್ಣಾ ತಂದೆ ಬಸಣ್ಣಾ ಸಾ: ಮನೆ ನಂ 3-691 ಮಿಲನ್ ಚೌಕ ಗಾಜೀಪೂರ ಕಲಬುರಗಿ ರವರು
ಮತ್ತು ತನ್ನ ಹೆಂಡತಿ ಶರಣಬಸವೇಶ್ವರ ದೇವಾಸ್ಥನಕ್ಕೆ ದೇವರ ದರ್ಶನಕ್ಕೆಂದು ಹೋದಾಗ ಗುಡಿಯ ಒಳಬಾಗದಲ್ಲಿ ತೆಂಗಿನ ಕಾಯಿ ಮಾರುವವರ ಆವರಣದಲ್ಲಿ ದಿನಾಂಕ:02/03/2107 ರಂದು ಮಧ್ಯಾನ 2.30 ಗಂಟೆಗೆ ನನ್ನ ಹೆಸರಿಗೆ ಇರುವ KA36
X-7010 ಹೊಂಡಾಶೈನ ಬೈಕ್ ದೇವಸ್ಥಾನದಲ್ಲಿ ನಿಲ್ಲಿಸಿ ದರ್ಶನ ಮಾಡಿಕೊಂಡು ಬರುವಷ್ಟರಲ್ಲಿ ನನ್ನ ಗಾಡಿ ಕಳುವಾಗಿದ್ದು ಮಾನ್ಯರು ಬೈಕನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ
ಧಾಖಲಾಗಿದೆ.
No comments:
Post a Comment