Police Bhavan Kalaburagi

Police Bhavan Kalaburagi

Monday, April 3, 2017

Yadgir District Reported Crimes



Yadgir District Reported Crimes
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 42/2017 ಕಲಂ: 409, 419, 468, 465, 467 ಐ.ಪಿ.ಸಿ;- ದಿನಾಂಕ 28-03-2016 ರಂದು ನಗನೂರ ಗ್ರಾಮದಲ್ಲಿ ವ್ಯವಸಾಯ ಸೇವಾ ಸಂಗ ನಿಯಮಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ಹಳ್ಳೆರಾಯ ತಂದೆ ಶಂಕ್ರಪ್ಪ ದೇಸಾಯಿ (ಜಕ್ಕರಡ್ಡಿ) ವಯ 55 ಸಾ: ನಗನೂರ ಇತನು ಬ್ಯಾಂಕಿನಲ್ಲಿ ರೈತರಿಗೆ ಮಂಜೂರಾದ ಸಾಲದ ಹಣ 3706000.00 ರೈತರ ಹೆಸರಿನಲ್ಲಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿ ಮಾಡಿ ನಂಬಿಕೆ ದ್ರೋಹ ಮಾಡಿ ರೈತರಿಗೆ ಮತ್ತು ಬ್ಯಾಂಕಿಗೆ 3706000.00 ನೆದ್ದರ ಹಣವನ್ನು ಮೋಸ ಮಾಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 43/2017 ಕಲಂ: 506, 504, 324, 354, 323, ಐ.ಪಿ.ಸಿ;- ದಿನಾಂಕ 02-04-2017 ರಂದು 8-45 ಎ.ಎಂಕ್ಕೆ ಮಾನ್ಯನ್ಯಾಯಾಲಯದಿಂದ ಪಿ.ಸಿ 14/2017 ನೆದ್ದು ವಸೂಲಾಗಿದ್ದು ಇದ್ದು ಸದರಿ ಪಿಯರ್ಾದಿದಾರರು ಪಿಯರ್ಾದಿ ನೀಡಿದ್ದು ಎನೆಂದರೆ ದಿನಾಂಕ 05-03-2017 ರಂದು ಸವರ್ೆನಂಬರ 34/02 ವಿಸ್ತೀರ್ಣ 37ಗುಂಟೆ ಜಮೀನದಲ್ಲಿ ಆರೋಪಿತರು ಅತಿಕ್ರಮೇಣ ಮಾಡಿ ಕೆಲಸ ಮಾಡುತ್ತಿದ್ದಾಗ ಆಗ ಪಿಯರ್ಾದಿದಾರರು ಹೋಗಿ ಅಲ್ಲಿ ಏಕೆ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದ್ದಿರಿ ಅಂತ ಅಂದಿದಕ್ಕೆ ಕೈಯಿಂದ ಹೊಡೆದು ಕೂದಲು ಹಿಡಿದು ಜಗ್ಗಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. 
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 43/2017  ಕಲಂ 279,304(ಎ) ಐಪಿಸಿ;-ದಿನಾಂಕ-02/04/2017 ರಂದು ಬೆಳಿಗ್ಗೆ 8-00 ಗಂಟೆಗೆ ನಾನು ಮನೆಯಲಿದ್ದಾಗ ನಮ್ಮೂರಿನ ಮುಕ್ಕಂದ ರೆಡ್ಡಿ ಮನೆಗೆ ಬಂದು ನಿನ್ನ ಗಂಡ ಕಾಳಬೆಳಗುಂದಿ ಕ್ರಾಸ ಹತ್ತಿರ ಸೈದಾಪೂರ - ನಾರಯಣ ಪೇಟ ಮುಖ್ಯ ರಸ್ತೆಯ ಪಕ್ಕದಲ್ಲಿ ಅಪಘಾತವಾಗಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದನು. ಆಗ ನಮ್ಮೂರಿನ ಮೋನೇಶ ತಂದೆ ಯಂಕಪ್ಪ ಇವರ ಜೀಪನ್ನು ಕೀರಾಯಿ ಮಾಡಿಕೊಂಡು ನಾನು ಮತ್ತು ನಮ್ಮ ಭಾವ ಕಿಷ್ಟಯ್ಯ,   ಮಾವ ಬಾಲಪ್ಪ, ನಮ್ಮ ಚಿಕ್ಕಮ್ಮ ಕಾಶಮ್ಮ, ಮಗಳು ಭಾರತಿ ಕೂಡಿಕೊಂಡು ನಮ್ಮೂರಿನಿಂದ ಹೋರಟು ಘಟನಾ ಸ್ಥಳವಾದ ಸೈದಾಪೂರ - ನಾರಯಣ ಪೇಟ ಮುಖ್ಯ ರಸ್ತೆಯ ಕಾಳಬೆಳಗುಂದಿ ಕ್ರಾಸ ಹತ್ತಿರ ಬೆಳಿಗ್ಗೆ 09-00 ಗಂಟೆಗೆ ಬಂದು ಪರಿಶಿಲಿಸಿ ನೋಡಲಾಗಿ ರಸ್ತೆಯ ಪಕ್ಕದಲ್ಲಿ ಬೋರಲಾಗಿ ನನ್ನ ಗಂಡ ಬಿದಿದ್ದನು. ಆತನ ಸೈಕಲ್ ಮೋಟರ ನನ್ನ ಗಂಡ ಬಿದ್ದ ಸ್ಥಳದಿಂದ 12 ಪಿಟ್ ದೂರದಲ್ಲಿ ಬಿದ್ದಿತ್ತು.ನನ್ನ ಗಂಡನಿಗೆ ಉರಳಿಸಿ ನೋಡಲಾಗಿ ಮುಖಕ್ಕೆ, ಬಾಯಿಗೆ, ಬಲ ಕಣ್ಣಿಗೆ ಮತ್ತು ಕಣ್ಣಿನ ಉಬ್ಬಿನ ಮೇಲೆ ಹಾಗೂ ಬಲಗೈ ರಟ್ಟೆಗೆ ಬಾರಿ ರಕ್ತಗಾಯವಾಗಿತ್ತು. ದಿನಾಂಕ-01/04/2017 ರಂದು ಹೊಲದಿಂದ ಬೋರ ಚಾಲು ಮಾಡಿ ಸೈದಾಪೂರಕ್ಕೆ ಹೋಗಿ ಮರಳಿ ನಮ್ಮೂರಿಗೆ ಬರುವಾಗ ನಾರಯಣಪೆಟ - ಸೈದಾಪೂರ ಮುಖ್ಯ ರಸ್ತೆಯ ಮೆಲೆ ಕಾಳಬೆಳಗುಂದಿ ಕ್ರಾಸ ಹತ್ತಿರ ನನ್ನ ಗಂಡನು ತನ್ನ ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ತನ್ನ ಮೋಟರ ಸೈಕಲ್ ನಂ ಸೈಕಲ್ ನಂ. ಕೆಎ-33 ಇ -9085 ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ರೋಡಿನ ಬಲಗಡೆ ಒಡ್ಡಿಗೆ ಹೋಗಿ ಮೋಟರ ಸೈಕಲ್ ಸಮೇತ ಕೇಳಗೆ ಬಿದ್ದು  ಮುಖಕ್ಕೆ, ಬಾಯಿಗೆ, ಬಲ ಕಣ್ಣಿಗೆ ಮತ್ತು ಕಣ್ಣಿನ ಉಬ್ಬಿನ ಮೇಲೆ ಹಾಗೂ ಬಲಗೈ ರಟ್ಟೆಗೆ ಬಾರಿ ರಕ್ತಗಾಯವಾಗಿದ್ದರಿಂದ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಸದರಿ ಘಟನೆಯು ದಿನಾಂಕ-01/04/2017 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ-02/04/2017 ರಂದು ಬೆಳಿಗ್ಗೆ 7 ಗಂಟೆ ಅವಧಿಯಲ್ಲಿ ಅಪಘಾತದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಕಂಡು ಬಂದಿರುತ್ತದೆ. ಕಾರಣ ಮಾನ್ಯರವರು ಸೂಕ್ತ ಕಾನೂನು ಕ್ರಮ ಕೈಗೊಳಬೇಕಂತ ಈ ಅಜರ್ಿ ಮೂಲಕ ವಿನಂತಿಸಿಕೊಳುತ್ತೆನೆ
  ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 54/2017 ಕಲಂ 87 ಕೆ.ಪಿ ಆಕ್ಟ್;- ದಿನಾಂಕ 02/04/2017 ರಂದು 5-30 ಪಿ.ಎಂ ಕ್ಕೆ  ಆರೋಪಿತರು  ಇಸ್ಪಿಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಮ್.ಹೊಸಳ್ಳಿ ಗ್ರಾಮದ ಸೀಮೆಯಲ್ಲಿ ಸಾರ್ವಜನಿಕರ ಖುಲ್ಲಾ ಜಾಗೆಯಲ್ಲಿ ಹೋಗಿ ಪಂಚರು ಹಾಗೂ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಆರೋಪಿತರಿಗೆ ಹಿಡಿದು 6540/-ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳು,  ಆರೋಪಿತರಿಂದ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಜಪ್ತಿ ಪಂಚನಾಮೆಯ ಸಾರಂಶದ ಮೇಲಿಂದ  ಈ ಮೇಲಿನಂತೆ ಗುನ್ನೆ ದಾಖಲಾಗಿದ್ದು ಇರುತ್ತದೆ,
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 44/2017 ಕಲಂ 379 ಐಪಿಸಿ;- ದಿನಾಂಕ 02/04/2017 ರಂದು ಬೆಳಿಗ್ಗೆ 3-30 ಗಂಟೆಗೆ ಪಿ.ಎಸ್.ಐ ರವರು ವಿಶ್ರಾಂತಿಯಲ್ಲಿದ್ದಾಗ ಧರ್ಮಪೂರ-ಬೋರಬಂಡಾ ಮಾರ್ಗವಾಗಿ ಒಬ್ಬ ವ್ಯಕ್ತಿ ಒಂದು ಕೆಂಪು ಬಣ್ಣದ ಟ್ರ್ಯಾಕ್ಟರ್ನಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಗುರುಮಠಕಲ್ ಕಡೆಗೆ ಸಾಗಿಸುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಸರಕಾರಿ ಜೀಪ್ ನಂ: ಕೆಎ-33-ಜಿ-0113 ನೇದ್ದರಲ್ಲಿ  ಹೋಗಿ ಸಮಯ ಬೆಳಿಗ್ಗೆ 4-30 ಗಂಟೆಗೆ ಚಪೆಟ್ಲಾ ಕ್ರಾಸ್ನಲ್ಲಿ ಬೋರಬಂಡಾ ಕಡೆಯಿಂದ ಎದುರಿಗೆ ಬಂದ ಟ್ರ್ಯಾಕ್ಟರ್ನ್ನು ನಿಲ್ಲಿಸುತ್ತಿದ್ದಂತೆ ಸದರಿ ಟ್ರ್ಯಾಕ್ಟರ್ ಚಾಲಕ ಓಡಿ ಹೋಗಿದ್ದು ಆ ಟ್ರ್ಯಾಕ್ಟರ್ನ್ನು ಪರಿಶೀಲಿಸಿ ನೋಡಲಾಗಿ ಒಂದು ಕೆಂಪು ಬಣ್ಣದ ಮಹೇಂದ್ರ ಕಂಪನಿಯ ಭೂಮಿಪುತ್ರ ಟ್ರ್ಯಾಕ್ಟರ ಇಂಜಿನ ನಂ-ಎಪಿ-27-ಟಿ.ಟಿ-8901 ಅಂತಾ ಇದ್ದು ಟ್ರ್ಯಾಲಿಗೆ ನಂಬರ್ ಇರಲಿಲ್ಲ. ಸದರಿ ಟ್ರ್ಯಾಲಿಯಲ್ಲಿ ಮರಳು ತುಂಬಿತ್ತು ನಂತರ ಪಿ.ಎಸ್.ಐ ರವರು ಪಂಚರ ಸಮಕ್ಷಮ ಬೆಳಿಗ್ಗೆ 4-30 ಗಂಟೆಯಿಂದ ಬೆಳಿಗ್ಗೆ 5-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಮರಳಿ ಠಾಣೆಗೆ ಬಂದು ಸಮಯ ಬೆಳಿಗ್ಗೆ 06-00 ಗಂಟೆಗೆ ಮರಳು ತುಂಬಿದ ಟ್ರ್ಯಾಕ್ಕರ ಹಾಗೂ ಮೂಲ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿ ಸರಕಾರಿ ತಫರ್ೆ ಫೀಯರ್ಾದಿಯಾಗಿ ಆರೋಪಿತರ ವಿರುದ್ಧ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 101/2017  ಕಲಂ 279 338 ಐಪಿಸಿ ಮತ್ತು 134(&ಬಿ), 187 ಐ.ಎಮ್.ವಿ ಆಕ್ಟ್  ;- ದಿನಾಂಕಃ 02/04/2017 ರಂದು 1-30 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಬಂದು ಲಿಖಿತ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 01/04/2017 ರಂದು ನನ್ನ ಮಾವನಾದ ಹಣಮಂತ ತಂದೆ ಭೀಮಶ್ಯಾ ಸಾ|| ಮೂಡಬೂಳ ಇವರು ತನ್ನ ಮಗಳಿಗೆ ಮಾತನಾಡಿಸಲು ಹಳಿಪೇಟದಲ್ಲಿರುವ ನಮ್ಮ ಮನೆಗೆ ಬಂದಿದ್ದರು. ಅವರು ಮಾತನಾಡಿಸಿ ಮರಳಿ ಹೋಗುತ್ತೇನೆ ಅಂತಾ ಹೇಳಿದಾಗ ಆತನಿಗೆ ಹಳೆ ಬಸ್ ನಿಲ್ದಾಣದವರೆಗೆ ಕಳಿಸಿ ಬರಬೆಕೆಂದು ನಾವಿಬ್ಬರೂ ಮನೆಯಿಂದ ನಡೆದುಕೊಂಡು ಹೊರಟಿದ್ದಾಗ ಶಹಾಪೂರ ಪಟ್ಟಣದಲ್ಲಿರುವ ಐಸಿಐಸಿಐ ಬ್ಯಾಂಕ್ ಎದುರಿನ ಮುಖ್ಯರಸ್ತೆಯ ಮೇಲೆ ಎದುರುಗಡೆಯಿಂದ ಮೋಟರ ಸೈಕಲ್ ನಂಬರ ಕೆ.ಎ 29 ಯು 1455 ನೇದ್ದರ ಚಾಲಕ ಮಹ್ಮದ ರಫೀಕ ಇತನು ತನ್ನ ಮೋ.ಸೈಕಲ್ ಅತಿವೇಗ ಮತ್ತು ನಿಕ್ಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ಹೊರಟಿದ್ದ ಮಾವನಿಗೆ ಡಿಕ್ಕಿಪಡಿಸಿದ್ದರಿಂದ ಬಲಗಾಲಿನ ಮೊಣಕಾಲಿನ ಕೆಳಗಡೆ ಮುರಿದು ಭಾರಿ ರಕ್ತಗಾಯವಾಗಿದ್ದು, ಅಪಘಾತ ಪಡಿಸಿದ ಬಳಿಕ ಮೋ.ಸೈಕಲ್ ಸವಾರನು ತನ್ನ ಮೋ.ಸೈಕಲ್ ಸಮೇತ ಹೋಗಿರುತ್ತಾನೆ ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂಬರ 101/2017 ಕಲಂ 279 338 ಐಪಿಸಿ ಮತ್ತು 134(&ಬಿ), 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 81/2017 ಕಲಂ 279,337,338,304 (ಎ)ಐ.ಪಿ.ಸಿ.ಮತ್ತು 187 ಐ.ಎಮ್.ವ್ಹಿ ಆಕ್ಟ ;- ದಿನಾಂಕ:02-04-2017  ರಂದು 8:30.ಪಿ.ಎಮ್.ಕ್ಕೆ  ಶ್ರೀ ಮಲ್ಲಪ್ಪ ತಂದೆ ಹೊನ್ನಪ್ಪ ಶಹಾಪೂರ ಸಾ: ಬಾದ್ಯಾಪೂರ ಇವರು ಠಾಣೆಗೆ ಬಂದು ಹೇಳಿಕೆ ಫಿಯರ್ಾದಿ ನೀಡಿದ್ದು ಅದರ ಸಾರಾಂಶವೇನಂದರೆ   ದಿನಾಂಕ 02-04-2017 ರಂದು ಫಿಯರ್ಾದಿ ಮತ್ತು ಆತನೊಡನೆ 12 ಜನರು ಕೂಡಿ ಟಾಟಾ ಎಸಿಇ ವಾಹನದಲ್ಲಿ ಕಲ್ಲದೇವನಹಳ್ಳಿ ಗ್ರಾಮಕ್ಕೆ ಕಾರ್ಯಕ್ರಮಕ್ಕೆ ಹೋಗಿ ಮರಳಿ ತಮ್ಮ ಊರಿಗೆ ಹೋಗುವಾಗ ಆರೋಪಿತನು ತನ್ನ ವಾಹನವನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮಲೆ ಕಟೆ ಮಾಡಿ ಪಲ್ಟಿ ಮಾಡಿ ಓಡಿ ಹೋಗಿದ್ದು ಅದರಿಂದ ವಾಹನದಲ್ಲಿದ್ದ 13 ಜನರು ಕೆಳಗೆ ಬಿದ್ದು ಭಾರೀ ಮತ್ತು ಸಾದಾ ಗಾಯಗಳಾಗಿದ್ದು ಉಪಚಾರಕ್ಕಾಗಿ ಸುರಪೂರಕ್ಕೆ ಖಾಸಗಿ ವಾಹನದಲ್ಲಿ ಬರುವಾಗ ಮಾರ್ಗ ಮದ್ಯದಲ್ಲಿ ಹಣಮತ ತಂದೆ ಹೈಯಾಳಪ್ಪ ವಾರಿ  ಈತನು ಮೃತ ಪಟ್ಟಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿಯರ್ಾದಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ.81/2017 ಕಲಂ 279,337,338,304 (ಎ)ಐ.ಪಿ.ಸಿ.ಮತ್ತು 187 ಐ.ಎಮ್.ವ್ಹಿ ಆಕ್ಟ  ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. 
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.10-2017 ಕಲಂ, 366(ಎ), 376, 114 ಸಂಗಡ 34 ಐಪಿಸಿ ಮತ್ತು ಕಲಂ, 6, 8, 12 ಪೊಕ್ಸೋ ಕಾಯ್ದೆ 2012.;- ದಿನಾಂಕ: 17/02/2017 ರಂದು 6-30 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀ ದೇವಪ್ಪ ತಂದೆ ಚಂದಪ್ಪ ಮೂಲಿಮನಿ ಸಾ|| ಗೋಗಿ (ಕೆ) ಇತನು ಠಾಣೆಗೆ ಬಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಿನ್ನೆ ದಿನಾಂಕ: 16/02/2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ನನ್ನ ಮಗಳು ಕುಮಾರಿ ಯಲ್ಲಮ್ಮ  ವಯ|| 15éರ್ಷ ಇವಳು ಬಹಿದರ್ೆಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ನಂತರ ಅಂದಾಜು ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಹೆಂಡತಿ ಅಕ್ಕಳಾದ ದೇವಮ್ಮ ಇವರ ಮಗನಾದ ಭೀಮರೆಡ್ಡಿ ತಂದೆ ತಿಪ್ಪಣ್ಣ ಕಡ್ಡೇರ ಇತನು ನಾನು ಮನೆಯಲ್ಲಿದ್ದಾಗ ಬಂದು ವಿಷಯ ತಿಳಿಸಿದ್ದೇನೆಂದರೆ,  ತಂಗಿಯಾದ ಕುಮಾರಿ ಯಲ್ಲಮ್ಮ ಇವಳು ಸರಕಾರಿ ಪದವಿ ಪೂರ್ವ ಕಾಲೇಜು ಗೋಗಿ (ಕೆ) ಮುಂದಿನ ರೋಡಿನ ಮೇಲೆ ಮನೆ ಕಡೆಗೆ ಬರುವಾಗ 1) ಭೀಮರೆಡ್ಡಿ @ ಮುದುಕಪ್ಪ ತಂದೆ ಚಂದಪ್ಪ ನಾಟೇಕಾರ್ ಈತನು ತನ್ನ ಆಟೋದಲ್ಲಿ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿದ್ದು ಅವನ ಜೊತೆಗೆ 2) ಹಣಮಂತ ತಂದೆ ಚಂದಪ್ಪ ನಾಟೇಕಾರ್ 3) ಭಾಗಪ್ಪ ತಂದೆ ಚಂದಪ್ಪ ನಾಟೇಕಾರ್ 4) ನಾಗಪ್ಪ ತಂದೆ ಗೋಪಾಲಪ್ಪ ನಾಟೇಕಾರ ಇವರು ಅಪಹರಣ ಮಾಡಿಕೊಂಡು ಹೋಗಲು ಸಹಾಯ ಮಾಡಿರುತ್ತಾರೆ ಅಂತಾ ತಿಳಿಸಿದನು.  ನಾನು ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡುತ್ತಿದ್ದು ಕಾರಣ ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋದ ಭೀಮರೆಡ್ಡಿ @ ಮುದುಕಪ್ಪ ಮತ್ತು ಅವನಿಗೆ ಸಹಾಯ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ನನ್ನ ಮಗಳನ್ನು ಹುಡುಕಿ ಕೋಡಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 10/2017 ಕಲಂ, 366(ಎ), 114, ಸಂಗಡ 34 ಐಪಿಸಿ ಮತ್ತು ಕಲಂ, 8, 12 ಪೋಕ್ಸೋ ಕಾಯ್ದೆ-2012 ನೇದ್ದರ ಪ್ರಕಾರ ಗುನ್ನೆದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

No comments: