¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-05-2017
ಬೀದರ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 49/2017, ಕಲಂ. 279, 338
ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 21-05-2017
ರಂದು ಫಿರ್ಯಾದಿ ಶಿವರಾಜ ತಂದೆ ಸಂಗಪ್ಪಾ ಬೀರಾದಾರ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಕಟ್ಟಿ ತುಗಾಂವ, ಸದ್ಯ: ಮಾಧವ ನಗರ ಬೀದರ ರವರು ಪ್ರತಾಪ ನಗರದ ಸೋನಾಲೀಕಾ ಟ್ರಾಕ್ಟರ ಶೋರೂಮ ಎದುರುಗಡೆ ಮಾಧವ
ನಗರ ಕಡೆ ಹೋಗಲು ಬೀದರ ನೌಬಾದ ರೋಡ ದಾಟುತ್ತಿರುವಾಗ ಬೀದರ ಕಡೆಯಿಂದ ನೌಬಾದ ಕಡೆಗೆ ಒಂದು ಸ್ಕೂಟಿ
ಮೊಟಾರ ಸೈಕಲ ನಂ. ಕೆಎ-38/ಜೆ-8379 ನೇದ್ದರ
ಸವಾರನಾದ ಆರೋಪಿಯು ತನ್ನ ಮೋಟಾರ್ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು
ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ಮೋಟಾರ್ ಸೈಕಲ ಸಮೇತ ನೌಬಾದ ಕಡೆ ಓಡಿಸಿಕೊಂಡು ಹೊದನು,
ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಭಕಾಳಿಯಲ್ಲಿ ಭಾರಿ ಗುಪ್ತಗಾಯ, ಎಡಗಾಲಿನ
ಮೋಳಕಾಲು ಕೆಳಗೆ ರಕ್ತಗಾಯ, ಎರಡು ಕಾಲಿನ ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ, ಅಲ್ಲೆ ಇದ್ದ ಫಿರ್ಯಾದಿಗೆ ಪರಿಚಯ
ಇರುವ ಶ್ಯಾಮ ತಂದೆ ಶಿವರಾಜ ಬಿರಾದಾರ ಸಾ: ಬಸನಾಳ, ಸದ್ಯ: ಬೀದರ ಇವರು ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ
ಕರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ
ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 57/2017, ಕಲಂ.
279, 338 ಐಪಿಸಿ :-
ದಿನಾಂಕ 21-05-2017
ರಂದು ರವಿವಾರ ಅಂಗಡಿ ಪ್ರಯುಕ್ತ ಫಿರ್ಯಾದಿ ರಾಮಣ್ಣಾ @ ಶರಣಪ್ಪಾ ತಂದೆ ನರಸಪ್ಪಾ ಜವಳಗಿ, ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ಮಲಕಾಪೂರವಾಡಿ, ತಾ: ಹುಮನಾಬಾದ ರವರು ಹುಮನಾಬಾದಕ್ಕೆ ತಮ್ಮ ಮೋಟಾರ್ ಸೈಕಲ ನಂ. ಕೆಎ-39/ಎ-8634
ನೇದ್ದರ ಮೇಲೆ ಬಂದಾಗ ಫಿರ್ಯಾದಿಯ ಅಣ್ಣನ ಮಗ
ರಾಜಕುಮಾರ ಹಾಗು ಅವನ ಗೆಳೆಯ ರವಿ ಪ್ರಭಾನೋರ ರವರು ಸಿಕ್ಕಿದ್ದು ಎಲ್ಲರು ಚಹಾ ಕುಡಿದು ಹೋಗುವಾಗ ಹುಮನಾಬಾದ
ಪಟ್ಟಣದ ಮೇನ ರೋಡ ಮೇಲೆ ಎ.ಪಿ.ಎಮ್.ಸಿ.ಯಿಂದ ಐ.ಬಿ. ಕ್ರಾಸ್ ಕಡೆಗೆ ಹೋಗುವಾಗ ಎ.ಪಿ.ಎಮ್.ಸಿ. ಗೇಟ
ಎದುರು ಬಂದಾಗ ಬಸ ನಿಲ್ದಾಣ ಕಡೆಯಿಂದ ಬಂದ ಒಂದು ಕಾರ ನಂ. ಎಮ್.ಹೆಚ್-01/ಎ.ಇ-1812 ನೇದ್ದರ ಚಾಲಕನಾದ
ಆರೋಪಿ ಮಾಣಿಕರಡ್ಡಿ ಮಂಡಾ ಸಾ: ಶಿವಪೂರ ಹುಮನಾಬಾದ ಈತನು ತನ್ನ ಕಾರನ್ನು ಜೋರಾಗಿ ಹಾಗು ಬೇಜವಾಬ್ದಾರಿಯಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ಫಿರ್ಯಾದಿಯ ಹಣೆ, ಬಲಗಲ್ಲಕ್ಕೆ, ಬಲಭುಜಕ್ಕೆ, ಬಲಮುಂಗೈಗೆ ತರಚಿದಗಾಯ ಹಾಗು ಬಲಗಾಲ ಮೋಳಕಾಲ ಕೆಳಗೆ ಮೂಳೆ ಮುದಿರು
ಭಾರಿ ಗುಪ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment