Police Bhavan Kalaburagi

Police Bhavan Kalaburagi

Monday, May 22, 2017

Yadgir District Reported Crimes

                        Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 170/2017  ಕಲಂ 279 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ದಿನಾಂಕಃ 21/05/2017 ರಂದು ಫಿಯರ್ಾದಿಯ ತಮ್ಮನಾದ ಸಂತೋಷಕುಮಾರ ತಂದೆ ರಾಜಶೇಖರ ಯಕ್ಷಿಂತಿ ಇತನು ಬಜಾಜ ಡಿಸ್ಕವರ ಮೋಟರ ಸೈಕಲ್ ನಂಬರ ಕೆ.ಎ 32 ಇ.ಎ 3480 ನೇದ್ದರ ಮೇಲೆ ಶಹಾಪೂರದಿಂದ ಹಾಲಬಾವಿ ಭೋಜಲಿಂಗೇಶ್ವರ ಮಠಕ್ಕೆ ತನ್ನ ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ, ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಶಹಾಪೂರ ಸಿಮಾಂತರದ ಪರವತರೆಡ್ಡಿಗೌಡ ಹಳಿಸಗರ ಇವರ ಹೊಲದ ಹತ್ತಿರ ಬರುವ ರಸ್ತೆಯ ತಿರುವಿನಲ್ಲಿ ಹಾಲಬಾವಿ ಕಡೆಯಿಂದ ಶಿಪ್ಟ ಕಾರ ನಂಬರ ಕೆ.ಎ 36 ಎಮ್ 8826 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿ, ಸಾದಾ ಹಾಗು ತೀವೃ ಸ್ವರೂಪದ ಗಾಯಪಡಿಸಿ ಕಾರ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 170/2017 ಕಲಂ 279 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 171/2017.ಕಲಂಃ 279 338.ಐ.ಪಿ.ಸಿ. &ನ 187 ಐ.ಎಮ್.;- ದಿನಾಂಕ 22/05/2017 ರಂದು 00-20 ಗಂಟೆಗೆ ವಾತ್ಸಲ್ಯ ಆಸ್ಪತ್ರೆ ಕಲ್ಬುಗರ್ಿ ಯಿಂದ ನರಸಿಂಗಪ್ಪ ಎಚ್.ಸಿ 39 ರವರು ಆಸ್ಪತ್ರೆಯಲ್ಲಿ ಉಪಚಾರ ಪಡೆಡಯುತ್ತಿದ್ದ ಗಾಯಾಳು ಶಿವಣ್ಣ ತಂದೆ ಗುರಪ್ಪ ವ|| 59 ಸಾ|| ಸಗರ(ಬಿ) ಇವರ ಹೇಳಿಕೆಯನ್ನು ಪಡೆದು ಕೊಂಡು ಬಂದು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ ಹೀಗಿದ್ದು ದಿನಾಂಕ 21/05/2017 ರಂದು ಬೆಳಿಗ್ಗೆ ಚರಬಸವೆಶ್ವರ ಗದ್ದಿಗೆಗೆ ಹೋಗಿ ಧರ್ಶನ ಮಾಡಿ ಮರಳಿ ಬಸವೇಶ್ವರ ಸರ್ಕಲ್ ಕಡೆಗೆ ಬರಲು ಚರಬಸವೇಶ್ವರ ಕಮಾನ ದಾಟಿ ಬರುವಾಗ ಭೀ.ಗುಡಿ ಕಡೆಯಿಂದ ನಮ್ಮ ಹಿಂದಿನಿಂದ ಒಂದು ಮೋಟರ್ ಸೈಕಲ್ ನಂ ಮೋಟರ್ ಸೈಕಲ್ ನಂ ಏಂ-33 ಗ-2315 ನ್ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನನಗೆೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ನೆಲಕ್ಕೆ ಬಿದ್ದೆನು ಆಗ ನನ್ನ ಮಗ ಲಕ್ಷ್ಮಣ್ಣನು ಎಬ್ಬಿಸಿ ಕೂಡಿಸಿದನು. ಸದರಿ ಅಫಗಾತದಲ್ಲಿ ನನಗೆ ಎಡಗಾಲ ಚೆಪ್ಪಿ ಗುಡಿಗಿಗೆ ಭಾರಿ ಗುಪ್ತಪೆಟ್ಟಾಗಿ ಮುರಿದಂತಾಗಿರುತ್ತದೆ. ನಂತರ ನನಗೆ ಅಪಘಾತಮಾಡಿದ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ರಿಯಾಜ್ ತಂದೆ ಎಂ, ಹನೀಫ್ ಸಾ|| ಶಹಾಪೂರ ಅಂತಾ ತಿಳಿಸಿದ್ದು ಸ್ವಲ್ಪ ನಿಂತಹಾಗೆ ಮಾಡಿ ಓಡಿಹೊದನು ಸದರಿ ಅಪಘಾತ ವಾದಾಗ ಸಮಯ ಬೆಳಿಗ್ಗೆ ಸುಮಾರು 10-00 ಗಂಟೆ ಯಾಗಿತ್ತು ನಂತರ ನನ್ನ ಮಗ ಲಕ್ಷ್ಮಣ್ಣ ನನ್ನ ಸೋಸಿ ಲಕ್ಷ್ಮೀ ಇಬ್ಬರು ನನಗೆ ಹೆಚ್ಚಿನ ಉಪಚಾರಕ್ಕಾಗಿ ವಾತ್ಸಲ್ಯ ಆಸ್ಪತ್ರೆ ಕಲ್ಬುಗರ್ಿಗೆ ತಂದು ಸೆರಿಕೆ ಮಾಡಿದ್ದು ಇರುತ್ತದೆ.
         ಕಾರಣ ನನಗೆ ಅಪಘಾತ ಮಾಡಿ ಭಾರಿ ಸ್ವರೂಪದ ಗುಪ್ತಗಾಯಪಡಿಸಿ ಓಡಿ ಹೊಗಿರುವ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೆಕೆಂದು ಹೇಳಿಕೆ ಕೊಟ್ಟಿದ್ದು ನಿಜವಿದೆ. ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 171/2017 ಕಲಂ 279.338.ಐ.ಪಿ.ಸಿ.187 ಐ.ಎಂ.ವಿ ಆ್ಯಕ್ಟ ಪ್ರಕಾರ ಗುನ್ನೆ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 117/2017 ಕಲಂ: 376(2)(?) ಕಲಂ 4, 6 ಪೋಕ್ಸೊ ಆಕ್ಟ್ -2012;- ದಿನಾಂಕ 20-05-2017 ರಂದು ಸಮಯ ರಾತ್ರಿ 7.35 ಗಂಟೆಗೆ ವಿ.ಆರ್ ಜಾದವ ಪಿ.ಸಿ-148 ಗುರುಮಠಕಲ ರವರು ಠಾಣೆಗೆ ಹಾಜರಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಶ್ರೀ ಮಂಜೂಳಾ ಮ.ಪಿ.ಎಸ್.ಐ ಯಾದಗಿರಿ ನಗರ ಠಾಣೆ (ಸಿ) ರವರಿಂದ ಹೇಳಿಕೆ ಪಿರ್ಯಾಧಿ ಪಡೆದುಕೊಂಡು ಹಾಜರುಪಡಿಸಿದ್ದು  ಸದರಿ ಪಿರ್ಯಾಧಿ ಹೇಳಿಕೆಯ ಸಾರಾಂಶೆನೆಂದರೆ

       ನಾನು ಶ್ರೀಮತಿ ಜಾನಕಮ್ಮ ಗಂಡ ನಾಗಪ್ಪ ಪೂಜಾರಿ ವಃ 38 ಜಾಃ ಕುರಬರು ಉಃ ಮನೆಕೆಲಸ ಸಾಃ ಚಿಂತಕುಂಟಾ ತಾಃಜಿಃ ಯಾದಗಿರಿ ಹಾಃವಃ ಅಜೀಜ ಕಾಲೋನಿ ಯಾದಗಿರಿ ಅಂತಾ ಇದ್ದು ನಾನು ಮನೆ ಕೆಲಸ ಮಾಡಿಕೊಂಡು ಯಾದಗಿರಿದ ಅಜೀಜ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತೇವೆ. ನಮ್ಮ ಸ್ವಂತ ಊರು ಚಿಂತಕುಂಟ ಗ್ರಾಮವಿದ್ದು ನನ್ನ ಗಂಡ ನಾಗಪ್ಪ ಪೂಜಾರಿ ಈತನು ಸಹ ಶಿಕ್ಷಕ ಅಂತಾ ವಂಕಸಂಬ್ರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ನಮಗೆ ಮೂರು ಜನ ಮಕ್ಕಳಿದ್ದು 1) ನವೀನ ಕುಮಾರ 15 ವರ್ಷ 9 ನೇ ತರಗತಿ, 2) ದೇವಿಕಾ  ವಃ 13 ವರ್ಷ  5ನೇ ತರಗತಿ, 3) ಭೂಮಿಕಾ ವಃ 7 ವರ್ಷ 2 ನೇ ತರಗತಿ  ಈಗ್ಗೆ ಮೂರ ಜನ ಮಕ್ಕಳಿರುತ್ತಾರೆ. ಈಗ ಬೇಸಿಗೆ ರಜೆ ಇದ್ದುದ್ದರಿಂದ ಈ ಒಂದು ತಿಂಗಳ ಹಿಂದೆ ನಾನು ಮತ್ತು ನನ್ನ ಗಂಡ ನಾಗಪ್ಪ ಹಾಗೂ ನಮ್ಮ ಮಕ್ಕಳು ಕೂಡಿಕೊಂಡು ನಮ್ಮ ಊರಾದ ಚಿಂತಕುಂಟಾ ಗ್ರಾಮಕ್ಕೆ ಹೋಗಿ ಅಲ್ಲಿಯೇ ಇದ್ದೆವು.
     ಹೀಗಿದ್ದು ಇಂದು ದಿನಾಂಕ 20/05/2017 ರಂದು ಬೆಳಿಗ್ಗೆ ನನ್ನ ಮಗಳಾದ ಭೂಮಿಕ ಇವಳು ಮನೆಯಿಂದ ಹೊರಗೆ ಆಟ ಆಡಲು ಹೋದಳು. ನಂತರ ಸುಮಾರು ಸಮಯ ಬೆಳಿಗ್ಗೆ 11.15 ಗಂಟೆ ಸುಮಾರಿಗೆ ನನ್ನ ಮಗಳು ಭೂಮಿಕಾ ಇವಳು ತನ್ನ ಹೊಟ್ಟೆ ಹಿಡಿದುಕೊಂಡು ಅಳುತ್ತಾ ಮನೆಗೆ ಓಡಿ ಬಂದಳು ಆಗ ನಾನು ಅತ್ತೆ ಮಲ್ಲಮ್ಮ ಹಾಗೂ ನನ್ನ ಮಗಳು ದೇವಿಕಾ ಕೂಡಿಕೊಂಡು ಭೂಮಿಕಾ ಇವಳಿಗೆ ಏನಾಯ್ತು ಅಂತಾ ಕೇಳಿದಾಗ ಅವಳು ನಮ್ಮ ಮುಂದೆ ತಿಳಿಸಿದ್ದೆನೆಂದರೆ. ನಾನು ಅಂಗಳದಲ್ಲಿ ಆಟ ಆಡುತ್ತಿರುವಾಗ ಮಾವನಾದ ಮಾಳಪ್ಪ ತಂದೆ ರಾಮಣ್ಣ ಪೂಜಾರಿ ಸಾಃ ಚಿಂತಕುಂಟಾ ಈತನು ನನಗೆ ಬಾ ಭೂಮಿಕಾ ಅಂತಾ ಕರೆದಾಗ ನಾನು ಆಟ ಆಡಿಕೊಂಡು ಅವನ ಹತ್ತಿರ ಹೋದಾಗ ಅವನು ತಮ್ಮ ಮನೆಗೆ ಹೊಂದಿಕೊಂಡಿರುವ ಆಡುಗಳು ಕೂಡಿ ಹಾಕುವ ಕೋಠಡಿಯಲ್ಲಿ ನನಗೆ ಕರೆದುಕೊಂಡು ಹೋದನು. ನಂತರ ಮಾಳಪ್ಪ ಈತನು ನನ್ನ ಚಡ್ಡಿಯನ್ನು ಬಿಚ್ಚಿ ಅವನ ಚೆಡ್ಡಿಯನ್ನು ಬಿಚ್ಚಿ ನನ್ನ ಮೇಲೆ ಬಿದ್ದು ತಿಕ್ಕಾಡ  ತೋಡಗಿದನು. ಅವನಲ್ಲಿಂದ ಹಾಲಿನಂತಹದ್ದು ನನ್ನ ಮೇಲೆ ಬಿತು ನಾನು ಹೊಟ್ಟೆ ಬಿಸಿಯಾಗಿ ಊರಿತಿತ್ತು ಹಾಲಿನಂತಹದ್ದು ನನ್ನ ಬಟ್ಟೆಗೆ ವರಿಸಿಕೊಂಡನು ಅವನು ಎದ್ದು ಹೋದನು. ನನಗೆ ಹೊಟ್ಟೆ ಬೇನೆ ಆಗಿ ಕೆಳಗೆ ಉರಿತಿದೆ ಅಂತಾ ತಿಳಿಸಿದ್ದು ಸದರಿ ಘಟನೆ 11 ಎ.ಎಂ  ಸುಮಾರಿಗೆ ಜರುಗಿದ್ದು ಇರುತ್ತದೆ. ನನ್ನ ಗಂಡ ನಾಗಪ್ಪ ಈತನಿಗೆ ಮನೆಯಿಂದ ಹೊರಗೆ ಹೋಗಿದ್ದು ನನ್ನ ಗಂಡನಿಗೆ ಮನೆಗೆ ಬರಮಾಡಿಕೊಂಡು ವಿಷಯ ತಿಳಿಸಿ ನನ್ನ ಮಗಳಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ.
   ಕಾರಣ ಅಪ್ರಾಪ್ತ ಬಾಲಕಿಯಾದ ನನ್ನ ಮಗಳು ಭೂಮಿಕಾ ತಂದೆ ನಾಗಪ್ಪ ಪೂಜಾರಿ ವಃ 7 ವರ್ಷ ಇವಳಿಗೆ ಏನು ಅರಿಯದ ವಯಸ್ಸಿನಲ್ಲಿ ಮಾಳಪ್ಪ ಈತನು ತನ್ನ ಮನೆಯ ಆಡುಗಳು ಕೂಡಿ ಹಾಕುವ ಕೋಠಡಿಯಲ್ಲಿ ಕರೆದುಕೊಂಡು ಹೋಗಿ ಸಂಭೋಗ ಮಾಡಿರುತ್ತಾನೆ. ಕಾರಣ ಸದರಿಯವನ ವಿರುದ್ಧ ಕಾನೂನು ಪ್ರಕಾರ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 117/2017 ಕಲಂ 376(2)(ಐ)ಐಪಿಸಿ ಮತ್ತು ಕಲಂ 4, 6 ಪೊಕ್ಸೋ ಕಾಯ್ದೆ -2012ರ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ.
   
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ: 379 ಐಪಿಸಿ ಮತ್ತು ಕಲಂ: 4(1), 4(1ಎ), 21 ಎಮ್.ಎಮ್. ಆರ್.ಡಿ ಆಕ್ಟ್ ಹಾಗೂ ನಿಯಮ 3, 42, 43, 44  ಕೆ.ಎಮ್.ಎಮ್.ಸಿ ರೂಲ್ -1994;- ದಿನಾಂಕ 20.05.2017 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಸರಕಾರಿ ತಫರ್ೆ ಶ್ರೀ ಕಿರಣ ಡಿ.ಆರ್. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ದಿನಾಂಕ 19.05.2017 ರಂದು ರಾತ್ರಿ 8-50 ಗಂಟೆಗೆ ಪ್ರಾಧೇಶಿಕ ಸಾರಿಗೆ ಅಧಿಕಾರಿಗಳು, ಯಾದಗಿರಿ ರವರು ಠಾಣೆಗೆ ಒಂದು ಮರಳಿ ತುಂಬಿದ ಟ್ರ್ಯಾಕ್ಟರನ್ನು ಠಾಣೆಯ ಆವರಣದಲ್ಲಿ ನಿಲ್ಲಿಸಿ ಮುಂದಿನ ಆದೇಶ ಹೊರಡಿಸುವವರೆಗೆ ಸದರಿ ಮರಳು ತುಂಬಿದ ಟ್ರ್ಯಾಕ್ಟರ್ನ್ನು ಸುರಕ್ಷಿತ ಅಭಿರಕ್ಷೆಯಲ್ಲಿ ತಡೆಹಿಡಿಯಲು ನಮೂನೆ ಸಂಖ್ಯೆ 27  ನೇದ್ದರ ಪ್ರತಿಯನ್ನು ನೀಡಿ ಠಾಣೆಯ ಆವರಣದಲ್ಲಿ ನಿಲ್ಲಿಸಿದ ಮರಳು ತುಂಬಿದ ಟ್ರ್ಯಾಕ್ಟರ್ನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಃ 118/2017 ಕಲಂ: 379 ಐಪಿಸಿ ಮತ್ತು ಕಲಂ: 4(1), 4(1ಎ), 21 ಎಮ್.ಎಮ್. ಆರ್.ಡಿ ಆಕ್ಟ್ ಹಾಗೂ ನಿಯಮ 3, 42, 43, 44  ಕೆ.ಎಮ್.ಎಮ್.ಸಿ ರೂಲ್ -1994 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

No comments: