Police Bhavan Kalaburagi

Police Bhavan Kalaburagi

Tuesday, May 2, 2017

KALABURAGI DIST REPORTED CRIMES

ಆತ್ಮ ಹತ್ಯೆ ಪ್ರಕರಣ:
ಫರತಹಾಬಾದ ಪೊಲೀಸ ಠಾಣೆ : ದಿನಾಂಕ 30/04/2017 ರಂದು ಶ್ರೀ  ಮಾಣಿಕರಾವ್ ತಂದೆ ಶರಣಪ್ಪ ಆಲಗೂಡ. ಸಾ: ಕಡಣಿ  ಠಾಣೆಗೆ ಹಾಜರಾಗಿ ನಗೆ ಒಟ್ಟು 7 ಜನ ಮಕ್ಕಳಿದ್ದು ಅದರಲ್ಲಿ ನನ್ನ ನಾಲ್ಕನೆ ಹೆಣ್ಣು ಮಗಳಾದ ಪೂಜಮ್ಮ ಗಂಡ ಶಿವು ಇವಳಿಗೆ 4 ವರ್ಷ ದ ಹಿಂದೆ ಶಿವು ತಂದೆ ಗುರುಶರಣ ಸಾ:ವಿದ್ಯಾನಗರ, ಕಲಬುರಗಿಯಲ್ಲಿ ಮದುವೆ ಮಾಡಿಕೊಟ್ಟಿದ್ದು. ಈಗ ಒಂದು ವರ್ಷದಿಂದ ನನ್ನ ಮಗಳು ಪೂಜಮ್ಮ ಇವಳು ಗಂಡನ ಮನೆ ಬಿಟ್ಟು ಬಂದು ನನ್ನ ಮನೆಯಲ್ಲಿಯೇ ವಾಸವಿದ್ದು ಅವಳಿಗೆ ಹೊಟ್ಟೆ ಬೇನೆ ಕಾರಣ ಅನೇಕ ಆಸ್ಪತ್ರೆಗೆ ತೋರಿಸಿದರು ಕಡಿಮೆಯಾಗಿರುವದಿಲ್ಲ. ಹೀಗಿರುವಾಗ ದಿನಾಂಕ: 27/04/2017 ರಾತ್ರಿ ವೇಳೆಯಲ್ಲಿ ನಾವೆಲ್ಲರೂ ಮಲಗಿದ್ದಾಗ ಪೂಜಮ್ಮಳು ಹೊಟ್ಟೆನೋವು ತಾಳಲಾರದೆ ವಿಷಸೇವನೆ ಮಾಡಿದ್ದು ಅವಳಿಗೆ ಕಲಬುರಗಿ ಸರಕಾರಿ ಆಸ್ಪತ್ರೆ ಕಲಬುರಗಿ ದಾಖಲಿಸಿದ್ದು . ನನ್ನ ಮಗಳು ಪೂಜಮ್ಮ ಉಪಚಾರ ಹೊಂದುತ್ತಿರುವಾಗ ಉಪಚಾರ ಫಲಿಸದೆ  ದಿನಾಂಕ:29/04/2017 ರಂದು ಮೃತಪಟ್ಟಿರುತ್ತಾಳೆ. ಕಾರಣ ನನ್ನ ಮಗಳಾದ ಪೂಜಮ್ಮ ಇವಳಿಗೆ ವಿಪರೀತ ಹೊಟ್ಟೆನೋವು ಇದ್ದು ಅದನ್ನು ತಾಳಲಾರದೇ ವಿಷ ಸೇವನೆ ಮಾಡಿ ಮೃತಪಟ್ಟಿದ್ದು ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ ಠಾಣೆ:  ದಿನಾಂಕ:01/05/2017 ರಂದು ಶ್ರೀ ಗುರಪ್ಪ ತಂದೆ ಭೀಮಪ್ಪ ಸಾ: ನಗನೂರ ತಾ: ಶೋರಾಪುರ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ಇಂದು ನನ್ನ ಅತ್ತಿಗೆಯಾದ ಶಿವಲಿಂಗಮ್ಮ ಗಂಡ ಗುರುಸಿದ್ದಪ್ಪ ನಾಟೀಕಾರ ಇವಳು ಕಲಬುರಗಿಯಲ್ಲಿ ಖಾಸಗಿ ಕೆಲಸವಿದ್ದ ಪ್ರಯುಕ್ತ ನಮ್ಮ ದೊಡ್ಡಪ್ಪನ ಮಗನಾದ ಸುಗಪ್ಪ ತಂದೆ ಶರಣಪ್ಪ ನಾಟಿಕಾರ  ಈತನ ಮೋಟಾರ ಸೈಕಲ್ ಸಂ.ಕೆ.ಎ-32 ವ್ಹಿ-4683 ಹಿರೋ ಹೋಂಡಾ ಸ್ಪೇಲಂಡರ್ ಪ್ಲಸ್ ಮೇಲೆ ಕಲಬುರಗಿಗೆ ಹೋಗುವಾಗ ಎನ್.ಎಚ್.218 ರ ಮೇಲೆ ಪಾಣೆಗಾಂವ ಕ್ರಾಸ್ ಹತ್ತಿರ ಕಲಬುರಗಿ ಕಡೆಯಿಂದ ಬರುತ್ತಿದ್ದ  ಲಾರಿ ಸಂ. ಕೆ.ಎ-56/0894 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗದಿಂದ ಹಾಗೂ ಅಲಕ್ಷತನದಿಂದ ಅಡ್ಡಾ ತಿಡ್ಡಿ ಓಡಿಸುತ್ತಾ ಬಂದು ಸುಗಪ್ಪನ ಮೋಟಾರ್ ಸೈಕಲ್ ಗೆ ಅಪಘಾತಪಡಿಸಿದ್ದರಿಂದ ಶಿವಲಿಂಗಮ್ಮಳಿಗೆ ತಲೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿ . ಸುಗಪ್ಪನಿಗೆ ಸಹ ತಲೆಗೆ ಭಾರಿ ಪಟ್ಟಾಗಿದ್ದು ಸದರಿಯವರಿಗೆ ಯುನೈಟೆಡ್ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರ್ಪಡೆ ಮಾಡಿದ್ದು ಶಿವಲಿಂಗಮ್ಮಳಿಗೆ ಬಲ ತಲೆಗೆ ಭಾರಿ ಗಾಯವಾಗಿ ಮೃತಪಟ್ಟಿದ್ದು . ಸುಗಪ್ಪನು ಮಾತಾಡುವ ಸ್ಥಿತಿಯಲಿಲ್ಲ ಅವನಿಗೂ ಸಹ  ತಲೆಗೆ ಭಾರಿ ಪೆಟ್ಟಾಗಿದ್ದು. ಅಪಘಾತ ಪಡಿಸಿದ ಲಾರಿ ಚಾಲಕನು ತನ್ನ ವಾಹನ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು . ಅಪಘಾತಪಡಿಸಿ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋದ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಣಿಕೆದಾರರ ಬಂಧನ:

ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ 01/05/2017 ರಂದು ಹೊನಗುಂಟಾ ಸೀಮಾಂತರದ ಕಾಗಿಣಾ ನದಿಯಿಂದ ಅಕ್ರಮವಾಗಿ ಲಾರಿಯಲ್ಲಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂಬಾಷಾ ಪಿ ಐ ಶಹಾಬಾದ ನಗರ ಪೊಲೀಸ ಠಾಣೆ ರವರು ಠಾಣೆಯ ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೊನಗುಂಟಾ ಗ್ರಾಮಕ್ಕೆ ಹೋಗುವಾಗ ಹೊನಗುಂಟಾ ಕಡೆಯಿಂದ ಒಂದು ಲಾರಿ ನಂ ಕೆಎ 32 ಎ 4269 ಬರುತಿದ್ದು ನಮ್ಮ ಪೊಲೀಸ ಜೀಪ್ ನೋಡಿ ಲಾರಿಯಲ್ಲಿದ ನಾಲ್ಕು ಜನರು ಹೋಡಿ ಹೋಗುತ್ತಿದ್ದಾಗ ಅವರಲ್ಲಿ ಇಬ್ಬರಿಗೆ ಹಿಡಿದು ವಿಚಾಋಇಸಲಾಗಿ ತನ್ನ ಹೆಸರು 1) ಯಾಕೂಬ್ ಪಟೇಲ್ ತಂದೆ ಖಾಜಾ ಪಟೇಲ 2) ಗುಡುಮಿಯಾ ತಂದೆ ಇಸ್ಮಾಯಿಲ್ ಸಾಬ್ ಸಾ: ಕಲಬುರಗಿ ಎಂದು ತಿಳಿಸಿದ್ದು ಓಡಿ ಹೋದವರ ಬಗ್ಗೆ ವಿಚಾರಿಸಲು  ಅವರ ಹೆಸರು 1) ವಾಸಿಮ ಪಟೇಲ ಸಾ: ಶಹಾಬಾದ 2) ಖಾಜಾ ಪಟೇಲ ತಂದೆ ಸುಲೆಮಾನ ಪಟೇಲ್ ಸಾ: ಹೊನಗುಂಟಾ ಅಂತಾ ತಿಳಿಸಿದರು . ಲಾರಿಯ ಬಗ್ಗೆ ವಿಚಾರಿಸಿದ್ದು ಯಾವುದೇ ಉತ್ತರ ನೀಡಿರುವುದಿಲ್ಲಾ ಸದರಿ ಮರಳು ತುಂಬಿದ ಲಾರಿಯನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಲಾರಿ ಚಾಲಕ ಮಾಲಿಕ ಹಾಗೂ ಇತರರು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೆ ಮರಳು ಕಳ್ಳತನದಿಂದ ಸಾಗಿಸುತ್ತಿದ್ದರಿಂದ ಸದರಿಯವರ ವಿರುದ್ದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: