ಃಃ ಪತ್ರಿಕಾ ಪ್ರಕಟಣೆ ಃಃ
ಶ್ರೀ ಎನ್. ಶಶಿ
ಕುಮಾರ್ ಪೊಲೀಸ್ ಅಧೀಕ್ಷಕರು ಕಲಬುರಗಿರವರು ನಗರದಲ್ಲಿ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ
ಕುಖ್ಯಾತ ರೌಡಿಗಳ ವಿರುದ್ಧ ಈಗಾಗಲೇ ದಾಖಲಾದ ಚೌಕ ಪೊಲೀಸ್ ಠಾಣೆ ಗುನ್ನೆ ಸಂ: 46/2017 ಕಲಂ 143,
147, 148, 341, 324, 326, 109, 107 ಸಂಗಡ 149 ಐಪಿಸಿ
ಪ್ರಕರಣದಲ್ಲಿ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 2000 ರ ಕಲಂ 3 ಅನ್ನು
ಅಳವಡಿಸಲು ಅನುಮತಿ ಕೋರಿ ವರದಿ ಸಲ್ಲಿಸಿದ್ದು ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ, ಕಲಬುರಗಿರವರಾದ ಶ್ರೀ ಆಲೋಕ್ ಕುಮಾರ್ ರವರು ದಿನಾಂಕಃ 23.06.2017 ರಂದು 5 ಜನ ಕುಖ್ಯಾತ
ರೌಡಿಗಳ ವಿರುದ್ಧ ಈ ಕಾಯ್ದೆಯ ಕಲಂ 3 ಅನ್ನು
ಅಳವಡಿಸಲು ಅನುಮತಿ ನೀಡಿ ಈ ಪ್ರಕರಣದ ಮುಂದಿನ ತನಿಖೆಯನ್ನು ಶ್ರೀ ಎಸ್.ಎಸ್. ಹುಲ್ಲೂರು ಪೊಲೀಸ್
ಉಪಾಧೀಕ್ಷಕರು, ಡಿ.ಸಿ.ಆರ್.ಬಿ.
ಘಟಕ ಕಲಬುರಗಿ ಇವರಿಗೆ ವಹಿಸಿ ಆದೇಶ ಹೊರಡಿಸಿರುತ್ತಾರೆ.
ಪ್ರಕರಣದ
ಪ್ರಾರಂಭಿಕ ತನಿಖೆಯು ಶ್ರೀ ಕಪಿಲ್ದೇವ ಪೊಲೀಸ್ ನಿರೀಕ್ಷಕರು ಡಿಸಿಬಿ ಕಲಬುರಗಿಯವರು
ಕೈಗೊಂಡಿದ್ದು ತನಿಖೆ ಕಾಲಕ್ಕೆ ಕಲೆ ಹಾಕಿದ ಮಾಹಿತಿಯ ಪ್ರಕಾರ ಈ ಕೆಳಗಿನ 5 ಜನ ಆರೋಪಿತರು ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ
ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುವುದರಿಂದ ಇವರುಗಳ ವಿರುದ್ಧ ಕರ್ನಾಟಕ
ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 2000 ರ ಕಲಂ 3 ಅನ್ನು ಅಳವಡಿಸಲು ವರದಿ ಸಲ್ಲಿಸಿದ್ದು ಇರುತ್ತದೆ.
1. ಸತೀಶ ರೆಡ್ಡಿ
ಅಲಿಯಾಸ್ ಮಾಕರ್ೆಟ್ ಸತೀಶ್ ಅಲಿಯಾಸ್ ಸಂಗಮ್ ಸತ್ಯಾ ಸಾ: ಯಾಕೂಬ್ ಮನಿಯಾರ
ಚಾಳ್ ಕಲಬುರಗಿ.
2. ವಿಕ್ರಮ್
ಪ್ರಸಾದ್ ತಂದೆ ಬಸವರಾಜ ಮೂಲಿಮನಿ ಸಾ: ಮಾಲಗತ್ತಿ,
ತಾ:
ಚಿತ್ತಾಪೂರ.
3. ಮಲ್ಲಿಕಾಜರ್ುನ
ಅಲಿಯಾಸ್ ಕರಿ ಚಿರತೆ ತಂದೆ ಶಿವಾನಂದ ವಿಶ್ವಕರ್ಮ,
ಸಾ: ನಂದೂರ,ತಾ:ಜಿ: ಕಲಬುರಗಿ.
4. ನಾಗರಾಜ
ಅಲಿಯಾಸ್ ಸ್ಮಾರ್ಟ್ ನಾಗಾ ತಂದೆ ವೆಂಕಟೇಶ್ ಯಾದವ್,
ಸಾ: ಕಂಬಳೇವಾಡಿ, ತಾ:
ಬಸವಕಲ್ಯಾಣ.
5. ವಿಕ್ಕಿ
ಅಲಿಯಾಸ್ ಶಿವ್ಯಾ ಅಲಿಯಾಸ್ ಬಿಲ್ಡರ್ ವಿಕ್ರಮ್ ತಂದೆ ರಾಜು ಬಿಲ್ದಾನ್ ಅಲಿಯಾಸ್ ರೆಡ್ ಲಾನ್ ಸಾ:
ಮೆಹತರ ಗಲ್ಲಿ ಗಾಜಿಪೂರ ಕಲಬುರಗಿ.
ಸತೀಶ ರೆಡ್ಡಿ
ಅಲಿಯಾಸ್ ಮಾರ್ಕೆಟ್ ಸತೀಶ್ ಈತನ ವಿರುದ್ಧ ಈಗಾಗಲೇ ಕೊಲೆ,
ಕೊಲೆಗೆ ಯತ್ನ, ಸುಲಿಗೆ, ದರೋಡೆ, ದರೋಡೆಗೆ ಪ್ರಯತ್ನ, ಅಪಹರಣ, ದೊಂಬಿ ಹೀಗೆ ಸುಮಾರು 15 ಪ್ರಕರಣಗಳು
ದಾಖಲಾಗಿರುತ್ತವೆ.
ವಿಕ್ರಮ್
ಪ್ರಸಾದ ತಂದೆ ಬಸವರಾಜ ಮೂಲಿಮನಿ ಈತನ ವಿರುದ್ಧ ಕೊಲೆ,
ಕೊಲೆಗೆ ಯತ್ನ, ಅಪಹರಣ, ಸುಲಿಗೆ,
ಅತ್ಯಾಚಾರ, ಪೊಲೀಸ್ ಅಭಿರಕ್ಷೆಯಿಂದ ಪಾರು ಇತ್ಯಾದಿ 9 ಪ್ರಕರಣಗಳು
ದಾಖಲಾಗಿರುತ್ತವೆ.
ಮಲ್ಲಿಕಾರ್ಜುನ
ಅಲಿಯಾಸ್ ಕರಿ ಚಿರತೆ ಈತನ ವಿರುದ್ಧ ಕೊಲೆಗೆ ಪ್ರಯತ್ನ,
ದೊಂಬಿ ಪ್ರಕರಣ
ಇತ್ಯಾದಿ 3 ಪ್ರಕರಣಗಳು
ದಾಖಲಾಗಿರುತ್ತವೆ.
ನಾಗರಾಜ
ಅಲಿಯಾಸ್ ಸ್ಮಾರ್ಟ ನಾಗಾ ಈತನ
ವಿರುದ್ಧ ಕೊಲೆ, ಕೊಲೆಗೆ
ಪ್ರಯತ್ನ, ದೊಂಬಿ ಪ್ರಕರಣ
ಇತ್ಯಾದಿ 3 ಪ್ರಕರಣಗಳು
ದಾಖಲಾಗಿರುತ್ತವೆ.
ವಿಕ್ಕಿ
ಅಲಿಯಾಸ್ ಶಿವ್ಯಾ ಈತನ ವಿರುದ್ಧ ಕೊಲೆ, ಅಪಹರಣ, ಜೀವ ಬೆದರಿಕೆೆ ಇತ್ಯಾದಿ 9 ಪ್ರಕರಣಗಳು
ದಾಖಲಾಗಿರುತ್ತವೆ.
ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ ಈ
ಕಾಯ್ದೆಯು ಐಪಿಸಿ ಕಾಯ್ದೆಗೆ ಹೋಲಿಸಿದರೆ ಕಠೋರ ಕಾಯ್ದೆಯಾಗಿದ್ದು ಇದರಲ್ಲಿ ಭಾಗಿಯಾದ ಆರೋಪಿತರು
ಕಠಿಣ ಶಿಕ್ಷೆಗೆ ಒಳಪಡುತ್ತಾರೆ. ಆದ್ದರಿಂದ ಇಂತಹ ಕಠೋರ ಕಾಯ್ದೆಯ ಅನುಬಂಧಗಳನ್ನು ಮೇಲ್ಕಂಡ
ಕುಖ್ಯಾತ ರೌಡಿಗಳ ವಿರುದ್ಧ ದಾಖಲಿಸಿ ನಗರದಲ್ಲಿ ರೌಡಿ ಚಟುವಟಿಕಗಳನ್ನು ನಿಯಂತ್ರಿಸಲು
ತೆಗೆದುಕೊಂಡ ಮಹತ್ವದ ಕ್ರಮ ಇದಾಗಿರುತ್ತದೆ. ಇಂತಹ ಒಂದು ಕ್ರಮವನ್ನು ಉತ್ತರ ಕರ್ನಾಟಕದಲ್ಲಿಯೇ
ಅದರಲ್ಲೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊಟ್ಟ ಮೊದಲನೆಯದಾಗಿ ರೌಡಿ ಚಟುವಟಿಕೆಗಳನ್ನು
ನಿಯಂತ್ರಿಸುವುದಕ್ಕಾಗಿ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 2000 ರ ಕಲಂ 3 ಅಳವಡಿಸಲು ದಿಟ್ಟ ಕ್ರಮ ಕೈಗೊಳ್ಳಲಾಗಿದೆ.
No comments:
Post a Comment