ಅಪಹರಣ ಮಾಡಿ ಗನ್ನದಿಂದ
ಅಂಜಿಸಿ ಸಹಿ ಮಾಡಿಸಿಕೊಂಡ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ಶ್ವೇತಾ ತಂದೆ ಶೇಶಿಕುಮಾರ ಮೈನಾಳಕರ್ ಸಾ; ಮನೆ ನಂ 15 ಡಿ-ಬ್ಲಾಕ್ ಪೊಲೀಸ ಕ್ವಾಟರ್ಸ ಶಾಂತಿ ನಗರ ಕಲಬುರಗಿ
ಇವರು ದಿನಾಂಕ 01.07.2016 ರಂದು ಬೆಳಗ್ಗೆ 10-30
ಗಂಟೆ ಸುಮಾರಿಗೆ ನಾನು ನನ್ನ ಮನೆಯಿಂದ ಗಾಜಿಪೂರದಲ್ಲಿನ ಬಿಗ್ ಬಜಾರಗೆ ಹೋಗಿ ಬಟ್ಟೆ ಖರೀದಿ
ಮಾಡಿಕೊಂಡು ಮದ್ಯಾಹ್ನ 1-30 ಸುಮಾರಿಗೆ ಕೇಂದ್ರ ಬಸ್ಸ್ ನಿಲ್ದಾಣ ಎದುರುಗಡೆ
ಆಟೋದಲ್ಲಿ ಬಂದು ಇಳಿದು ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಮಲ್ ಹೋಟಲ್ ಎದುರುಗಡೆ ಒಂದು
ಗಾಡಿಯಿಂದ ಹಾರ್ನ ಕೇಳಿ ಬಂದು ತಿರುಗಿ ನೋಡಲಾಗಿ ಒಂದು ಸ್ಕಾರ್ಪಿಯೋ ಗಾಡಿಯಿಂದ ಪರಸಪ್ಪ ತಂದೆ
ಪೀರಪ್ಪ ಕರಮಲ್ಲೆ ಸಾ; ದೇವಣಗಾಂವ ಎಂಬಾತ “ ಏ
ಶ್ವೇತಾ ಎಲ್ಲಗೆ ಹೋಗ್ತಾ ಇದ್ದೀ”
ಎಂದು ಕೇಳಿದ ನನಗೆ ಪರಿಚಿತನಾದುದರಿಂದ
ಆಗ ನಾನು ಮನೆಗೆ ಹೋಗುತ್ತಿದ್ದೆನೆ ಎಂದು ಹೇಳಿದೆ. ಈ ಗಾಡಿಯಲ್ಲಿ ಕೂಡು ಮನೆಯವರೆಗೆ ಬೀಡುತ್ತೇವೆ
ಅಂತಾ ನನ್ನನ್ನು ನಂಬಿಸಿ ಗಾಡಿಯಲ್ಲಿ ಕೂಡಿಸಿಕೊಂಡನು. ಗಾಡಿಯನ್ನು ತಿರುಗಿಸಿಕೊಂಡು
ಎಂ.ಎಸ್.ಕೆ.ಮಿಲ್ ಕಡೆಗೆ ತೀವ್ರ ವೇಗದಲ್ಲಿ ಹೋರಟಾಗ ನನ್ನ ಮನೆ ಶಾಂತಿ ನಗರದಲ್ಲಿದೆ ಈ ಕಡೆ
ಎಲ್ಲಿಗೆ ಹೋಗುತ್ತಿದ್ದಿರಿ?
ಅಂತಾ ಚಿರಲಾರಂಬಿಸಿದೆ ಆಗ ಪರಸಪ್ಪ
ಇತನು ತನ್ನ ಬಳಿ ಇದ್ದ ಗನ್ ತೆಗೆದು ನಿಮ್ಮ ತಂದೆ ದೊಡ್ಡಪ್ಪ ಮತ್ತು ನಿಮ್ಮ ಅತ್ತೆ ನಡುವಿನ
ಆಸ್ತಿ ವ್ಯಾಜ್ಯದ ಬಗ್ಗೆ ಕಾಂಫ್ರಮೈಜ ಮಾಡಿಕೋ ಅಂತಾ ನಿಮ್ಮ ತಂದೆಗೆ ಹಲವಾರು ಬಾರಿ ಹೇಳಿದರೂ
ಕೇಳಲಿಲ್ಲ.ನಿನ್ನ ಜೀವನ ಹಾಳು ಮಾಡುವದಕ್ಕಾಗಿ ನಾನು ಅಫಜಲಪೂರ ಸಬ್ ರಜಿಸ್ಟರ ಆಫೀಸಿನಲ್ಲಿ
ನಿನ್ನನ್ನು ಮದುವೆ ಆಗುತ್ತೇನೆ ಸುಮ್ಮನೆ ಇದ್ದರೆ ಸರಿ ಇಲ್ಲ ಅಂದರೆ ನಿನ್ನನ್ನು ಸಾಯಿಸಿ
ಬೀಡುತ್ತೇನೆ ಅಂತಾ ಹೆದರಿಸಿ ನನ್ನ ಬಳಿ ಇದ್ದ ಮೊಬೈಲ ಪೋನ ಕಿತ್ತುಕೊಂಡನು. ಅಫಜಲಪೂರ ತಹಸಿಲ್ದಾರ ಕಛೇರಿ ಕಂಪೌಂಡ ಓಳಗೆ ಗಾಡಿ ನಿಲ್ಲಿಸಿ
ಗಾಡಿಯಿಂದ ಇಬ್ಬರು ಇಳಿದು ಹೋಗಿ ಒಬ್ಬ ವ್ಯಕ್ತಿಯನ್ನು
ಕರೆದುಕೊಂಡು ಬಂದು ಕೆಲವು ಕಾಗದ ಪತ್ರಗಳ ಮೇಲೆ ಬಲವಂತವಾಗಿ ನನ್ನ ಸಹಿ ಪಡೆದರು. 1) ಪರಸಪ್ಪ ತಂದೆ ಪೀರಪ್ಪಾ ಕುರುಮಲ್ಲೆ 2) ಶಿವಾನಂದ ತಂದೆ ಪೀರಪ್ಪಾ ಕುರುಮಲ್ಲೆ 3) ಸುರೇಶ ತಂದೆ ಪೀರಪ್ಪಾ ಕುರುಮಲ್ಲೆ 4) ಪ್ರಥ್ವಿರಾಜ ತಂದೆ ನಿಂಗಪ್ಪ 5) ಶಿವಪುತ್ರ ತಂದೆ ಪೀರನಾಯಕ ಹಾಗೂ 6) ಬಸವರಾಜ ತಂದೆ ಚಂದ್ರಶಾ ಅಂಗಡಿ ನನ್ನನ್ನು ಅದೇ ದಿನ ಸಂಜೆ 5-30 ಗಂಟೆಗೆ ಕಲಬುರಗಿ ಬಸ್ಸ ನಿಲ್ದಾಣ ಎದುರಿನ ಕಮಲ್ ಹೋಟಲ್ ಎದುರು
ಇಳಿಸಿ “ಮದುವೆ ವಿಷಯ ನಿಮ್ಮ ತಂದೆ ತಾಯಿಯವರಿಗೆ ತಿಳಿಸಿದರೆ
ಹುಷಾರ್ ಅಂತಾ ಅವಾಜ್ ಹಾಕಿ ನಿಮ್ಮ ತಂದೆ ತಾಯಿ ಹಾಗೂ ಅಣ್ಣ ತಮ್ಮಂದಿರನ್ನು ಖಲ್ಲಾಸ ಮಾಡುತ್ತೇನೆ” ಎಂದು ಹೇಳಿ ಗಾಡಿ ತಿರುಗಿಸಿಕೊಂಡು ಹೋದರು. ನಾನು ನನ್ನ ತಂದೆ
ಶಶಿಕುಮಾರ, ತಾಯಿ ನೀತಾ @ ಗುಂಡಮ್ಮಾ
ಸೇರಿಕೊಂಡು ದೆಹಲಿಗೆ ಹೋಗಿ ವಾಜೀರಾಂ ಮತ್ತು ರವಿ ಐ.ಎ.ಎಸ್. ಸ್ಟಡಿ ಸೆಂಟರ್ ಎಲ್.ಎಲ್.ಪಿ
ದೆಹಲಿ ಇಲ್ಲಿ ನನ್ನ ಐಎಎಸ್ ಕೋಚಿಂಗ್ ಸುಲುವಾಗಿ
ದಿನಾಂಕ: 07/07/2016 ರಂದು ಅಡ್ಮಿಶನ ಮಾಡಿಕೊಂಡು ಅಲ್ಲಿಯೇ ತರಬೇತಿ
ಪಡೆಯುತ್ತಿದ್ದಾಗ ಪರಸಪ್ಪ ತಂದೆ ಪೀರಪ್ಪ ಕುರಮಲ್ಲೆ ಇವರು ದೆಹಲಿಗೆ ಬಂದು 9205065461 ನನ್ನ ನಂಬರಿಗೆ ಕರೆ ಮಾಡಿ ನಾನಿದ್ದ ಪಿ.ಜಿ ಗೆ ಬಂದು ಐ.ಎ.ಎಸ್.
ಕನಸು ಬಿಡು ನನ್ನ ಜೊತೆ ಬಾ ಅಂತಾ ಅಸಿಡ್ ಬಾಡಲ್ ತೋರಿಸಿ ಹೆದರಿಸಿದಾಗ ನಾನು ಪಿ.ಜಿ ಒಳಗೆ ಓಡಿ
ಹೋದೇನು. ನನ್ನ ಐಎಎಸ್ ಪ್ರಿಲಿಮಿನರಿ ಪರೀಕ್ಷೆ ಬರೆದು ಪಾಸಾಗಿ ದಿನಾಂಕ: 24/06/2017 ರಂದು ಕಲಬುರಗಿಯ ನನ್ನ ಮನೆಗೆ ಬಂದಿದ್ದೇನು. ಈಗ ನಾನು
ನನ್ನ ತಂದೆ ತಾಯಿಯವರಿಗೆ ನಡೆದ ಎಲ್ಲಾ
ವಿಷಯಗಳನ್ನು ತಿಳಿಸಿದ್ದೇನೆ. ಅಫಜಲಪೂರದ ನ್ಯಾಶನಲ್ ಫಂಕ್ಷನ ಹಾಲ್ನಲ್ಲಿ ನನ್ನ ಮದವೆ
ಶ್ವೇತಾಳೊಂದಿಗೆ ಆಗಿದೆ ಅಂತಾ ಸುಳ್ಳು ವೆಡ್ಡಿಂಗ ಕಾರ್ಡ ಪ್ರಕಟಿಸಿ ಒತ್ತಾಯಪೂರ್ವಕವಾಗಿ ನನಗೆ
ಹೆದರಿಸಿ ಸಹಿ ಪಡೆದು ರಜಿಸ್ಟಾರ ಮ್ಯಾರೇಜ ಆಗಿದೆ ನನ್ನ ಜೊತೆಗೆ ಬಾಳುವೆ ಮಾಡು ಬಾ ಅಂತಾ
ದಿನನಿತ್ಯ ಫೋನ ಮಾಡುವುದು ಮತ್ತು ಮೆಸೆಜ್ ಮಾಡುವುದು ಮಾಡುತ್ತಾ ಪರಸಪ್ಪ ತಂದೆ ಪೀರಪ್ಪಾ ಕುರಮಲ್ಲೆ ಇತನು
ಮಾಡುತ್ತಿದ್ದಾನೆ ಸದರಿ ಘಟನೆಯಲ್ಲಿ 1)ಪರಸಪ್ಪ ತಂದೆ ಪೀರಪ್ಪಾ ಕುರುಮಲ್ಲೆ 2) ಶಿವಾನಂದ ತಂದೆ ಪೀರಪ್ಪಾ ಕುರುಮಲ್ಲೆ 3) ಸುರೇಶ ತಂದೆ ಪೀರಪ್ಪ ಕುರುಮಲ್ಲೆ 4) ಪೃಥ್ವಿರಾಜ ತಂದೆ ನಿಂಗಪ್ಪ 5) ಶಿವಪುತ್ರ
ತಂದೆ ಪೀರನಾಯಕ ಹಾಗೂ 6) ದಿ||
ಬಸವರಾಜ ತಂದೆ ಚಂದ್ರಶಾ ಅಂಗಡಿ
(ಮೃತಪಟ್ಟಿರುತ್ತಾರೆ) ಇವರು ಸೇರಿಕೊಂಡು ಈ ಕೃತ್ಯವೆಸಗಿದ್ದಾರೆ ಆದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಶರಣಬಸಪ್ಪ ತಂದೆ ಕಾಶಪ್ಪ ಶ್ರೀಚಂದ ಸಾ: ಕಪನೂರ ತಾ:ಜಿ:ಕಲಬುರಗಿ ರವರು ಕಲಬುರಗಿ ನಗರದ ರೇವಣಸಿದ್ದೇಶ್ವರ ಕಾಲೋನಿ ಕ್ರಾಸ ಹತ್ತೀರ ಇರುವ
ಭೀಮಶ್ಯಾ ಇವರ ಕಟ್ಟೀಗೆ ಅಡ್ಡದಲ್ಲಿ ಕೂಲಿಕೆಲಸ್ ಮಾಡಿರುತ್ತೇನೆ. ನನ್ನಂತೆ ಸದರಿ ಅಡ್ಡಾದಲ್ಲಿ ನಮ್ಮ ತಂದೆ ಕಾಶಪ್ಪ ತಂದೆ
ಪೀರಪ್ಪ ಶ್ರೀಚಂದ ಇವರು ವಾಚಮ್ಯಾನ ಕೆಲಸ ಮಾಡಿಕೊಂಡಿಕೊಂಡಿರುತ್ತಾರೆ. ದಿನಾಂಕ 18072017 ರಂದು ಸಾಯಂಕಾಲ 04.00 ಗಂಟೆ ಸುಮಾರಿಗೆ ನನ್ನ ತಂದೆ ಕಾಶಪ್ಪ ಇವರು ಕೆಲಸ ಕುರಿತು ಮನೆಯಿಂದ ಹೋದರು. ನಂತರ ಇಂದು
ದಿನಾಂಕ 19/07/2017
ರಂದು ಬೆಳಿಗ್ಗೆ 07.15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಸರಸ್ವತಿ ಇಬ್ಬರೂ ಮನೆಯಲ್ಲಿದ್ದಾಗ ಆಗ ನಮಗೆ ಪರಿಚಯದ ಅರುಣಕುಮಾರ ತಂದೆ ಮಲ್ಲಿಕಾರ್ಜುನ ಸಾಗರ ಇವರು ನನಗೆ ಪೋನ ಮಾಡಿ ತೀಳಿಸಿದ್ದೇನೆಂದರೇ, ನಿಮ್ಮ ತಂದೆಯವರಾದ ಕಾಶಪ್ಪ ಇವರು ಇಂದು ದಿನಾಂಕ 19/07/2017 ರಂದು ಬೇಳಿಗ್ಗೆ 06.45 ಗಂಟೆ ಸುಮಾರಿಗೆ ಚಹಾ ಕುಡಿಯಲು ಹೋದ ಮರಳಿ ಅಡ್ಡಾದ ಕಡೆಗೆ ರೋಡಸೈಡ ಹಿಡಿದುಕೊಂಡು ನಡೆದುಕೊಂಡು ಬರುವಾಗ ಎಮಆರಎಪ್ ಟೈಯರ್ ಶೋರೂಮ್ ಎದುರುಗಡೆ ಬರುವಾಗ, ಅದೇ ವೇಳೆಗೆ ಹುಮನಾಬಾದ ಹಿಂದಿನಿಂದ ಅಂದರೇ, ಕಲಬುರಗಿ-ಹುಮನಾಬಾದ ರಿಂಗರೋಡ ಕಡೆಯಿಂದ ಒಬ್ಬ ಹೀರೋ ಹೊಂಡಾ ಸ್ಪ್ಲೇಂಡರ್ ಮೋಟಾರ್ ಸೈಕಲ್ ಸವಾರನು ಅಡ್ಡಾ-ತಿಡ್ಡಿಯಾಗಿ ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬದವನೇ ನಡೆದುಕೊಂಡು ಹೋಗುತ್ತಿದ್ದ ನಿಮ್ಮ ತಂದೆ ಕಾಶಪ್ಪ ಇವರಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಇದರಿಂದ ನಿಮ್ಮ ತಂದೆಯವರು ರೋಡಿನ ಮೇಲೆ ಬಿದ್ದರು. ಆಗ ನಾನು ಮತ್ತು ಕಪನೂರ ಗ್ರಾಮದ ರಾಹುಲ್ ತಂದೆ ಚಂದ್ರಕಾಂತ ಮರತೂರ ಹಾಗೂ ದೇವಿಂದ್ರ ಡೋಣಿ ಎಲ್ಲರೂ ಕೂಡಿ
ಎಬ್ಬಸಿ ನೋಡಲಾಗಿ ನಿಮ್ಮ ತಂದೆಯವರ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಬಾಯಿಯಿಂದ ರಕ್ತ ಸ್ರಾವವಾಗುತ್ತಿತ್ತು ಅವರಿಗೆ ಮಾತನಾಡಿಸಲು ಬೇಹುಸೆ ಆಗಿದ್ದನು . ನಂತರ ಅಪಘಾತಪಡಿಸಿದ ಮೋಟರ್ ಸೈಕಲ್ ನಂ. ನೋಡಲಾಗಿ ಅದರ ನಂ.ಕೆಎ 32-ಇಎಚ್-1351 ಅಂತಾ
ಇದ್ದು ಅದರ ಚಾಲಕನು ಅಲ್ಲಿ ಜನರು ನೆರೆಯುವದನ್ನು ನೋಡಿ ಮೋಟರ್ ಸೈಕಲ್ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೆ ಹಾಗೇಯೇ ಓಡಿಸಿಕೊಂಡು ಹೋಗಿರುತ್ತಾನೆ. ನಿಮ್ಮ ತಂದೆಯವರಿಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಎಎಸ್ಎಮ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಕೂಡಲೇ ಬರುವಂತೆ ತಿಳಿಸಿದ ಮೇರೆಗೆ ಗಾಭರಿಗೊಂಡು ನಾನು ನನ್ನ ತಾಯಿ
ಸರಸ್ವತಿ ಇಬ್ಬರೂ ಕೂಡಿಕೊಂಡು ಎಎಸ್ಎಮ್ ಆಸ್ಪತ್ರೆಗೆ ಬಂದು ನನ್ನ ತಂದೆಗೆ ನೋಡಲಾಗಿ ಹಾಕಿಹತ್ತ ನಿಜವಿತ್ತು. ಅವರಿಗೆ ನೋಡಲಾಗಿ ಅವರ ತಲೆಯ ಹಿಂದೆ ಭಾರಿ ರಕ್ತ & ಗುಪ್ತಗಾಯವವಾಗಿ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು. ನಂತರ ನನ್ನ ತಂದೆ ಕಾಶಪ್ಪ ಇವರಿಗೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದ್ದು ನನ್ನ ತಂದೆ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೆ ಬೆಳಿಗ್ಗೆ ಮೃತಪಟ್ಟಿರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪೂರ ಠಾಣೆ : ದಿನಾಂಕ 18-07-2017
ರಂದು ಬೆಳಿಗ್ಗೆ ತನ್ನ ತಾಯಿ ಮಲ್ಲಮ್ಮ ಗಂಡ ಭೀಮಶಾ ಇವಳು ಕೂಲಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ
ಬರುವಾಗ ಇಬ್ರಾಹಿಂ ಸಾ|ಕಲಬುರಗಿ ಇವರ ಹೊಲದ ಹತ್ತಿರ ನಡೆದುಕೊಂಡು
ಬರುವಾಗ ಯಾವುದೋ ಒಂದು ವಾಹನ ಚಾಲಕ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು
ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ತಾಯಿ ರೋಡಿನ ಮೇಲೆ ಬಿದ್ದಾಗ ಮಾಹಿತಿ ತಿಳಿದು
ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಾಯಿ ಬಲಗಣ್ಣಿನ ಬಲಭಾಗದ ಕೊನೆಗೆ ರಕ್ತಗಾಯದ ಪೆಟ್ಟು ಮತ್ತು
ಎಡತಲೆಯ ಹಿಂಬದಿಗೆ ಭಾರ ರಕ್ತಗಾಯದ ಪೆಟ್ಟಾಗಿ ಎರಡು ಗಾಯಗಳಿಂದ ರಕ್ತ ಸೋರುತ್ತಿತ್ತು ನಂತರ
ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು
ಹೋಗುವಾಗ ಮಾರ್ಗ ಮದ್ಯ ಮೃತ ಪಟ್ಟಿರುತ್ತಾಳೆ ಅಂತಾ ಕಾರಣ ಅಪಘಾತದ ಪಡಿಸಿದ ವಾಹನ ಪತ್ತೆ ಮಾಡಿ ಚಾಲಕನ ಮೇಲೆ
ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶರಣಪ್ಪ ಪೂಜಾರಿ ಸಾ||ಗೊಬ್ಬುರ (ಬಿ) ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment