ಮಟಕಾ
ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:04/08/2017 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯಲ್ಲಿ ಓಂಕಾರೇಶ್ವರ ಗುಡಿಯ ಮುಂದೆ ಒಬ್ಬ
ವ್ಯಕ್ತಿ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಮಟಕಾ
ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ
ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗುಡಿಯಿಂದ ಸ್ವಲ್ಪ ದೂರದಲ್ಲಿ ಹೋಗಿ ಗುಡಿಯ ಹಿಂದೆ
ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಗುಡಿಯ ಮುಂದೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ
ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ
ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು
ಚೀಟಿಯನ್ನು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿಯುತ್ತಿದ್ದಂತೆ ಸಾರ್ವಜನಿಕರು ಓಡಿ
ಹೋಗಿದ್ದು, ನಾನು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಸೈಯದ
ಇಸ್ಮಾಯಿಲ್ ತಂದೆ ಸೈಯದ ರುಕ್ಮೊದ್ದಿನ್ ಸಾ: ಶೇಖ ರೋಜಾ ಜೂನೈದಿ ಕಾಲೋನಿ ಕಲಬುರಗಿ ಅಂತ
ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1500/-,
ಒಂದು ಬಾಲ್ ಪೆನ್, 1 ಮಟಕಾ ಬರೆದ ಚೀಟಿಗಳು
ದೊರಕಿದ್ದು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ
ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ
ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶಿವಕುಮಾರ ತಂದೆ ಚಂದ್ರಶೇಖರ ಬಿರಾದಾರ ಸಾ: ಮನೆ ನಂ. 8-1179 ನೇತಾಜಿ ನಗರ
ಕಲಬುರಗಿ ರವರು ದಿನಾಂಕ. 15/04/2017 ರಂದು 8-15 ಪಿ.ಎಂ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ
ಸ್ಲೆಂಡರ ಮೋಟಾರ ಸೈಕಲ್ ನಂ. KA-32 EB- 3187 ಚೆಸ್ಸಿನಂ.
MBLHA10AMCHD54698, ಇ.ನಂ. HA10EJCHD54052 ಅ,ಕಿ|| 30,000/- ರೂ ನೇದ್ದು
ರೇಲ್ವೆ ಸ್ಟೇಷನ ಹತ್ತಿರ ರೋಡಿನ ಬದಿಯಲ್ಲಿ ನಿಲ್ಲಿಸಿ ನಂತರ 8-45 ಪಿ.ಎಮ್ ಸುಮಾರಿಗೆ ಬಂದು ನೋಡಲಾಗಿ
ನನ್ನ ಹಿರೋ ಹೊಂಡಾ ಸ್ಲೆಂಡರ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ
ಸ್ಲೆಂಡರ ಮೋಟಾರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ
ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸ್ಟೇಷನ ಬಜಾರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಭೀಮರಾಯ
ತಂದೆ ಸಿದ್ರಾಮಪ್ಪಾ ಬನ್ನುರ ಸಾ:ರಾಮ ನಗರ ಎಸ್‌ಬಿ ಕಾಲೇಜು ಎದರುಗಡೆ ಕಲಬುರಗಿ ಇವರು ಕೈಲಾಸ
ನಗರದಲ್ಲಿರುವ ವಿರೇಂದ್ರ ತಂದೆ ಬಾಬಾ ಸಾಹೇಬ ದೆಶಮುಖ ಮು:ಕೈಲಾಸ ನಗರ ಇವರು ಸುಮಾರು 15 ವರ್ಷಗಳಿಂದ ಪರಿಚಯವಿದ್ದು, ನಮ್ಮಲ್ಲಿ ಸಂಸಾರದಲ್ಲಿ ಅಡಚಣೆ
ಆದಾಗ ಅವರು ನನಗೆ ಸಹಾಯ ಮಾಡುವದು ಮತ್ತು ನಾನು ಅವರಿಗೆ ಸಹಾಯ ಮಾಡುತ್ತಾ ಬಂದಿರುತ್ತೆನೆ.
ಅದರಂತೆ ಸುಮಾರು 2 ವರ್ಷಗಳ ಹಿಂದೆ ವಿರೇಂದ್ರ ದೇಶಮುಖ ಇವರಿಗೆ ಅಡಚಣೆ
ಇದ್ದಾಗ ನನ್ನ ಹತ್ತಿರ ಬಂದು 2 ಲಕ್ಷ ರೂಪಾಯಿ ಕೇಳಿದ್ದರಿಂದ ನಾನು
ಅವರಿಗೆ ನನ್ನ ಹತ್ತಿರ ದುಡ್ಡು ಇಲ್ಲದೆ ಇದ್ದರಿಂದ ನಮ್ಮ ತಂದೆಯಾದ ಸಿದ್ರಾಮಪ್ಪಾ ಬನ್ನುರ ಇವರ
ಹತ್ತಿರದಿಂದ 2 ಲಕ್ಷ ರೂಪಾಯಿಯನ್ನು ಕೈಗಡವಾಗಿ ಕೊಡಿಸಿರುತ್ತೆನೆ.
ಅದಕ್ಕೆ ವಿರೇಂದ್ರನು 2 ವರ್ಷಗಳ ಸಮಯ ತೆಗೆದುಕೊಂಡಿದ್ದು ಇರುತ್ತದೆ.
ಈಗ 31/07/2017 ರಂದು ನಮ್ಮ ತಂದೆ ವಿರೇಂದ್ರ ದೆಶಮುಖ ಇವರ ಮನೆಗೆ
ಹೋಗಿ ದುಡ್ಡು ಕೇಳಿದಾಗ ವಿರೇಂದ್ರ ಇವನು ನಿನಗೆ ಯಾವ ದುಡ್ಡು ಕೊಡುವದಿದೆ ಕೊಡಲ್ಲ ಏನು
ಮಾಡಿಕೊಳ್ಳುತ್ತಿ ಮಾಡಿಕೊ ಹೋಗು ನಿನ್ನ ಮಗ ಭಿಮ್ಯಾ ಎಲ್ಲಿ ಹನ ಅಂವ ಸಿಗಲಿ ಅವನಿಗೆ
ನೊಡಿಕೊಳ್ಳುತ್ತೆನೆ ಅಂತ ಹೇಳಿ ಕಳಿಸಿರುತ್ತಾನೆ. ನಂತರ ನಮ್ಮ ತಂದೆ ಬಂದು ನನಗೆ ಹೇಳಿದಾಗ. ನಾನು
ನಮ್ಮ ತಂದೆ ನೀನು ಈಗ ಸುಮ್ಮ ಊರಿಗೆ ಹೋಗು ಆಮೇಲೆ ಕೇಳೊಣ ಅಂತ ಹೇಳಿ ಕಳಿಸಿರುತ್ತೆನೆ. ಇಂದು
ದಿನಾಂಕ:03/08/2017 ಬೆಳಗ್ಗೆ 10:30
ಗಂಟೆಗೆ ಶರಣಬಸವೇಶ್ವರ ಗುಡಿಯ ದರ್ಶನಕ್ಕೆ ಹೋಗಿ ದರ್ಶನದ ಸಲುವಾಗಿ 11:30 ಗಂಟೆಯ ಸುಮಾರಿಗೆ ಪಾಳಿಯಲ್ಲಿ ನಿಂತು ದರ್ಶನ ಮಾಡಿ ಥೇರು ಎಳೆದುಕೊಂಡು ಹೋಗಿ ನಿಲ್ಲುವ
ಪಾದಗಟ್ಟಿ ಹತ್ತಿರ ನಾನು ಮತ್ತು ನನ್ನ ಗೆಳೆಯ ಭಿಮಾಶಂಕರ ಕೊಟನೂರ ಇಬ್ಬರು ಮಾತನಾಡುತ್ತಾ
ಕುಳಿತಾಗ ವಿರೇಂದ್ರ ದೇಶಮುಖ ಇವನು ಬಂದು ನಿಮ್ಮ ತಂದೆಯ ರೊಕ್ಕ ಕೊಡಲ್ಲ ಏನು ಮಾಡಿಕೊತಿ ಮಾಡ್ಕೊ
ರಂಡಿ ಮಗನೆ ಅಂತ ಬೈದು ಕೈಯಿಂದ ಕಪಾಳ ಮೇಲೆ ಹೊಡೆಯುತ್ತಿದಾಗ ನಾನು ಎದ್ದು ಓಡಿ ಹೋಗುವಾಗ ತನ್ನ
ಕಿಸೆಯಲ್ಲಿಂದ ಒಂದು ಸಣ್ಣ ಚಾಕು ತೆಗೆದು ನನ್ನ ಬಲಾಗಲಿನ ಹಿಮ್ಮಡಿ ಮೇಲೆ ಚುಚ್ಚಿ ರಕ್ತಗಾಯ
ಮಾಡಿರುತ್ತಾನೆ ನಂತರ ನನ್ನ ಸಂಗಡ ಇದ್ದ ಭಿಮರಾಯ ಇತನು ಬಿಡಿಸಿದಾಗ ಅವನು ಅಲ್ಲಿಂದ ಓಡಿ
ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment