Police Bhavan Kalaburagi

Police Bhavan Kalaburagi

Thursday, August 3, 2017

Yadgir District Reported Crimes


                                    Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 326/2017 ಕಲಂ  279. 337 338 ಐಪಿಸಿ  ;- ದಿನಾಂಕ 02/08/2017 ರಂದು ಮುಂಜಾನೆ 11-30 ಗಂಟೆಗೆ ಶ್ರೀ ಖಾಜಾ ಮೊಯಿನುದ್ದಿನ್ ತಂದೆ ಅಬ್ದುಲ್ ರಸೂಲ ಗಿರಣಿ ವಯ 70 ವರ್ಷ ಜಾತಿ ಮುಸ್ಲಿಂ ಉಃ ಕೂಲಿ ಕೆಲಸ ಸಾಃ ಹಳಿ ಪೇಠ ಮಹ್ಮದ್ದಿಯ ಕಾಲೋನಿ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 01/08/2017 ರಂದು ಸಾಯಂಕಾಲ 16-15 ಗಂಟೆಗೆ ಫಿರ್ಯಾದಿಯ ಹಿರಿಯ ಮಗ ಮಹ್ಮದ ಸಾಲಾರ ವಯ 35 ವರ್ಷ ಈತನು ತನ್ನ ಹೆಣ್ಣು ಮಕ್ಕಳಾದ 1] ಸಬ್ರೀನಾ ಪವರ್ಿನ ವಯ 4 ವರ್ಷ 2] ಸಫಾ ಫಾತೀಮಾ ವಯ 2 ವರ್ಷ ಇವರಿಗೆ ಶಾಲೆಯಿಂದ ಮೋಟರ ಸೈಕಲ್ ನಂಬರ  ಕೆಎ-33-ಕ್ಯೂ-2707 ನೇದ್ದರ ಮೇಲೆ ಕರೆದುಕೊಂಡು ಮನೆಗೆ ಬರುತಿದ್ದಾಗ ಶಹಾಪೂರ ನಗರದ ಯಮಹಾ ಶೋ ರೂಮ ಎದರುಗಡೆ ಹಿಂದಿನಿಂದ ಅಂದರೆ ವಿಭೂತಿಹಳ್ಳಿ ಗ್ರಾಮದ ಕೆಡಯಿಂದ ಮೋಟರ ಸೈಕಲ್ ನಂಬರ ಕೆಎ-33-ಆರ್-8953 ನೇದ್ದರ ಸವಾರ ಶಿವಕುಮಾರ ತಂದೆ ಮಲ್ಲಿಕಾಜರ್ುನ ಪಾಲ್ಕೆ ಸಾಃ ಗಾಂಧಿ ಚೌಕ ಶಹಾಪೂರ ಈತನು ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಮೋಟರ ಸೈಕಲಗೆ ಡಿಕ್ಕಿ ಮಾಡಿದರಿಂದ ನನ್ನ ಮಗನಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿರುತ್ತವೆ ಮತ್ತು ನನ್ನ ಮೊಮ್ಮಕ್ಕಳಿಗೆ ಸಾದಾ ಪ್ರಮಾಣದ ತರಚಿದ ರಕ್ತಗಾಯಗಳಾಗಿರುತ್ತವೆ. ಹಾಗೂ ಶಿವಕುಮಾರ ಈತನಿಗೆ ಸಾಧಾ ಪ್ರಮಾಣದ ಗಾಯಳಾಗಿರುತ್ತವೆ ಸದರಿ ಮೋಟರ ಸೈಕಲ್ ಸವಾರ ಶಿವಕುಮಾರ ತಂದೆ ಮಲ್ಲಿಕಾಜರ್ುನ ಪಾಲ್ಕೆ ಸಾಃ ಗಾಂಧಿ ಚೌಕ ಶಹಾಪೂರ ಈತನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ  326/2017 ಕಲಂ 279 337 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 327/2017 ಕಲಂ  416.420.423.461.463 ಐಪಿಸಿ  ;- ದಿನಾಂಕ 02/08/2017 ರಂದು 18-00 ಗಂಟೆಗೆ ಕೋರ್ಟ ಸಿಬ್ಬಂದಿ ಪಿ,ಸಿ.256 ಸುರೇಶ ಕದಂ ಇವರು ಕೋರ್ಟ ಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಬಂಉ ಪಿಯ್ಯರ್ಾದಿ ಶ್ರೀ ಭೀಮರಾಯ ತಂದೆ ರಾಮಯ್ಯ ನಾಟೆಕಾರ ಇವರು ಮಾನ್ಯ ಪ್ರಧಾನ ಜೆ,ಎಂ, ಎಫ್,ಸಿ ನ್ಯಾಯಾಲಯ ಶಹಾಪೂರದಲ್ಲಿ ಇಂಗ್ಲೀಷನಲ್ಲಿ ಸಲ್ಲಿಸಿ ಖಾಸಗಿ ದೂರು ಸಂಖ್ಯೆ 22/2017 ನ್ನೆದ್ದನ್ನು ತಂದು ಹಾಜರ ಪಡಿಸಿದ್ದ ಮೇರೆಗೆ ಠರೋಪಿರ ವಿರುದ್ದ ಠಾಣೆಯ ಗುನ್ನೆ ನಂ 327 ಕಲಂ 416.420.423.461.463 ಐ.ಪಿ.ಸಿ ನ್ನೇದ್ದರಲ್ಲಿ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು ಖಾಸಗಿ

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 206/2017 ಕಲಂ 323, 324, 354, 420, 504, 506 ಸಂ. 149 ಐಪಿಸಿ;-ದಿನಾಂಕ 06-03-2017 ರಂದು ಬೆಳಿಗ್ಗೆ 10 ಗಂಟೆಗೆ ಪಿರ್ಯಾಧಿ ಜಮೀನು ಸವರ್ೆ ನ.127/ ರಲ್ಲಿ 4 ಎಕರೆ 38 ಗುಂಟೆ ಜಮೀನಿನ ವಿಷಯದಲ್ಲಿ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ಪಿರ್ಯಾಧಿಗೆ ನಿನಗೆ ಭೂಮಿಯಲ್ಲಿ ಭಾಗ ಕೊಡುವುದಿಲ್ಲ ಚಿನಾಲಿ.ಸೂಳಿ, ರಂಡಿ ಅಂತಾ ಬೈದ್ಯ ಮಾನಭಂಗ ಮಾಡಲು ಪ್ರಯತ್ನಿಸಿ ಮತ್ತು ಪಿರ್ಯಾಧಿಗೆ ಮಗನಿಗೆ ಕಲ್ಲಿನಿಂದ ಹೊಡೆದು ಗುಪ್ತಗಾಯ ಮಾಡಿ ಮಾಡಿದ್ದು ಪಿರ್ಯಾಧಿ ಪಾಲಿನ ಭೂಮಿಯಲ್ಲಿ 00-32 ಗಂಟೆ ಜಮೀನು 4,00,000/- ರೂ ಕ್ಕೆ ಮಾರಾಟ ಮಾಡಿ ಮೋಸ ವಂಚನೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.   

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 154/2017 ಕಲಂ 454, 457, 380 ಐಪಿಸಿ;- ಯಾದಗಿರಿ ನಗರದ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಆನಂದ ರಾಟಿ ರವರ ಕಾಂಪ್ಲೆಕ್ಸ್ದಲ್ಲಿ ಮೊಬೈಲ್ ಸೇಲ್ಸ್ & ಸವರ್ಿಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ಹೀಗಿದ್ದು ದಿನಾಂಕ 01/08/2017 ರಂದು ನಾನು ಮತ್ತು ನಮ್ಮ ತಮ್ಮನಾದ ಶ್ರೀ ಸಾಯೇಬರೆಡ್ಡಿ ಇಬ್ಬರು ಕೂಡಿ ನಿನ್ನೆ ರಾತ್ರಿ 09-30 ಗಂಟೆಯ ಸುಮಾರಿಗೆ ಸದರಿ ನನ್ನ ಅಂಗಡಿಯ ಶೆಟ್ಟರ ಬೀಗ ಹಾಕಿಕೊಂಡು ಬಂದಿರುತ್ತೇವೆ. ನಂತರ ಇಂದು ದಿನಾಂಕ 02/09/2017 ರಂದು ಬೆಳಿಗ್ಗೆ 09-00 ಗಂಟೆಗೆ ನಾನು ಮತ್ತು ನನ್ನ ತಮ್ಮ ಸಾಯೇಬರೆಡ್ಡಿ ಇಬ್ಬರು ಕೂಡಿ ನಮ್ಮ ಮೊಬೈಲ್ ಅಂಗಡಿಗೆ ಹೋಗಿ ಬೀಗ ತೆಗೆದು ನೋಡಲಾಗಿ ಅಂಗಡಿಯಲ್ಲಿ ಮೊಬೈಲ್ ಕವರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಚೆತ್ತಿನ ಮೇಲಿನ ಚಾವಣಿ ಪಿ.ಯು.ಪಿ ಕಟ್ಆಗಿ ಬಿದ್ದದ್ದು ಇತ್ತು. ಹಾಗೂ ಮೇಲೆ ಇರುವ ಟೀನ್ ಶೇಡ್ ಮೇಲೆತ್ತಿದ್ದು ಕಂಡು ಬಂತು. ನಂತರ ನಾನು ನಮ್ಮ ತಮ್ಮ  ಇಬ್ಬರು ಕೂಡಿ ಅಂಗಡಿಯಲ್ಲಿ ನೋಡಿದಾಗ 1) 2 ಮ್ಯಾಕ್ಸ್ಕಿಂಗ್ ಗೋಲ್ಡ್ ಎಂ-5 ಮೊಬೈಲ್. ಅ.ಕಿ 2400/- 2) ಒಂದು ಇಂಟೆಕ್ಸ್ ಕಂಪನಿಯ ಮೊಬೈಲ್ ಅ.ಕಿ 3500/- 3) 03 ಚೇನಾ ಸ್ಕ್ರೀನ್ ಟಚ್ ಮೊಬೈಲ್ ಅ.ಕಿ 4500/- 4) 5 ಲಾವಾ ಕಂಪನಿ ಮೊಬೈಲ್ ಅ.ಕಿ 6500/- 5) 04 ಚೈನಾ ಮೊಬೈಲ್ ಅ.ಕಿ 3200/- 6) 02 ಐಟೆಲ್ ಐಟಿ 2180 ಮೊಬೈಲ್ ಅ.ಕಿ 2000/- ಹಾಗೂ 7) 02  ಕೆಚೋಡಾ ಕೆ. 9 ಮೊಬೈಲ್ ಅ.ಕಿ 2000/- ಮೊಬೈಲ್ಗಳು ಕಾಣಲಿಲ್ಲ. ಕಾರಣ ದಿನಾಂಕ 01/08/2017 ರಂದು ರಾತ್ರಿ 09-30 ಗಂಟೆಯಿಂದ ದಿನಾಂಕ 02/08/2017 ರ ಬೆಳಿಗ್ಗೆ 09-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮೊಬೈಲ್ ಅಂಗಡಿಯ ಮೇಲಿನ ಟೀನಿನ ಶೇಡ್ಡ್ ಮೇಲೆತ್ತಿ ಸುಮಾರು 24,100/- ರೂ|| ಕಿಮ್ಮತ್ತಿನ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮೊಬೈಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ  ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ನೀಡಿದ ಸಾರಾಂಶ ಮೇಲಿಂದ ನಾನು ಠಾಣೆ ಗುನ್ನೆ ನಂ 154/2017 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 80/2017 ಕಲಂ 110 (ಇ & ಜಿ) ಸಿಆರ್ಪಿಸಿ;- ದಿನಾಂಕ: 02/08/2017 ರಂದು 11.30 ಎ.ಎಂ.ಕ್ಕೆ ನಾನು, ಸಂಗಡ ಸಿಬ್ಬಂದಿಯವರಾದ ಈರಣ್ಣ ಪಿಸಿ-103 ಇವರೊಂದಿಗೆ ಭೀ.ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊತಪೇಟ ದಿಬ್ಬಿ ತಾಂಡಾಕ್ಕೆ ಭೇಟಿಕೊಟ್ಟಾಗ ತಾಂಡಾದ ಸೇವಾಲಾಲ ಗುಡಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯಲ್ಲಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಹಾಗು ವಾಹನಗಳಿಗೆ ಅಡೆತಡೆಯನ್ನುಂಟು ಮಾಡುತ್ತ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಾ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುತ್ತಿರುವುದನ್ನು ನೋಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಜಿಲಾನ @ ಗುಲಾಬರಾಮ ತಂದೆ ದುರಗಾಲಾಲ @ ಪೂರಣರಾಮ ನಾಯಕ ವ:28ವರ್ಷ, ಜಾ:ನಾಯಕ, ಉ:ಕೂಲಿ, ಸಾ:ಕುಕಡವಾಲಿ, ಜಿ:ನಾಗೂರ (ರಾಜಸ್ಥಾನ) ಅಂತ ತಿಳಿಸಿದ್ದು ಸದರಿಯವನಿಗೆ ಬುದ್ದಿ ಮಾತು ಹೇಳಿದರು ಅವನು ಕೇಳುವ ಸ್ಥಿತಿಯಲ್ಲಿರಲಿಲ್ಲ.  ಕಾರಣ ಸದರಿಯವನಿಗೆ ಹಾಗೆಯೇ ಬಿಟ್ಟಲ್ಲಿ ಗ್ರಾಮದಲ್ಲಿ ಯಾವುದಾದರು ಸಂಜ್ಞೆಯ ಅಪರಾಧ ಮಾಡಿ ಸಾರ್ವಜನಿಕ ಶಾಂತತಾಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಮತ್ತು ಸದರಿಯವನಿಂದ ಜರುಗಬಹುದಾದ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಶಾಂತಿ ಪಾಲನೆಗಾಗಿ ಮುಂಜಾಗೃತೆ ಕ್ರಮ ಕುರಿತು 12.30 ಪಿ.ಎಂಕ್ಕೆ ವಶಕ್ಕೆ ತೆಗೆದುಕೊಂಡು 01.00 ಪಿಎಂಕ್ಕೆ ಠಾಣೆಗೆ ಬಂದು ಸರಕಾರಿ ತಪರ್ೆಯಿಂದ ಫಿಯರ್ಾದಿದಾರನಾಗಿ ಅವನ ವಿರುದ್ದ ಠಾಣೆ ಗುನ್ನೆ ನಂ. 80/2017 ಕಲಂ 110 (ಇ & ಜಿ) ಸಿ.ಆರ್.ಪಿ.ಸಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 239/2017 ಕಲಂ:  379 ಐ.ಪಿ.ಸಿ. ಮತ್ತು 21 (3), 21 (4), 22 ಎಮ್.ಎಮ್.ಆರ್.ಡಿ ಆಕ್ಟ 1957;- ದಿನಾಂಕ: 02-08-2017 ರಂದು 11-30 ಎ.ಎಮ್.ಕ್ಕೆ ಶ್ರೀ ಆರ್.ಎಪ್.ದೇಸಾಯಿ ಪಿ.ಐ, ಸೂರಪೂರ ಠಾಣೆ ರವರು ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಕ್ರಮ ಜರುಗಿಸುವ ಕುರಿತು ವರದಿ ನೀಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನಂದರೆ ಇಂದು ದಿನಾಂಕ: 02-08-2017 ರಂದು 9-30 ಎ.ಎಂ.ಸುಮಾರಿಗೆ ದೇವತ್ಕಲ್ಲ ಗ್ರಾಮದ ಹತ್ತಿರ  ಒಂದು ಜಾನ್ ಡಿಯರ್ ಕಂಪನಿ ಟ್ರ್ಯಾಕ್ಟರ ನಂಬರ ಇರುವದಿಲ್ಲ ಇಂಜಿನ ನಂಬರ ಕಙ3029ಆ282226 ಮತ್ತು ಒಂದು ಸ್ವರಾಜ ಕಂಪನಿ ಟ್ರ್ಯಾಕ್ಟರ ನಂಬರ ಇರುವದಿಲ್ಲ ಟ್ಯಾಕ್ಟರ ಇಂಜಿನ ನಂಬರ 391357/ಖಘಊ10754  ನೇದ್ದವುಗಳಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಸರಕಾರಕ್ಕೆ ರಾಜ ಧನ ಕಟ್ಟದೆ ಕಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿರುವಾಗ ಪಂಚರೊಂದಿಗೆ ದಾಳಿ ಮಾಡಿ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 240/2017 ಕಲಂ: 143. 147. 148. 448. 323. 324.354.307. 504. 506. ಸಂಗಡ 149 ಐಪಿಸಿ;- ದಿನಾಂಕ 02/08/2017 ರಂದು 1.00 ಪಿ,ಎಂ ಕ್ಕೆ ಠಾಣೆಗೆ ಪಿಯರ್ಾದಿ ಶ್ರೀಮತಿ  ಶಿವಮ್ಮ ಗಂಡ ನಿಂಗಪ್ಪ ಗುಗ್ಗರಿ ಸಾ|| ಬಾಚಿಮಟ್ಟಿ ತಾ|| ಸುರಪೂರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದೆನೆಂದರೆ  ನನಗೆ ಮೂರು ಜನ ಮಕ್ಕಳಿದ್ದು ಗಂಡ ಮತ್ತು ಮಾವನೊಂದಿಗೆ ಜೀವನ ಸಾಗಿಸುತ್ತಿದ್ದು ಇಂದು ದಿನಾಂಕ 31/07/2017 ರಂದು ಸಾಯಂಕಾಲ 6-00 ಗಂಟೆಗೆ 1) ದಾವಲಸಾಬ ತಂದೆ ಕಾಶಿಮಸಾಬ 2) ಅಲ್ಲಿಸಾಬ ತಂದೆ ಖಾಸಿಂಸಾಬ 3) ಮೌಲಾಸಾಬ ತಂದೆ ಖಾಸಿಂಸಾಬ 4) ಖಾಸಿಂಸಾಬ ತಂದೆ ದಾವಲಸಾಬ ಹಾಗೂ 5) ಪೀರವ್ವ ಗಂಡ ಖಾಸಿಂಸಾಬ ಇವರೆಲ್ಲರೂ ಅಕ್ರಮ ಕೂಟ ಕಟ್ಟಿಕೊಮಡು ನನ್ನ ಮಗನಾದ ಅಮಾತೆಪ್ಪ ತಂದೆ ನಿಂಗಪ್ಪ ಗುಗ್ಗರಿ ಈತನನ್ನು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಕೋಡಲಿ ರಾಡು ಬಡಿಗೆ ಚಾಕುಗಳನ್ನು ಹಿಡಿದುಕೊಮಡು ಬಂದವರೆ ನನ್ನ ಮನೆಯಲ್ಲಿ ನುಗ್ಗಿ ನನ್ನ ಮಗನಾದ ಅಮಾತೆಪ್ಪನನ್ನು ಹಿಡಿದು ಆತನ ಅಂಗಿಯನ್ನು ಹಿಡಿದುಕೊಂಡು ಹೋರಗೆ ಎಳೆದುಕೊಂಡು ಬಂದವರೆ ಅದರಲ್ಲಿ ದಾವಲಸಾಬ ಎಂಬುವವನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಬಿಸಿ ನನ್ನ ಮಗನ ಕುತ್ತಿಗೆಗೆ ಹೋಡೆಯುತ್ತಿರುವಾಗ ನನ್ನ ಮಗನು ಕೂಡಲೆ ಕೆಳಗೆ ಕುಂತ ಕಾರಣ ಆ ಏಟು ತಪ್ಪಿತು ಹಾಗೂ ಅಲ್ಲಿಸಾಬ ಇವನು ತನ್ನ ಕೈಯಲ್ಲಿಯ ಬಡಿಗೆಯಿಂದ ತಲೆಗೆ ಹೋಡೆದು ಗುಪ್ತಗಾಯ ಪೆಟ್ಟು ಮಾಡಿದನು ಮತ್ತು ಮೌಲಾಸಾಬ ಇತನು ರಾಡಿನಿಮದ ನನ್ನ ಮಗನ ಕಾಲಿಗೆ ಹೊಡೆದು ರಕ್ತಗಾಯ ಮಾಡಿದನು ನಾನು ಅವರು ಹೋಡೆಯುವದನ್ನು ನೊಡಿ ಚಿರಾಡುತ್ತಾ ಬಿಡಿಸಲು ಹೋದಾಗ ಖಾಸಿಂಸಾಬ ಇವರು ನನ್ನ ಸೀರೆಯನ್ನು ಹಿಡಿದು ಎಳೆದಾಡಿ ನನ್ನ ಮಾನ ಭಂಗ ಮಾಡಲು ಪ್ರಯತ್ನಿಸಿದನು ಹಾಗೂ ಪೀರವ್ವ ಇವಳು ನನ್ನ ಕೂದಲನ್ನು ಹಿಡಿದು ಕೈಯಿಂದ ನನ್ನ ಕಪಾಳಕ್ಕೆ ಜೋರಾಗಿ ಹೋಡೆದಳು ನಾನು ಚಿರಾಡಲು ಹತ್ತಿದಾಗ ಬಾಜು ಮನೆಯ ಜನರು ಬರುವದನ್ನು ನೋಡಿ ಇವರೆಲ್ಲರೂ ಓಡಿ ಹೋದರು ನಂತರ ಪುನಃನಾವು ಕೇಸು ಮಾಡಲು ಪೊಲೀಸ್ ಠಾಣೆಗೆ ಹೋಗುವ ಉದ್ದೇಶದಿಂದ ಹೊಲಕ್ಕೆ ಹೋಗಿದ್ದು ನನ್ನ ಗಂಡ ನಿಂಗಪ್ಪ ಹಾಗು ಮೈದುನನಾದ ಬಸಣ್ಣ ಮತ್ತು ನಂದಪ್ಪ ಇವರನ್ನು ಕರೆಯಿಸಿಕೊಂಡೆವು. ನಂತರ ಕೇಸು ಂಆಡಲು ಹೋಗಲು ಹೋರಗೆ ಬಂದಾಗ ಪುನಃ ಎಲ್ಲಾ ಜನರು ದಾವಲಸಾಬ, ಅಲಿಸಾಬ ಮೌಲಾಸಾಬ, ಖಾಸಿಂಸಾಬ, ಪಿರವ್ವ ಇವರೆಲ್ಲರೂ ಬಂದವರೆ ನಮ್ಮ ಮೇಲೆ ಕೇಸು ಮಾಡಲಿಕ್ಕೆ ಹೋಗುತ್ತಿರಾ ಸೂಳೆ ಮಕ್ಕಳೆ ಆಗ ಜನರು ಬಂದರು ಅಂತ ನಿಮ್ಮನ್ನು ಜೀವ ಸಹಿತ ಉಳಿಸಿದ್ದೆವೆ ಈಗ ನಿಮ್ಮಲ್ಲರನ್ನು ಖಲಾಸ ಮಾಡುತ್ತೆವೆ ಅನ್ನುತ್ತಾ ನನ್ನ ಗಂಡನಾದ ನಿಂಗಪ್ಪನಿಗೆ ದಾವಲಸಾಬ ಈತನು ಎಗರಿ ಎದೆಗೆ ಇದ್ದನು ಅಲ್ಲಿಸಾಬ ಈತನು ನನ್ನ ಗಂಡನಿಗೆ ಗೆಜ್ಜೆಗೆ ಒದ್ದನು, ಇದರಿಂದ ನನ್ನ ಗಂಡನು ಚಿರಾಡುತ್ತಾ ನೆಲಕ್ಕೆ ಬಿದ್ದನು ನಂತರ ಬಿಡಿಸಲು ಬಂದ ನನ್ನ ಮೈದುನನಾದ ಶ್ರೀ ಬಸಣ್ಣ ತಂದೆ ಸಣ್ಣಕೆಪ್ಪ ಇವನಿಗೆ ಮೌಲಾಸಾಬ ಈತನು ಕೈಯಿಂದ ಕೈ ಮುಷ್ಟಿಯಿಂದ ಎದೆಗೆ ಬೆನ್ನಿಗೆ ಗುದ್ದಿದನು. ಹಾಗು ನನ್ನ ಮೈದುನ ನಂದಣ್ಣನಿಗೆ ಖಾಸಿಂಸಾಬ ಈತನು ಕೈಯಿಂದ ಬೆನ್ನಿಗೆ ಹೋಡೆದನು ಆಗ ನಾನು ಚಿರಾಡುತ್ತಿರುವಾಗ ನಿಂಗಣ್ಣ ತಂದೆ ಕಾಮಣ್ಣ ಹಾಗು ಹಣಮಂತ್ರಾಯ ತಂದೆ ನಂದಪ್ಪ ಇವರು ಬಂದು ನಮಗೆ ಹೋಡೆಯುವದನ್ನು ಬಿಡಿಸಿದರು ಇಲ್ಲದಿದ್ದರೆ ಅಂದು ನಮ್ಮ ಪ್ರಾಣ ಹೋಡೆಯುತ್ತಿದ್ದರು ಆವಾಗ ಉಳಿದಿರಿ ಸೂಳಿ ಮಕ್ಕಳೆ ನಿಮ್ಮ ಖಲಾಸ ಮಾಡುತ್ತೆವೆ ಅಂತ ಜೀವದ ಬೆದರಿಕೆ ಹಾಕುತ್ತಾ ಕೇ ಕೇ ಹಾಕುತ್ತಾ ಹೋದರು
 

No comments: