Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 156/2017 ಕಲಂ 379 ಐಪಿಸಿ.;-
ದಿನಾಂಕ: 07/08/2017 ರಂದು ಬೆಳಗ್ಗೆ 9:30 ಗಂಟೆಗೆ ಠಾಣೆಯಲ್ಲಿದ್ದಾಗ ಯಾದಗಿರಿ ನಗರದ
ಗಂಗಾನಗರ-ಮುದ್ನಾಳ ಬೈಪಾಸ ರೋಡಿನ ಹತ್ತಿರ ಒಂದು ಹೊಲದಲ್ಲಿ ಯಾರೋ ಕೆಲವರು
ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳನ್ನು ತುಂಬುತ್ತಿದ್ದಾರೆ ಅಂತಾ ಖಚಿತ ಮಾಹಿತಿ
ಮೇರೆಗೆ ಸಿಬ್ಬಂದಿಯವರಾದ ವಿಠೋಭಾ ಹೆಚ್.ಸಿ.86 ರವಿ ರಾಠೋಡ ಪಿಸಿ-269, ಜಗಧೀಶ
ಪಿಸಿ-388 ರವರಿಗೆ ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ದಾಳಿ ಕುರಿತು 10:00 ಎಎಂ
ಕ್ಕೆ ಠಾಣೆಯಿಂದ ಸರಕಾರಿ ವಾಹನ ನಂ.ಕೆಎ-33-ಜಿ-0075 ನೇದ್ದರಲ್ಲಿ ಎಲ್ಲರೂ ಹೊರಟು
ಗಂಗಾನಗರ ಬೈಪಾಸ ಹತ್ತಿರ ಇರುವ ಹಳ್ಳದ ಬ್ರಿಡ್ಜ ಹತ್ತಿರ ಮರೆಯಲ್ಲಿ ಜೀಪ ನಿಲ್ಲಿಸಿ
ಎಲ್ಲರೂ ಜೀಪಿನಿಂದ ಇಳಿದು ಮುಂದೆ ನಡೆದುಕೊಂಡು ಹೋರಟು ಜಾಲಿ ಕಂಟಿಗಳ ಮರೆಯಲ್ಲಿ ನಿಂತು
ನೋಡಾಲಾಗಿ ಎರಡು ಟ್ರ್ಯಾಕ್ಟರಗಳು ಒಂದು ಹೊಲದಲ್ಲಿ ನಿಂತಿದ್ದು ಅವುಗಳಲ್ಲಿ ಹೊಲದಲ್ಲಿಂದ
ಉಸುಕನ್ನು ತುಂಬುತ್ತಿದ್ದು ಖಚಿತ ಪಡಿಸಿಕೊಂಡು 10-30 ಎಎಂಕ್ಕೆ ದಾಳಿ ಮಾಡಿ
ಬೆಕೆನ್ನುವಷ್ಟರಲ್ಲಿ ಅವರೆಲ್ಲರು ನಮ್ಮನ್ನು ನೋಡಿ ಓಡಿ ಹೋದರು ಒಂದು
ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು ಇನ್ನೂಂದು ಟ್ರ್ಯಾಕ್ಟರದಲ್ಲಿ ಅಂದಾಜು 25 ರಿಂದ
30 ಬುಟ್ಟಿಯಷ್ಟು ಮರಳು ತುಂಬಿದ್ದು ಇತ್ತು ಟ್ರ್ಯಾಕ್ಟರಗಳನ್ನು ಪರೀಸಿಲಿಸಿ ನೋಡಲಾಗಿ
1) ಒಂದು ಟ್ರ್ಯಾಕ್ಟರ ಇಂಜಿನ್ ನಂ.ಕೆಎ-33-ಟಿಎ-2655 ಟ್ರಾಲಿ ನಂ. ಕೆಎ-33.ಟಿ.1675
ಇದ್ದು 2) ಟ್ರ್ಯಾಕ್ಟರ ಇಂಜಿನ್ ನಂ.ಕೆಎ-33-ಟಿಎ-0998 ಇದ್ದು ಟ್ರಾಲಿ ಚೆಸ್ಸಿ ನಂ.
58/2012 ಇರುತ್ತದೆ. ಟ್ರ್ಯಾಕ್ಟರ ಚಾಲಕರು ಮತ್ತು ಮಾಲಿಕರು ಕೂಡಿಕೊಂಡು ಅಕ್ರಮವಾಗಿ
ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಅಕ್ರಮವಾಗಿ ಕದ್ದು ಕಳ್ಳತನದಿಂದ ಸಾಗಿಸುತ್ತಿದ್ದ
ಬಗ್ಗೆ ಖಾತ್ರಿಯಾಯಿತು. ಟ್ರಾಕ್ಟರ ಚಾಲಕರ ಹೆಸರು ಮತ್ತು ಮಾಲಿಕರ ಹೆಸರುಗಳು
ಗೊತ್ತಾಗಿರುವುದಿಲ್ಲಾ. ಸದರಿ ಹೊಲವು ಉಸುಕಿನಿಂದ ಕೂಡಿದ್ದರಿಂದ ತೆಗ್ಗು ಅಗಿದು
ಅಕ್ರಮವಾಗಿ ಉಸುಕು ತುಂಬುತ್ತಿದ್ದರು. ಹೊಲದವನ ಹೆಸರನ್ನು ತಿಳಿದುಕೊಳ್ಳುವ ಕುರಿತು
ಬಾಜು ಹೊಲದಲ್ಲಿ ಹೊರಟಿದ್ದ ಒಬ್ಬ ವ್ಯಕ್ತಿಯಾದ ಸಂತೋಷ ತಂದೆ ದೇವು ರಾಠೋಡ ಈತನಿಗೆ
ವಿಚಾರಿಸಲು ಹೊಲದವನ ಹೆಸರು ಮೊನಪ್ಪ ತಂ. ದೊಡ್ಡ ಹಣಮಂತ ದೊಡ್ಮನಿ ಸಾಃ ಗಂಗಾನಗರ ಅಂತಾ
ತಿಳಿಸಿದನು. ಸದರಿ ಟ್ರ್ಯಾಕ್ಟರಗಳನ್ನು ಮುಂದಿನ ಪುರಾವೆ ಕುರಿತು ನಮ್ಮ ತಾಬೆಗೆ
ತೆಗೆದುಕೊಂಡು ಜಪ್ತಿ ಪಂಚನಾಮೆಯನ್ನು 10-30 ಎಎಂದಿಂದ 11-30 ಎಎಂದವರೆಗೆ ಪಂಚರ ಸಮಕ್ಷಮ
ಮುಗಿಸಿದ್ದು ನಂತರ ಮುದ್ದೆ ಮಾಲಿನೊಂದಿಗೆ ಠಾಣೆಗೆ 12:00 ಪಿಎಂಕ್ಕೆ ಬಂದು ಮುಂದಿನ
ಕ್ರಮಕ್ಕಾಗಿ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ನೀಡಿದ್ದು ಇ ಮೇಲಿನಂತೆ ಪ್ರಕರಣ
ದಾಖಲಾಗಿರುತ್ತದೆ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 210/2017 ಕಲಂ 379 ಐಪಿಸಿ;- ದಿನಾಂಕ 07.08.2017 ರಂದು ಬೆಳಿಗ್ಗೆ 7 ಗಂಟೆಗೆ ಹತ್ತಿಕುಣಿಯಿಂದ 5 ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಕೊಟ್ಗೇರಾ-ರಾಂಪೂರ ಮಾರ್ಗವಾಗಿ ಗಾಜರಕೊಟ್ ಗ್ರಾಮಕ್ಕೆ ಕಳ್ಳತನದಿಂದ ಸಾಗಿಸುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಮತ್ತು ಸಿ.ಪಿ.ಐ ಹಾಗೂ ಸಿಬ್ಬಂದಿಯವರು ಸರಕಾರಿ ಜೀಪ್ ನಂಬರ್ ಕೆಎ-33-ಜಿ-0113 ಮತ್ತು ಕೆಎ-33-ಜಿ-0067 ನೇದ್ದರಲ್ಲಿ ಹೊರಟು ಚಪೆಟ್ಲಾ ಗ್ರಾಮದಲ್ಲಿ ಪಂಚರಾದ ಶಿವರಡ್ಡಿ ಮತ್ತು ಚಂದ್ರಾರಡ್ಡಿ ಇವರನ್ನು ಕರೆದುಕೊಂಡು ಹೋಗಿ ಸಮಯ 8-30 ಗಂಟೆಗೆ ಗಾಜರಕೊಟ್ ಗ್ರಾಮದ ದಂಡಕೆರೆಯ ಮೇಲೆ ಯಲ್ಲಮ್ಮ ಗುಡಿಯ ಮುಂದಿನ ಗಾಜರಕೊಟ್-ರಾಂಪೂರ ರಸ್ತೆಯ ಮೇಲೆ ಎದುರಿಗೆ 5 ಮರಳು ತುಂಬಿದ ಟ್ರ್ಯಾಕ್ಟರಗಳು ಬರುತ್ತಿರುವುದನ್ನು ಕಂಡು ಅವುಗಳನ್ನು ತಡೆದು ನಿಲ್ಲಿಸುತ್ತಿದ್ದಂತೆ ಅವುಗಳ ಚಾಲಕರು ತಮ್ಮ-ತಮ್ಮ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ನಿಲ್ಲಿಸಿ ಓಡಿ ಹೋಗಿರುತ್ತಾರೆ. 5 ಮರಳು ತುಂಬಿ ಟ್ರ್ಯಾಕ್ಟರಗಳನ್ನು ವಶಕ್ಕೆ ತೆಗೆದುಕೊಂಡು ಮರಳು ಠಾಣೆಗೆ ಬಂದು ವರದಿ ನೀಡಿದ್ದು ಇರುತ್ತದೆ.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 85/2017 ಕಲಂ 323,354,504,506 ಸಂ. 34 ಐಪಿಸಿ ;- ದಿನಾಂಕ:06/08/2017 ರಂದು ಮುಂಜಾನೆ 10 ಗಂಟೆ ಸುಮಾರಿಗೆ ಫಿಯರ್ಾದಿ ತಮ್ಮ ಹೊಲಕ್ಕೆ ಸದಿ ತೆಗೆಯಲು ಅಂತಾ ಹೋದಾಗ ಆರೋಪಿತರು ಸದರಿ ಹೊಲದಲ್ಲಿ ಟ್ರಾಕ್ಟರ್ ತಂದು ಹರಗುತ್ತಿರುವಾಗ ಫಿಯರ್ಾದಿ ಸದರಿಯವರಿಗೆ ನಮ್ಮ ಹೊಲದಲ್ಲಿ ಯಾಕೆ ನೀವು ಹರಗುತ್ತಿದ್ದೀರಿ ಅಂತಾ ಕೇಳಿದ್ದಕ್ಕೆ ಸದರಿಯವರು ಈ ಹೊಲದಲ್ಲಿ ನಮಗೂ ಪಾಲು ಬರುತ್ತದೆ ಅಂತಾ ಅಂದಾಗ ಫಿಯರ್ಾದಿ ನಿಮಗೆ ಹೇಗೆ ಪಾಲು ಬರುತ್ತದೆ, ನಿಮಗೆ ಹೊಲ ಹರಗಲು ಬಿಡುವದಿಲ್ಲ ಅಂತಾ ಅಂದಿದ್ದಕ್ಕೆ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 151/2017 ಕಲಂ: 379 ಐ.ಪಿ.ಸಿ ಮತ್ತು 21 (3) (4) ಎಮ್ಎಮ್ಡಿಆರ್ ಆಕ್ಟ 1957 ;- ದಿನಾಂಕ: 07/08/2017 ರಂದು 8.00 ಎಎಮ್ಕ್ಕೆ ಪಿಎಸ್ಐ ಕೆಂಭಾವಿ ಠಾಣೆ ರವರು ಠಾಣೆಗೆ ಬಂದು ಒಂದು ಜಪ್ತಿ ಪಂಚನಮೆ ಹಾಗೂ ಮರಳು ತುಂಬಿದ 3 ಟಿಪ್ಪರುಗಳನ್ನು ಹಾಜರುಪಡೆಸಿ ಮುಂದಿನ ಕ್ರಮ ಜರುಗಿಸುವಂತೆ ಆದೇಶಿಸಿದ್ದು ಜಪ್ತಿ ಪಂಚನಾಮೆ ಸಾರಾಂಶವೇನೆಂದರೆ, ಪಿಎಸ್ಐ ರವರು ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರನ್ನು ಭಾತ್ಮಿ ಮೇರೆಗೆ ಕರೆದುಕೊಂಡು ಹೋಗಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತ್ತಿದ್ದ ಟಿಪ್ಪರ್ಗಳ ಮೇಲೆ ದಾಳಿ ಮಾಡಿ ಟಿಪ್ಪರ ಚಾಲಕರಿಗೆ ಮರಳು ಸಾಗಿಸಲು ಸರಕಾರಕ್ಕೆ ರಾಜಧನ ಕಟ್ಟಿದ ಬಗ್ಗೆ ದಾಖಲಾತಿ ಕೇಳಿದಾಗ ಅವರು ತಮ್ಮ ಮಾಲಿಕನಾದ ಸುಗುರೇಶ ಗುಳಗಿ ಇವರು ತಿಳಿಸಿದಂತೆ ಯಾವುದೇ ರಾಜಧನ ಭರಿಸದೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತ್ತಿದ್ದೇವೆ ಅಂತ ತಿಳಿಸಿದ್ದರಿಂದ ಟಿಪ್ಪರ್ಗಳನ್ನು ಪಿಎಸ್ಐ ರವರು ವಶಕ್ಕೆ ಪಡೆದು ಚಾಲಕರನ್ನು ವಿಚಾರಿಸುವಷ್ಟರಲ್ಲಿ ಚಾಲಕರು ಓಡಿ ಹೋಗಿದ್ದು ನಂತರ ಪಂಚರ ಸಮಕ್ಷಮದಲ್ಲಿ 6.30 ಎಎಮ್ದಿಂದ 7.30 ಎಎಮ್ದವರೆಗೆ ಜಪ್ತಿ ಪಂಚನಾಮೆ ಮಾಡಿ ಮರಳಿ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರುಪಡೆಸಿದ್ದರಿಂದ ಅದರ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 151/17 ಕಲಂ: 379 ಐಪಿಸಿ ಮತ್ತು 21 (3) (4) ಎಮ್ಎಮ್ಆರ್ಡಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. ಮರಳಿನ ಅಂದಾಜು ಕಿಮ್ಮತ್ತು 30000/- ರೂ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 243/2017 ಕಲಂಃ 341, 323,324, 504, 307 ಸಂಗಡ 34 ಐ.ಪಿ.ಸಿ;- ದಿನಾಂಕ: 07-08-2017 ರಂದು 00:15 ಎ.ಎಮ್.ಕ್ಕೆ ಜಿ.ಜಿ.ಹೆಚ್.ಸುರಪೂರದಿಂದ ಎಮ್.ಎಲ್.ಸಿ. ಇದೆ ಅಂತಾ ಮಾಹಿತಿ ಬಂದಿದ್ದು ಆಸ್ಪತ್ರೆಗೆ ಬೇಟಿ ನೀಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಸಿದ್ದಣ್ಣ ತಂದೆ ನಾಗಪ್ಪ ಮೂಲಿಮನಿ ಸಾ: ದೇವತ್ಕಲ್ ತಾ:ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡು ಮರಳಿ ಠಾಣೆಗೆ 02:10 ಎ.ಎಮ್.ಕ್ಕೆ ಬಂದಿದ್ದು ಸದರಿ ಹೇಳಿಕೆ ಫಿಯರ್ಾದಿ ಸಾರಾಂಶವೇನಂದರೆ ಇಂದು ತನ್ನ ಹೊಲದ ಬದಿವಿನಲ್ಲಿ ಒಂದು ಮಾವಿನ ಗಿಡವಿದ್ದು ಸದರಿ ಮಾವಿನ ಗಿಡದ ನಗ್ಗೆ ತಮ್ಮ ಬೀಗರಾದ ನಿಂಗಪ್ಪ ತಂದೆ ಬನ್ನಪ್ಪ ಮಂಜಲಾಪೂರ ಮತ್ತು ತಮ್ಮ ನಡುವೆ ಬಹಳ ದಿವಸಗಳಿಂದ ವೈಷಮ್ಯ ವಿದ್ದು ದಿನಾಂಕ: 06-08-2017 ರಂದು 4:30 ಗಂಟೆಗೆ ನಿಂಗಪ್ಪ ಮಂಜಲಾಪೂರ ಈತನು ಮಾವಿನ ಗಿಡದ ಟೊಂಗೆ ಕಡಿಯುತ್ತಿದ್ದಾಗ ಫಿಯರ್ಾದಿಯ ಮಗ ಕಡಿಯ ಬೇಡಾ ಅಂತಾ ಹೇಳಿದ್ದಕ್ಕೆ ಅವನಿಗೆ ಆರೋಪಿತನು ಹೊಡೆದು ಕಳಿಸಿದ್ದು ಇದೆ ಅದಕ್ಕಾಗಿ ಫಿಯರ್ಾದಿ ದಾರನು ದೂರು ಕೊಡುವುದಾಗಿ ಹೇಳಿದ್ದು ನಂತರ ಸುರಪೂರಕ್ಕೆ ಬಂದು ಮನೆಗೆ ಹೊರಟಾಗ 7:30 ಪಿ.ಎಮ್.ಕ್ಕೆ ಆರೋಪಿತರು ಮೂರು ಜನರು ಕೂಡಿಕೊಂಡು ಸಾರಿಯಲ್ಲಿ ಜಗಳ ತೆಗದು ಮಗನೇ ನಮ್ಮ ಮೇಲೆ ದೂರು ಕೊಡುತ್ತೀಯಾ ಅಂತಾ ಬೈದು ನಿಂಗಪ್ಪ ಮಂಜಲಾಪೂರ ಈತನು ಫಿಯರ್ಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡಲಿಯಿಂದ ಫಿಯರ್ಾದಿಯ ತಲೆಗೆ ಮೂರುಕಡೆ ಹೊಡೆದು ರಕ್ತಗಾಯ ಮಾಡಿದ್ದು ಮತ್ತು ಆರೋಪಿ ಭೂಮಣ್ಣ ಮಂಜಲಾಪೂರ ಈತನು ಬಡಿಗೆಯಿಂದ ಮೈಗೆ ಕಾಲುಗಳಿಗೆ ಹೊಡೆದು ಒಳಪೆಟ್ಟು ಮಾಡಿದ್ದು ಮತ್ತು ಸಿದ್ದಮ್ಮಳು ಹೊಡಿರಿ ಬಿಡಬೇಡಿರಿ ಅಂತಾ ಬೈದಾಡಿದ್ದು ತನ್ನ ಮಗ ಮಲ್ಲಿಕಾಜರ್ುನನಿಗೂ ಸಹ ಹೊಡೆದಿರುತ್ತಾರೆ. ತಮಗೆ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಕೊಡಲಿ ಮತ್ತು ಬಡಿಗೆಗಳಿಂದ ಹೊಡೆದು ಗಾಯಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 243/2017 341, 323, 324, 504, 307 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 244/2017 ಕಲಂಃ 279, 304(ಎ) ಐಪಿಸಿ;- ದಿನಾಂಕ: 08-08-2017 ರಂದು 1-30 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀ ಮಲ್ಲಪ್ಪ ತಂದೆ ಬಾಲಪ್ಪ ಚಂದನಕೇರಿ ವಯಾ:70 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಬಾಧ್ಯಾಪೂರ ಇವರು ಠಾಣೆಗೆ ಬಂದು ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ನನ್ನ ಮಗಳಾದ ಸಿದ್ದಮ್ಮ ಇವಳಿಗೆ ನಮ್ಮ ಗ್ರಾಮದ ಸಂಗಪ್ಪ ತಂದೆ ಬಸಪ್ಪ ಡಿಗ್ಗಿ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಅವಳಿಗೆ ಮೂವರು ಗಂಡು ಮಕ್ಕಳು ಮೂವರು ಹೆಣ್ಣು ಮಕ್ಕಳಿರುತ್ತಾರೆ, ಅಳಿಯನಾದ ಸಂಗಪ್ಪ ಈತನು ಸುಮಾರು 6 ವರ್ಷಗಳ ಹಿಂದೆ ತೀರಿಕೊಂಡಿದ್ದು ಮಗಳಾದ ಸಿದ್ದಮ್ಮ ಹಾಗೂ ಅವರ ಮಕ್ಕಳು ನಮ್ಮೊಂದಿಗೆ ವಾಸವಾಗಿದ್ದು ಇರುತ್ತದೆ.ಹೀಗಿದ್ದು ದಿನಾಂಕ: 03-08-2017 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಮಗಳಾದ ಸಿದ್ದಮ್ಮ ಇವಳ ಎರಡನೆಯ ಮಗನಾದ ಬಾಲಪ್ಪ ತಂದೆ ಸಂಗಪ್ಪ ಡಿಗ್ಗಿ ವಯಾ: 28 ವರ್ಷ ಉ:ಒಕ್ಕಲುತನ ಈತನು ಅವರ ಮಾವನಾದ ಶಿವರಾಜ ತಂದೆ ಮಲ್ಲಪ್ಪ ಜಾಲಳ್ಳಿ ಇವರ ಮೊಟಾರ ಸೈಕಲ್ ನಂಬರ ಕೆಎ-33, ಎ-3090 ನೇದ್ದನ್ನು ತಗೆದುಕೊಂಡು ಹೋಲಕ್ಕೆ ಹೋಗುವ ಕುರಿತು 7-30 ಪಿ.ಎಮ್. ಸುಮಾರಿಗೆ ಬಾಧ್ಯಾಪೂರ-ಗೋಗಿ ಮುಖ್ಯ ರಸ್ತೆಯ ಬಾಧ್ಯಾಪೂರ ಕ್ರಾಸ ಹತ್ತಿರ ಹೋಗುತ್ತಿರುವಾಗ ಮೊಟಾರ ಸೈಕಲ್ ಸ್ಕಿಡ್ಡಾಗಿ ಬಿದ್ದು ಬಾಲಪ್ಪ ಈತನ ತಲೆಗೆ ಭಾರಿ ರಕ್ತಗಾಯವಾಗಿ ಕೆಳಗೆ ಬಿದ್ದಾಗ ಅದೆ ರಸ್ತೆಯ ಮುಖಾಂತರ ಹೊಲದಿಂದ ಊರಿಗೆ ಬರುತ್ತಿದ್ದ ನಮ್ಮೂರ ಮಲ್ಲಪ್ಪ ತಂದೆ ಹಣಮಂತ ಟಣಕೇದಾರ, ಕೃಷ್ಣಾ ತಂದೆ ಹಣಮಂತ್ರಾಯ ಹಾವಿನ ಇವರು ಘಟನೆಯನ್ನು ಕಂಡು ಮಗಳಾದ ಸಿದ್ದಮ್ಮ ಇವಳಿಗೆ ವಿಷಯ ತಿಳಿಸಿದಾಗ ನಾನು ಮಗಳಾದ ಸಿದ್ದಮ್ಮ ಮೊಮ್ಮಗನಾದ ಹಣಮಂತ್ರಾಯ ಮೂವರು ಒಂದು ಖಾಸಗಿ ವಾಹನದಲ್ಲಿ ಘಟನಾ ಸ್ಥಳಕ್ಕೆ ಹೋಗಿ ಗಾಯಗೊಂಡ ಬಾಲಪ್ಪ ಈತನನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೂರಪೂರಕ್ಕೆ ಬಂದು ಉಪಚಾರ ಮಾಡಿಕೊಂಡು ಹೆಚ್ಚಿನ ಉಪಚಾರ ಕುರಿತು ಅಂದೆ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಇಂದು ದಿನಾಂಕ:08-08-2017 ರಂದು 8-30 ಎ.ಎಂ.ಸುಮಾರಿಗೆ ಮೊಮ್ಮಗನಾದ ಬಾಲಪ್ಪ ಈತನು ಉಪಚಾರ ಪಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ. ಸದರಿ ಘಟನೆಯು ಬಾಲಪ್ಪ ಈತನು ತಾನು ನಡೆಸುತ್ತಿದ್ದ ಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಮೊಟಾರ ಸೈಕಲ್ ಸ್ಕಿಡ್ಡಾಗಿ ಬಿದ್ದಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಉಪಚಾರ ಫಲಕಾರಿಯಾಗದೆ ಮೃತ ಪಟ್ಟಿದ್ದು ಇರುತ್ತದೆ. ಬಾಲಪ್ಪ ಈತನಿಗೆ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ನಮಗೆ ಏನು ತೋಚದೆ ಇರುವದರಿಂದ ಈ ದಿನ ತಡವಾಗಿ ಬಂದು ದೂರು ನಿಡಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

No comments:
Post a Comment