Police Bhavan Kalaburagi

Police Bhavan Kalaburagi

Tuesday, September 19, 2017

KALABURAGI DISTRICT REPORTED CRIMES

ಕಳವು ಪ್ರಕರಣ :
ಅಫಜಲಪೂರ ಠಾಣೆ :  ಶ್ರೀ ಅಮೋಗಸಿದ್ದ ತಂದೆ ಭೂತಾಳಿ ಪೂಜಾರಿ ಸಾ|| ಮಯೂರ ತಾ|| ಜೇವರ್ಗಿ ಹಾ|| || ಮಣೂರ ಇವರು ಅಶೋಕ ತಂದೆ ಬಾಲಯ್ಯ ಗುತ್ತೇದಾರ ಸಾ|| ಕಲಬುರಗಿ ಇವರ ಒಡೆತನದ ವೈನಶಾಪದಲ್ಲಿ ಮ್ಯಾನೇಜರ ಅಂತ ಕೆಲಸ ಮಾಡಿಕೊಂಡು ವಾಸವಾಗಿದ್ದು ಸದರಿ ವೈನಶಾಪದಲ್ಲಿ ನನ್ನ ಜೋತೆಗೆ 1) ಮಡಿವಾಳಪ್ಪ ತಂದೆ ಚಂದ್ರಶಾ ಕುಂಬಾರ ಸಾ|| ಚಿಂಚೋಳಿ 2) ಸಾಯಬಣ್ಣ ತಂದೆ ಹಸನಪ್ಪ ರೂಪನೂರ ಸಾ|| ರಾಮನಗರ 3) ಸಿದ್ರಾಮ ತಂದೆ ಭೀಮಶಾ ದಿಕ್ಸಂಗಾ ಸಾ|| ಮಾಶಾಳ ಇವರು ಸಹ ಕೆಲಸ ಮಾಡುತ್ತಾರೆ, ನಾವು ನಾಲ್ಕು ಜನರು ದಿನಾಲು ರಾತ್ರಿ 11 ಗಂಟೆಯ ಒರೆಗೆ ವೈನಶಾಪದಲ್ಲಿ ಕೆಲಸ ಮಾಡಿ, ವೈನಶಾಪ್ ಬಂದ ಮಾಡಿ ನಂತರ ವೈನಶಾಪ ಒಳಗಡೆನೆ ಇರುವ ಇನ್ನೊಂದು ಕೋಣೆಯಲ್ಲಿ ಮಲಗುತ್ತೇವೆ.  ದಿನಾಂಕ 18-09-2017 ರಂದು ಬೆಳಿಗ್ಗೆ 06:00 ಗಂಟೆಗೆ ಎದ್ದು ಹೊರಗಡೆ ಹೋಗಲು ವೈನಶಾಪ ಸೆಟ್ಟರ ತಗೆಯಲು ಹೋದಾಗ, ವೈನಶಾಪ ಶೇಟ್ಟರ ಮದ್ಯದಲ್ಲಿ ಕೆಳಭಾಗ ಬೆಂಡ್ ಮಾಡಿ ಹೋಗಿ ಬರುವಂತೆ ದಾರಿ ಮಾಡಿದ್ದು ಕಂಡು ಗಾಬರಿಯಾಗಿ ನಾನು ಮೂರು ದಿನ ವ್ಯಾಪಾರ ಮಾಡಿ ಡ್ರಾದಲ್ಲಿ ಇಟ್ಟಿದ್ದ ಒಟ್ಟು 2 ಲಕ್ಷ 16 ಸಾವಿರ ರೂಪಾಯಿ ಹಣವನ್ನು ಚೆಕ್ ಮಾಡಿ ನೋಡಲಾಗಿ ಹಣ ಇರಲಿಲ್ಲ ಹಣವನ್ನು ಯಾರೊ ಕಳ್ಳತನ ಮಾಡಿಕೊಂಡು ಹೋಗಿದ್ದರು, ನಂತರ ನಾನು ಸದರಿ ವಿಷಯವನ್ನು ವೈನಶಾಪ ಮಾಲಿಕರಾದ ಅಶೋಕ ಗುತ್ತಾದಾರ ರವರಿಗೆ ಪೋನ ಮಾಡಿ ತಿಳಿಸಿದೆನು, ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಮ್ಮ ಮಾಲಿಕರು ಬಂದ ನಂತರ ವೈನಶಾಪದಲ್ಲಿ ಕೂಡಿಸಿದ ಸಿಸಿ ಕ್ಯಾಮಾರವನ್ನು ಪರಿಶೀಲಿಸಿ ನೋಡಲಾಗಿ, ಮದ್ಯರಾತ್ರಿ 01:00 ಗಂಟೆಯಿಂದ 02:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೊ ಅಪರಿಚಿತ ಮೂರು ಜನರು ವೈನಶಾಪ ಅಂಗಡಿಯ ಶೇಟ್ಟರ ಎತ್ತಿ (ಮುರಿದು), ಡ್ರಾದಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೊಗುವುದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಶೇಖಪ್ಪ ಹಾಗೂ ಆಪಾದಿತರಾದ ಶಿವಣ್ಣ ಸಿತನೂರ, ಭೀಮಣ್ಣಾ ಸಿತನೂರ ಹುಣಸಪ್ಪಾ ಸೀತನೂರ ಇವರುಗಳಿಗೂ ಹೊಲಕ್ಕೆ ಹೊಗುವ ದಾರಿ ಸಂಬಂಧ ತಂಟೆ ತಕರಾರು ನಡೆಯುತ್ತಾ ಬಂದಿದ್ದು,  ದಿನಾಂಕ 17/09/2017 ರಂದು ಫಿರ್ಯಾದಿದಾ ರು  ತಮ್ಮ ಹೊಲದಲ್ಲಿದ್ದಾಗ, ಶಿವಣ್ಣನ ಹೆಂಡತಿ ಮಲ್ಲಮ್ಮ, ಭಿಮಣ್ಣನ ಹೆಂಡತಿ ಮಹಾದೇವಿ, ಹುಣಚಪ್ಪನ ಹೆಂಡತಿ ಶಾಂತಮ್ಮ ಇವರುಗಳು ತಮ್ಮ ಹೊಲದಿಂದ ಮನೆಗೆ ಬರುತ್ತಿರುವಾಗ ಫಿರ್ಯಾದಿದಾರರ ಸದರಿಯವರಿಗೆ ನಮಗೆ ಹೊಲಕ್ಕೆ ಹೊಗಲು ಅಡ್ಡಿಪಡಿಸುತ್ತಿರಿ ಇಲ್ಲಿಂದ ಹೊಗಬೇಡಿ ಅಂದಿದ್ದಕ್ಕೆ ಅವರುಗಳು ಫಿರ್ಯಾದಿಗೆ ಹಾಟ್ಯಾ ನೀನು ನಮಗೆ ಏನು ಕೇಳುತ್ತಿ ಅಂತಾ ಬೈಯುತ್ತಿದ್ದಾಗ ಕಾಂತಮ್ಮಳ ಪೋನಿಗೆ ಆಕೆಯ ಭಾವ ಶಿವಣ್ಣ ಈತನು ಪೋನ ಮಾಡಿ ಶೇಕ್ಯಾನಿಗೆ ಸರಿಯಾಗಿ ಮೇತ್ತಗೆ ಮಾಡಿ ಹೊಗ್ರಿ ಎಂದು ಪ್ರಚೋದನೆ ನೀಡಿದ್ದರಿಂದ ಫಿರ್ಯಾದಿದಾರರಿಗೆ ಮಹಾದೇವಿ ಮತ್ತು ಕಾಂತಮ್ಮ ಇವರು ನನಗೆ ಒತ್ತಿ ಹಿಡಿದು ನೇಲಕ್ಕೆ ಹಾಕಿದಾಗ ಮಲ್ಲಮ್ಮ ಇವಳು ಎಡಗೈ ತೊರಬೇರಳಿಗೆ ಬಡಿಗೆಯಿಂದ ಹೊಡೆದಿದ್ದು, ಆಗ ಫಿರ್ಯಾದಿದಾರರು ಚಿರಾಡುತ್ತಿದ್ದಾಗ ಶಕೀಲ ತಂದೆ ಮಶಾಕ ಮುಲ್ಲಾ ಇವರು ಬಂದು ಜಗಳ ಬೀಡಿಸಿದ್ದು, ಸದರಿಯವರು ಇನ್ನೂ ಮುಂದೆ ಈ ದಾರಿಯಲ್ಲಿ ಹೊಗಲು ಅಡ್ಡಿಪಡಿಸಿದರೆ ನಿನಗೆ ಖಲಾಸ ಮಾಡುತ್ಥೇವೆ ನಂತರ ಫಿರ್ಯಾದಿದಾರರ ಮನೆಗೆ ಬಂದಾಗ  ಆರೋಪಿತರಾದ ಮಹಾದೇವಿ ಗಂಡ ಭೀಮಣ್ಣ, ಶಿವಲೀಲಾ ಗಂಡ ನಿಂಗಪ್ಪ, ಶರಣಮ್ಮ ಗಂಡ ಚಂದ್ರಮಪ್ಪ, ಇವರು ಬಂದು ಫಿರ್ಯಾದಿದಾರರ ಹೆಂಡತಿಯಾದ ಶರಣಮ್ಮಳಿಗೆ ರಂಡಿ ನಮಗೆ ದಾರಿ ಕೊಡಲ್ಲ ಎಂದು ಶಿವಲೀಲಾ ಇವಳು ಕೈಯಿಂದ ಎಡಗಣ್ಣಿನ ಮೇಲೆ ಹೊಡೆದಳು, ಮಹಾದೇವಿ ಇವಳು ಫಿರ್ಯಾದಿಗೆ ಸರಿಯಾಗಿ ಮೇತ್ತಗೆ ಮಾಡುತ್ತೇನೆಂದು ಕೈಯಿಂದ ಹೊಡೆದು ನೇಲಕ್ಕೆ ಹಾಕಿದಾಗ ಮಹಾದೇವಪ್ಪ ತಂದೆ ಮಾಸಣ್ಣ ಇವರು ಬೀಡಿಸಿಕೊಂಡಿರುತ್ತಾರೆ,  ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀಮತಿ ಕಾಂತಮ್ಮ ಗಂಡ ಹುಣಚಪ್ಪಾ ಸೀತನೂರ ಸಾ; ಫರಹತಾಬಾದ ತಾ: ಜಿ: ಕಲಬುರಗಿ ರವರ ಗಂಡನಿಗೆ 4 ಜನ ಅಣ್ಣ ತಮ್ಮಂದಿರಿದ್ದು ಎಲ್ಲರೂ ಕೂಡಿಯೇ ಇರುತ್ತವೆ  ನಮ್ಮ ಹೊಲ ಸರ್ವೇ ನಂ 13 ತಿಳಗೋಳ ಸೀಮಾಂತರದಲ್ಲಿ  ಇರುತ್ತದೆ. ನಾವು ನಮ್ಮ ಹೊಲಗಳಿಗೆ ಹೋಗಬೇಕಾದರೆ ಶೇಖಪ್ಪಾ ಪೂಜಾರಿ  ರವರ ಸರಡಗಿ ಸೀಮೆಯ ಹೊಲ ಸರ್ವೆ ನಂ 62 ರ ಮುಖಾಂತರ ದಾಟಿ ಹೋಗುತ್ತೇವೆ ನಮ್ಮ ಹೊಲ ಸರ್ವೇ ನಂ 13 ದಾಟಿ ಶೇಕಪ್ಪಾ  ಪೂಜಾರಿ ತನ್ನ ಹೊಲ ಸರ್ವೇ ನಂ 14 ರಕ್ಕೆ ಹೋಗಬೇಕಾಗುತ್ತದೆ ಹೊಲಕ್ಕೆ ಹೋಗಿ ಬರುವ ದಾರಿಯ ಸಂಬಂಧ ಸುಮಾರು 2 ವರ್ಷದಿಂದ ತಕರಾರು ಜಗಳ ನಡೆಯುತ್ತಾ ಬಂದಿರುತ್ತದೆ.  ಹೀಗಿದ್ದು ದಿನಾಂಕ 17/09/17 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ  ನಾನು ನಮ್ಮ ನೆಗಣಿಯರಾದ ಮಲ್ಲಮ್ಮ ಗಂಡ ಶಿವಣ್ಣಾ, ಮಹಾದೇವಿ ಗಂಡ ಭೀಮಣ್ಣಾ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ  ನಾವು ಶೇಖಪ್ಪಾ  ಪೂಜಾರಿ ಹೊಲದ ಮುಖಾಂತರ ದಾರಿಯಿಂದ ಬರುವಾಗ ಅಲ್ಲಿ ಶೇಖಪ್ಪಾ ಪೂಜಾರಿ ಹಾಗೂ ಅವನ ಮಗ ಭೀಮಾಶಂಕರ ಇದ್ದು ಸದರಿಯವರು  ನಮಗೆ ತಡೆದು ಇಲ್ಲಿಂದ  ನಿಮಗೆ ದಾರಿ ಇಲ್ಲಾ ಏಕೆ ಹೋಗುತ್ತೀರಿ ಎಂದು ತಡೆದಾಗ ನಾವು ಅದಕ್ಕೆ ನಮ್ಮ ಹೊಲದಿಂದ ನೀನು ಹೋಗುತ್ತೀ ಎಂದಿದಕ್ಕೆ ಶೇಖಪ್ಪನು  ನಿಮ್ಮ ರಂಡಿರದು ಎಷ್ಟು ಜಿದ್ದು ಹೋಗಬೇಡ ಎಂದರು ಹೋಗುತ್ತೀರಿ ಎಂದು ಶೇಖಪ್ಪನು ತನ್ನ ಕೈಯಲ್ಲಿದ ಕೊಡಲಿ ಕಾವಿನಿಂದ ನನ್ನ ಎಡಗಾಲಿನ ಮೇಲೆ ಬಲಗೈ ರಟ್ಟೆಗೆ ಹೊಡೆದಾಗ ನಾನು ನೆಲಕ್ಕೆ ಬಿದ್ದೇನು, ಅವನ ಮಗ ಭೀಮಾಶಂಕರ ಕೈಯಿಂದ ಮುಖದ ಮೇಲೆ ಹೊಡೆದು ಈ ರಂಡಿದು ಬಹಳವಾಗಿದೆ ಎಂದು ಕೂದಲು ಹಿಡಿದು  ಎಳೆದಾಡಿ ಮಾನಬಂಗ ಮಾಡಿರುತ್ತಾನೆ ಆಗ ನಮ್ಮ ನೆಗೆಣಿ ಮಲ್ಲಮ್ಮಳಿಗೆ ಶೇಖಪ್ಪನು ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾನೆ. ಇನ್ನೊಬ್ಬ ನೆಗೆಣಿ ಮಹಾದೇವಿ ಗಂಡ ಭೀಮಣ್ಣಾ ಇವಳು ಓಡಿಸಿದ್ದು ಸದರ ಘಟನೆ ಸಿದ್ದಮ್ಮ ಗಂಡ ಸೈಬಣ್ಣಾ ನೋಡಿದ್ದು ಇದೆ ಸದರಿಯವರು ಇವಳನ್ನು ಮುಂದೆ ಈ ದಾರಿಯಿಂದ ಹೋದರೆ ನಿಮಗೆ ಜೀವ ಸಹಿತ ಇಡುವುದಿಲ್ಲಾ ಅಂತಾ ಜೀವದಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸೂರ್ಯಕಾಂತ ತಂದೆ ಭೀಮಣ್ಣ ವಾರಿಕ  ಸಾ:ಕಮಲಾಪೂರ ತಾ:ಜಿ:ಕಲಬುರಗಿ ಇವರು. ದಿನಾಂಕ:16.-09-2017 ರಂದು ಸಾಯಂಕಾಲ ನಾನು ನನ್ನ ಮನೆಯ ಮುಂದಗಡೆ ಕುಳಿತಿದ್ದು ಅದೇ ವೇಳೆಗೆ ನನ್ನ ತಮ್ಮ ಹಣಮಂತ ವಾರಿಕ ಈತನು ಕುಡಿದ ನಶೆಯಲ್ಲಿ ಮನೆಯ ಕಡೆಗೆ ಬರುತ್ತಿದ್ದಾಗ ಅದನ್ನು ನೋಡಿ ನಾನು ಮನೆಯ ಒಳಗೆ ಹೋಗುತ್ತಿದ್ದಾಗ ಹಣಮಂತನು ನನಗೆ ಸೂಳೆ ಮಗನೆ ಬಾರೋ ಹೆಂಗಸ್ಯಾನಂಗ ಒಳಗ ಹೋಗ್ತಿ ಬಾರೋ ಅಂತಾ ಅಂದಿದ್ದು ಆಗ ನಾನು ಹೋರಗಡೆ ಬಂದು ತುಳಸಿ ಕಟ್ಟಿಯ ಹತ್ತೀರ ಕುಂತಾಗ ಅದೇ ವೇಳೆಗೆ ಮಹಾದೇವಿ ವಾರಿಕ ಇವಳು ಹೋರಗಡೆ ಬಂದು ನೀವು 3 ತಿಂಗಳಲ್ಲಿ ನಿಮ್ಮ ಮನೆಯವರೆಲ್ಲರೂ ಸಾಯಿತಿರಿ ಅಂತಾ ನನಗೆ ಬೈಯುತ್ತಿದ್ದಾಗ ನಾನು ಅವಳಿಗೆ ಅಮ್ಮಾ ನೀವು ಸುಮ್ಮನೆ ನಮಗ ಹೋಲಸಾಗಿ ಬೈಯುವುದು ಸರಿಯಲ್ಲ ಅಂತಾ ಅಂದಾಗ ಸಚಿನ ವಾರಿಕ ಈತನು ಓಡಿ ಬಂದವನೆ ನನ್ನ ಕುತ್ತಿಗೆ ಹಿಡಿದು ತುಳಸಿ ಕಟ್ಟಿಗೆ ಹೋಡೆದು ನನ್ನ ತಲೆಯ ಹಿಂಭಾಗಕ್ಕೆ ರಕ್ತ ಮತ್ತು ಗುಪ್ತಗಾಯ ಮಾಡಿದ್ದು ನಾನು ಒಮ್ಮಿಲೆ ಚಿರಿ ನೆಲದ ಮೇಲೆ ಬಿದ್ದೇನು ನಾನು ಚಿರಿದ ಸಪ್ಪಳ ಕೇಳಿ ಒಳಗಿನಿಂದ ನನ್ನ ಹೆಂಡತಿ ಶರಣಮ್ಮ ವಾರಿಕ ಇವಳು ಹೋರಗಡೆ ಬಂದಾಗ ಮಹಾದೇವಿ ಇವಳು ನನ್ನ ಹೆಂಡತಿಗೆ ಹಿಡಿದು ನಿಲ್ಲಿಸಿ ಅವಳ ತಲೆಯ ಮೇಲೆ ಚಪ್ಪಲಿಯಿಂದ 4-5 ಸಾರಿ ರಪರಪನೆ ಹೋಡೆದಳು ಆಗ ನಾನು ಮತ್ತು ನನ್ನ ಹೆಂಡತಿ ಚಿರಾಡುತ್ತಿದ್ದಾಗ ನಮಗೆ ಹೋಡೆಯುತ್ತಿದ್ದನ್ನು ನೊಡುತ್ತಿದ್ದ ಕಾಶಿನಾಥ ಉಪ್ಪಾರ ಮತ್ತು ಶಂಕ್ರೇಮ್ಮ ಬಂಡಿವಡ್ಡರ ಇವರು ಬಂದು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ರೇವೂರ ಠಾಣೆ : ದಿನಾಂಕ 17/09/2017 ರಂದು ಸಾಯಂಕಾಲ ನನ್ನ ಮಗ ಜಗಧೀಶನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಸುನೀಲ ತಂದೆ ಶ್ರೀಮಂತ ನಿಂಬಾಳ ಎಂಬಾತನು ಬಂದು ನನ್ನ ಮಗ ಜಗಧೀಶನಿಗೆ ಟ್ರ್ಯಾಕ್ಟರದಲ್ಲಿ ಉಸುಕು(ಮರಳು) ತುಂಬುವ ಕೆಲಸಕ್ಕೆ ಅಂತ ಕರೆದುಕೊಂಡು ಹೋಗಿರುತ್ತಾನೆ. ನನ್ನ ಮಗ ರಾತ್ರಿಯಾದರೂ ಮನೆಗೆ ಬರದ ಕಾರಣ ನಾನು ನಿಂಬಾಳದವರ ಮನೆಗೆ ಕೇಳಲು ಹೋದಾಗ ನನ್ನ ಮಗನಿಗೆ ಎಕ್ಸಿಡೆಂಟ ಆಗಿರುತ್ತದೆ ಅಂತಾ ಗೊತ್ತಾಯಿತು. ದಿನಾಂಕ: 18/09/2017 ರಂದು ಮದ್ಯರಾತ್ರಿ 03-00 ಗಂಟೆಯ ಸುಮಾರಿಗೆ ನನ್ನ ಮಗನಿಗೆ ಅಫಜಲಪೂರ ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆ ಅಂತ ಗೊತ್ತಾಗಿದ್ದರಿಂದ ನಾನು ಸರಕಾರಿ ಆಸ್ಪತ್ರೆಗೆ ಹೋದಾಗ ನನ್ನ ಮಗ ಮೃತಪಟ್ಟಿ ಬಗ್ಗೆ ಗೊತ್ತಾಗಿರುತ್ತದೆ. ನಂತರ ನನ್ನ ತಮ್ಮನಾದ ಲಕ್ಷ್ಮಿಪುತ್ರ ಎಂಬಾತನಿಂದ ಕೇಳಿ ಗೊತ್ತಾಗಿದ್ದೇನೆಂದರ ನಿನ್ನೆ ದಿನಾಂಕ: 17/09/2017 ರಂದು ರಾತ್ರಿ ಭೋಗನಳ್ಳಿ ಗ್ರಾಮಕ್ಕೆ ಹೋಗುವ ರೋಡಿಗೆ ಮಲ್ಲು ಖೇಮಜಿ ರವರ ಹೋಲದ ಹತ್ತಿರ ಜಗಧೀಶನು ಸುನೀಲ ನಿಂಬಾಳ ರವರ ಟ್ರ್ಯಾಕ್ಟರದಲ್ಲಿ ಕುಳಿತು ಹೋಗುತ್ತಿದ್ದಾಗ ಅದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡಿಸಿ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಜಗಧೀಶನು ಟ್ರ್ಯಾಕ್ಟರನಿಂದ ಕೆಳಗೆ ಬಿದ್ದಿದ್ದು ಟ್ರ್ಯಾಕ್ಟರಗಾಲಿ ಮುಖ ಮತ್ತು ತಲೆಯ ಮೇಲೆ ಹಾಯ್ದು ಹೋಗಿದ್ದರಿಂದ ತಲೆ ಹಾಗೂ ಮುಖಕ್ಕೆ ಭಾರಿ ರಕ್ತಗಾಯವಾಗಿ ಮೌಂಸ ಖಂಡಗಳು ಹೊರ ಬಂದು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಗೊಟತ್ತಾಗಿದ್ದು ತನ್ನ ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೆಲೆ ಬ್ರೇಕ ಹಾಕಿ ನನ್ನ ಮಗನ ಸಾವಿಗೆ ಕಾರಣನಾದ ಸುನೀಲ ನಿಂಬಾಳ ರವರ ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ನೀಲಮ್ಮ ಗಂಡ ಭಾಗಪ್ಪ  ಕಡಜಿನವರ ಸಾ: ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: