Police Bhavan Kalaburagi

Police Bhavan Kalaburagi

Tuesday, September 26, 2017

KALABURAGI DISTRICT REPORTED CRIMES

                                                                             
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶೇಖ ಜಾವೀದ ತಂದೆ ನೂರ ಅಹ್ಮೇದ ಸಾ: ಶಾಂತ ನಗರ ಭಂಕೂರ ಇವರ ತಂದೆ  ದಿನಾಂಕ: 24/09/2017 ರಂದು ಮುಂಜಾನೆ ತಮ್ಮ ಹೊಂಡಾ ಆಕ್ಟೀವ ಮೊಟಾರ ಸೈಕಲ ನಂಬರ ಕೆ.ಎ. 03 ಹೆಚ್.ವಿ 9969  ತೆಗೆದುಕೊಂಡು ವಾಡಿ ಕ್ರಾಸಗೆ ನಾಷ್ಟ ಮಾಡಲು ಹೋಗುತ್ತಿದ್ದಾಗ ವಾಡಿ ಕ್ರಾಸ ಹತ್ತಿರ ರೋಡಿನಲ್ಲಿ  ದಿನಾಂಕ: 24/09/25017 ರಂದು ಮುಂಜಾನೆ 10-00 ಗಂಟೆಗೆ ಭಂಕೂರ ಕ್ರಾಸ ಕಡೆಯಿಂದ ಟಂ ಟಂ ಅಟೋ ನಂಬರ ಕೆ.ಎ. 32 ಸಿ 1859 ನೇದ್ದರ ಚಾಲಕ ತನ್ನ ಟಂ ಟಂ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆ ನಡೆಯಿಸಿಕೊಂಡು ಹೋಗುತ್ತಿದ್ದ ಹೊಂಡಾ ಆಕ್ಟೀವಾ ಮೊಟಾರ ಸೈಕಲಕ್ಕೆ ಹಿಂದಿನಿ ಡಿಕ್ಕಿ ಪಡಿಸಿದರಿಂದ ನಮ್ಮ ತಂದೆ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ತಲೆಗೆ ಒಳ ಪೆಟ್ಟು ಮತ್ತು ಹಣೆಗೆ ಹಾಗೂ ಬಲಗಾಲಿಗೆ , ಎಡಗೈಗೆ ತರುಚಿದ ರಕ್ತಗಾಯಾವಾಗಿ ಬೇಹುಷಾ ಆಗಿ ಬಿದ್ದರಿಂದ ನಮ್ಮ ತಂದೆಗೆ ಉಪಚಾರ ಕುರಿತು ಸರಕಾರಿ  ಆಸ್ಪತ್ರೆ ಶಹಾಬಾದಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 25-09-2017 ರಂದು ಬೆಳಗಿನಜಾವ ನಮ್ಮ ತಂದೆ ನೂರ ಅಹ್ಮೇದ ಇವರು ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಭಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯಮಾಡಿಕೊಂಡ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಕಸ್ತೂರಬಾಯಿ ಗಂಡ ಬಸಂತ್ರಾಯ ಸಲದಳ್ಳಿ ಸಾ|| ಗಾಂದಿನಗರ ಮಳ್ಳಿ ತಾ|| ಜೇವರ್ಗಿ ರವರದು ನಮ್ಮೂರ ಸಿಮಾಂತರದಲ್ಲಿ ಸರ್ವೆ ನಂ 222 ನೇದ್ದರಲ್ಲಿ 5 ಎಕರೆ 16 ಗುಂಟೆ ಜಮೀನು ನನ್ನ ಹೆಸರಿಗೆ ಇರುತ್ತದೆ, ನನ್ನ ಹಿರಿ ಮಗ ಬಾಬುಗೌಡ ಈತನು ಮಾನಸಿಕ ಅಸ್ವಸ್ಥನಿದ್ದು, ನಮ್ಮ ಹೊಲವನ್ನು ನನ್ನ ಕಿರಿ ಮಗ ಶಂಕರಗೌಡ ಈತನು ನೋಡಿಕೊಳ್ಳುತ್ತಿರುತ್ತಾನೆ, ಹೊಲದ ಸಲುವಾಗಿ ನನ್ನ ಮಗ ಮಳ್ಳಿ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಸಾಲ ಪಡೆದುಕೊಂಡಿರುತ್ತಾನೆ, ಅದರಂತೆ ಖಾಸಗಿಯಾಗಿ ಸುಮಾರು 4 ಲಕ್ಷ ಸಾಲ ಮಾಡಿಕೊಂಡಿದ್ದು ಇರುತ್ತದೆ, ನನ್ನ ಮಗ ಆಗಾಗ ನಮಗೆ ಸಾಲ ಬಹಳ ಆಗಿದೆ ಅದನ್ನು ತೀರಿಸುವುದು ಹೇಗೆ, ಹೊಲದಲ್ಲಿ ಬೆಳೆನು ಸರಿಯಾಗಿ ಬೆಳೆಯುತ್ತಿಲ್ಲಾ, ಉರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಇರುವುದಕ್ಕಿಂತಾ ಸಾಯುವದೇ ಮೇಲು ಅಂತಾ ಹೇಳುತ್ತಾ ಚಿಂತೆ ಮಾಡುತ್ತಿದ್ದನು, ಆಗ ನಾವು ಅವನಿಗೆ ಸಮಾಧಾನ ಹೇಳುತ್ತೇದ್ದೇವು, ನಮ್ಮ ಮನೆ ಎರಡು ಅಂತಸ್ತಿನದು ಇರುತ್ತದೆ, ನನ್ನ ಮಗ ಮತ್ತು ಸೊಸೆ ಮೇಲಿರುವ ಕೋಣೆಲ್ಲಿ ಮಲಗುತ್ತಿದ್ದರು, ದಿನಾಂಕ 25-09-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಸೊಸೆ ಇಬ್ಬರು ಕೂಡಿ ಮೇಲೆ ಹೋಗಿ ನೋಡಿದಾಗ ನನ್ನ ಮಗ ಶಂಕರಗೌಡ ಈತನು ನೇಣು ಹಾಕಿ ಕೋಂಡಿದ್ದನು, ನಂತರ ನಾನು ಚಿರಾಡುತ್ತಿದ್ದಾಗ ನಮ್ಮ ಮನೆ ಹತ್ತಿರ ಇದ್ದ ಗುತ್ತಪ್ಪಗೌಡ ಸಾಸನೂ, ಅಪ್ಪಣ್ಣ ಹಾದಿಮನಿ ರವರು ಬಂದು ನನ್ನ ಮಗನಿಗೆ ಕೆಳಗೆ ಇಳಿಸಿ ನೋಡಿದಾಗ ನನ್ನ ಮಗ ಮೃತ ಪಟ್ಟಿದ್ದನು,          ನನ್ನ ಮಗ ಹೊಲದ ಸಲುವಾಗಿ ಮಳ್ಳಿ ಗ್ರಾಮದ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಮತ್ತು ಖಾಸಗಿಯಾದ ಸುಮಾರು 4,00,000/- ರೂ ಸಾಲ ಮಾಡಿಕೊಂಡಿದ್ದು, ಈ ಸಾಲ ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ಇಂದು ದಿನಾಂಕ 25-09-2017 ರಂದು ಬೆಳಿಗ್ಗೆ 06;30 ಗಂಟೆಯಿಂದ 07;00 ಗಂಟೆ ಮದ್ಯದಲ್ಲಿ ನಮ್ಮ ಮನೆಯ ಮೇಲಿನ ಕೋಣೆಯಲ್ಲಿ ಪೈಪಿನ ಅಡ್ಡಿಗೆ ನೂಲಿನ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 25/09/2017 ರಂದು ಭಂಕೂರ ಸೀಮಾಂತರದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನಂದ ದಾಬಾ ಹತ್ತಿರ ಭಂಕೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಲಾರಿ ನಂಬರ ಕೆ.ಎ. 34 9330 ಬರುತ್ತಿದ್ದು ಅದರ ಚಾಲಕ ಮತ್ತು ಅದರಲ್ಲಿದ್ದ ಇನ್ನೋಬ್ಬ ವ್ಯಕ್ತಿ ಪೊಲೀಸ ಜೀಪ ನೋಡಿ ಟಿಪ್ಪರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟಿಪ್ಪರ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿ ಟಿಪ್ಪರ ಲಾರಿ ಚಾಲಕ ಮತ್ತು ಮಾಲಿಕ ಸರಕಾರಕ್ಕೆ ಯಾವುದೆ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿನಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿಯವರ ವಿರುದ್ದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಲ್ತಾಫ ಅನ್ವರ ಬೇಗ ತಂದೆ ಮಿರ್ಜಾ ರುಸ್ತುಮ ಬೇಗ ಸಾ : ಸಾದಿಕ ಕಾಲನಿ ಎಮ್.ಎಸ್.ಕೆ. ಮಿಲ್ಲ ರೋಡ ಕಲಬುರಗಿ ರವರು ಮತ್ತು ಆತನ ಚಾಲಕ  ಮಶಾಕ ಇಬ್ಬರು   ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ನಮ್ಮ ಅಂಗಡಿ ಎದುರು ಇರುವ ರಸ್ತೆ ಬದಿಯಲ್ಲಿ ಚಾಲಕ ಮಶಾಕ ಇತನು ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158  ನೇದ್ದು ಲಾಕ ಮಾಡಿದ ನಂತರ ವಾಹನದ ಕೀಲಿ ಅಂಗಡಿಯಲ್ಲಿ ಇಟ್ಟು ಇಬ್ಬರು ಮನೆಗೆ ಹೋದೇವು.  ಮರುದಿನ ದಿನಾಂಕ 24-09-2017 ರಂದು ಬೆಳಿಗ್ಗೆ 09-00 ಗಂಟೆಗೆ ಅಂಗಡಿಗೆ ನಾನು ಮತ್ತು ಮಶಾಕ ಇಬ್ಬರು ಬಂದು ನೋಡಲಾಗಿ ಅಂಗಡಿಯ ಎದುರು ಇರುವ ರಸ್ತೆ ಬದಿಯಲ್ಲಿ ರಾತ್ರಿ ನಿಲ್ಲಿಸಿ ಹೋದ ನಮ್ಮ ಬುಲೋರೋ ವಾಹನ ಕಾಣಿಸಲಿಲ್ಲಾ. ಯಾರೋ ಕಳ್ಳರು ನಮ್ಮ ಬುಲೋರೋ ಪಿಕ್ಕಪ್ಪ ಗೂಡ್ಸ್ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಕಳ್ಳತವಾದ ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158 ವಿವರ ರೀತಿ ಇದೆ.  Chassi No. MA1ZN2GGA91D28894   Engine No. GG91D49527  Make BOLERO CAMPER DX2WD, Model -2009, Colour White , ಬಣ್ಣದ್ದು ಇರುತ್ತದೆ. ವಾಹನ ಕಿಮ್ಮತ್ತು ಅ:ಕಿ:  1,40,000/-  ರೂ. ಆಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: