ಅಪಘಾತ ಪ್ರಕರಣಗಳು :
ನರೋಣಾ
ಠಾಣೆ : ಶ್ರೀ.ಕಾಶಿನಾಥ ತಂದೆ ಮಾನಸಿಂಗ್ ಪವಾರ ಇವರ ತಮ್ಮನಾದ ಶಿವಾಜಿ ಇತನು ತನ್ನ ಉಪಯೋಗಕ್ಕಾಗಿ ಎರಡು ವರ್ಷಗಳ ಹಿಂದೆ ಹೀರೋ ಕಂಪನಿಯ ಮೋಟಾರ ಸೈಕಲ್ ನಂಬರ: ಕೆ.ಎ.32.ಇಸಿ.6831 ಖರೀದಿ ಮಾಡಿದ್ದು ದಿನಾಂಕ
26-09-2017 ರಂದು ಸಾಯಂಕಾಲ ನನ್ನ ತಮ್ಮನಾದ ಶಿವಾಜಿಯು ತನ್ನ ಮೋಟಾರ ಸೈಕಲ್ ನಂಬರ: ಕೆ.ಎ.32.ಇಸಿ.6831 ನೇದ್ದನ್ನು ತೆಗೆದುಕೊಂಡು ಕಲಬುರಗಿಯಲ್ಲಿ ಇರುವ ತನ್ನ ಮಕ್ಕಳಾದ ನೇಹಾ ವ: 08 ವರ್ಷ, ಹಾಗೂ ಚಂದ್ರಶೇಖರ ವ: 06 ವರ್ಷ, ಇವರುಗಳನ್ನು ಭೇಟಿಯಾಗಿ ಬರುತ್ತೇನೆ ಎಂದು ಹೇಳಿ ನಮ್ಮ ತಾಂಡಾದಿಂದ ಹೋಗಿರುತ್ತಾನೆ. ನಂತರ ಸಂಜೆ 7 ಗಂಟೆ 10 ನಿಮಿಷಕ್ಕೆ ಗುಳ್ಳೊಳ್ಳಿ ಗ್ರಾಮದ ಸಿದ್ದು ತಂದೆ ಕಾಶಿನಾಥ ಪಾಟೀಲ ಇವರು ನನಗೆ ಫೋನ ಮಾಡಿ ನನ್ನ ತಮ್ಮನಾದ ಶಿವಾಜಿಯು ಮೋಟಾರ ಸೈಕಲ್ ಮೇಲೆ ಕಲಬುರಗಿ ಕಡೆಗೆ ಹೋಗುವಾಗ ಲಾಡಚಿಂಚೋಳಿ ತಾಂಡಾ ಕ್ರಾಸ ದಾಟಿ ಲಾಡ ಚಿಂಚೋಳಿ ಕ್ರಾಸದ ಕಡೆಗೆ ಹೋಗುವಾಗ ತನ್ನ ಮೋಟಾರ ಸೈಕಲ್ ನಂ. ಕೆ.ಎ.32.ಇಸಿ.6831 ನೇದ್ದನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಮುಂದೆ ಹೋಗುತ್ತಿದ್ದ ಎತ್ತಿನ ಬಂಡೆಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಅವನ ಎಡಗೈ ಮುಂಗೈಗೆ ಭಾರಿ ಪೆಟ್ಟಾಗಿ ಮತ್ತು ತೆಲೆಗೆ ಹಾಗೂ ಎದೆಗೆ ಭಾರಿ ಒಳಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಎಂದು ತಿಳಿಸಿದ್ದ ಮೇರೆಗೆ ನಾನು ಮತ್ತು ನಮ್ಮ ತಾಂಡಾದ ವಿಜಯ ತಂದೆ ದೇಶು ಪವಾರ ಇಬ್ಬರೂ ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ತಮ್ಮನ್ನು ಭಾರಿ ಗಾಯಹೊಂದಿ ಮೃತ ಪಟ್ಟಿದ್ದು ನಿಜವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ :
ದಿನಾಂಕ:26/09/2017 ರಂದು ಕಲ್ಲು ಒಡೆಯುವ ಕೆಲಸಕ್ಕಾಗಿ ಜಿಡಗಾ ಗ್ರಾಮಕ್ಕೆ ಹೋಗಬೇಕೆಂದು ಶ್ರೀ ನಾಗೇಶ ತಂದೆ
ಕುಲಪ್ಪಾ ವಡ್ಡರ ಸಾ: ವಡ್ಡರ ಗಲ್ಲಿ ಆಳಂದ ಮತ್ತು
ಸುಭಾಷ ಇಬ್ಬರೂ ಕೂಡಿಕೊಂಡು ಸುಭಾಷ ಇತನ ಹೊಸ ನಂಬರ್ ಇಲ್ಲದ TVS XL ಮೋಟರ್
ಸೈಕಲ ಮೇಲೆ ಹೋಗುವಾಗ ಮೋಟರ್ ಸೈಕಲವನ್ನು ಸುಭಾಷ ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತಿದ್ದು
ಮೋಟರ್ ಸೈಕಲ ಶಕಾಪೂರ ಕ್ರಾಸ್ ಹತ್ತಿರದ ಬಸ್ ನಿಲ್ದಾಣ ಸಮೀಪ ಬಂದಾಗ ನಮ್ಮ ಹಿಂದಿನಿಂದ ಅಂದರೆ
ಆಳಂದ ಕಡೆಯಿಂದ ಒಬ್ಬ ಟವರಸ್ ಲಾರಿ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಬಂದು
ನಮ್ಮ ಮೋಟರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿದರಿಂದ ಹಿಂದೆ ಕುಳಿತ ನಾನು ಕೆಳಗಡೆ ಬಿದ್ದಾಗ
ನನಗೆ ಬಲಗಾಲಿನ ಪಾದದ ಹತ್ತಿರ ಮತ್ತು ಎಡಗಾಲಿನ ಮೊಳಕಾಲ ಹತ್ತಿರ ಗಾಯವಾಗಿದ್ದು ಮೋಟರ್ ಸೈಕಲ
ಚಲಾಯಿಸುತ್ತಿದ್ದ ಸುಭಾಷ ಇತನಿಗೆ ಬಲಗಾಲಿನ ಛಪ್ಪೆಗೆ ತೊಡೆಗೆ ಭಾರಿಗಾಯವಾಗಿದ್ದು ಮತ್ತು
ಎಡಗಾಲಿನ ಮೊಳಲಾಲ ಹತ್ತಿರ ಮುರಿದು ಭಾರಿಗಾಯವಾಗಿ ರಕ್ತ ಬಂದಿದ್ದು ಇರುತ್ತದೆ. ನಮಗೆ
ಡಿಕ್ಕಿಪಡಿಸಿದ ಟವರಸ್ ಲಾರಿ ನಂಬರ್ ನೋಡಲಾಗಿ MH-12
LT-9620 ಇದ್ದು ಅದರ ಚಾಲಕನ ಹೆಷರು ವಿಚಾರಿಸಿಲಾಗಿ ಶಿವಾಜಿ ತಂದೆ
ವಿಲಾಸ ವಾಮಂಗ ಸಾ:ವಾಗ್ದರ್ಗಿ ತಾ|| ಅಕ್ಕಲಕೋಟ ಅಂತಾ
ಗೊತ್ತಾಗಿದ್ದು. ಲಾರಿ ಚಾಲಕ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. ನಂತರ ನಮಗೆ
108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಆಳಂದದ ಸರ್ಕಾರಿ ಆಸ್ಪತ್ರೆ ತಂದಾಗ ಅಲ್ಲಿನ
ವೈದ್ಯಾಧಿಕಾರಿಗಳು ಇಬ್ಬರಿಗೂ ಚಿಕಿತ್ಸೆ ನೀಡಿ ಸುಭಾಷನಿಗೆ ಭಾರಿಗಾಯವಾಗಿದ್ದರಿಂದ ಹೆಚ್ಚಿನ
ಚಿಕಿತ್ದೆ ಕುರಿತು ತಗೆದುಕೊಂಡು ಹೋಗಲು ತಿಳಿಸಿದಾಗ ಸುಭಾಷ ಇತನಿಗೆ ಅವರ ಮನೆಯವರು 108
ಅಂಬುಲೆನ್ಸ್ ನಲ್ಲಿ ಉಮರ್ಗಾದ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ರಾತ್ರಿ ಖಜೂರಿ ಹತ್ತಿರ
ಇದ್ದಾಗ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment