Police Bhavan Kalaburagi

Police Bhavan Kalaburagi

Saturday, October 14, 2017

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 13-10-2017 ರಂದು ಮೇಳಕುಂದಾ (ಬಿ) ಗ್ರಾಮದಲ್ಲಿ ರಸ್ತೆಯ ಮೇಲಿನ ಮಳೆ ನೀರಿನ ಸಂಬಂಧ 1) ಶಾಂತಲಿಂಗಪ್ಪ ತಂದೆ ಚೆನ್ನಣ್ಣ ಡೆಂಘಿ 2) ಶಿವಲಿಂಗಪ್ಪ ತಂದೆ ಚೆನ್ನಣ್ಣ ಡೆಂಘಿ 3) ರಾಜು ತಂದೆ ಮಹಾಂತಪ್ಪ ಡೆಂಘಿ 4) ಪ್ರಭು @ ಪರಮಾನಂದ ತಂದೆ ಶಿನಗಪ್ಪ ಗೌನಳ್ಳಿ  5) ಬಸವರಾಜ ತಂದೆ ಲಕ್ಷ್ಮಣ ಗೌನಳ್ಳಿ ಸಾಃ ಎಲ್ಲರೂ ಮೇಳಕುಂದಾ (ಬಿ) ಗ್ರಾಮ ತಾ.ಜಿಃ ಕಲಬುರಗಿ ರವರು ಶಾಮರಾಯ ತಂದೆ ಶಿವರಾಯ ಒಡೆಯವರ ಇತನೊಂದಿಗೆ ಜಗಳ ಮಾಡುತ್ತಿದ್ದಾಗ ಫಿರ್ಯಾದಿದಾರರು ಜಗಳ ಬೀಡಿ ಸಲು ಹೋದಾಗ ಆರೋಪಿತ ರೇಲ್ಲರೂ ಕೂಡಿಕೊಮಡು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು , ಹೊಡೆ ಬಡೆ ಮಾಡಿ ಜಾತಿ ನಿಂದನೆ ಮಾಡಿದಲ್ಲದೆ ಜೀವದ ಭೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಮಲ್ಲಿಕಾಜರ್ುನ ತಂದೆ ಧರ್ಮಣ್ಣ ಕೋಟಿ ಸಾಃ ಮೇಳಕುಂದಾ(ಬಿ) ತಾ.ಜಿಃ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ :ದಿನಾಂಕ 13-10-2017 ರಂದು ಮೇಳಕುಂದಾ (ಬಿ) ಗ್ರಾಮದಲ್ಲಿ ರಸ್ತೆಯ ಮೇಲಿನ ಮಳೆ ನೀರಿನ ಸಂಬಂಧ ಮಹಾದೇವಪ್ಪ ಒಡೆಯರ ಸಂಗಡ 07 ಜನರು ಸಾಃ ಎಲ್ಲರೂ ಮೇಳಕುಂದಾ(ಬಿ) ರವರು  ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ  ಅಂತಾ ಶ್ರೀ ಬಸವರಾಜ ತಂದೆ ಲಕ್ಷ್ಮಣ ಉದನೂರ ಸಾಃ ಮೇಳಕುಂದಾ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 12-10-2017 ರಂದು ರಾಷ್ಟ್ರಿಯ ಹೆದ್ದಾರಿ 218ರ ಶಹಾಭಾದ ಕ್ರಾಸ ದಾಟಿ ಮುಂದೆ ರೊಡಿನ ಮೇಲೆ ಕಾರ ನಂ ಕೆಎ-32 ಪಿ-06/86 ನೆದ್ದರ ಚಾಲಕನು ತನ್ನ ಕಾರನ್ನು  ಅತೀ ವೇಗ ಮತ್ತು ಅಲಕ್ಷ್ಯತ ನದಿಂದ ಚಲಾಯಿಸಿಕೊಮದು ಬಂದು ಫಿರ್ಯಾದಿದಾರರ ಮೋಟಾರ ಸೈಕಲ ನಂ ಕೆಎ-28 ಇಎನ್-4146 ನೆದ್ದಕ್ಕೆ ಅಪಘಾತಪಡಿಸಿರುತ್ತಾಶನೆ ಅಂತಾ ಶ್ರೀ ಮಲ್ಲಪ್ಪ ತಂದೆ ಗೊಲ್ಲಾಳಪ್ಪ ಸಾಃ ಯಂಕಂಚಿ ತಾಃ ಸಿಂದಗಿ ಜಿಃ ವಿಂಯಜಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: