Police Bhavan Kalaburagi

Police Bhavan Kalaburagi

Friday, October 13, 2017

Yadgir District Reported Crimes Updated on 13-10-2017


                                     Yadgir District Reported Crimes

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 178/2017 ಕಲಂ: 504 354.324. ಐ ಪಿ ಸಿ;-ದಿನಾಂಕ 12-10-2017 ರಂದು 12 ಪಿ ಎಂ ಕ್ಕೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ  ಒಂದು  ಆಸಲ್ಟ ಎಮ್.ಎಲ್.ಸಿ. ದೂರವಾಣಿ ಮೂಲಕ ವಸೂಲಾಗಿದ್ದು. ಸದರಿ ಎಮ್ ಎಲ್ ಸಿ ಆದಾರದ ಮೇಲಿಂದ ನಾನು ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ 12-15 ಪಿ ಎಂ ಕ್ಕೆ  ಬೇಟಿ ನೀಡಿ ಗಾಯಾಳು ಶ್ರೀ ಮತಿ ಮಹಾದೇವಮ್ಮ ಗಂಡ ಬಸವರಾಜ ಬೋಯಿನ್ ಸಾ|| ಬಳಿಚಕ್ರ ಇವರನ್ನು ವಿಚಾರಿಸಿ ಇವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು. ದಿನಾಂಕ 12-10-2017 ರಂದು ಬೆಳೆಗ್ಗೆ 10 ಗಂಟೆಯ ಸುಮಾರಿಗೆ  ನಾನು ನನ್ನ ಮಗ ರಮೇಶನೊಂದಿಗೆ ಹೊಲಕ್ಕೆ ಹೊರಟಿದ್ದೆ. ರೆಡ್ಡೆಪ್ಪನ ಮನೆಯ ಮುಂದೆ ಹೋಗುವಾಗ  ಅದೇ ವೇಳಗೆ  ರೆಡ್ಡೆಪ್ಪ  ತಂದೆ ಭೀಮಪ್ಪ ಬೊಯಿನ ಇವನು ತನ್ನ ಮನೆಯಿಂದ ಹೊರಗೆ ಕೊಡಲಿಯನ್ನು ಹಿಡಿದುಕೊಂಡು ಬಂದು  ನನ್ನನ್ನು ಉದ್ದೇಶಿಸಿ ಬೋಸಡಿ ರಂಡಿ ನಿನ್ನೆ  ಬಹಾಳ ಮಾತನಾಡಿದಿ. ರಂಡಿ ಈಗ ಬಾ ನಿನ್ನ ತುಳ್ಳು ಹಡ ಬೋಸಡಿ ಬಸವಿ ಅಂತಾ ಬೈಯ್ದು. ತನ್ನ ಕೈಯಲ್ಲಿದ್ದ ಕೊಡಲಿಯ ಕಾವನ್ನು ತೆಗೆದುಕೊಂಡು ನನ್ನ  ಎಡಗೈಗೆ ಹೊಡೆದಾಗ  ರಕ್ತಗಾಯವಾಯಿತು. ಆಗ ನಾನು ಚೀರಾಡಲು ಪ್ರಾರಂಬಿಸಿದೆ  ಅಗ ಅವನು ನನ್ನ  ಸೀರೆಯನ್ನು ಹಿಡಿದು ಜಗ್ಗಾಡಿದನು ನನ್ನನ್ನು ಮಾನ ಬಂಗ ಮಾಡಲು ಪ್ರಯತ್ನ ಮಾಡಿದಾಗ ನಾನು ಮತ್ತೆ ಚಿರಾಡಿದಾಗ ಅಲ್ಲೆ ಹತ್ತಿರದಲ್ಲಿ ಇದ್ದ ನಮ್ಮೂರ ಮಹಾದೇವಪ್ಪ  ತಂದೆ  ರಾಮಣ್ಣ ಬೊಮ್ಮಣ್ಣೋರ . ಮಹಾದೇವಮ್ಮ  ಗಂಡ ಮಹಾದೇವಪ್ಪ ಬೊಮ್ಮಣ್ಣೋರಇವರು ಬಂದು ಜಗಳ ನೋಡಿ ಬಿಡಿಸಿಕೊಂಡರು. ಇವರು ಬಿಡಿಸದಿದ್ದರೆ ಇನ್ನು ನನಗೆ ಹೊಡೆಯುತ್ತಿದ್ದ. ಕಾರಣ ನನಗೆ ಅವಾಚ್ಚವಾಗಿ ಬೈಯ್ದು.ಕೊಡಲಿಯ ಕಾವಿನಿಂದ ಹೊಡೆದು. ಮಾನಬಂಗ ಮಾಡಲು ಪ್ರಯತ್ನಿಸಿದವನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಪಿರ್ಯಾದಿ ಆದಾರದ ಮೇಲಿಂದ ಠಾಣೆಯ ಗುನ್ನೆ ನಂ 178/2017 ಕಲಂ 504.324.354.  ಪಿ ಸಿ  ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು. 

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 254/2017 ಕಲಂ 457, 380 ಐಪಿಸಿ;- ದಿನಾಂಕ 12.10.2017 ರಂದು ಸಾಯಂಕಾಲ 6 ಗಂಟೆಗೆ ಪಿರ್ಯಾಧಿ ಶ್ರೀನಿವಾಸ ತಂದೆ ಚನ್ನಯ್ಯ ಗುಂಡಾನೋರ ಸಾಃ ತಿಮ್ಮಪೂರಪೇಟ ರಾಯಚೂರ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದರ ಸಾರಾಂಶವೆನೆಂದರೆ  ದಿನಾಂಕ 07.10.2017 ರಂದು ಬೆಳಗಿನ ಜಾವ 4.30 ಗಂಟೆಗೆ ಯಲ್ಹೇರಿ ಗ್ರಾಮದ ಇಂಡಸ್ ನಂಬರ 1294372 ಮತ್ತು ಸೈಟ್ ಐಡಿ (ಙಂಐಊಖ2) ಎಂಬ ಸೈಟಿನಲ್ಲಿ ಕೇರ್ ಟೇಕರ್ ಅಂತಾ ಕೆಲಸ ಮಾಡುವ ಅದೇ ಗ್ರಾಮದ ಹಣಮಂತ ತಂದೆ ನಾಗಪ್ಪ ಕಬ್ಬೇರ ಈತನು ನನ್ನ ಪೋನ ನಂಬರ. 7022602366 ನೆದ್ದಕ್ಕೆ ಪೋನ ಮಾಡಿ ತಿಳಿಸಿದ್ದೆನೆಂದರೆ ಸದರಿ ಸೈಟಿನಲ್ಲಿ ನಾನು ರಾತ್ರಿ 01.00 ಗಂಟೆ ತನಕ ಇದ್ದು ಮಳೆ ಸುರುವಾಗಿದ್ದರಿಂದ ಅದು ಔಟ್ ಡೋರ್ ಸೈಟ್ ಆಗಿದ್ದರಿಂದ ನಾನು ಮನೆಗೆ ಹೋದೆನು. ಬೆಳಗಿನ ಜಾವ 4.00 ಗಂಟೆಗೆ ಮಳೆ ನಿಂತ ಮೇಲೆ ಸೈಟಿಗೆ ಹೋಗಿ ನೋಡಲು ಯಾರೋ ಸೈಟಿಗೆ ಹಾಕಿದ ಗೇಟಿನ ಬೀಗ್ ಮುರಿದು ಹೊಳಗೆ ಬಂದು ಬ್ಯಾಟ್ರಿ ಬ್ಯಾಂಕ್ 24 ಸೆಲ್ಗಳು ಕಳುವು ಮಾಡಿಕೊಂಡು ಹೋಗಿದ್ದಾರೆ ಅಂತಾ ದೂರವಾಣಿ ಮೂಲಕ ತಿಳಿಸಿದನು. ಅವುಗಳ ಅಂದಾಜು ಕಿಮ್ಮತ್ತು ರೂ 20,000/-ರೂ ಗಳು ಇದ್ದು ನಾನು ಟೇಕರ್ ಹಣಮಂತ ಮತ್ತು ಟೇಕ್ನಷಿಯನ್ ಸಂತೋಷ ಇವರಿಗೆ ವಿಚಾರ ಮಾಡಿ ಇಂದು ದಿನಾಂಕ 12.10.2017 ರಂದು ಸಾಯಂಕಾಲ 6 ಗಂಟೆಗೆ ಬಂದಿದ್ದು ಕಾರಣ ಕಳುವಾದ 24 ಬ್ಯಾಟರಿ ಪತ್ತೆ ಮಾಡಿಕೋಡಬೇಕು ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 254/2017 ಕಲಂ 457, 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 287/2016 ಕಲಂ.379 ಐ.ಪಿ.ಸಿ. ಮತ್ತು 21(3), 21(4) 22 ಎಮ್.ಡಿ.ಆರ್.ಆಕ್ಟ ;- ದಿನಾಂಕ:12-10-2017 ರಂದು 11:00 ಎ.ಎಮ್.ಕ್ಕೆ ಮಾನ್ಯ ಶರಣಪ್ಪ ಪಿ.ಎಸ್.ಐ ಸುರಪೂರ ಪೊಲೀಸ ಠಾಣೆ  ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ , ಮುದ್ದೇಮಾಲು  ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಏನಂದರೆ  ಇಂದು ದಿನಾಂಕ: 12-10-2017  ರಂದು 08:15 ಎ.ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಯಾರೋ ಒಬ್ಬ ತನ್ನ ಟ್ರ್ಯಾಕ್ಟರದಲ್ಲಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಅಕ್ರಮ ಸಾಗಿಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪರಮೇಶ ಪಿ.ಸಿ. 142, ರವರ ಸಹಾಯದಿಂದ ಇಬ್ಬರು ಪಂಚರಾದ 1) ವೆಂಕಟೇಶ ತಂದೆ ರಾಮಣ್ಣ ಕಿಲಾರಿ ಸಾ:ವೆಂಕಟಾಪೂರ 2) ಮುನಿಯಪ್ಪ ತಂದೆ ಭೀಮಣ್ಣ ಶುಕ್ಲಾ ಸಾ:ಲಕ್ಷ್ಮೀಪುರ ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಸದರಿ ಪಂಚರೊಂದಿಗೆ ಮತ್ತು ಸಿಬ್ಬಂದಿಯವರಾದ 1) ಪರಮೇಶ ಪಿ.ಸಿ. 142, 2) ಸೋಮಯ್ಯ ಪಿ.ಸಿ.235   ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ 08.45 ಎ.ಎಮ್ಕ್ಕೆ ಹೊರಟು 9:15 ಎ.ಎಮ್ ಕ್ಕೆ ಸತ್ಯಂಪೇಟ ಕ್ರಾಸದಲ್ಲಿ ಹೊರಟಾಗ ಒಂದು ಟ್ರ್ಯಾಕ್ಟರದಲ್ಲ್ಲಿ ಮರಳು ತುಂಬಿ ಕೊಂಡು ಹೊರಟಿದ್ದು ಸದರಿ ವಾಹನವನ್ನು ತಡೆದು ನಿಲ್ಲಿಸಿಲಾಗಿ ಅದರ ಚಾಲಕನು ನಮ್ಮನ್ನು ಟ್ರ್ಯಾಕ್ಟರನ್ನು ಬಿಟ್ಟು ಓಡಿ ಹೋದನು ಟ್ರ್ಯಾಕ್ಟರನ್ನು ಪರಿಶೀಲಿಸಿನೊಡಲಾಗಿ ಮೆಸೀ ಪರಗುಷನ ಕಂಪನಿಯ ಟ್ರ್ಯಾಕ್ಟರ ನಂ.ಕೆ.ಎ.33.ಟಿ.ಎ.7640 ಇದ್ದು ಟ್ರ್ಯಾಲಿ ನಂಬರ ಕೆ.ಎ.33.ಟಿ.234 ಇದ್ದು ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಓಡಿ ಹೋದ ಟ್ರ್ಯಾಕ್ಟರ ಚಾಲಕನ ಹೆಸರು ರಂಗಯ್ಯ ತಂದೆ ಮಾನಶಪ್ಪ ದೇಸಾಯಿ ಸಾ: ಕನರ್ಾಳ ಅಂತಾ ಗೊತ್ತಾಯಿತು.ಸದರಿ ಟ್ರ್ಯಾಕ್ಟರ ಚಾಲಕನು ಹಳ್ಳದ ಮರಳನ್ನು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ ಸದರಿ ಟ್ರ್ಯಾಕ್ಟರದಲ್ಲಿ  ಅಂದಾಜು 2 ಘನಮೀಟರ ಮರಳು ಇರುತ್ತದೆ. ಮರಳಿನ ಒಟ್ಟು ಅ.ಕಿ.1600/- ಆಗುತ್ತದೆ. ಆದ್ದರಿಂದ ಸದರಿ ವಾಹನವನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 09:30 ಎ.ಎಮ್ ದಿಂದ 10:30 ಎ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಮಾಡುತ್ತಿದ್ದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದು ಕೊಂಡು ಮರಳಿ ಠಾಣೆಗೆ ಬಂದಿದ್ದು ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ನಿಮ್ಮ ವಶಕ್ಕೆ ನೀಡಿರುತ್ತೇನೆ. ಅಂತಾ ಇದ್ದ ವರದಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ.286/2017 ಕಲಂ. 379 ಐ.ಪಿ.ಸಿ ಸಂ: 21(3), 21(4), 22 ಎಮ್.ಎಮ್.ಡಿ.ಆರ್ ಆಕ್ಟ್ 1957 ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 288/2017 ಕಲಂ: 87 ಕೆ.ಪಿ ಯ್ಯಾಕ್ಟ;- ದಿನಾಂಕ: 12/10/2017 ರಂದು 4-45 ಪಿ.ಎಮ್ ಕ್ಕೆ ಠಾಣೆಗೆ ಶ್ರೀ ಆರ್ ಎಫ್,ದೇಸಾಯಿ ಪಿ,ಐ  ಸಾಹೇಬರು 6 ಜನ ಆರೋಪಿತರು, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು 2-00 ಪಿ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಲಕ್ಷ್ಮೀಪೂರ ಸೀಮಾಂತರದ ಹಳ್ಳದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕಿಟ್ಟು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಹೆಚ್.ಸಿ.105, 176 ಪಿ.ಸಿ.142, ಪಿಸಿ-235, ಪಿ.ಸಿ-376 ಪಿಸಿ-393, ಹಾಗು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೀಟ ಜೂಜಾಟ ಆಡುತ್ತಿದ್ದ 6 ಜನ ಆರೋಪಿತರನ್ನು ಹಿಡಿದು, ಸದರಿಯವರಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 5700/-ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದು ಸದರಿ ಅಪರಾಧವು ಅ ಸಂಜ್ಞೆಯ ಅಪರಾಧವಾಗಿದ್ದರಿಂದ  ಗುನ್ನೆ ದಾಖಲು ಮಾಡಿಕೊಂಡು ತಿನಿಖೆ ಕೈ ಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡು ನ್ಯಾಯಾಲಯದಿಂದ ಅನುಮತಿ ಬಂದ ನಂತರ 6-15 ಪಿ,ಎಂ ಕ್ಕೆ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 288/2017 ಕಲಂ. 87 ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                                                       

No comments: