Police Bhavan Kalaburagi

Police Bhavan Kalaburagi

Wednesday, October 4, 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 03-10-2017 ರಂದು ರಾಷ್ಟ್ರೀಯ ಹೆದ್ದಾರಿ 218ರ ಮಹ್ಮದಿ ಬಿ,ಎಡ ಕಾಲೇಜ ಎದುರುಗಡೆ ರೋಡಿನ ಮೇಲೆ ಕಾರ ನಂ ಕೆಎ-32 ಎನ್-5873 ನೆದ್ದರ ಚಾಲಕನು ತನ್ನ ಕಾರ ನ್ನು ಅತೀವೇಗ ಮತ್ತು ಅಲಕ್ಷ್ಯತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರನು ಚಲಾಯಿಸು ತ್ತಿದ್ದ ಲಾರಿ ನಂ ಕೆಎ-38/9369 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿರುತ್ತಾನೆ ಅಂತಾ  ಶ್ರೀ ಬೆಂಜಮೇನ್ ತಂದೆ ವಸಂತ ಟೇಲರ ಸಾಃ ಹೀಲಾಲಪುರ ತಾಃ ಹುಮನಾಬಾದ ಜಿಃ ಬೀದರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ:02-10-2017 ರಂದು ರಾತ್ರಿ 9-00 ಗಂಟೆಯಿಂದ 10-30 ಮದ್ಯ ಅವಧಿಯಲ್ಲಿ ಯಾರೋ ಕಳ್ಳರು ಲಾಡಮುಗಳಿ ಗ್ರಾಮದಲ್ಲಿರುವ ವಿರೂಪಾಕ್ಷೇಶ್ವರ ಮಠದ ಗರ್ಭಗುಡಿಯ ಬೀಗ ಮುರಿದು ಒಳಗಡೆಯಿದ್ದ ವಿರೂಪಾಕ್ಷೇಶ್ವರ ದೇವರ ಪೂರಾತನ ಕಾಲದ ಪಂಚಲೋಹದ ಮೂರ್ತಿ ಅಂದಾಜು 30 ಕೆ.ಜಿಯ ಪಂಚಲೋಹದ ಸುಮಾರು 70000/- ರೂ ಮೌಲ್ಯದ ಹಾಗೂ ಇತ್ತಿಚಿಗೆ ಮಾಡಿಸಿದ 15 ಕೆ.ಜಿಯ ಪಂಚಲೋಹದ ಉತ್ಸವ ಮೂರ್ತಿ ಸುಮಾರು 22000/- ರೂ ಮೌಲ್ಯದ ಮೂರ್ತಿಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ  ರಾಚಯ್ಯ ತಂದೆ ಮಡಯ್ಯ ಮಠಪತಿ) ಸಾ:ಲಾಡಮುಗಳಿ ತಾ:ಆಳಂದ ಜಿಲ್ಲೆ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಧರೇಪ್ಪ ತಂದೆ ಚನ್ನಪ್ಪ ದೇವಣಗಾಂವ  ಉಃ ಪೊಲೀಸ ಪೆದೆ ನಂ 448 ಜೇವರಗಿ ಪೊಲೀಸ್ ಠಾಣೆ ಇದ್ದು, ಸರಕಾರಿ ತರ್ಪೆಯಿಂದ  ಪೀರ್ಯಾದಿ ವರದಿ ಸಲ್ಲಿಸುವುದೆನೆಂದರೆ, ನನಗೆ ಜೇವರಗಿ ಪೊಲೀಸ್ ಠಾಣೆಯ ಸುದಾರಿತ ಗಸ್ತು ಸಂಖ್ಯೆ 11 ರ ಬೀಟ್ ಸಿಬ್ಬಂದಿ ಅಂತಾ  ನೇಮಕ  ಮಾಡಿದ್ದು ಇರುತ್ತದೆ. ನಾನು ತಮ್ಮ ಆಧೇಶದಂತೆ ಇಂದು ದಿ 02.10.2017 ರಂದು ಮುಂಜಾನೆ 9.00 ಗಂಟೆಗೆ  ಬೀಟ್ ಕರ್ತವ್ಯಕ್ಕೆ ಕುರಿತು ನನಗೆ ನೇಮಿಸಿದ ಬೀಟ್ ನಂ 11 ರ  ಓಂ ನಗರ ಏರಿಯಾಕ್ಕೆ ಹೋಗಿ  ಮುಂಜಾನೆ 10.00 ಗಂಟೆಯ ಸುಮಾರಿಗೆ ಏರಿಯಾದಲ್ಲಿ ಇದ್ದಾಗ, ಬಾತ್ಮಿಯಿಂದ ತಿಳಿದು ಬಂದಿರುವುದೆನೆಂದರೆ ಓಂ ನಗರ ಏರಿಯಾದಲ್ಲಿ ಈಗ 8-10 ದಿವಸಗಳ ಹಿಂದೆ ಯಾರೋ ಅಪರಿಚಿತರು ಶಿವಕುಮಾರ @ ಶಿವರಾಜಕುಮಾರ ಎಂಬ ಹುಡುಗನಿಗೆ ಮನಬಂದಂತೆ ಬಡಿಗೆಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಟಿ.ವಿ. ಮಾದ್ಯಮಗಳಲ್ಲಿ ಮತ್ತು ಮೊಬೈಲ ಜಾಲ ತಾಣಗಳಲ್ಲಿ ಪ್ರಸಾರ ಆಗಿದೆ ಅಂತಾ ಬಾತ್ಮಿಯಿಂದ ಗೊತ್ತಾಗಿರುತ್ತದೆ. ನಾನು  ಸದರಿ ಘಟನೆಯ ಬಗ್ಗೆ ಏರಿಯಾದಲ್ಲಿ ಮಾಹಿತಿ ಕಲೆ ಹಾಕಲು ಮೊಬೈಲ್ ಜಾಲ ತಾಣದಲ್ಲಿ ಘಟನೆಯ ಬಗ್ಗೆ ಪ್ರಸಾರವಾದ ಘಟನೆ ದೃಶ್ಯಾವಳಿಗಳು ನೋಡಿ ಪರೀಶೀಲಿಸಲಾಗಿ ಸುಮಾರು 5-6 ಜನ ಯಾರೋ ಅಪರಿಚಿತರು ಒಬ್ಬ ಹುಡುಗನಿಗೆ ಹಿಡಿದುಕೊಂಡು ಅವನಿಗೆ ಯಾವುದೋ ಒಂದು ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಮನಬಂದಂತೆ ಅವನಿಗೆ ಹೊಡೆದಿದ್ದು, ಮತ್ತು ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಮುಂದಕ್ಕೆ ಹೋಗದಂತೆ ತಡೆದು ಹೊಡೆ ಬಡೆ ಮಾಡಿ ಮಾರಂಣಾಂತಿಕ ಹಲ್ಲೆ ಮಾಡಿದ್ದು ಕಂಡು ಬಂದಿರುತ್ತದೆ. ಮತ್ತು ಈ ಘಟನೆಯ ಚಿತ್ರಿಕರಣವು ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡಿ ಜನರಲ್ಲಿ ಭಯ ಹುಟ್ಟಿಸುವ ಕೃತ್ಯ ಇದಾಗಿರುತ್ತದೆ. ನಂತರ ನಾನು ನೊಂದ ಹುಡುಗನ ಹೆಸರು ವಿಳಾಸ ಬಗ್ಗೆ ಪತ್ತೆ ಮಾಡಲಾಗಿ ನೊಂದವನು ಶಿವಕುಮಾರ @ ಶಿವರಾಜಕುಮಾರ ತಂದೆ ರಾಜೇಂದ್ರ ಭಜಂತ್ರಿ ಸಾಃ ಜನತಾ ಕಾಲೊನಿ ಜೇವರಗಿ ಅಂತಾ ಗೊತ್ತಾಗಿದ್ದು, ನಾನು ಸದರಿ ಹುಡುಗನ ಮನೆಗೆ ಹೋಗಿ ವಿಚಾರಿಸಲು ಶಿವಕುಮಾರ ಇತನು ಮನೆಯಲ್ಲಿ ಇರಲಿಲ್ಲಾ ಅವನ ತಂದೆ ತಾಯಿ ಮತ್ತು ಅವನ ಸಂಭಂದಿಕರು ಸಹ ಯಾರು ಇರುವುದಿಲ್ಲಾ ಮತ್ತು ಘಟನೆಗೆ ಸಂಭಂದಿಸಿದಂತೆ ಯಾರು ಪಿರ್ಯಾದಿ ನೀಡಲು ಲಬ್ಯೆ ಇರುವುದಿಲ್ಲಾ, ಮತ್ತು ಶಿವಕುಮಾರನ ಮೇಲೆ ಹಲ್ಲೆ ಮಾಡಿದವರ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಸದರಿ ಘಟನೆಯೂ ಜೇವರಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸುದಾರಿತ ಬೀಟ್ ನಂ 11 ರ ಜೇವರಗಿ ಪಟ್ಟಣದ ಓಂ ನಗರ ಏರಿಯಾದ ನನ್ನ ಬೀಟನಲ್ಲಿ ಆಗಿರುವುದರಿಂದ ಇದು ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡಿ ಜನರಲ್ಲಿ ಭಯ ಹುಟ್ಟಿಸುವ ಕೃತ್ಯ ಇದಾಗಿದ್ದರಿಂದ ಆ ದುಷ್ಕರ್ಮಿಗಳನ್ನು ಹಾಗೇ ಬಿಟ್ಟಲ್ಲಿ ಮತ್ತೆ ಇಂಥಹ ಘಟನೆ ಮಾಡಲು ಹಿಂಜರಿವುದಿಲ್ಲಾ, ಮತ್ತು ಸದ್ಯಕೆ ಪೀರ್ಯಾದಿ ನೀಡುವವರು ಯಾರು ಲಬ್ಯೆ ಇರಲಾರದ ಕಾರಣ ನಾನು ಸದರಿ ಎರಿಯಾದ ಸುದಾರಿತ ಬೀಟ್ ಸಿಬ್ಬಂದಿಯಾಗಿ ಇಂತಹ ಘಟನೆಗಳ ಬಗ್ಗೆ ಕ್ರಮ ಕೈಕೊಳುವುದು ಸೂಕ್ತ ಅಂತಾ ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

No comments: