Police Bhavan Kalaburagi

Police Bhavan Kalaburagi

Tuesday, October 3, 2017

Yadgir District Reported Crimes Updated on 03-10-2017


                                   Yadgir District Reported Crimes

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 250/2017 ಕಲಂ 143, 147, 323, 324, 504, 506 ಖ/ತಿ 149 ಐಪಿಸಿ;- ದಿನಾಂಕ 01-10-2017 ರಂದು ರಾತ್ರಿ 9-30 ಗಂಟೆಯಿಂದ 10 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಆತನ ತಮ್ಮ ಹಾಗೂ ತಾಯಿ ಗ್ರಾಮದಲ್ಲಿ ನಡೆಯುವ ಪೀರ್ ದೇವರ ಕಾಯರ್ಾಕ್ರಮ ನೋಡಲು ಹೋದಾಗ ಆರೋಪಿತರು ಜಮೀನಿನ ಮ್ಯಾರಿ ಸಂಬಂಧ ಈ ಮುಂಚೆ ತಕರಾರು ಆಗಿದ್ದು ಅದೇ ಮನಸ್ಸಿನಲ್ಲಿಟ್ಟುಕೊಂಡು ಹಳೆ ದ್ವೇಷದಿಂದ ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ, ಕಲ್ಲುಗಳು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ಪಿರ್ಯಾದಿಗೆ ಮತ್ತು ಆತನ ತಮ್ಮನಿಗೆ ಕಟ್ಟೆಗೆ ಬಡೆಗೆ ಮತ್ತು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ ಪಿರ್ಯಾದಿ ತಾಯಿಗೆ ಕೂದಲು ಹಿಡಿದು ಎಳೆದಾಡಿ ಹೊಡೆಬಡಿ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 136/2017 ಕಲಂ: 504,354,323,506 ಐಪಿಸಿ ;- ದಿನಾಂಕ: 02/10/2017 ರಂದು 5-30 ಪಿಎಮ್ ಕ್ಕೆ ಶ್ರೀಮತಿ ಸಿದ್ದಮ್ಮ ಗಂಡ ದೇವಪ್ಪ ಕೊಂಬಿನೋರ, ವ:45, ಜಾ:ಹೊಲೆಯ, ಉ:ಕೂಲಿ ಸಾ:ಕಾಡಂಗೇರಾ (ಬಿ) ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ನನ್ನ ಮಗಳಾದ ಗಂಗಮ್ಮ ಇವಳಿಗೆ ಈಗ ಸುಮಾರು 5 ತಿಂಗಳ ಹಿಂದೆ ಕಟಿಗೆಶಹಾಪೂರದ ಹೊನ್ನಪ್ಪ ತಂದೆ ನಿಂಗಪ್ಪ ಎಂಬುವನೊಂದಿಗೆ ಲಗ್ನ ಮಾಡಿಕೊಟ್ಟಿರುತ್ತೆವೆ. ಅಳಿಯ-ಮಗಳು ಅನೋನ್ಯವಾಗಿರುತ್ತಾರೆ. ಆದರೆ ನಮ್ಮೂರ ನಮ್ಮ ಜನಾಂಗದ ಚಂದ್ರು ತಂದೆ ಭೀಮರಾಯ ಇಬ್ರಾಹಿಂಪೂರ ಈತನು ಊರಲ್ಲಿ ನನ್ನ ಮಗಳು ಸರಿ ಅಲ್ಲ ಅವಳಿಗೆ ಹೇಗೆ ಮದುವೆ ಮಾಡಿಕೊಂಡು ಹೋಗ್ಯಾನ ನೋಡು ಅವಳು ಸರಿ ಇಲ್ಲ ಅವರಿವರಿಗೆ ಸೆರಗು ಹಾಸಿರುತ್ತಾಳೆ. ಇಂತಹವಳೊಂದಿಗೆ ಹೇಂಗ ಸಂಸಾರ ಮಾಡತಾನ ಎಂದು ಅಂದಾಡಿದ್ದನು. ಅಲ್ಲದೆ ಇತ್ತಿಚ್ಚೆಗೆ ನನ್ನ ಅಳಿಯ-ಮಗಳು ನಮ್ಮೂರಿಗೆ ಬಂದಾಗ ಕೂಡಾ ಚಂದ್ರು ಈತನು ನನ್ನ ಅಳಿಯನಿಗೆ ನೇರವಾಗಿ ನಿನ್ನ ಹೆಂಡತಿ ಸರಿ ಇಲ್ಲ ನಿನಗೆ ಬೇರೆ ಹೆಣ್ಣು ಸಿಗಲಿಲ್ಲೇನು. ಇವಳಿಗೆ ಯಾಕೆ ಲಗ್ನ ಮಾಡಿಕೊಂಡು ಹೋಗಿದಿ ಎಂದು ಹೇಳಿರುವುದಾಗಿ ನನ್ನ ಅಳಿಯನು ಬಂದು ನನ್ನ ಮುಂದೆ ಹೇಳಿದ್ದನು. ಅದಕ್ಕೆ ನಾನು ಕೇಳಬೇಕೆಂದು ಚಂದ್ರುನ ಮನೆಗೆ ಹೋದಾಗ ಅವನು ಮನೆಯಲ್ಲಿ ಇರಲಿಲ್ಲ. ಆಗ ಅವನ ತಂದೆ-ತಾಯಿಗೆ ನಿನ್ನ ಮಗ ಈ ರೀತಿ ಮಾತಾಡಿದ್ದಾನೆ. ನನ್ನ ಮಗಳ ಬಾಳು ಹಾಳ ಮಾಡಬೇಕೆಂದಿದ್ದಾನೆನು ಅವನಿಗೆ ಸರಿಯಾಗಿ ಬುದ್ದಿ ಹೇಳಿರಿ ಎಂದು ಹೇಳಿ ಬಂದಿದ್ದೇನು. ಹೀಗಿದ್ದು ಮೊನ್ನೆ ದಿನಾಂಕ: 30/09/2017 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ದೇವಪ್ಪ ಇಬ್ಬರೂ ನಮ್ಮ ಮನೆ ಮುಂದೆ ಇದ್ದಾಗ ಚಂದ್ರು ತಂದೆ ಭೀಮರಾಯ ಇಬ್ರಾಹಿಂಪೂರ, ಜಾ:ಹೊಲೆಯ(ಎಸ್.ಸಿ) ಸಾ:ಕಾಡಂಗೇರಾ (ಬಿ) ಈತನು ನಮ್ಮ ಮನೆಗೆ ಬಂದವನೆ ನನಗೆ ಏ ಭೋಸಡಿ ನಿನ್ನ ಮಗಳ ಬಗ್ಗೆ ನಾನು ಮಾತಾಡಿನ ಅಂತಾ ನನ್ನ ಅಮ್ಮ-ಅಪ್ಪಗ ಹೇಳಿರುವಿಯಂತ ನಿನ್ನ ಸೊಕ್ಕು ಜಾಸ್ತಿಯಾಗ್ಯಾದ ಸೂಳಿ ಅಂತಾ ಅಂದವನೆ ನನ್ನ ಸೀರೆ ಸೆರಗು ಹಿಡಿದು ಜಗ್ಗಿ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದನು. ಆಗ ಜಗಳವನ್ನು ನನ್ನ ಗಂಡ ದೇವಪ್ಪ ಮತ್ತು ಆಜು-ಬಾಜುದವರಾದ ಯಲ್ಲಪ್ಪ ತಂದೆ ಸಿದ್ದಪ್ಪ ನಾಟೇಕಾರ, ಬಸವರಾಜ ತಂದೆ ಸಿದ್ದಣ್ಣ ಚಲುವಾದಿ ಇವರು ಬಂದು ಬಿಡಿಸಿದರು. ಆಗ ಹೊಡೆಯವುದು ಬಿಟ್ಟ ಅವನು ಇವತ್ತು ಉಳದಿ ಸೂಳಿ ಇನ್ನೊಮ್ಮೆ ನನ್ನ ಹೆಸರಿಗೆ ಬಂದರೆ ನಿನಗೆ ಜೀವಂತ ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೋದನು. ನನ್ನ ಮಗಳ ಮಾನದ ಪ್ರಶ್ನೆಯಾಗಿರುವುದರಿಂದ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ನನಗೆ ಕೈಯಿಂದ ಕಪಾಳ ಮತ್ತು ಬೆನ್ನಿಗೆ ಹೊಡೆದಿದ್ದು, ಅಂತಹ ಪೆಟ್ಟುಗಳಾಗದ ಕಾರಣ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವುದಿಲ್ಲ. ಕಾರಣ ಸದರಿ ಚಂದ್ರು ತಂದೆ ಭೀಮರಾಯ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 136/2017 ಕಲಂ: 504,354,323,506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ: 279, 337, 338 ಐ.ಪಿ.ಸಿ ಸಂ 187 ಐಎಮ್ವಿ ಆಕ್ಟ ;- ದಿನಾಂಕ 02/10/2017 ರಂದು 02-15 ಪಿಎಮ್ ಕ್ಕೆ ಫಿಯರ್ಾದಾರರಾದ ದೇವಪ್ಪ ತಂದೆ ಕೋಕಪ್ಪ ಜಾಧವ ವಯಾ|| 49 ಜಾ|| ಲಂಬಾಣಿ ಉ|| ಕೂಲಿ ಸಾ|| ಯಾಳಗಿ ತಾಂಡಾ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಇಂದು ದಿ: 02/10/2017 ರಂದು 12.45 ಪಿಎಮ್ಕ್ಕೆ ಫಿಯರ್ಾದಿ ಹಾಗು ಇತರರು ಕೂಡಿ ಟಾಟಾ ಎಸಿ ನಂಬರ ಕೆಎ 33 ಎಮ್ 4981 ನೇದ್ದರಲ್ಲಿ ಯಾಳಗಿ ಮುಖಾಂತರ ಕೆಂಭಾವಿಗೆ ಹೋಗುವಾಗ ಸದರಿ ಟಾಟಾ ಎಸಿ ಚಾಲಕನು ತನ್ನ ಟಾಟಾ ಎಸಿಯನ್ನು ಅತಿವೇಗವಾಗಿ ನಡೆಸಿಕೊಂಡು ಹೋಗಿ ಯಾಳಗಿ ಇನ್ನೂ 2 ಕಿ ಮೀ ದೂರ ಇರುವಾಗ ಕೆನಾಲ ಕ್ರಾಸಿನ ರೋಡಿನ ತಿರುವಿನಲ್ಲಿ 01.15 ಪಿಎಮ್ ಸುಮಾರಿಗೆ ಟಾಟಾ ಎಸಿಯನ್ನು ಅತಿವೇಗ ಹಾಗೂ ಅಲಕ್ಷತನದಿಂಧ ಓಡಿಸಿಕೊಂಡು ಹೋಗಿ ಒಮ್ಮೆಲೆ ಎಡಭಾಗಕ್ಕೆ ಕಟ್ ಮಾಡಿದಾಗ ಟಾಟಾ ಎಸಿ ಪಲ್ಟಿಯಾಗಿ ಬಿದ್ದಿತು. ಟಾಟಾ ಎಸಿಯಲ್ಲಿದ್ದ ನನಗೆ ಯಾವುದೇ ಗಾಯವಗೈರೆ ಆಗಿರುವದಿಲ್ಲ. ಮಾವನಾದ ಆಲೂ ಇವರಿಗೆ ಎದೆಗೆ ಒಳಪೆಟ್ಟಾಗಿರುತ್ತದೆ, ನಂತರ ಅಲ್ಲಿಯೇ ಬಿದ್ದ ನಮ್ಮೂರ ಶಿಕ್ಷಕರಾದ ಹಾಜಿಶಹಾಬುದ್ದೀನ ಇವರಿಗೆ ನೋಡಲಾಗಿ ಎಡಗೈ ಮೊಳಕೈ ಹತ್ತಿರ ಕೈಮುರಿದಂತಾಗಿದ್ದು, ಅಲ್ಲದೆ ಮೊಳಕೈ ಕೆಳಗಿನ ಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಎಡಗಣ್ಣಿನ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ. ಟಾಟಾ ಎಸಿಯಲ್ಲಿದ್ದ ಇನ್ನುಳಿದ ಗಾಯಾಳುದಾರರಿಗೆ ವಿಚಾರಿಸಲಾಗಿ ವಾಚು ತಂದೆ ದೇವಲು ಚವ್ಹಾಣ ಸಾ|| ನಡಗುಂದಿ ತಾಂಡಾ ಅಂತ ಇದ್ದು ಸದರಿಯವನಿಗೆ ಎಡಗಾಲು ಮೊಳಕಾಲು ಕೆಳಗೆ ಕಾಲು ಮುರಿದಂತಾಗಿ ಗುಪ್ತಗಾಯವಾಗಿದ್ದು ಮತ್ತು ಹಣೆಗೆ ತರಚಿದ ರಕ್ತಗಾಯವಾಗಿರುತ್ತದೆ. ತಾವರು ತಂದೆ ಶಂಕ್ರೆಪ್ಪ ರಾಠೋಡ ಸಾ|| ಹುಲ್ಲುರ ತಾಂಡಾ ಈತನಿಗೆ ಎಡಗಾಲು ಪಾದದ ಮೇಲೆ ಕಾಲು ಮುರಿದಂತಾಗಿ ಗುಪ್ತಗಾಯವಾಗಿರುತ್ತದೆ. ಲಲಿತಾ ಗಂಡ ಸಿದ್ರಾಮ ಚವ್ಹಾಣ ಸಾ|| ನಡಗುಂದಿ ತಾಂಡಾ ಇವರಿಗೆ ಎದೆಗೆ ಒಳಪೆಟ್ಟಾಗಿರುತ್ತದೆ ಕಾಶಿಬಾಯಿ ಗಂಡ ಲಕ್ಷ್ಮಣ ರಾಠೋಡ ಸಾ|| ನಡಗುಂದಿ ತಾಂಡಾ ಇವರಿಗೆ ಹಣೆಗೆ ತರಚಿದ ಗಾಯವಾಗಿರುತ್ತದೆ. ಅದರಂತೆ ನಾಗರಳ್ಳಿ ತಾಂಡಾದ ಸುರೇಖಾ ಗಂಡ ವಿಜಯಕುಮಾರ ರಾಠೋಡ ಇವರಿಗೆ ಬಲಗೈ ಮೊಳಕೈ ಹತ್ತಿರ ತರಚಿದ ಗಾಯವಾಗಿರುತ್ತದೆ ಸದರಿ ಟಾಟಾ ಎಸಿ ಚಾಲಕನು ಅಪಘಾತಪಡಿಸಿದ ತಕ್ಷಣ ತನ್ನ ಟಾಟಾ ಎಸಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದುಇರುತ್ತದೆ. ಸದರಿ ಅಪಘಾತಕ್ಕೆ ಚಾಲಕ ವಿಶ್ವನಾಥ ಮಸರಕಲ್ ಸಾ|| ಕೆಂಭಾವಿ ಈತನ ಅತಿವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 171/2017 ಕಲಂ 279,337,338 ಐಪಿಸಿ ಸಂಗಡ 187 ಐಎಮವ್ಹಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

No comments: