Police Bhavan Kalaburagi

Police Bhavan Kalaburagi

Tuesday, November 14, 2017

KALABURAGI DISTRICT REPORTED CRIMES

ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ ಕಾಶಿನಾಥ ತಂದೆ ನರಸಪ್ಪ ಜೇವರ್ಗಿ ಸಾಃ ಮಾಡಿಯಾಳ, ತಾಃ ಆಳಂದ ರವರು ಪ್ರತಿ ವರ್ಷ ನಾನು ನನ್ನ ಕುಟುಂಬದ ಉಪಜೀವನಕ್ಕಾಗಿ ಮಹಾರಾಷ್ಟ್ರದ ಕಪೊಲಿಗೆ ಹೋಗಿ ಇಟ್ಟಂಗಿ ಭಟ್ಟಿಯಲ್ಲಿ ಇಟ್ಟಂಗಿ ಭಟ್ಟಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಸುಮಾರು 2 ವರ್ಷಗಳ ಹಿಂದೆ ಕಪೊಲಿಯಲ್ಲಿ ನಿರಗುಡಿ ಗ್ರಾಮದ ನಮ್ಮದೆ ಜಾತಿಯ ಧನರಾಜ ತಂದೆ ಕಾಶಿನಾಥ ಕಾಂಬಳೆ, ಸೀತಾರಾಮ ತಂದೆ ಕಾಶಿನಾಥ ಕಾಂಬಳೆ ಸಹೋದರರು ಅದೇ ಇಟ್ಟಂಗಿ ಭಟ್ಟಿಯಲ್ಲಿ ನನಗೆ ಪರಿಚಯವಾಗಿರುತ್ತಾರೆ. ನಮಗೂ ಮತ್ತು ಅವರಿಗೂ ಒಳ್ಳೆಯ ಸ್ನೇಹ ಬೆಳೆದು ಹೋದ ವರ್ಷ ಭಟ್ಟಿ ಮಾಲೀಕನಿಂದ ಮುಂಗಡ ಹಣ ತಮ್ಮ ಮುಖಾಂತರ ನನಗೆ ಕೊಡಿಸಿರುತ್ತಾರೆ. ಹೀಗಾಗಿ ಮುಂಗಡ ಹಣ ಪಡೆದ ನಾನು ಈ ವರ್ಷ ನನ್ನ ಕುಟುಂಬದೊಂದಿಗೆ ಕಪೊಲಿಗೆ ಹೋಗಿ ಇಟ್ಟಂಗಿ ಕೆಲಸ ಮಾಡಿರುತ್ತೇನೆ. ಕಪೊಲಿಯಲ್ಲಿ ಕೆಲಸ ನಿರ್ವಹಿಸುತ್ತಾ ನನ್ನ ಕುಟುಂಬ ನಿರ್ವಹಣೆಗೆ ಹಣದ ಅವಶ್ಯಕತೆ ಇದ್ದಾಗ ಮಾಲೀಕರಿಗೆ ಹಣ ಕೇಳಲು ಹೋದಾಗ ಭಟ್ಟಿ ಮಾಲೀಕನು ಯಾವುದೇ ಹಣ ಕೊಟ್ಟಿರುವದಿಲ್ಲ, ಇದರ ಬಗ್ಗೆ ನನ್ನ ಗೆಳೆಯರಾದ ಧನರಾಜ ಮತ್ತು ಸೀರಾರಾಮ ಇಬ್ಬರಿಗೆ ವಿಚಾರಿಸಲಾಗಿ ಅವರು ಕೂಡ ಯಾವುದೆ ಲೆಕ್ಕ ಪತ್ರ ವಗೈರೆ ಮಾಡಿರುವದಿಲ್ಲ. ನನಗೆ ಹಣದ ಅಡಚಣೆಯಾಗಿ ಕುಟುಂಬ ನಿರ್ವಹಣೆಗೆ ತೊಂದರೆ ಆಗಿದ್ದರಿಂದ ನಾನು ಬೇಸತ್ತು ಇನ್ನು ಒಂದು ತಿಂಗಳು ಕೆಲಸ ಬಾಕಿ ಇರುವಾಗಲೆ ನನ್ನ ಕುಟುಂಬ ಸಮೇತ ಊರಿಗೆ ಬಂದಿರುತ್ತೇನೆ. ಆ ನಂತರ ಧನರಾಜ ಮತ್ತು ಸೀತಾರಾಮ ಇಬ್ಬರೂ ನನಗೆ ಫೋನ ಮುಖಾಂತರ ನಿನ್ನಿಂದ ಇನ್ನು ನಮಗೆ ಹಣ ಬರುವದು ಬಾಕಿ ಇದೆ ಅಂತ ವಿಚಾರಿಸಿದ್ದು ಅದಕ್ಕೆ ನಾನು ಲೆಕ್ಕಾ ಪತ್ರ ಮಾಡಿ ನಾನು ಕೊಡಬೇಕಾದರೆ ಹಣ ನಿಮಗೆ ಮರಳಿಸುತ್ತೇನೆ ಇಲ್ಲವಾದಲ್ಲಿ ಇಲ್ಲ ಅಂತ ತಿಳಿಸಿದ್ದು ಅದಕ್ಕೆ ಅವರು ಇಲ್ಲಿಯತನಕ ಯಾವುದೇ ಲೆಕ್ಕ ಪತ್ರ ಮಾಡದೆ ಧನರಾಜ ತಂದೆ ಕಾಶಿನಾಥ ಕಾಂಬಳೆ, ಸೀತಾರಾಮ ತಂದೆ ಕಾಶಿನಾಥ ಕಾಂಬಳೆ ಇಬ್ಬರೂ ದಿನಾಂಕ 11/11/2017 ರಂದು ರಾತ್ರಿ 10.00 ಪಿ.ಎಮ ನಂತರ ನಮ್ಮೂರಿನ ಬಾಲಕರ ವಸತಿ ನಿಲಯದಲ್ಲಿ ಇದ್ದ ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಕುಮಾರ ತಂದೆ ಕಾಶಿನಾಥ ಜೇವರ್ಗಿ ವಃ 16 ವರ್ಷ, ಇತನಿಗೆ ಏನೊ ಪುಸಲಾಯಿಸಿ ಯಾವುದೊ ಒಂದು ವಾಹನದಲ್ಲಿ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಮಹಾರಾಷ್ಟ್ರ ರಾಜ್ಯಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಈ ವಿಚಾರ ನನಗೆ ದಿನಾಂಕ 12/11/2017ರಂದು ಬೆಳಿಗ್ಗೆ ಅವರೆ ಫೊನ ಮುಖಾಂತರ ತಿಳಿಸಿದ್ದೇನೆಂದರೆ ನಿನ್ನಿಂದ ಇನ್ನು ಒಂದು ಲಕ್ಷ ಹಣ ಬರುವದು ಬಾಕಿ ಇದ್ದು ಆ ಹಣ ಕೊಟ್ಟು ನಿನ್ನ ಮಗನಿಗೆ ಬಿಡಿಸಿಕೊಂಡು ಹೋಗು ಅಂತ ತಿಳಿಸಿರುತ್ತಾರೆ. ಕಾರಣ ದಿನಾಂಕ 11/11/2017 ರಂದು ರಾತ್ರಿ 10.00 ಪಿ.ಎಮ ನಂತರದ ವೇಳೆಯಲ್ಲಿ ಮಾಡಿಯಾಳ ಗ್ರಾಮದ ಬಾಲಕರ ವಸತಿ ನಿಲಯದಲ್ಲಿ ಇದ್ದ ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಕುಮಾರನಿಗೆ ಏನೊ ಸುಳ್ಳು ಹೇಳಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋದ ಧನರಾಜ ಮತ್ತು ಸೀತಾರಾಮ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ಮಗನನ್ನು ನನಗೆ ಮರಳಿಸಿ ಕೊಡಲು ವಿನಂತಿ ಅದೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಹಣಮಂತ ತಂದೆ ಭೀಮರಾಯ ಸಾ: ಮಡ್ಡಿ ನಂಬರ 01 ಶಹಾಬಾದ ಇವರು ದಿನಾಂಕ: 12/11/2017 ರಂದು ಮುಂಜಾನೆ ತಮ್ಮ ಟಿ.ವಿ.ಎಸ್ ಎಕ್ಸಲ್ ಮೋಟಾರ ಸೈಕಲ ನಂಬರ ಕೆ.ಎ 32 ಇ ಎಮ್ 9557 ನೇದ್ದರ ಮೇಲೆ ನಾನು ಮತ್ತು ನನ್ನ ಹಿಂದುಗಡೆ ಗಳೆಯನಾದ ವಾಸು ತಂದೆ ಸುಬ್ರಮಣ್ಯಂ ಇಬ್ಬರು ಕೂಡಿಕೊಂಡು ಅಲಸ್ಟಾಮ ಕಾಲೋನಿಗೆ ಹಾಲು ಮಾರಲು ಮಡ್ಡಿ ನಂಬರ 01 ನಿಂದ ಅಲಸ್ಟಾಮ ಕಾಲೋನಿಗೆ ಹೋಗುತ್ತಿದ್ದಾಗ ಅಲಸ್ಟಾಮ ಕಾಲೋನಿಯ ಕ್ರಾಸ ಹತ್ತಿರ ರೋಡಿನಲ್ಲಿ ಭಂಕೂರ ಕಡೆಯಿಂದ ಕಾರ ನಂಬರ ಕೆ.ಎ. 32 ಎನ್ 1520 ನೇದ್ದರ ಚಾಲಕನ್ನು ತನ್ನ ಕಾರ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಅಲಸ್ಠಾಮ ಕಾಲೋನಿಯ ಒಳಗೆ ಹೋಗಲು ತಿರುವು ತೆಗೆದುಕೊಳ್ಳೂತ್ತಿದ್ದಾಗ ನಮ್ಮ ಮೋಟಾರ ಸೈಕಲ ಡಿಕ್ಕಿಪಡಿಸಿದರಿಂದ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ನನಗೆ ಮುಖದ ಮೇಲೆ ಬಲ ಮೆಲಕಿನ ಹತ್ತಿರ ಮತ್ತು ಎರಡು ಮೊಳಕಾಲಿಗೆ ರಕ್ತಗಾಯಾವಾಗಿ ಕೈಗಳಿಗೆ ಅಲ್ಲಲ್ಲಿ ತರಚಿದಂತಾಗಿರುತ್ತದೆ ಮತ್ತು ವಾಸು ಇತನಿಗೆ ನೋಡಲಾಗಿ ಎಡಗಾಲ ತೊಡೆಯ ಹತ್ತಿರ ಮತ್ತು ಮೊಳಕಾಲಿನಗೆ ಭಾರಿ ಗಾಯ ಪೆಟ್ಟಾಗಿದ್ದು ಹಾಗೂ ಎರಡು ಕೈಗಳು ಮುಂಗೈಗೆ ತರಚಿದ ರಕ್ತಗಾಯಾವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಲ್ಲಿನಾಥ ತಂದೆ ಸಂಗಣ್ಣ ಮುರುಡ ಮು|| ಬೆಳಮಗಿ ಇವರಿಗೆ ಜ್ಞಾನರಾಜ ಮತ್ತು ಶಂಭುಲಿಂಗ ಅಂತಾ ಇಬ್ಬರೂ ಗಂಡು ಮಕ್ಕಳಿದ್ದು ನಮ್ಮ ಅಣ್ಣನಾದ ಕಲ್ಯಾಣಿಯವರು ಕಲಬುರಗಿ ನಗರದ ಜೆ.ಆರ್‌ ನಗರದಲ್ಲಿ ಮನೆ ಮಾಡಿಕೊಂಡಿದ್ದು ನನ್ನ ಹಿರಿಯಮಗ ಜ್ಞಾನರಾಜ ಇತನು ನಮ್ಮ ಅಣ್ಣನ ಹತ್ತಿರ ಉಳಿದುಕೊಂಡು ಸಂತೋಷ ಕಾಲೋನಿಯಲ್ಲಿರುವ ಭೋಗೆಶ್ವರ ಫ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಹಿಂದೆ ದಿನಾಂಕ:08/11/2017 ರಂದು ನನ್ನ ಮಗ ಶಾಲೆಗೆ ಹೋಗಿದ್ದು ಮಧ್ಯಾನ 3.30 ಗಂಟೆ ಸುಮಾರಿಗೆ 3ನೇ ಅಂತಸ್ತಿನಲ್ಲಿದ್ದ ಶಾಲೆಯಿಂದ ಕೆಳಗೆ ಬರುವ ಕುರಿತು ಸ್ಟೇರಕೆಸ ಮೇಲೆ ನಡೆದುಕೊಂಡು ಬರುತ್ತಿದ್ದಾಗ ಆಕಸ್ಮಿಕವಾಗಿ ಅವನ ಕಾಲು ಜಾರಿ ಸ್ಟೇರಕೇಸ ಮೇಲಿಂದ ಕಾಲುಜಾರಿ ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದು ಬಿದ್ದ ಪರಿಣಾಮ ನನ್ನ ಮಗನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಮತ್ತು ಕುತ್ತಿಗೆಗೆ ಬಲಗಾಲ ಚಪ್ಪೆಗೆ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ. ನನ್ನ ಮಗನಿಗೆ ಉಪಚಾರ ಕುರಿತು ದಿನಾಂಕ:8/11/2017 ರಂದು ಯುನೈಟೆಡ್‌ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಉಪಚಾರದಿಂದ ನನ್ನ ಮಗ ಜ್ವಾನರಾಜ ವ:16 ವರ್ಷ ಇತನು ಗುಣಮುಖ ಹೊಂದದೆ ಇಂದು ದಿನಾಂಕ:11/11/2017 ರಂದು ಯುನೈಟೆಡ್‌ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: