Police Bhavan Kalaburagi

Police Bhavan Kalaburagi

Sunday, December 31, 2017

KALABURAGI DISTRICT REPORTED CRIMES.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ; 31/12/2017 ರಂದು 1-00 .ಮ್ ವೇಳೆಗೆ ಫಿರ್ಯಾಧಿ ಶ್ರೀ ರವಿಂದ್ರ ತಂದೆ ಸಿದ್ದರಾಮಪ್ಪ ರಾವೂರ ವಯ: 49 ವರ್ಷ ಜಾ: ಲಿಂಗಾಯತ: : ಮೆಡಿಕಲ್ ಕೆಲಸ ಸಾ: ಜೇವರಗಿ (ಕೆ) ಈತನು ಠಾಣೆಗೆ ಹಾಜರಾಗಿ ಅರ್ಜಿ ನೀಡಿದ ಸಾರಂಶವೇನೆಂದರೆ ; ನನ್ನ ಅಣ್ಣನ ಮಗನಾದ ಚೇತನ ತಂದೆ ಚಂದ್ರಕಾಂತ ರಾವೂರ ಮತ್ತು ಅವನ ಗೆಳಯನಾದ ಪ್ರಾಣೇಶ ತಂದೆ ವಸಂತರಾವ ಕುಲಕರ್ಣಿ ಇವರಿಬ್ಬರು ಶಂಕರಗೌಡ ತಂದೆ ಈರಣ್ಣಗೌಡ ಆಲೂರ ಈತನು ನಡೆಯಿಸುವ ಕಾರ್ ನಂ: ಕೆಎ-36-ಎಮ್-9405 ನೇದ್ದರಲ್ಲಿ ಕುಳಿತು ಕಾಸರ ಬೋಸಗಾ ಗ್ರಾಮಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿ ಜೇವರಗಿಯಿಂದ ಹೋದರು. ದಿನಾಂಕ; 30/12/2017 ರಂದು ರಾತ್ರಿ 9-00 ಘಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಶಿವಕುಮಾರ ತಂದೆ ಸಿದ್ದರಾಮಪ್ಪ ಹುಗ್ಗಿ ಸಾ; ಮಾವನೂರ ಈತನು ಫೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ಜೇವರಗಿ ವಿಜಯಪೂರ ರೋಡಿನ ಮೂಕ ಸಿದ್ದೇಶ್ವರ ಗುಡಿಯ ಹತ್ತಿರ ವೇರ ಹೌಸ್ ಸಮೀಪ ರೊಡಿನಲ್ಲಿ ಕಾರ್ ಅಪಘಾತದಲ್ಲಿ ನಮ್ಮ ಅಣ್ಣನ ಮಗ ಚೇತನ ರಾವೂರ ಮತ್ತು ಅವನಸಂಗಡ ಇದ್ದ ಪ್ರಾಣೆಶ ಕುಲಕರ್ಣಿ ಇಬ್ಬರು ಸ್ಥಳದಲ್ಲಿಯೇ ಸತ್ತಿರುತ್ತಾರೆ. ಎಂದು ತಿಳಿಸಿದಾಗ ನಾನು ಗಾಬಾರಿಯಾಗಿ ನಾನು ಮತ್ತು ನಮ್ಮ ಸಂಬಂದಿಕರಾದ ಹಣಮಂತ ತಂದೆ ಶರಣಪ್ಪ ಹರವಾಳ, ಬಸವರಾಜ ತಂದೆ ಗುಂಡಪ್ಪ ರಾವೂರ, ಮೂವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ಅಲ್ಲಿ ನಮ್ಮ ಅಣ್ಣನ ಮಗ ಚೇತನ್ ಈತನು ಕಾರಿನಲ್ಲಿ ಸಿಕ್ಕಿಬಿದ್ದಿದ್ದು ಅವನ ತಲೆಯ ಸಂಪೂರ್ಣ ಬಾಗ ಜಜ್ಜಿ ಭಾರಿ ರಕ್ತಗಾಯವಾಗಿದ್ದು, ಬಲ ಭಾಗದ ಭುಜದ ಮೇಲೆ ಮತ್ತು ಎರಡು ಕಾಲುಗಳ ಮೇಲೆ ಭಾರಿ ರಕ್ತ ಗಾಯವಾಗಿ ಅವನು ಸ್ಥಳದಲ್ಲಿಯೇ ಸತ್ತಿದ್ದನು. ನಂತರ ಅಲ್ಲಿಯೇ ಕಾರಿನಲ್ಲಿ ಇನ್ನೊಬ್ಬ ವ್ಯಕ್ತಿಗೆ ನೋಡಲು ಅವನು ನಮ್ಮ ಮಗನ ಸ್ನೇಹಿತ ಪ್ರಾಣೇಶ ತಂದೆ ವಸಂತರಾವ ಕುಲಕರ್ಣಿ ಇದ್ದು ಈತನಿಗೆ ತಲೆ ಜಜ್ಜಿ ಮುದುಳು ಹೊರಬಂದಿದ್ದು ಎಡಕಾಲಿಗೆ ಮತ್ತು ಎರಡು ಕೈಗಳಿಗೆ ಮುರಿದು ಭಾರಿ ರಕ್ತ ಗಾಯವಾಗಿ ಅವನು ಸಹ ಸ್ಥಳದಲ್ಲಿಯೇ ಸತ್ತಿದ್ದನು. ಮತ್ತು ಅಲ್ಲಿಯೇ ಸ್ಥಳದಲ್ಲಿ ನನ್ನ ಅಣ್ಣನ ಮಗ ಕುಳಿತು ಹೋದ ಕಾರ ನಂಬರ್ ನೋಡಲು ಅದರ ನಂಬರ ಕೆ. 36-ಎಮ್-9405 ಇದ್ದು ಅದು ಪೂರ್ತಿ ಜಖಂ ಆಗಿತ್ತು ಅಲ್ಲಿಯೇ ಕಾರ್ ನೇದ್ದಕ್ಕೆ ಡಿಕ್ಕಿಪಡಿಸಿ ನಿಂತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.-28-ಎಫ್-2139 ಇತ್ತು ಅಲ್ಲಿಯೇ ಇದ್ದ ನನಗೆ ಪರಿಚಯದ ಶಿವಕುಮಾರ ತಂದೆ ಸಿದ್ದರಾಮಪ್ಪ ಹುಗ್ಗಿ ಸಾ; ಮಾವನೂರ ಈತನು ಹೇಳಿದ್ದೇನೆಂದರೆ; ಇಂದು ದಿನಾಂಕ; 30/12/2017 ರಂದು ರಾತ್ರಿ 8-30 ಪಿಎಮ್ ಸುಮಾರಿಗೆ ವಿಜಯಪೂರ ಜೇವರಗಿ ರೋಡಿನ ದಿಬ್ಬದ ಸಮೀಪ ವೇರ್ ಹೌಸ್ ಹತ್ತಿರ ರೋಡಿನ ಮೇಲೆ ಜೇವರಗಿ ಕಡೆಯಿಂದ ವಿಜಯಪೂರ ಕಡೆಗೆ ಒಂದು ಕೆ.ಎಸ್.ಆರ್.ಟಿಸಿ ಬಸ್ ನಂ: ಕೆ.-28-ಎಫ್-2139 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಬಸ್ ನೇದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜೇವರಗಿ ಕಡೆಗೆ ಹೋಗುತ್ತಿದ್ದ ಕಾರ್ ನಂ; ಕೆ.-36-ಎಮ್-9405 ನೇದ್ದಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದ್ದರಿಂದ ಕಾರಿನಲ್ಲಿದ್ದ ಚೇತನ್ ರಾವೂರ ಮತ್ತು ಪ್ರಾಣೇಶ ಕುಲಕರ್ಣಿ ಇವರಿಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಸತ್ತಿರುತ್ತಾರೆ. ಮತ್ತು ಕಾರ್ ಚಾಲಕ ಶಂಕರ ಗೌಡ ಆಲೂರ ಈತನಿಗೂ ಕೂಡ ಅಲ್ಲಲ್ಲಿ ಗಾಯಗಳಾಗಿರುತ್ತವೆ. ನಂತರ ಶಂಕರಗೌಡ ಈತನಿಗೆ ಅಂಬುಲೆನ್ಸ ವಾಹನದಲ್ಲಿ ಹಾಕಿ ಉಪಚಾರ ಕುರಿತು ಜೇವರಗಿ ಆಸ್ಪತ್ರೆಗೆ ಕೊಟ್ಟು ಕಳುಹಿಸಿದ್ದು ಇರುತ್ತದೆ. ನಂತರ ನಾವು ಮತ್ತು ಇತರರು ಕೂಡಿ ಕಾರಿನಲ್ಲಿ ಸಿಕ್ಕಿ ಬಿದ್ದ ಹೆಣಗಳನ್ನು ತೆಗೆದು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಹಾಕಿರುತ್ತೇವೆ. ಸದರ ಅಪಘಾತ ಮಾಡಿದ ಬಸ್ ಚಾಲಕನ ಹೆಸರು ಡಿ.ಎಮ್.ಚೌಗಲೆ ಎಂದು ಗೊತ್ತಾಗಿದ್ದು ಅಪಘಾತ ಮಾಡಿದ ನಂತರ ಬಸ್ ಚಾಲಕ ಬಸ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಕೆ.ಎಸ್.ಆರ್.ಟಿ.ಸಿ ಬಸ್ ನಂ; ಕೆ.-28-ಎಫ್-2139 ನೇದ್ದರ ಚಾಲಕ ಡಿ.ಎಮ್.ಚೌಗಲೆ ಈತನು ತನ್ನ ವಶದಲ್ಲಿರುವ ಬಸ್ ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರ್ ನಂ; ಕೆಎ-36-ಎಮ್-9405 ನೇದ್ದಕ್ಕೆ ಡಿಕ್ಕಿ ಪಡಿಸಿ ಕಾರಿನಲ್ಲಿದ್ದ ಚೇತನ ಮತ್ತು ಪ್ರಾಣೆಶ ಇವರ ಸಾವಿಗೆ ಕಾರಣನಾಗಿ ಮತ್ತು ಕಾರ್ ಚಾಲಕ ಶಂಕರ ಗೌಡ ಈತನಿಗೆ ಭಾರಿ ಗಾಯಗೊಳಿಸಿ ಬಸ್ ನ್ನು ಸ್ಥಳದಲ್ಲಿಯೇ ಬಿಟ್ಟು ಒಡಿ ಹೋದ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ಧಾಖಲಿಸಿಕೊಂಡು ಬಗ್ಗೆ ವರದಿ.
¸ÀįɥÉÃl  ¥Éưøï oÁuÉ : ದಿನಾಂಕ 30/12/2017 ರಂದು ಸಾಯಾಂಕಾಲ 7:00 ಪಿ.ಎಮ್ ಕ್ಕೆ  ಫಿರ್ಯಾದಿದಾರರಾದ ಶ್ರೀ ವಿಶ್ವನಾಥ ತಂದೆ ಶರಣಪ್ಪಾ ಕೊಂಡಂಪಳ್ಳಿ ವ: 45 ವರ್ಷ ಉ:ಕೂಲಿಕೆಲಸ ಜಾ|| ಮಾದಿಗ(.ಜಾತಿ) ಸಾ: ಈರಗಪಳ್ಳಿ ರವರು ಠಾಣೆಗೆ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ  ನಾನು ಮೇಲ್ಕಂಡ  ವಿಳಾಸದ ನಿವಾಸಿಯಾಗಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನನಗೆ 1] ಕಾಶಿನಾಥ ವ: 10 ವರ್ಷ 2] ರಾಜಶೇಖರ ವ: 4 ವರ್ಷ ಹೀಗೆ ಇಬ್ಬರು  ಗಂಡು ಮಕ್ಕಳಿರುತ್ತಾರೆ. ನಮ್ಮ ತಂದೆಯಾದ  ಶರಣಪ್ಪಾ ಇವರು 2010 ನೇ ಸಾಲಿನಲ್ಲಿ ಅನಾರೋಗ್ಯದಿಂದ ತಿರಿಕೊಂಡಿರುತ್ತಾರೆ. ನಮ್ಮ ತಾಯಿ ಶಿವಮ್ಮ ನನ್ನ ಹತ್ತಿರ ಇರುತ್ತಾಳೆ. ನಮ್ಮ ತಂದೆ, ತಾಯಿಗೆ ನಾನು ಒಬ್ಬನೆ ಮಗನಿರುತ್ತೆನೆ. ನಮ್ಮ ತಂದೆಯವರು ಅನಾರೋಗ್ಯದ ಸಮಯದಲ್ಲಿ ಗಣಾಪೂರ ಗ್ರಾಮದ ಮೊಹಮ್ಮದ ಗೌಸೋದ್ದೀನ್ ತಂದೆ ಬಾಬುಮಿಯಾ ಇವರ ಹತ್ತಿರ 60 ಸಾವಿರ ರೂಪಾಯಿ ತೆಗೆದುಕೊಂಡಿದ್ದರು. ನಂತರ ಸದರಿ ಗೌಸೋದ್ದಿನ್ ಇವರು ಕೆಳದ ವರ್ಷ ನಮಗೆ ತಿಳಿಸಿದ್ದೆನೆಂದರೆ, ನಿಮ್ಮ ತಂದೆಯವರು ನಿಮ್ಮ ಹೊಲ ಸರ್ವೆ ನಂ. 73/2 ನೇದ್ದರ 4 ಎಕರೆ 04 ಗುಂಟೆ ಜಮೀನಿನಲ್ಲಿ 2 ಎಕರೆ ಹೊಲವನ್ನು ನನಗೆ ಮಾರಿರುತ್ತಾರೆ. ಈ ಹೊಲವನ್ನು ನಮಗೆ ಬಿಟ್ಟು ಕೊಡು ಅಂತಾ ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾನೆ. ನಮ್ಮ ತಂದೆಯವರು ಗೌಸೋದ್ದಿನ್ ಇವರಿಗೆ ಈ ಹೊಲ ಮಾರಾಟ ಮಾಡಿದ ಬಗ್ಗೆ ನನಗೆ ಮತ್ತು ನನ್ನ ಹೆಂಡತಿ, ನನ್ನ ತಾಯಿಗೆ ಗೋತ್ತಿರುವವದಿಲ್ಲಈಗ್ಗೆ 3, 4 ದಿವಸಗಳ ಹಿಂದೆ ಸದರಿ ಗೌಸೋದ್ದಿನ್ ಇತನು ನಾನು ಖರೀದಿಕೊಂಡ ಹೊಲದಲ್ಲಿಯ ತೊಗರಿ ಬೆಳೆ ನಾನು ರಾಶಿ ಮಾಡಿಕೊಂಡು ಹೊಗುತ್ತೇನೆ.  ಅಂತಾ ಅನ್ನುತ್ತಿದ್ದನು. ಆಗ ನಾನು ಈ ಹೊಲ ನಮ್ಮದು ಇದೆ ನಾವೆ ಕಬ್ಜೆಯಲ್ಲಿ ಇದ್ದು, ನಾವೆ ಬಿತ್ತಿ ಬೆಳೆ ಮಾಡಿರುತ್ತೇನೆ. ನೀನು ಹೇಗೆ ರಾಶಿ ಮಾಡಿಕೊಂಡು ಹೊಗುತ್ತಿ ಅಂತಾ ಅಂದಿರುತ್ತೇನೆ. ಹೀಗಿದ್ದು ದಿನಾಂಕ 27-12-2017 ರಂದು ರಾತ್ರಿ 09.30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಲಕ್ಷ್ಮಿಬಾಯಿ ಹಾಗೂ ನಮ್ಮೂರ ಸುಂದರಮ್ಮ ಗಂಡ ನಾಗೇಂದ್ರಪ್ಪಾ, ನರಸಪ್ಪಾ ತಂದೆ ಸಾಯಿಬಣ್ಣಾ ಕೂಡಿಕೊಂಡು ಹೊಲದಲ್ಲಿ ಕಾಡು ಹಂದಿ ಬಂದು ಬೆಳೆ ಹಾಳು ಮಾಡುತ್ತವೆ ಅಂತಾ ಹೊಲದಲ್ಲಿ ಕಾಯುತ್ತಾ ಕುಳಿತುಕೊಂಡಿದ್ದೇವು. ಗೌಸೋದ್ದಿನ್ ತಂದೆ ಬಾಬುಮಿಯಾ ಇವನು ಒಂದು ಟ್ರ್ಯಾಕ್ಟರ ತೆಗೆದುಕೊಂಡು ಒಂದು  ಬುಲೆರೋ ವಾಹನದಲ್ಲಿ ನಮ್ಮ ಹೊಲಕ್ಕೆ ಬಂದು. ಗಾಡಿಯಿಂದ ಕೆಳಗೆ ಇಳಿದು ಟ್ರ್ಯಾಕ್ಟರನ್ನು ನಮ್ಮ ಹೊಲದಲ್ಲಿ ಬಿಟ್ಟು ತೊಗರಿ ಹೊಲದಲ್ಲಿ ಕುಂಠಿ ಹೊಡೆದು ಬೆಳೆ ಹಾಳು ಮಾಡ ತೊಡಗಿದನು. ಆಗ ನಾನು ಮತ್ತು ನನ್ನ ಹೆಂಡತಿ, ಕೂಡಿಕೊಂಡು ಗೌಸೋದ್ದಿನ್ ಇವರಿಗೆ ಯಾಕೆ ಬೆಳೆ ಹಾಳು ಮಾಡುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಈ ಹೊಲ ಖರೀದಿ ಮಾಡಿನಿ  ಏ ಈಶ್ಯಾ ಮಾದಿಗ ಸೂಳಿ ಮಗನೆ ಅಂತಾ ನನ್ನೊಂದಿಗೆ ಜಗಳ ತೆಗೆದು ಜಾತಿ ಎತ್ತಿ ಬೈದು, ಜಾತಿ ನಿಂದನೆ ಮಾಡಿನನಗೆ ಕೈಯಿಂದ ಕಪಾಳಕ್ಕೆ ಹೊಡೆಯುತ್ತಿದ್ದನು. ನನ್ನ ಸಂಗಡ ಇದ್ದ ನನ್ನ ಹೆಂಡತಿಯಾದ ಲಕ್ಷ್ಮಿಬಾಯಿ ಯಾಕೆ  ಸಾಹುಕಾರ ನನ್ನ ಗಂಡನಿಗೆ ಯಾಕೆ ಹೊಡಿತ್ತೀರಿ ಈ ಹೊಲ ನಮ್ಮದು ಇದೆ ಅಂತಾ ಅನ್ನಲು ಭೋಸಡಿ ಮಕ್ಕಳೆ  ರಂಡಿ ಮಕ್ಕಳೆ ಈ ಹೊಲ ಮತ್ತೆ ನಮ್ಮದು ಅದಾ ಅನ್ನುತ್ತಿರಿ ಅಂತಾ ಮತ್ತೆ ನನಗೆ ಹೊಡೆಯಲು ಬಂದಾಗ, ನಮ್ಮ ತಾಯಿಯಾದ ಶಿವಮ್ಮ ಮತ್ತು ನಮ್ಮ ಸಂಗಡ ಬಂದಿದ್ದ ಸುಂದರಮ್ಮ ಗಂಡ ನಾಗೇಂದ್ರಪ್ಪಾ, ಹೊಸಮನಿ, ನರಸಪ್ಪಾ ತಂದೆ ಸಾಯಿಬಣ್ಣಾ ಹರಿಜನ ಇವರುಗಳು ಜಗಳ ಬಿಡಿಸಿದರು. ಆಗ ಗೌಸೋದ್ದಿನ್ ಇವನು ಮಗನೆ ಇವತ್ತು ಉಳಿದುಕೊಂಡಿದ್ದಿ ಇನ್ನೊಮ್ಮೆ ಈ  ಹೊಲಕ್ಕೆ ಬಂದರೆನಿನ್ನನ್ನು ಖಲಾಸ ಮಾಡಿ ಬಿಡುತ್ತೇನೆ ಎಂದು  ಜೀವದ ಬೆದರಿಕೆ ಹಾಕುತ್ತಾ, ತಾನು ಖರಿದಿ ಮಾಡಿದ್ದೆನೆ ಎಂದು ಹೇಳುತ್ತಿರುವ ಹೋಲದ್ದಲ್ಲಿಯ ತೊಗರಿ ಬೆಳೆ  ಅಲ್ಲದೆ ನಮ್ಮ ಹೋಲದಲ್ಲಿ ಬೆಳಿದಿರುವ ಅಂದಾಜು 03 ಎಕರೆ ಅಷ್ಟು ತೊಗರಿ ಬೆಳೆ ಹಾಳು  ಮಾಡಿ,   ಅಲ್ಲಿಂದ ಟ್ರ್ಯಾಕ್ಟರ ಮತ್ತು ಬುಲೆರೋ ವಾಹನ ತೆಗೆದುಕೊಂಡು ಹೊದರು. ಬುಲೆರೋ ಮತ್ತು ಟ್ರ್ಯಾಕ್ಟರ ಚಾಲಕನ ಹೆಸರು ಮತ್ತು ಅವುಗಳ ನಂಬರ ನಾನು ನೋಡಿರುವದಿಲ್ಲ. ಅದರ ಚಾಲಕರಿಗೆ ನೋಡಿದರೆ ಗುರ್ತಿಸುತ್ತೇನೆ.   ಸದರಿ ಗೌಸೋದ್ದಿನ್ ಇವರು ತಂದಿರುವ ಬುಲೆರೋ ವಾಹನದ ಲೈಟಿನ ಬೆಳಕಿನಲ್ಲಿ ಈ ಘಟನೆಯು ರಾತ್ರಿ 09.45 ಗಂಟೆಯ ಸುಮಾರಿಗೆ ಜರುಗಿರುತ್ತದೆ. ನಂತರ ನಾವು ಮನೆಗೆ  ಹೊಗಿ ನಮ್ಮ ಚಿಕ್ಕಪ್ಪನಾದ  ಪೆಂಟಪ್ಪ ತಂದೆ  ಹುಸೆನಪ್ಪ ಕೊಂಡಂಪಳ್ಳಿ ಇವರಿಗೆ ಈ ವಿಷಯ ತಿಳಿಸಿ, ವಿಚಾರ ಮಾಡಿ, ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆನನಗೆ ಆಸ್ಪತ್ರೆಗೆ ಹೊಗುವಂತೆ ಯಾವದೇ ಗಾಯಗಳು ಆಗದಕಾರಣ ನಾನು ಆಸ್ಪತ್ರೆಗೆ ಹೊಗುವದಿಲ್ಲ. ಕಾರಣ ನನಗೆ ಜಾತಿ ನಿಂದನೆ ಮಾಡಿ, ಕೈಯಿಂದ ಹೊಡೆದು, ನಾನು ಬಿತ್ತಿ ಬೆಳೆದ ತೊಗರಿ ಬೆಳೆ ಲುಕ್ಸಾನ ಮಾಡಿರುವವರ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಮಾಡಿಸಿದ ಗಣಕೀಕೃತ ಹೇಳಿಕೆ ನಿಜ ವಿರುತ್ತದೆಅಂತಾ ಇರುವ ಫೀರ್ಯಾದಿ ಸಾರಾಂಶದ ಮೇಲೆ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರದಿ.
ಯಡ್ರಾಮಿ ಪೊಲೀಸ್ ಠಾಣೆ : ದಿನಾಂಕ: 30-12-17 ರಂದು 7;30 ಪಿ.ಎಂ ಕ್ಕೆ ಪಿರ್ಯಾದಿ ಸಂತೋಷ ತಂದೆ ಕಾಶಿನಾಥ ಗಡಗಿ ವಯ; 35 ವರ್ಷ ಜಾ; ಲಿಂಗಾಯತ ; ಕಿರಾಣಿ ವ್ಯಾಪಾರ ಸಾ|| ಯಡ್ರಾಮಿ ತಾ|| ಜೇವರ್ಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿದ ಅರ್ಜಿ ಹಾಜರುಪಡಿಸಿದರ ಸಾರಾಂಶವೆನೇಂದರೆ ನಾವು ಇಬ್ಬರು ಅಣ್ಣತಮ್ಮಂದಿರರಿದ್ದು, ನಮ್ಮ ಅಣ್ಣನ ಹೆಸರು ರಮೇಶ ಅಂತಾ ಇರುತ್ತದೆ. ಯಡ್ರಾಮಿ ಗ್ರಾಮದಲ್ಲಿ ನಮ್ಮು ಎರಡು ಕಿರಾಣಿ ಅಂಗಡಿಗಳು ಇರುತ್ತವೆ, ನಾನು ನೋಡಿಕೊಳ್ಳುವ ಕಿರಾಣಿ ಅಂಗಡಿ ಹೆಸರು ಶ್ರೀದೇವಿ ಕಿರಾಣಾ ಸ್ಟೋರ ಅಂತಾ ಇದ್ದು, ನಮ್ಮ ಅಣ್ಣ ನೊಡಿಕೊಳ್ಳುವ ಕಿರಾಣಿ ಅಂಗಡಿ ಹೆಸರು ಮಧು ಟ್ರೇಡಿಂಗ್ ಕಂಪನಿ ಅಂತಾ ಇರುತ್ತದೆ, ನಮ್ಮ ಅಂಗಡಿಯಲ್ಲಿ ನಾನು ಮತ್ತು ನಮ್ಮ ಸೋದರಮಾವ ಸೋಮನಾಥ ತಂದೆ ಗೊಲ್ಲಾಳಪ್ಪ ಡಗ್ಗಾ ಹಾಗು ಇನ್ನಿಬ್ಬರು ಆಳು ಮಕ್ಕಳಾದ ಮಹಾಂತೇಶ ತಂದೆ ನುರಂದಪ್ಪ ಕಮತ, ಅವಿನಾಶ ತಂದೆ ಮುರಗೆಪ್ಪ ನಡುದಿನ್ನಿ ರವರು ಕೆಲಸ ಮಾಡುತ್ತಿರುತ್ತೇವೆ, ನಾವು ದಿನಾಲು ರಾತ್ರಿ 10;00 ಗಂಟೆಗೆ ಅಂಗಡಿ ಬಂದ ಮಾಡಿಕೊಂಡು ಬೆಳಿಗ್ಗೆ 08;00 ಗಂಟೆಗೆ ಅಂಗಡಿ ತೆರೆಯುತ್ತಾ ಬಂದಿರುತ್ತೇವೆ, ನಮ್ಮ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು ಇರುತ್ತದೆ. ನಮ್ಮ ಅಂಗಡಿ ಮೇಲೆ 3 ನೇ ಮಹಡಿಯಲ್ಲಿ ನಮ್ಮ ಮಾವ ಸೋಮನಾಥ ಮತ್ತು ನಮ್ಮ ಅಕ್ಕ ಗುಂಡಮ್ಮ ರವರು ವಾಸವಾಗಿರುತ್ತಾರೆ.
ದಿನಾಂಕ 27-12-2017 ರಂದು ಎಂದಿನಂತೆ ರಾತ್ರಿ 10;00 ಗಂಟೆಗೆ ನಾವು ನಮ್ಮ ಅಂಗಡಿ ಬಂದ ಮಾಡಿಕೊಂಡು ಹೋಗಿರುತ್ತೇವೆ, ಬೆಳಿಗ್ಗೆ 05;45 ಗಂಟೆಗೆ ನಮ್ಮ ಮಾವ ಸೋಮನಾಥ ರವರು ನನಗೆ ಫೋನ ಮಾಡಿ ಯಾರೋ ಅಂಗಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೇಗನೆ ಬಾ ಅಂತಾ ಅಂದಾಗ ನಾನು ಮತ್ತು ನಮ್ಮ ಅಣ್ಣ ರಮೇಶ ರವರು ಕೂಡಿ ಅಂಗಡಿಗೆ ಹೋಗಿ ನೋಡಲಾಗಿ, ನಮ್ಮ ಅಂಗಡಿ ಶೇಟರ್ಸ್ ಕೀಲಿಗಳನ್ನು ಮುರಿದು ಅರ್ದಾ ಶಟರ್ಸ್ ತೆರೆದಿತು, ನಂತರ ನಾವು ಒಳಗೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ 1] ಗೋಲ್ಡಫ್ಲ್ಯಾಕ ಸ್ಮಾಲ್ ಸಿಗರೇಟ 24 ಬಂಡಲ್ ;ಕಿ; 1,08,000/- ರೂ, 2] ಗೋಲ್ಡಫ್ಲ್ಯಾಕ ಕಿಂಗ್ ಸಿಗರೇಟ 35 ಬಂಡಲ್  ;ಕಿ; 94,500/- ರೂ, 3] ಗಾಯಛಾಪ ತಂಬಾಕ 80 ಬಂಡಲ್ ;ಕಿ; 17,360/- ರೂ, 4] ಗಣೇಶ ಬಿಡಿ 95 ಬಂಡಲ್ ;ಕಿ; 33,250/- ರೂ, 5] ಪ್ಲೇಯರ್ಸ್ ಸಿಗರೇಟ 10 ಬಂಡಲ್ ;ಕಿ; 23,000/- ರೂ, 6] ಕಾಜು 9 ಕೆ.ಜಿ ;ಕಿ; 7,650/- ರೂ, 7] ಫೆರೆನ್ಲವಲಿ 5 ಬಂಡಲ್ ;ಕಿ; 3,600/- ರೂ ಮತ್ತು ನಗದು ಹಣ 10,000/- ರೂ ಹಾಗು ಸಿಸಿ ಟಿವಿ ರಿಕಾರ್ಡಿಂಗ ಸ್ಟೋರೆಜ ಇರಲಿಲ್ಲಾ. ಯಾರೋ ಕಳ್ಳರು ದಿನಾಂಕ 28-12-2017 ರಂದು 1;00 .ಎಂ ದಿಂದ 03;00 .ಎಂ ಮದ್ಯಲ್ಲಿ ನಮ್ಮ ಅಂಗಡಿ ಶೇಟರ್ಸ್ ಕೀಲಿಗಳನ್ನು ಮುರಿದು ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಅಂದಾಜ 2,97,360/- ರೂ ಕಿಮ್ಮತ್ತಿನ ಕಿರಾಣಾ ಮಾಲ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಕಾರಣ ಕಳುವಾದ ಮಾಲು ಪತ್ತೆ ಮಾಡಿ ಕಳುಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು ಬಗ್ಗೆ ವರದಿ.

No comments: