Police Bhavan Kalaburagi

Police Bhavan Kalaburagi

Monday, January 15, 2018

Yadgir District Reported Crimes Updated on 15-01-2018

                                          Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 13/2018  ಕಲಂ ಕಲಂ 11 (1) (ಡಿ) PREVENTION OF CRUELITY TO ANIMAL ACT-1960-1960;- ದಿನಾಂಕ 14/01/2018 ರಂದು ಮದ್ಯಾಹ್ನ 3 ಪಿ.ಎಂ.ಕ್ಕೆ  ಶ್ರೀ ವಿಠಲ್ ದೋತ್ರೆ  ಎ.ಎಸ್.ಐ ಯಾದಗಿರಿ (ಗ್ರಾ) ಠಾಣೆರವರು ಠಾಣೆಗೆ ಹಾಜರಾಗಿ ಒಂದು ವರದಿ, ಒಬ್ಬ ಆರೋಪಿತ, ಒಂದು ಕುರಿಮರಿಯನ್ನು  ಠಾಣೆಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಶ್ರೀ ಮೈಲಾರಲಿಂಗೆಶ್ವರ ಜಾತ್ರೆಯು ಪ್ರತಿ ವರ್ಷದಂತೆ ಈ ವರ್ಷವು ಕೂಡ ದಿನಾಂಕ 13/01/2018 ರಂದು ಪ್ರಾರಂಭವಾಗಿರುತ್ತದೆ. ಸದರಿ ಜಾತ್ರೆಯು ದಿನಾಂಕ 13/01/2018 ರಿಂದ ದಿನಾಂಕ 18/01/2018 ರ ವರೆಗೆ ನಡೆಯುತ್ತದೆ. ಇಂದು ದಿನಾಂಕ 14/01/2018 ರಂದು ಬೆಳಿಗ್ಗೆ ಪಲ್ಲಕ್ಕಿ ಉತ್ಸವ ಮತ್ತು ಸರಪಳಿ ಹರಿಯುವ ಕಾರ್ಯಕ್ರಮವಿದ್ದು ಜಾತ್ರೆಗೆ ಲಕ್ಷಾಂತರ ಭಕ್ತರು ಸೇರಿದ್ದು ಇರುತ್ತದೆ. ಸದರಿ ಜಾತ್ರೆಯಲ್ಲಿ ಶ್ರೀ ಮೈಲಾರಲಿಂಗೇಶ್ವರನ ಪಲ್ಲಕ್ಕಿ ಮೆರವಣಿಗೆ ಸಮಯದಲ್ಲಿ ಜಾತ್ರೆಗೆ ಬರುವ ಭಕ್ತರು ಪಲ್ಲಕ್ಕಿ ಮೆರವಣಿಗೆ ಸಮಯದಲ್ಲಿ ಪಲ್ಲಕ್ಕಿ ಮೇಲೆ ಕುರಿಮರಿಗಳನ್ನು ಎಸೆಯುವ ಅನಿಷ್ಠ ಪದ್ದತಿ ಮೊದಲಿನಿಂದಲೂ ಬಂದಿದ್ದರಿಂದ ಯಾದಗಿರಿ ಜಿಲ್ಲಾಡಳಿತವು 5-6 ವರ್ಷಗಳಿಂದ ಇಂತಹ ಅನಿಷ್ಠ ಪದ್ದತಿಯನ್ನು ರದ್ದು ಮಾಡಿದ್ದು ಈ ರೀತಿ ಕುರಿಗಳನ್ನು ಎಸೆಯುವವರ ವಿರುದ್ದ ಕಾನೂನು ಕ್ರಮ ಜರುಗಿಸುವ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು ಅಲ್ಲದೇ ಜಾತ್ರೆಗೆ ಬರುವ ಮುನ್ನವೇ ಜಾತ್ರೆಗೆ  ಸುತ್ತಲೂ ಬರುವ ಎಲ್ಲಾ ರಸ್ತೆಗಳಲ್ಲಿ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಜನರು ಜಾತ್ರೆಗೆ ತರುವ ಕುರಿ ಮರಿಗಳನ್ನು ಪೋಲಿಸ್ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ವಶಕ್ಕೆ ಪಡೆಯುತ್ತಾ ಬರಲಾಗುತ್ತಿದೆ. ಸದರಿ ಜಾತ್ರೆಯ ಬಂದೋಬಸ್ತ್ ಕುರಿತು ಮತ್ತು ಮುಖ್ಯವಾಗಿ ಕುರಿಮರಿಗಳನ್ನು ಹಾರಿಸುವುದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತೆ ಕ್ರಮವಾಗಿ ಎಲ್ಲಾ ಸ್ತಳಗಳಲ್ಲಿ, ಮುಖ್ಯವಾಗಿ ಪಲ್ಲಕ್ಕಿ ಮೆರವಣಿಗೆ, ಸರಪಳಿ ಹರಿಯುವ ಸ್ಥಳ, ಇತರೆ ಕಡೆಗಳಲ್ಲಿ ಸಾಕಷ್ಟು ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಕರ್ತವ್ಯಕ್ಕೆ ನೇಮಿಸಲಾಗಿತ್ತು. ದಿನಾಂಕ 14-01-2018 ರಂದು ಬೆಳಿಗ್ಗೆ 8 ಗಂಟೆಗೆ ಮಾನ್ಯ ಎಸ್.ಪಿ.ಸಾಹೇಬರು ಯಾದಗಿರಿ ಮತ್ತು ಡಿ.ಎಸ್.ಪಿ.ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಪಲ್ಲಕ್ಕಿ ಉತ್ಸವದ ಸಂದರ್ಭದ ಸಮಯದಲ್ಲಿ ಯಾವುದೇ ವ್ಯಕ್ತಿಗಳು ಪಲ್ಲಕ್ಕಿಯ ಮೇಲೆ ಕುರಿಗಳನ್ನು ಹಾರಿಸದಂತೆ ನಿಗಾವಹಿಸಲು ಕಟ್ಟು ನಿಟ್ಟಾಗಿ ಸೂಚನೆ ನೀಡಿದ್ದರಿಂದ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಜನರಾದ ಶ್ರಿ ಮಲ್ಲಣ್ಣಾ ಹೆಚ್ಸಿ-79 ವೆಂಕಟರೆಡ್ಡಿಹೆಚ್ಸಿ-113 ರವರುಗಳು ಕೂಡಿಕೊಂಡು ಜಾತ್ರೆಯಲ್ಲಿ ಪೆಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಸಮಯ ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಮೈಲಾರಲಿಂಗೇಶ್ವರ ಕೆರೆಯ ಒಡ್ಡ್ಡಿನ ಹತ್ತಿರ ಪಲ್ಲಕ್ಕಿ ಉತ್ಸವ ಸಾಗುತ್ತಿದ್ದಾಗ ಜನಸಂದಣಿಯಿಂದ ಬಂದ ಒಬ್ಬ ವ್ಯಕ್ತಿಯು ಒಂದು ಕುರಿ ಮರಿಯನ್ನು ತನ್ನ ಪಕ್ಕದಲ್ಲಿ ಹಿಡಿದುಕೊಂಡು ನಮ್ಮನ್ನು ನೋಡಿ ಜಾತ್ರೆಯಲ್ಲಿ ಮರೆಯಾಗುತ್ತಿದ್ದಾಗ ಸಿಬ್ಬಂದಿ ಸಹಾಯದಿಂದ ಅವನಿಗೆ ಹಿಡಿದುಕೊಂಡು ಆತನ ಹತ್ತಿರವಿದ್ದ ಆ ಕುರಿಮರಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು  ಮಶೆಪ್ಪಾ ತಂದೆ ಗಂಗಣ್ಣಾ ಮಾನೇಗಾರ ವಯಾ: 42 ಉ: ಉಕ್ಕಲುತನ ಜಾ: ಕಬ್ಬೇರ ಸಾ; ಆಶನಾಳ  ಅಂತಾ ತಿಳಿಸಿದ್ದು ಇರುತ್ತದೆ. ಆತನಿಗೆ ಕುರಿಮರಿಯನ್ನು ಎಕೆ ತಂದಿದ್ದಿ ಅಂತಾ ವಿಚಾರಿಸಿದಾಗ ತಮ್ಮ ಕುರಿಯ ಹಿಂಡುಗಳಿಂದ ಈ ಕುರಿಮರಿಯನ್ನು ತಂದು ಪಲ್ಲಕ್ಕಿ ಮೇಲೆ ಹಾರಿಸಿದರೆ ತಮ್ಮ ಕುರಿಗಳಿಗೆ ಒಂದು ವರ್ಷದತನಕ ಅಂದರೆ ಮುಂದಿನ ಜಾತ್ರೆಯವೆರೆಗೆ ಯಾವುದೇ ಬಾಧೆ ಬರುವುದಿಲ್ಲ ಅಂತಾ ಮೊದಲಿನಿಂದಲೂ ಹಿರಿಯರು ಹೇಳಿದ್ದರಿಂದ ಕುರಿಮರಿಯನ್ನು ಪಲ್ಲಕ್ಕಿ ಮೇಲೆ ಹಾರಿಸಬೆಕೆಂದು ಜಾತ್ರೆಗೆ ತಂದಿರುವುದಾಗಿ ತಿಳಿಸಿದನು.. ಸದರಿ ಜಾತ್ರೆಯಲ್ಲಿ ಪಲ್ಲಕ್ಕಿ ಮೇಲೆ ಕುರಿಮರಿ ಹಾರಿಸುವುದನ್ನು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ನಿಷೆದ ಮಾಡಿದ್ದರು ಕೂಡ  ಮತ್ತು ಕುರಿಮರಿ ಪಲ್ಲಕ್ಕಿ ಮೇಲೆ ಎಸೆಯುವುದರಿಂದ ಮತ್ತು  ಹಾರಿಸುವದರಿಂದ  ಪ್ರಾಣಿಹಿಂಸೆ  ಮಾಡುತ್ತಿದ್ದ ಬಗ್ಗೆ ಆತನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದರಿಂದ ನಾನು ಆತನಿಗೆ ಸ್ಥಳದಲ್ಲಿಯೇ ದಸ್ತಗಿರಿ ಮಾಡಿಕೊಂಡು ಮತ್ತು ಒಂದು ಕುರಿಮರಿಯನ್ನು ವಶಕ್ಕೆ ಪಡೆದುಕೊಂಡು ಮರಳಿ ಪೊಲೀಸ್ ಠಾಣೆಗೆ ಮದ್ಯಾಹ್ನ 3 ಪಿ.ಎಂ.ಕ್ಕೆ ಬಂದು ಒಬ್ಬ ಆರೋಪಿತ, ಒಂದು ಕುರಿಮರಿ ಮತ್ತು ವರದಿಯನ್ನು ಒಪ್ಪಿಸುತ್ತಿದ್ದು ಮುಂದಿನ ಕ್ರಮ ಜರುಗಿಸಬೇಕು  ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.13/2018 ಕಲಂ 11 (1) (ಡಿ) ಕಖಇಗಿಇಓಖಿಔಓ ಔಈ ಅಖಗಇಐಖಿಙ ಖಿಔ ಂಓಒಂಐ ಂಅಖಿ-1960 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 14/2018 ಕಲಂ: 32, 34 ಕೆ.ಎಕ್ಟ;- ದಿನಾಂಕ: 14-01-2018 ರಂದು 9-30 ಪಿ.ಎಮ್ ಕ್ಕೆ ಶ್ರೀ ಅರುಣಕುಮಾರ ಪಿ.ಎಸ್.ಐ (ಕಾಸು) ಯಾಧಗಿರಿ ಗ್ರಾಮೀಣ ಠಾಣೆರವರು ಇಬ್ಬರು ಆರೋಪಿತರು, ಮುದ್ದೆಮಾಲನ್ನು ಜಪ್ತಿಪಂಚನಾಮೆಯೊಂದಿಗೆ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ  ಇಂದು ದಿನಾಂಕ 14-01-2018 ರಂದು 6 ಪಿ.ಎಂಕ್ಕೆ ಮೈಲಾಪೂರ ಗ್ರಾಮದ ಜಾತ್ರಾ ಬಂಧೊಬಸ್ತದಲ್ಲಿರುವಾಗ ಮೈಲಾಪೂರ ಗ್ರಾಮದ ಜಾತ್ರಾ ಆವರಣದ ನಾಟಕ ಕಂಪನಿ ಕಡೆಗೆ ಯಾರೋ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆೆ ಅಂತಾ ಖಚಿತವಾದ ಬಾತ್ಮಿ ಬಂದಿದ್ದು, ಅಲ್ಲಿಗೆ ಹೋಗಿ ದಾಳಿ ಮಾಡುವ ಸಲುವಾಗಿ ಇಬ್ಬರು ಪಂಚರು ಹಾಗೂ ಸಿಬ್ಬಂಧಿಯವರಾದ ಶ್ರೀ ಚಿದಾನಂದ ಪಿ.ಎಸ್.ಐ ಪ್ರೋಬೇಷನರಿ, ಅಬ್ದುಲ್ ಬಾಷಾ ಪಿಸಿ-237 ಹಾಗೂ ಜೀಪ ಚಾಲಕರಾದ ಶ್ರೀ ಬಾಪುಗೌಡ ಪಿಸಿ 301 ಇವರನ್ನು ಜೊತೆಗೆ ಕರೆದುಕೊಂಡು ಬಾತ್ಮಿ ಬಂದ ಕಡೆಗೆ ಹೊರಟು. ನಾಟಕ ಥಿಯೇಟರ ಹತ್ತಿರ ಎಲ್ಲರೂ ಮರೆಯಲ್ಲಿ ಅವಿತುಕೊಂಡು ನೋಡಲಾಗಿ ಖಂಡಪ್ಪಾ ಯರಗೋಳ ಸಾ: ಮೈಲಾಪೂರ ಇವರ ಮನೆಯ ಹತ್ತಿರ ಇಬ್ಬರು ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆ ಇಬ್ಬರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಲಾಗಿ ಅವರು ಹೆಸರು 1) ದಂಡಯ್ಯಾ ತಂದೆ ಗಿರೆಪ್ಪಾ ಸಾ: ಕೊಯಿಲೂರು ಮತ್ತು ಇನ್ನೊಬ್ಬನ ಹೆಸರು 2) ಮಧು ತಂದೆ ನಾಗರಾಜ ಕುರುಬರ ಸಾ: ಮಂತ್ರಾಲಯಮ್ ಆಂದ್ರಪ್ರದೇಶ ಅಂತಾ ಹೇಳಿದರು. ಸದರಿಯವರಿಗೆ ಜಾತ್ರೆಯಲ್ಲಿ ಮಧ್ಯ ಮಾರಾಟ ಮಾಡಲು ಸರಕಾರದಿಂದ ಯಾವುದೇ ರೀತಿ ಪರವಾನಿಗೆ ಪಡೆದುಕೊಂಡ ಬಗ್ಗೆ ವಿಚಾರಿಸಲಾಗಿ ಅವರು ಯಾವುದೇ ಪರವಾನಿಗೆ ಪಡೆದುಕೊಂಡಿಲ್ಲಾ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ತಿಳಿಸಿದರು. ನಂತರ ಪಂಚರ ಸಮಕ್ಷಮದಲ್ಲಿ ಆ ಅಂಗಡಿಯಲ್ಲಿದ್ದ ಮಾಲನ್ನು ಚಕ್ಕ ಮಾಡಲಾಗಿ ಒಟ್ಟು 1) 180 ಎಮ್.ಎಲ್ ದ 20 ಮ್ಯಾಗಡಾಲ ನಂಬರ-1 ವಿಸ್ಕಿ ಬಾಟಲಿಗಳು ಇದ್ದು ಒಂದು ಬಾಟಲಿಯ ಕಿಮ್ಮತ್ತು 148.26/- ರೂ ಯಂತೆ ಒಟ್ಟು  20 ಬಾಟಲಿಗಳ ಕಿಮ್ಮತ್ತು 2965.2/- ರೂ ಆಗುತ್ತದೆ. ಮತ್ತು 2) 180 ಎಮ್.ಎಲ್ ದ 26 ಇಂಪೇರಿಯಲ್ ಬ್ಲ್ಯೂ ಕಂಪನಿಯ ಬಾಟಲಿಗಳು ಇದ್ದು ಒಂದು ಬಾಟಲಿಯ ಕಿಮ್ಮತ್ತು 148.26/-ರೂ ಯಂತೆ ಒಟ್ಟು  26 ಬಾಟಲಿಗಳ ಕಿಮ್ಮತ್ತು 3.854.76/- ರೂ ಆಗುತ್ತದೆ. ಹಾಗೂ 3) 90 ಎಮ್.ಎಲ್ ದ 242 ಓರಿಜಿನಲ್ ಚಾಯಿಸ್ ಕಂಪನಿಯ ರಟ್ಟಿನ ಪಾಕೆಟುಗಳು ಇದ್ದು ಒಂದು ಬಾಟಲಿಯ ಕಿಮ್ಮತ್ತು 28.13/- ರೂ ಯಂತೆ ಒಟ್ಟು  242 ಪಾಕೆಟುಗಳ ಕಿಮ್ಮತ್ತು 6807.46/- ರೂ ಆಗುತ್ತದೆ. ಎಲ್ಲವುಗಳ ಒಟ್ಟು ಕಿಮ್ಮತ್ತು 13627/ರೂ.42-ಪ್ಯಸೆ ಆಗುತ್ತದೆ. ಈ  ಮೂರು ತರಹದ ಮಧ್ಯದ ಬಾಟಲಿಗಳಲ್ಲಿ ತಲಾ ಒಂದನ್ನು ಎಫ್.ಎಸ್.ಎಲ್ ಪರೀಕ್ಷೆ ಕುರಿತು ಒಂದೊಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು ಪಿ.ಆರ್.ಎಸ್ ಅಂತಾ ಶೀಲ್ ಮಾಡಿ ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು ಇರುತ್ತದೆ.  ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ 14-01-2018 ರಂದು 7 ಪಿ.ಎಂ 8 ಪಿ.ಎಂ ದವರೆಗೆ ಮುಗಿಸಿ ಇರುತ್ತದೆ ಅಂತಾ ಜಪ್ತಿಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 14/2018 ಕಲಂ 32, 34 ಕೆ.ಇ ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
                                                                    
 ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 16/2018 ಕಲಂ: 14, 15(ಎ), 32, 34 ಕನರ್ಾಟಕ ಅಬಕಾರಿ ಕಾಯ್ದೆ 1965;- ದಿ: 14/01/2018 ರಂದು 12-00 ಪಿ.ಎಮ್.ಕ್ಕೆ ಶ್ರೀ ಟಿ.ಆರ್ ರಾಘವೇಂದ್ರ, ಪಿ.ಐ ಸಾಹೇಬರು 2 ಜನ ಆರೋಪಿತರು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ 8-00 ಎ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ದೇವಾಪೂರ ಕ್ರಾಸ್ ಹತ್ತಿರ ಫರ್ಹಾನ ದಾಬಾದಲ್ಲಿ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿಯವರೊಂದಿಗೆ 8-15 ಎ.ಎಮ್ ಕ್ಕೆ ಹೊರಟು, 8-45 ಎ.ಎಮ್ ಸುಮಾರಿಗೆ ದೇವಾಪೂರ ಕ್ರಾಸ್ ಹತ್ತಿರ ಜೀಪ ನಿಲ್ಲಿಸಿ 1) ರವಿ ತಂದೆ ಹಣಮಂತಪ್ಪ, ಕಂದಾಯ ನಿರೀಕ್ಷಕರು ಕಕ್ಕೇರಾ ಹಾಗು 2) ಅಮರೇಶ ತಂದೆ ಆದಪ್ಪ ದೇಸಾಯಿ ಗ್ರಾಮ ಪಂಚಾಯತ ಅಧ್ಯಕ್ಷರು ದೇವಾಪೂರ ಇವರನ್ನು ಪಂಚರನ್ನಾಗಿ ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 9-15 ಎ.ಎಮ್ ಸುಮಾರಿಗೆ ದಾಳಿಮಾಡಿ ಮದ್ಯಮಾರಾಟ ಮಾಡುತ್ತಿದ್ದ 1) ಇಪರ್ಾನ ತಂದೆ ದಾವಲಸಾಬ ಮುಲ್ಲಾ 2) ಮಹ್ಮದ ಹುಸೇನ ತಂದೆ ಮಹ್ಮದ ಶಾ ಮಕಾನದಾರ ಇವರನ್ನು ಹಿಡಿದು ದಾಬಾದ ಕೌಂಟರ ಮೇಲೆ ಹಾಗು ಕೌಂಟರ ಹತ್ತಿರ ಕರ್ಟನ್ ಬಾಕ್ಸ ನಲ್ಲಿ ಮದ್ಯದ ಬಾಟಲಿಗಳು ಬಿದ್ದಿದ್ದರಿಂದ ಸದರಿಯವರಿಗೆ ಮದ್ಯ ಮಾರಾಟ ಮಾಡಲು ಪರವಾನಿಗೆ ಇದ್ದರೆ ಹಾಜರಪಡಿಸುವಂತೆ ಸೂಚಿಸಿದಾಗ, ಸದರಿಯವರಿಬ್ಬರೂ ತಮ್ಮ ಬಳಿ ಯಾವುದೇ ಪರವಾನಿಗೆ ಇರುವದಿಲ್ಲ. ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದೇವೆ ಅಂತಾ ತಿಳಿಸಿದ್ದು ಇರುತ್ತದೆ. ಬಳಿಕ ಪಂಚರ ಸಮಕ್ಷಮ ಮದ್ಯದ ಬಾಟಲಿಗಳನ್ನು ಪರಿಶೀಲಿಸಿ ನೋಡಲಾಗಿ 1] ಕಿಂಗ್ ಫಿಷರ್ ಪ್ರಿಮಿಯಮ್ ಬಿಯರ್, 330 ಎಮ್.ಎಮ್ ನ 8 ಟೀನ ಬಾಟಲಿಗಳು, ಪ್ರತಿ ಟಿನ ಬೆಲೆ 68/-  ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 544=00 ರೂ.ಗಳಾಗುತ್ತದೆ. 2] ಕಿಂಗ್ ಫಿಷರ್ ಸ್ಟ್ರಾಂಗ ಪ್ರಿಮಿಯಮ್ ಬಿಯರ್, 650 ಎಮ್.ಎಮ್ ನ 3 ಬಾಟಲಿಗಳು, ಪ್ರತಿ ಬಾಟಲ್ ಬೆಲೆ 125 ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 375=00 ರೂ.ಗಳಾಗುತ್ತದೆ. 3] ಕಿಂಗ್ ಫಿಷರ್ ಸ್ಟೋರ್ಮ ಸ್ಟ್ರಾಂಗ ಬಿಯರ್, 500 ಎಮ್.ಎಮ್ ನ 2 ಟೀನಗಳು, ಪ್ರತಿ ಟಿನ್ ಬೆಲೆ 100/-ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 200=00 ರೂ.ಗಳಾಗುತ್ತದೆ. 4] ಓರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ, 90 ಎಮ್.ಎಮ್ ನ 25 ಪೌಚಗಳು, ಪ್ರತಿ ಪೌಚ ಬೆಲೆ 28.13/- ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 703=25 ರೂ.ಗಳಾಗುತ್ತದೆ. 5] 8 ಪಿ.ಎಮ್ ವಿಸ್ಕಿ, 180 ಎಮ್.ಎಮ್ ನ  6 ಪೌಚಗಳು, ಪ್ರತಿ ಪೌಚ ಬೆಲೆ 68.56/- ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 411.36 ರೂ.ಗಳಾಗುತ್ತದೆ. 6] ಇಂಪಿರಿಯಲ್ ಬ್ಲೂ ವಿಸ್ಕಿ, 180 ಎಮ್.ಎಮ್ ನ  4 ಬಾಟಲಗಳು, ಪ್ರತಿ ಬಾಟಲ ಬೆಲೆ 148.26/- ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 593-04/- ರೂ.ಗಳಾಗುತ್ತದೆ. 7] ಬ್ಲೆಂಡರ್ಸ ಪ್ರೈಡ ವಿಸ್ಕಿ, 180 ಎಮ್.ಎಮ್ ನ  4 ಬಾಟಲಗಳು, ಪ್ರತಿ ಬಾಟಲ ಬೆಲೆ 324.91/- ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 1299-64/- ರೂ.ಗಳಾಗುತ್ತದೆ. 8] ರಾಯಲ್ ಚಾಲೆಂಜ್ ವಿಸ್ಕಿ, 180 ಎಮ್.ಎಮ್ ನ  4 ಬಾಟಲಗಳು, ಪ್ರತಿ ಬಾಟಲ ಬೆಲೆ 237.04/- ರೂ.ಗಳು ಇದ್ದು, ಒಟ್ಟು ಕಿಮ್ಮತ್ತು 948/- ರೂ.ಗಳಾಗುತ್ತದೆ. ಹೀಗೆ ಒಟ್ಟು 5074/- ರೂ.ಗಳು ಕಿಮ್ಮತ್ತಿನ ಮದ್ಯದ ಬಾಟಲಿಗಳು ದೊರೆತಿದ್ದು, ಸದರಿ 8 ನಮೂನೆಯ ಮದ್ಯದ ಬಾಟಲಿಗಳಿಂದ ತಲಾ ಒಂದೊಂದು ಬಾಟಲಿಗಳನ್ನು ರಾಸಾಯನಿಕ ತಜ್ಞರ ಪರೀಕ್ಷೆಗಾಗಿ ಪಂಚರ ಸಮಕ್ಷಮ ಪ್ರತ್ಯೇಕವಾಗಿ ತಗೆದುಕೊಂಡು ಅವುಗಳನ್ನು ಬಿಳಿ ಬಟ್ಟೆ ಚೀಲಗಳಲ್ಲಿ ಹಾಕಿ ಬಾಯಿ ಹೊಲೆದು ಮೇಲೆ ಕೆ.ಎಲ್.ಆರ್ ಎಂಬ ಇಂಗ್ಲೀಷ ಅಕ್ಷರವುಳ್ಳ ಮದ್ರೆಯನ್ನು ಅರಗಿನಲ್ಲಿ ಶಿಲ್ ಮಾಡಿ ಮುಂಜಾನೆ 9-15 ಗಂಟೆಯಿಂದ 11-15 ಎ.ಎಮ್ ವರೆಗೆ ಜಪ್ತಿ ಪಡಿಸಿಕೊಂಡು  ಮರಳಿ ಠಾಣೆಗೆ 12-00 ಗಂಟೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಠಾಣೆ ಗುನ್ನೆ ನಂಬರ 16/2018 ಕಲಂ: 14, 15(ಎ), 32, 34 ಕೆ.ಇ ಆಕ್ಟ್ 1965 ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 14/2018 ಕಲಂ: 279, 304(ಎ) ಐಪಿಸಿ ಸಂ 187 ಐಎಮ್ವಿ ಆಕ್ಟ;- ದಿ: 15-01-2018 ರಂದು 00.15 ಗಂಟೆಗೆ ಫಿಯರ್ಾದಿ ಶ್ರೀ. ಬಸಯ್ಯ ತಂದೆ ಅಮರಯ್ಯ ಹೊರಗಿನಮಠ ವಯಾ|| 42 ಜಾ|| ಜಂಗಮ ಉ|| ಒಕ್ಕಲುತನ ಸಾ|| ಮುದನೂರ ಕೆ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಹಾಜರಪಡಿಸಿದ್ದೇನೆಂದರೆ, ನನ್ನ ತಮ್ಮ ಆದಯ್ಯ ಈತನು ಇಂದು ದಿ: 14/01/18 ರಂದು 9.30 ಪಿಎಮ್ ಸುಮಾರಿಗೆ ತನ್ನ ಮೋಟರ ಸೈಕಲ್ ನಂಬರ ಕೆಎ33 ವ್ಹಿ 6356 ನೇದ್ದನ್ನು ತೆಗೆದುಕೊಂಡು ಕೆಂಭಾವಿಯಿಂದ ಮುದನೂರಗೆ ಬರುವ ಕುರಿತು ಸಾಯಿನಗರ ದಾಟಿ ರೋಡಿನಲ್ಲಿ ಬರುತ್ತಿದ್ದಾಗ ಎದುರಿನಿಂದ ಯಾವುದೋ ಒಂದು ಟಿಪ್ಪರ್ ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನ ಮೋಟರ ಸೈಕಲ್ಗೆ ಬಲವಾಗಿ ಡಿಕ್ಕಿಪಡಿಸಿದ್ದು, ನನ್ನ ತಮ್ಮನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಅರ್ಧ ತಲೆ, ಮುಖ ಸಮೇತ ಕತ್ತಿರಿಸಿ ಕಾಲು ಹಾಗೂ ಕೈಗಳಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ತಾವು ಬಂದು ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:14/2018 ಕಲಂ 279, 304 [ಎ] ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

No comments: