ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-02-2018
ಬೇಮಳೇಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:- 15/2018 ಕಲಂ 279,
338, 304 (ಎ) ಐಪಿಸಿ :-
ದಿನಾಂಕ 27-02-2018
ರಂದು 07.00 ಗಂಟೆಗೆ ಶ್ರೀ ಬಸವರಾಜ ತಂದೆ ಮಾಣಿಕಪ್ಪಾ
ಯಲಗೊಂಡ ವಯಃ 43 ವರ್ಷ ಜಾಃ ಕುರುಬ ಉಃ ಒಕ್ಕಲುತನ ಸಾಃ ಬೇಮಳಖೇಡಾ ರವರು ಠಾಣೆಗೆ ಹಾಜರಾಗಿ ಹೇಳಿಕೆ
ಕೊಟ್ಟ ಸಾರಾಂಶವೆನೆಂದರೆ ದಿನಾಂಕ 20-02-2018 ರಂದು ಮುಂಜಾನೆ 07.00 ಗಂಟೆಯ ಸುಮಾರಿಗೆ ಫಿರ್ಯಾದಿಯ
ಮಗ ಸುರೇಶ @ ಶಿವರಾಜ ವಯಃ 16 ವರ್ಷ ಉಃ ವಿದ್ಯಾಬ್ಯಾಸ
ಹಾಗು ಫಿರ್ಯಾದಿಯ ಮಗನ ಗೆಳೆಯನಾದ ಸುಧಾಕರ ತಂದೆ ರಮೇಶ ಹಿಲಾಲಪೂರ ಸಾಃ ಬೇಮಳಖೇಡಾ ಕೂಡಿಕೊಂಡು ಮೊಟಾರ
ಸೈಕಲ ನಂ ಕೆ.ಎ-32-ಇ.ಸಿ-2296 ನೇದರ ಮೇಲೆ ಸುಧಾಕರನ
ಹೊಲದಲ್ಲಿ ಜೋಳಕ್ಕೆ ಹಕ್ಕಿ ಹೊಡೆಯಲು ಹೋಗಿ ಹಕ್ಕಿ ಹೊಡೆದು ಮರಳಿ ಮನೆಗೆ ವಿಠಲಪೂರ- ಬೇಮಳಖೇಡಾ ರೋಡ ಮೂಲಕ
ಬರುವಾಗ ಫಿರ್ಯಾದಿಯ ಮಗ ಸುರೇಶ@ ಶೀವರಾಜ ಇತನು ಮೋಟಾರ ಸೈಕಲ ನಂ ಕೆ.ಎ-32-ಇ.ಸಿ-2296 ನೇದನ್ನು ಅತಿವೇಗ ಹಾಗು
ನಿಷ್ಕಾಳಜಿಯಿಂದ ನಡೆಸಿಕೊಂಡು ಬರುತ್ತಿದ್ದಾಗ ಮೊಟಾರ ಸೈಕಲ ಹಿಡಿತ ತಪ್ಪಿದ್ದರಿಂದ ರೋಡಿನ ಪಕ್ಕದಲ್ಲಿದ್ದ
ನಮ್ಮೂರ ಮಸ್ತಾನ ಫಕೀರ ರವರ ಮನೆಯ ಹಿಂದಿನ ಗೋಡೆಗೆ ಒಮ್ಮೆಲೆ 07.30 ಗಂಟೆಗೆ ಡಿಕ್ಕಿ ಮಾಡಿರುತ್ತಾನೆ
ಡಿಕ್ಕಿಯಿಂದ ಸುರೇಶ @ ಶಿವರಾಜನಿಗೆ ತಲೆಗೆ, ಮುಖಕ್ಕೆ ಭಾರಿ ರಕ್ತ
ಗುಪ್ತಗಾಯವಾಗಿ ಮುಗಿನಿಂದ ಕಿವಿಯಿಂದ ರಕ್ತ ಬಂದಿರುತ್ತದೆ. ಮೊ/ಸೈಕಲ ಹಿಂದೆ ಕುಳಿತ
ಸುಧಾಕರನಿಗೆ ಮೂಗಿಗೆ, ಎಡ ಗಲ್ಲಕ್ಕೆ, ಬಲಕಣ್ಣಿನ ಮೆಲೆ ಹುಬ್ಬಿಗೆ
ಭಾರಿ ರಕ್ತಗಾಯವಾಗಿದ್ದವು. ನಂತರ ಗಾಯಗೊಂಡ ನನ್ನ ಮಗನಿಗೆ ಹಾಗು ಸುಧಾಕರನಿಗೆ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ ಹಾಗು ಸುಧಾಕರನ ತಂದೆ
ರಮೇಶ, ತಾಯಿ, ನರಸಮ್ಮ, ನಮ್ಮೂರ ಸಂಜು ಸುಣಗಾರ, ರಾಜಕುಮಾರ ಕಂಠಾಣೆ
ರವರು ಕೂಡಿ 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ
ಒಯ್ದು ಸೇರಿಕ ಮಾಡಿರುತ್ತೆವೆ. ನಂತರ ವೈದ್ಯಾರ ಸಲಹೆಯಂತೆ ನನ್ನ ಮಗ ಸುರೇಶ @ ಶೀವರಾಜನಿಗೆ ಹೆಚ್ಚಿನ
ಚಿಕಿತ್ಸೆ ಕುರಿತು ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ ನಮ್ಮೂರ ರಾಜಕುಮಾರ ಕಂಠಾಣೆ, ನಮ್ಮ ಚಿಕ್ಕಪ್ಪನ ಮಗ
ಬೀರಪ್ಪಾ ಕೂಡಿ ಓಮಿನಿ ಆಸ್ಪತ್ರೆ ಹೈದ್ರಾಬಾದಕ್ಕೆ ಒಯ್ದು ಸೇರಿಕ ಮಾಡಿರುತ್ತೆವೆ. ಸುರೇಶ@ ಶಿವರಾಜ ಇತನು ಹೈದ್ರಾಬಾದ
ಓಮಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾದೆ ದಿನಾಂಕ 26-02-2018 ರಂದು ಸಂಜೆ 4:28 ಗಂಟೆಗೆ ಮೃತ ಪಟ್ಟಿರುತ್ತಾನೆ. ಕಾರಣ ಮಾನ್ಯರು ಮುಂದಿನ
ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ ಅಂತಾ ಕೋರಿಕೊಂಡಿರುತ್ತಾರೆ. ಸದರಿ ಪ್ರಕರಣದಲ್ಲಿ
ಕಲಂ 304 (ಎ) ಐಪಿಸಿ ಅಳವಡಿಸಿಕೊಳ್ಳಲು ನ್ಯಾಯಾಲಯಕ್ಕೆ ಕೋರಿಕೊಳ್ಳಲಾಗಿದೆ.
ಧನ್ನೂರಾ ಪೊಲೀಸ್
ಠಾಣೆ ಅಪರಾಧ ಸಂ: 40/2018 ಕಲಂ 279, 338 ಐಪಿಸಿ ಜೊತೆ 187 ಐ.ಎಮ್.ವಿ ಕಾಯ್ದೆ :-
ದಿನಾಂಕ 26/02/2018 ರಂದು ಮುಂಜಾನೆ 0830 ಗಂಟೆಯ
ಸುಮಾರಿಗೆ ಫಿರ್ಯಾದಿ ಶ್ರೀ ಹಣಮಂತ ತಂದೆ ಶಂಕ್ರೆಪ್ಪಾ ಶರ್ಮಾ ವಯ 56
ವರ್ಷ ಸಾ; ಹಜ್ಜರಗಿ ಇವರು ಮೊಟಾರ ಸೈಕಲ ನಂ. ಕೆಎ-39/ಜೆ/602
ನೇದರ ಮೇಲೆ ಬೀದರ ಹುಮನಾಬಾದ ರಸ್ತೆಯಿಂದ ಹಜ್ಜರಗಿ ಗ್ರಾಮಕ್ಕೆ ಬರುವಾಗ ಫಿರ್ಯಾದಿಯ ಹಿಂದಿನಿಂದ
ನೀಲಮನಳ್ಳಿ ತಾಂಡಾದ ಹತ್ತಿರ ಒಂದು ಲಾರಿ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡೆದಿರುತ್ತಾನೆ. ಲಾರಿಯ ಚಾಲಕ
ಹುಮನಾಬಾದ ಕಡೆಯಿಂದ ಬೀದರ ಕಡೆಗೆ ಹೊಗುತ್ತಿದ್ದನು. ಸದರಿ ಅಪಘಾತದಿಂದ ಫಿರ್ಯಾದಿಯ ತಲೆಯಲ್ಲಿ
ಭಾರಿ ಸ್ವರೂಪದ ರಕ್ತಗಾಯ ಆಗಿರುತ್ತದೆ. ಮತ್ತು ಎಡ ತೊಡೆಯ ಮೇಲೆ ಹಾಗು ಬಲಗೈ ಮೇಲೆ ತರಚಿದ
ರಕ್ತಗಾಯ ಆಗಿರುತ್ತದೆ. ಅಪಘಾತ ಪಡಿಸಿದ ನಂತರ ಲಾರಿಯ ಚಾಲಕ ವಾಹನ ನಿಲ್ಲಿಸದೆ ಓಡಿ
ಹೊಗಿರುತ್ತಾನೆ. ತಾಂಡಾದ ಜನರು ನೊಡಿ 108
ಅಂಬ್ಯೂಲೇನ್ಸಗೆ ಕರೆ ಮಾಡಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ.
ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment