ಸಾರ್ವಜನಿಕರೆಗೆ ತೊಂದರೆ ನೀಡಿದ ಪ್ರಕರಣ ;
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಪಾರುಕ್ ಪದಾಧಿಕಾರಿಗಳು ಎಸ್.ಡಿ.ಪಿ.ಐ ಎಮ್.ಎಸ್.ಕೆ. ಮೀಲ್ ಕಲಬುರಗಿ ಇವರು ಇಂದು ದಿನಾಂಕ 23.03.2018 ರಂದು ರಾತ್ರಿ 8 ಗಂಟೆಗೆ ಎಮ್.ಎಸ್.ಕೆ.ಮೀಲ್ ದಲ್ಲಿ ಪಕ್ಷದ ಕಾರ್ಯಲಯ ಉದ್ಘಾಟನೆ ಮಾಡುವದು ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಕುರಿತು ಠಾಣೆಗೆ ಅರ್ಜಿ ಸಲ್ಲಿಸಿದ್ದು, ಸದರಿಯವರಿಗೆ ಯಾವುದೆ ತೆರನಾದ ರಾಲಿಯನ್ನು ಮಾಡದಂತೆ ತಿಳಿಸಿದ್ದು ಸದರಿಯವರು ಸಲ್ಲಿಸಿದ ಅರ್ಜಿಯಂತೆ ಬ/ಬ ಕರ್ತವ್ಯ ನಿರ್ವಹಿಸು ಕುರಿತು ನಾನು, ನಮ್ಮ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ರಾತ್ರಿ 8 ಗಂಟೆಯ ಸುಮಾರಿಗೆ ಎಮ್.ಎಸ್.ಕೆ.ಮೀಲ್ ಗೇಟ ಹತ್ತಿರ ಹೋಗಿದ್ದು. ಸದರಿ ಸಂಘಟನೆಯ ಪದಾಧಿಕಾರಿಗಳಾದ 1. ಮಹ್ಮದ ಮೊಸೀನ್ ಎಸ್.ಡಿ.ಪಿ.ಐ ಪಕ್ಷದ 2. ಮಹ್ಮದ ಶಮಶೋದಿನ್, 3 ಮಹ್ಮದ ಏಜಾಜ ವೈಸ ಪ್ರಸಿಡೆಂಟ್, 4 ಸೈಯದ ಜಾಕೀರ, 5 ಮಹ್ಮದ ಫಾರುಕ ಮದಿನಾ ಕಾಲೋನಿ ಗ್ರೀನ್ ಸರ್ಕಲ್, 6. ಅಬ್ದುಲ ರಹೀಮ ಪಟೇಲ, 7 ಶಾಹೀದ ಹಾಗೂ ಇನ್ನೂ ಕೆಲವರು ಕೂಡಿಕೊಂಡು ಎಮ್.ಎಸ್.ಕೆ.ಮೀಲ್ ಗೇಟ ದಿಂದ ರಾತ್ರಿ 9 ಗಂಟೆಯ ಸುಮಾರಿಗೆ, ಮೊಟಾರ ಸೈಕಲ ನಂ ಕೆಎ 32 ಇಜಿ 7110, ಮೋಟಾರ ಸೈಕಲ ನಂ ಕೆಎ 32 ಇಜೆ. 1140, ಕೆಎ 32 ಇಜೆ 0387 ಕೆಎ 32 ಎಸ್ 5552 ಕೆಎ 32 ಇಎಫ್ 3013 ಕೆಎ 25 ಹೆಚ್ 9990 ಕೆಎ 32 ಜೆ 7566, ಕೆಎ 32 ಇಎ 8576, ಕೆಎ 32 ಇಎಫ್ 8460, ಕೆಎ 32 ಇಡಿ 8849, ಕೆಎ 32 ಇಡಿ 7063, ಕೆಎ 32 ಕ್ಯೂ 5748, ಕೆಎ 33 ಹೆಚ್. 1944, ಕೆಎ 35, ಡಬ್ಲೂ 4158 ಮತ್ತು ಅಟೊ ನಂ ಕೆಎ 32 ಬಿ 4017, ಹಾಗೂ ಮಹ್ಮದ ಮೋಸಿನ್ ಇತನ ಕಾರ ಹಾಗೂ ಇನ್ನೂ ಕೆಲವು ಮೊಟಾರ ಸೈಕಲ ತೆಗೆದುಕೊಂಡು ರಾತ್ರಿ 9:00 ಗಂಟೆಗೆ ಎಮ್.ಎಸ್.ಕೆ.ಮೀಲ್ ಗೇಟ ದಿಂದ ಮದಿನಾ ಕಾಲೋನಿ ಅಟೊ ಸ್ಟಾಂಡವರೆಗೆ ಮೊಟಾರ ಸೈಕಲ, ಅಟೊ ಮತ್ತು ಕಾರ ತೆಗೆದುಕೊಂಡು ರಾಲಿ ಹೊರಟು ರಸ್ತೆಯ ಮೇಲೆ ಸಂಚರಿಸುವ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡತಡೆಯನ್ನೂಂಟು ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಾಟ್ಸಪ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಹಾದೇವಪ್ಪ ಎನ್. ತಾಂಬೇ ಮುಖ್ಯ ಅಧೀಕ್ಷಕರು ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ 002QQ ಅಫಜಲಪೂರ ರವರು ತಮ್ಮ ಕೇಂದ್ರದ ಕೊಠಡಿ ಸಂಖ್ಯೆ 01 ರಲ್ಲಿ ಕೋಣೆ ಮೇಲ್ವಿಚಾರಕರಾಗಿ ಶ್ರೀ ಭೀಮಣ್ಣ ಹುಣಶ್ಯಾಳ ಸ.ಪ್ರೌ.ಶಾಲೆ ತೆಲ್ಲರೂ ರವರು ಕಾರ್ಯನಿರ್ವಹಿಸುತ್ತಿದ್ದರು. ಪರೀಕ್ಷ ಪ್ರಾರಂಭವಾಗಿ ಸುಮಾರು 11 ಗಂಟೆಗೆ ಪರೀಕ್ಷೆ ಬರೆಯುತ್ತಿದ್ದ ವಿಧ್ಯಾರ್ಥಿಯಾದ ಅಬ್ಬಾಸಲಿ ತಂದೆ ಲಾಲಸಾಬ ಮುಲ್ಲಾ ನೋಂದಣಿ ಸಂಖ್ಯೆ 20180090171 ಈ ವಿಧ್ಯಾರ್ಥಿಯು ಕೋಣೆಯಲ್ಲಿ ಕಿಟಕಿಯ ಬದಿಗೆ ಪರೀಕ್ಷೆ ಬರೆಯುತ್ತಿದ್ದ ಆ ಸಮಯಕ್ಕೆ ಒಬ್ಬ ಅಪರಿಚಿತ ವ್ಯಕ್ತಿ ಕಿಟಕಿಯಲ್ಲಿ ಅಬ್ಬಾಸಅಲಿಗೆ ಕೇಳಿ ಅವನ ಪ್ರಶ್ನೆ ಪತ್ರಿಕೆಯ ಒಂದು ಪುಟದ ಫೋಟೊವನ್ನು ತಗೆದುಕೊಂಡಿರುತ್ತಾನೆ. ಸದರಿ ಫೋಟೊ ತಗೆದುಕೊಂಡ ವ್ಯಕ್ತಿಗೆ ಪರೀಕ್ಷ ಬರೆಯುತ್ತಿದ್ದ ಅಬ್ಬಾಸಲಿ ಮುಲ್ಲಾ ಇತನು ಸಹಕರಿಸಿರುತ್ತಾನೆ. ಇದರಿಂದ ಸದರಿ ಕನ್ನಡ ಪ್ರಶ್ನೆ ಪತ್ರಿಕೆ ವಾಟ್ಸಪ್ ಮುಖಾಂತ ಸೋರಿಕೆ ಆಗಿರುತ್ತದೆ ಎಲ್ಲಾ ಘಟನೆಗಳು ಪರಿಕ್ಷೆ ಮುಗಿಯುವ ಸಂದರ್ಭದಲ್ಲಿ ಬೆಳಕಿಗೆ ಬಂದಿರುತ್ತದೆ. ಕಾರಣ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಮೋಬೈಲ ಮೂಲಕ ಫೋಟೊ ತೆಗೆದುಕೊಂಡು ಹೋಗಿ ವ್ಯಾಟ್ಸಪ ಮೂಲಕ ಸೋರಿಕೆ ಮಾಡಿದ ಅಪರಿಚಿತ ವ್ಯಕ್ತಿಯ ಮೇಲೆ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಹಕಾರ ನೀಡಿದ ವಿಧ್ಯಾರ್ಥಿಯಾದ ಅಬ್ಬಾಸಲಿ ಲಾಲಸಾಬ ಮುಲ್ಲಾ ರಾಹುಲ ಗಾಂಧಿ ಪ್ರೌಡ ಶಾಲೆ ಅಫಜಲಪೂರ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಚಿದಾನಂದ ತಂದೆ ನರಸಪ್ಪ ಹೂಗಾರ ಸಾ|| ಅಂಕಲಗಾ ತಾ: ಜೇವರಗಿ ಇವರು ದಿನಾಂಕ: 21/03/2018 ರಂದು 9:00 ಪಿ.ಎಂಕ್ಕೆ ನಾನು ನನ್ನ ಹೆಂಡತಿ ಶೈಲಾಶ್ರೀ ಊಟ ಮಾಡಿಕೊಂಡು 10:00 ಪಿ.ಎಂ ಸುಮಾರಿಗೆ ಮನೆ ಕಿಲಿ ಹಾಕಿಕೊಂಡು ಮನೆಯ ಮಾಳಗಿ ಮೇಲೆ ಮಲಗಿಕೊಂಡೆವು. ನಂತರ ನಾನು ಇಂದು 4:00 ಎ.ಎಂಕ್ಕೆ ಮಾಳಿಗೆ ಮೆಲಿಂದ ಇಳಿದು ಕೆಳಗಡೆ ಬಂದಾಗ ಬಾಗಿಲುಗಳು ತೆರೆದಿದ್ದವು ಅದನ್ನು ನೋಡಿ ನಾನು ಗಾಬರಿಯಾಗಿ ನನ್ನ ಹೆಂಡತಿಗೆ ಎಬ್ಬಿಸಿ ನೋಡಲಾಗಿ ಮನೆಯ ಬಾಗಿಲದ ಕೀಲಿ ಮುರಿದು ಒಳಗಡೆ ಇನ್ನೊಂದು ರೂಮಿನಲ್ಲಿ ಇದ್ದ ತಿಜೋರಿಯ ಕೀಲಿ ಮುರಿದಿದ್ದು ನೋಡಲಾಗಿ ತಿಜೋರಿಯಲ್ಲಿ ಇಟ್ಟ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಒಟ್ಟು 3,12, 000/- ರೂ ಕಿಮ್ಮತಿನದು ನಮ್ಮ ಮನೆಯಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನಿನ್ನೆ ರಾತ್ರಿ ದಿನವೆ ನಮ್ಮೂರಿನ ಶಿವಾನಂದ ತಂದೆ ಬಲವಂತ್ರಾಯ ಲಕ್ಕುಂಡಿ ಇವರ ಕಿರಾಣಿ ಅಂಗಡಿಯ ಕಿಲಿ ಮುರಿದು ಗಲ್ಲಾದಲ್ಲಿ ಇದ್ದ 78000/- ರೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ದಿನಾಂಕ : 21/03/2018 ರ 10 ಪಿ.ಎಂ ದಿಂದ 22/03/2018 ರ 4:00 ಎ.ಎಂದ ಅವಧಿಯಲ್ಲಿ ನಮ್ಮಮನೆಯ ಕೀಲಿ ಮುರಿದು ಮತ್ತು ಶಿವಾನಂದ ಲಕ್ಕುಂಡಿಯವರ ಕಿರಾಣಿ ಅಂಗಡಿಯ ಕೀಲಿ ಮುರಿದು ಒಟ್ಟು 3,90,000/- ಸಾವಿರ ಕಿಮ್ಮತ್ತಿನ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಲಕ್ಷ್ಮಿಪುತ್ರ ತಂದೆ ಬಸವರಾಜ ಮಡ್ಡಿ ಸಾಃ ಮೇಳಕುಂದಾ(ಬಿ) ತಾ.ಜಿಃ ಕಲಬುರಗಿ ರವರ ತಂದೆಯಾದ ಬಸವರಾಜ ಇವರು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು, ನಮ್ಮೂರ ಸಿಮಾಂತರದ ಸರ್ವೆ ನಂ 161 ರಲ್ಲಿ 3 ಎಕರೆ 27 ಗುಂಟೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಕೃಷಿ ಚಟುವಟಿಕೆಗಾಗಿ ಎಸ್.ಬಿ ಐ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದು, ಅಲ್ಲದೆ ವಯಕ್ತಿಕವಾಗಿಯೂ ಸಾಲ ಮಾಡಿಕೊಂಡಿದ್ದು, ಬ್ಯಾಂಕಿನವರು ಸಾಲ ತಿರಿಸಬೆಕೆಂದು ಆಗಾಗ ಮನೆಗೆ ಬಂರುತ್ತಿದ್ದು ಅಲ್ಲದೆ ಜಮೀನಿನಲ್ಲಿ ಬೆಳೆ ಸರಿಯಾಗಿ ಬೆಳೆಯದೆ ಇದ್ದುದರಿಂದ ಮಾಡಿದ ಸಾಲವನ್ನು ಹೇಗೆ ತಿರಿಸಿಬೇಕೆಂದು ಚಿಂತಿಸುತ್ತಾ ಇಂದು ದಿನಾಂಕ 22/03/2018 ರಂದು 8.00 ಎ.ಎಮಕ್ಕೆ ನಮ್ಮೂರಿನ ಸಿದ್ದಗೌಡ ,ಮಾಲಿ ಪಾಟೀಲ ಇವರ ಹೋಲದಲ್ಲಿರುವ ರೆಷ್ಮಿ ಶೇಡದಲ್ಲಿನ ಕಬ್ಬಿಣ್ಣದ ಯಂಗಲ್ ಪಟ್ಟಿಗೆ ತನ್ನ ದೋತ್ರಾದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment