Police Bhavan Kalaburagi

Police Bhavan Kalaburagi

Saturday, March 24, 2018

Yadgir District Reported Crimes Updated on 24-03-2018


                                          Yadgir District Reported Crimes  
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 88/2018 ಕಲಂ 279, 337, 338 ಐಪಿಸಿ ;- ದಿನಾಂಕ 22.03.2018 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಡಿ.ಸಿ.ಎಮ್ ಗಾಡಿ ನಂ: ಜಿಎ-09-ಯು-5035 ನೇದ್ದರಲ್ಲಿ ಸಿಲಿಂಗ್ ಫ್ಯಾನ್ಗಳ ಬಿಡಿ ಭಾಗಗಳನ್ನು ಲೋಡ್ ಮಾಡಿಕೊಂಡು ಗೋವಾದ ಕಡೆಗೆ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿಯ ಮುಖಾಂತರ ಹೋಗುತ್ತಿದ್ದಾಗ ಇಂದು ದಿನಾಂಕ 23.03.2018 ರಂದು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಸದರಿ ಲಾರಿ ಚಾಲಕ ಜಟ್ಟೆಪ್ಪ ಈತನು ತನ್ನ ಡಿ.ಸಿ.ಎಮ್ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಕಂದಕೂರು-ಗಣಪೂರ ಕ್ರಾಸ್ನ ನಡುವೆ ಮುಖ್ಯ ರಸ್ತೆಯ ಮೇಲೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಡಿ.ಸಿ.ಎಮ್ ವಾಹನವನ್ನು ಎಡಗಡೆಗೆ ಪಲ್ಟಿಯಾಗಿದ್ದು ಸದರಿ ಅಪಘಾತಕಾಲಕ್ಕೆ ಫಿರ್ಯಾದಿಗೆ ಎಡಗೈಗೆ ಒಳಪೆಟ್ಟಾಗಿ ಬಲಗಾಲು ಮುರಿದಂತೆ ಆಗಿ ಭಾರಿ ಪೆಟ್ಟಾಗಿ ಬಾವುಬಂದಿರುತ್ತದೆ. ನನ್ನ ಮಾವನಿಗೆ ಯಾವುದೇ ಪೆಟ್ಟಾಗಿರುವುದಿಲ್ಲ. ಸದರಿ ಡಿ.ಸಿ.ಎಮ್ ವಾಹನದ ಗಾಜು ಹೊಡೆದು ಪುಡಿ-ಪುಡಿಯಾಗಿದ್ದು ಅಲ್ಲದೆ ಕ್ಯಾಬಿನ್ ಹಾಗೂ ಡಿ.ಸಿ.ಎಮ್ನ ಕೆಲ ಭಾಗವು ಜಖಂಗೊಂಡಿರುತ್ತದೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 88/2018 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 89/2018 ಕಲಂ 110 (ಇ) &(ಜಿ) ಸಿ.ಆರ್.ಪಿ.ಸಿ.;- ದಿನಾಂಕ: 23.03.2018 ರಂದು ಬೆಳಿಗ್ಗೆ 10.30 ಗಂಟೆಗೆ ಅರುಣಕುಮಾರ ಪಿ.ಎಸ್.ಐ ಸಾಹೇಬರು  ಗುರುಮಠಕಲ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ 23.03.2018 ರಂದು ಬೆಳಿಗ್ಗೆ 7.30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ನನಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ ಮಿನಾಸಪೂರ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕೂಗಾಡುತ್ತ ಹೋಗಿ ಬರುವ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಪೊಲೀಸ್ ಬಾತ್ಮಿದಾರರ ಮಾಹಿತಿ ಮೇರೆಗೆ ನಾನು ಪಿ.ಎಸ್.ಐ ಸಂಗಡ ನರೇಂದ್ರ ರೆಡ್ಡಿ ಸಿ.ಪಿ.ಸಿ 270 ಇವರನ್ನು ಕರೆದುಕೊಂಡು ಮಿನಾಸಪೂರ ಗ್ರಾಮಕ್ಕೆ 8.30 ಎ.ಎಂಕ್ಕೆ ಹೋಗಿ ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಜೋರಾದ ಧ್ವನಿಯಲ್ಲಿ ಕೂಗಾಡುತ್ತಾ ನಿಂತಿದ್ದನು. ಅವನನ್ನು 8.40 ಎ.ಎಂಕ್ಕೆ ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಅಂಜನೇಯ ತಂದೆ ಕುರಮಂತು ಬೇಡರ ವಃ 28 ಜಾಃ ಬೇಡರ ಉಃ ಗೌಂಡಿ ಕೆಲಸ ಸಾಃ ಮಿನಾಸಪೂರ ಗ್ರಾಮ ಅಂತ ಹೇಳಿದನು. ಅವನನ್ನು ಹೀಗೆ ಬಿಟ್ಟಲ್ಲಿ ಏನಾದರೊಂದು ಅನಾಹುತ ಮಾಡಬಹುದು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡಿ ಗ್ರಾಮದಲ್ಲಿ ಶಾಂತತ ಭಂಗವನ್ನುಂಟು ಮಾಡುವ ಪ್ರವೃತ್ತಿವುಳ್ಳವನಾಗಿರುತ್ತಾನೆ ಅಂತ ಸ್ಥಳೀಯರ ವಿಚಾರಣೆ ವೇಳೆ ಗೊತ್ತಾಗಿದ್ದರಿಂದ ಅವನನ್ನು ವಶಕ್ಕೆ ತೆಗೆದುಕೊಂಡು ನಂತರ ಮರಳಿ ಬೆಳಿಗ್ಗೆ 10.30 ಗಂಟೆಗೆ  ಠಾಣೆಗೆ ಬಂದು ಸಕರ್ಾರಿ ಫಿಯರ್ಾಧಿಯಾಗಿ ಸದರಿ ಆರೋಪಿ ಅಂಜನೇಯ ತಂದೆ  ಕುರಮಂತು ಬೇಡರ ವಃ 28 ಜಾಃ ಬೇಡರ ಉಃ ಗೌಂಡಿ ಕೆಲಸ ಸಾಃ ಮಿನಾಸಪೂರ ಈತನ ಮೇಲೆ ಮುಂಜಾಗ್ರತೆ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು, ಸದರಿ ವರದಿ ಸರಾಂಶದ ಮೇಲಿಂದ ಆರೋಪಿತನ ವಿರುದ್ದ ಗುನ್ನೆ ನಂ: 89/2018 ಕಲಂ: 110 (ಇ) ಮತ್ತು (ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 93/2018 ಕಲಂ: 379 ಐ.ಪಿ.ಸಿ;- ದಿನಾಂಕ: 23.03.2018 ರಂದು ರಾತ್ರಿ 11.30 ಪಿ.ಎಂಕ್ಕೆ ಖಚಿತ ಬಾತ್ಮಿ ಮೇರೆಗೆ ಕೊಂಕಲ್ ಗ್ರಾಮದ ಹಳ್ಳದಿಂದ ಟ್ರ್ಯಾಕ್ಟರದಲ್ಲಿ ಅನಾಧಿಕೃತವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ನಜರಾಪುರ ಮಾರ್ಗವಾಗಿ ಸಾಗಿಸುತ್ತಿದ್ದಾರೆ ಅಂತ ಮಾಹಿತಿ ಮೇರೆಗೆ ಬಂದಿದ್ದರಿಂದ ಸಿ.ಪಿ.ಐ ಸಾಹೇಬರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮೇತ ಐ.ಟಿ.ಐ ಕಾಲೇಜಿನ ಹತ್ತಿರ 12.10 ಎ.ಎಂಕ್ಕೆ ಹೋಗಿ ಅಲ್ಲಿ ಪರಿಶೀಲಿಸಿ ನೋಡಲಾಗಿ 12.20 ಎ.ಎಂಕ್ಕೆ ದಾಳಿ ಮಾಡಿ ಮರಳು ತುಂಬಿರುವ  ಟ್ಯಾಕ್ಟರ್ನ್ನು ಹಿಡಿದು ರಾತ್ರಿ 12.20 ಎ.ಎಂ ದಿಂದ 1.20 ಎ.ಎಂ ದವರಗೆ ಜೀಪಿನ ಲೈಟಿನ ಬೆಳಕಿನಲ್ಲಿ ಪಂಚನಾಮೆ ಕೈಕೊಂಡು ಮರಳು ತುಂಬಿದ ಟ್ಯಾಕ್ಟರ್ ಸಮೇತ ಸಿ.ಪಿ.ಐ ರವರು ಠಾಣೆಗೆ 1.30 ಎ.ಎಂಕ್ಕೆ ಬಂದು ಸಕರ್ಾರಿ ತಫರ್ೆ ಪಿರ್ಯಾಧಿದಾರನಾಗಿ ಮುಂದಿನ ಕ್ರಮಕ್ಕಾಗಿ ಟ್ರಾಕ್ಟರ ಚಾಲಕನ ಮೇಲೆ ಕ್ರಮ ಕೈಕೊಳ್ಳಲು ವರದಿ ನೀಡಿದ್ದು ಅದರ ಆಧಾರದ ಮೇಲಿಂದ ಠಾಣೆ ಗುನ್ನೆನಂ: 93/2018 ಕಲಂ; 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 48/2018 ಕಲಂ 341, 323, 324, 354, 504, 506 ಸಂಗಡ 34 ಐಪಿಸಿ;- ದಿನಾಂಕ:22/03/2018 ರಂದು 12 ಗಂಟೆ  ಸುಮಾರಿಗೆ ಫಿಯರ್ಾದಿಯು ತನ್ನ ಮಕ್ಕಳೊಂದಿಗೆ ಹೊಲಕ್ಕೆ ಹೋದಾಗ ಆರೋಪಿತರು ಹತ್ತಿ ಬಿಡಿಸುತ್ತಿದ್ದರು. ಆಗ ಯಾಕೆ ನಮ್ಮ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದೀರಿ ಅಂತ ಕೇಳಿದ್ದಕ್ಕೆ ಹೊಲ ಹಾಳಾಗಿದೆ ಅದಕ್ಕೆ ನಾವು ಹತ್ತಿ ಆಯುತ್ತಿದ್ದೇವೆ ಅಂತ ಅಂದು ಹತ್ತಿಯನ್ನು ಆಯ್ದುಕೊಂಡು ಮನೆಗೆ ಹೋಗಿರುತ್ತಾರೆ. ನಂತರ ಫಿಯರ್ಾದಿಯು ತನ್ನ ಮಕ್ಕಳೊಂದಿಗೆ ಊರಿಗೆ ಬಂದು ಅವರ ಮನೆಯಲ್ಲಿ ಹೇಳಬೇಕೆಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಅವರ ಓಣಿಯ ಮರೆಮ್ಮ ದೇವಿಯ ಗುಡಿಯ ಹತ್ತಿರ ಹೊರಟಾಗ ಆರೋಪಿತರು ಅವರಿಗೆ ತಡೆದು ನಿಲ್ಲಿಸಿ ಎಲೇ ಬ್ಯಾಡ ಸೂಳೇ ಮಕ್ಕಳ್ಯಾ ಹೊಲ ಹಾಳು ಬಿದ್ದಾದ ಅಂತ ಹತ್ತಿ ಆರಿಸಿದರ ನಿಮದೇನು ಗಂಟ ಹೋಗ್ತಾದ, ಈಗ ನಾವು ಹತ್ತಿ ಬಿಡಿಸಿಕೊಂಡು ಬಂದೀವಿ ಏನು ಮಾಡ್ತಿರಿ ಮಾಡ್ರಿ  ಅಂತ ಅಂದವರೇ ಫಿಯರ್ಾದಿಯ ಸೀರೆಯ ಸೆರಗು ಹಿಡಿದು ಜಗ್ಗಾಡಿ ಕೈಯಿಂದ ಹೊಡೆಬಡೆ ಮಾಡಿ ಕಲ್ಲಿನಿಂದ  ಹೊಡೆದು ಗುಪ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 21/2018 ಕಲಂ: 143, 147, 148, 323, 324, 504, 506 ಸಂ 149  ಐ.ಪಿ.ಸಿ.;- ದಿನಾಂಕ:21/03/2018ರಂದು ರಾತ್ರಿ 08:00 ಗಂಟೆಯ ಸುಮಾರಿಗೆ ತಮ್ಮ ಮಾವ ಬಾಬು ರಾಠೋಡ, ತಮ್ಮ ಅತ್ತೆ ಮಂಗಿಬಾಯಿ ರಾಠೋಡ ಇವರೊಂದಿಗೆ ತಮ್ಮ ಮನೆಯ ಮುಂದೆ ಇದ್ದಾಗ ಬಂದ ವಿಶಾಲ ರಾಠೋಡ ರಮಕಿಬಾಯಿ ರಾಠೋಡ ರಕ್ಕಿಬಾಯಿ ರಾಠೋಡ ರಹಿನಾ ರಾಠೋಡ ಎಲ್ಲಾರೂ ಸಾ||ಮಾರನಾಳ ತಾಂಡಾ ಇವರುಗಳು ಲೇ ಭೊಸೂಡಿ ಸೂಳಿ ಮಕ್ಕಳೆ ನಿಮ್ಮದು ಎಷ್ಟು ತಿಂಡಿ ಅಂತಾ ಅಲ್ಕಾ ಶಬ್ದಗಳಿಂದ ಬೈದಾಗ ಪಿಯರ್ಾದಿಯು ಯಾಕೆ ಬೈಯುತ್ತಿರಿ ಅಂತಾ ಕೇಳಿದಾಗ ನಿಮ್ಮ ಮಾವ ಸರಾಯಿ ಕುಡಿದ ರೊಕ್ಕ ಕೊಟ್ಟಿಲ್ಲ ಸೂಳಿ ಮಗ ಅಂತಾ ಬೈದಾಡಿ ಜಗಳ ತೆಗೆದು ವಿಶಾಲ ರಾಠೋಡ ಈತನು ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಜಾಡಿಸಿ ದಬ್ಬಿಸಿಕೊಟ್ಟಿದ್ದು ಇತರರು ಪಿಯರ್ಾದಿಯ ಅತ್ತೆ-ಮಾವನೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆ-ಬಡೆ ಮಾಡಿದ್ದು ದಿನಾಂಕ:22/03/2018ರಂದು ಮುಂಜಾನೆ 08:30 ಗಂಟೆಯ ಸುಮಾರಿಗೆ ನಮ್ಮ ತಾಂಡಾದ ಜಯರಾಮ ಇವರ ಮನೆಯ ಮುಂದೆ ಜಗಳದ ನ್ಯಾಯ ಪಂಚಾಯತ ಮಾಡಲು ಕರೆಯಿಸಿ ಪಿಯರ್ಾದಿಯ ಗಂಡನೊಂದಿಗೆ ಬಾಳರಾಮ ರಾಠೋಡ ನಾರಾಯಣ ರಾಠೋಡ ಮಹಾದೇವಿ ರಾಠೋಡ ಸಾ||ಮಾರನಾಳ ತಾಂಡಾ ಇವರುಗಳು ಲೇ ಸೂಳಿ ನನ್ನ ಮಕ್ಕಳೆ ಇವತ್ತು ನಿಮಗೆ ಖಲಾಸ್ ಮಾಡುತ್ತೇವೆ. ಅಂತಾ ಬೈದಾಡಿ ಪಿಯರ್ಾದಿಯ ಗಂಡನೊಂದಿಗೆ  ಬಾಳರಾಮ ರಾಠೋಡ ನಾರಾಯಣ ರಾಠೋಡ ಇವರು ತಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಹೊಡೆ-ಬಡೆ ಮಾಡಿ ಅಂಗಿಯನ್ನು ಹರಿದಿದ್ದು ಹೊಡೆದವರ ವಿರುದ್ಧ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿಯ ಲಿಖಿತ ದೂರಿನ ಸಾರಾಂಶ ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 62/2018 ಕಲಂ. 279 ಐಪಿಸಿ & 177 ಐಎಂವಿ ಕಾಯ್ದೆ;- ದಿನಾಂಕ:23/03/2018 ರಂದು 11.40 ಗಂಟೆಯ ಸುಮಾರಿಗೆ ಪಿಯರ್ಾದಿ ಮತ್ತು ಇತರರೂ  ಕೂಡಿ ಸರಕಾರಿ ಜೀಪ ನಂ. ಕೆಎ-33 ಜಿ-0233 ನೇದ್ದರಲ್ಲಿ ಮುಂಭರುವ ವಿಧಾನಸಭೆಯ ಚುನಾವಣೆಯ ನಿಮಿತ್ಯ ಮತಗಟ್ಟೆಯನ್ನು ಚಕ್ ಮಾಡಲು ಹೊರಟಾಗ ಜೀಪನ್ನು ಆರೋಪಿತನ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು, ಹೋಗಿ ರೋಡನ ದಂಡೆಗೆ ಯಾವುದೇ ಸುರಕ್ಷತೆ ಇಲ್ಲದೇ ನಿಲ್ಲಿಸಿದ ಬಸ್ಸಿನ ಹಿಂಭಾಗಕ್ಕೆ ಹೋಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಇರುತ್ತದೆ. ಅಪಘಾತದಲ್ಲಿ ಜೀಪನಲ್ಲಿದ್ದವರಿಗೆ ಯಾರಿಗೂ ಯಾವುದೇ ಗಾಯವಾಗಿರುವದಿಲ್ಲಾ ಅಂತಾ ಲಿಖಿತ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ.   

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 70/2018 ಕಲಂ 504, 509 ಸಂ.34 ಐಪಿಸಿ;- ದಿನಾಂಕ:21-03-2018 ರಂದು 10 ಪಿ ಎಂ ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ರಾಯಚೂರ ರಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಕುಮಾರಿ ಸುಪ್ರಿಯಾ ಇವಳ ಹೇಳಿಕೆಯನ್ನು ಶ್ರೀ ನಾಗರಾಜ ಪಿ.ಐ ಸಾಹೇಬರು ಶಹಾಪೂರವರು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಯ ಹೆಚ್ಸಿ-134 ರವರೊಂದಿಗೆ ಕೊಟ್ಟು ಕಳಿಸಿದ್ದನ್ನು ಸ್ವಿಕರಿಸಿಕೊಂಡಿದ್ದು  ಸಾರಾಂಶವೆನೆಂದರೆ  ನನ್ನ ಹೆಸರು ಸುಪ್ರಿಯಾ ಮೊದಲವರ್ಷ ಪಿಯುಸಿ ಪರೀಕ್ಷೆ ಬರೆದಿದ್ದು ಎರಡನೇ ವರ್ಷ ಪಿಯುಸಿ ಹೋಗುವಳು ಇದ್ದೆನೆ. ದಿನಾಂಕ: 19-03-2018 ರಂದು 11 ಎ.ಎಂ.ಸುಮಾರಿಗೆ ಮನೆಯಲ್ಲಿ ನಾನು ನನ್ನ ತಾಯಿ ಇಬ್ಬರು ಇದ್ದೆವು. ನಾನು ಒಂದು ಸಲಾ ಹಳ್ಳಕ್ಕೆ ಹೋಗಿ ಬಟ್ಟೆ ತೊಳೆದುಕೊಂಡು ಬರಲು ಹೋದಾಗ ಹಳ್ಳದಲ್ಲಿ ಇಬ್ಬರು ಹುಡುಗರು ಬಂದರು ಅವರು ಏಕೆ ಮಾತಾಡಿಸಲ್ಲಾ ಚಿಲ್ಲರೆ ನಾಯಿನಾ ಅಂತಾ ಕೆಟ್ಟದಾಗಿ ಬೈದರು ನಾನು ಸುಮ್ಮನಿದ್ದೆನು. ಅಲ್ಲಿರುವ ಅಕ್ಕನವರು ನನ್ನ ಬಕೀಟ ಬಚ್ಚಿಟ್ಟದ್ದರು ನಾನು ಬಕೇಟ ಹುಡುಕಾಡುವಾಗ ಮೂವರು ಅಕ್ಕರು ನಗುತ್ತಿದ್ದರು, ಗದ್ದೆಯಲ್ಲಿ ಕೆಲವರು ಕೆಲಸ ಮಾಡುತ್ತಿದ್ದರು. ನಾನು ಮನೆಗೆ ಹೋಗಿ ನಮ್ಮ ಮಮ್ಮಿಗೆ ಕರೆದುಕೊಂಡು ಬಂದೆನು. ಮಮ್ಮಿ ಅವರಿಗೆ ಕೇಳಿದಾಗ  ನಿಮ್ಮ ಬಕೇಟ ತಗೆದುಕೊಂಡು ಹೋಗು ಅಂತಾ ಕೊಟ್ಟರು. ನಾವು ಬಕೇಟ ತಗೆದುಕೊಂಡು ಮನೆಗೆ ಹೋದೆವು ಆಗ ಮನೆಯಲ್ಲಿ ಇದಕ್ಕೆ ಎಷ್ಟು ಹೊತ್ತು ಅಂತಾ ಕೇಳಿದರು ಎದಕ್ಕು ಇಲ್ಲಾ ಅಂತಾ ಹೇಳಿದೆನು. ಮತ್ತೆ ಅದು ಎಲ್ಲಾ ಹೇಳಿದರನು ನನಗೆ ಹೊಡಿತ್ತಾರೆ ಅಂತಾ ಹೇಳಿ, ಎದಕ್ಕು ಇಲ್ಲಾ ಬಂಡಿ ಕಾಲಿ ಇರಲಿಲ್ಲ ಅಂತಾ ಹೇಳಿದೆನು ಸುಮ್ಮನೆ ಆದರು. ನಮ್ಮ ಮನೆಯಲ್ಲಿ ಎಲ್ಲರೂ ಬೈಯಾಕತ್ತರು. ಹಿಂಗೆ ಮಾಡತಿ ಹಂಗೆ ಮಾಡತಿ ಅಂತಾ ಹೇಳಿ ಸುಮ್ಮನಾದೆ ಏನು ಮಾಡಲಿಲ್ಲ. ಅವರು ಹಾಂಗ ಸಂಬಂಧ  ನಾನು ಚೀಮಣಿ ಎಣ್ಣಿ ಹಾಕೊಂಡು ಸುಟ್ಟುಕೊಂಡಿರುತ್ತೆನೆ. ಆ ನಾಯಿನ ಮಾತಾಡಸಬೇಡಿರಿ ಸುವರ್ ಚಿಲ್ಲರ ನಾನು ಕಾಲೇಜಿಗೆ ಹೋಗುವ ಟೈಮದಲ್ಲಿ ಚುಡಾಯಿಸುವದು ಕಣ್ಣು ಹೊಡೆಯುವದು ಬೈಯುವದು ಬೆರೆಯವರ ಜೊತೆ ಏನಾದರೂ ಬರೆದು ಕಳಿಸುವದು ಮಾಡುತ್ತಿದ್ದರು. ನಮ್ಮೂರವರಾದ ಮೌನೇಶ, ನಿಂಗಪ್ಪ ಇವರು ಏನೊ ಮಾಡಬೇಕು ಅಂದುಕೊಡ್ಡಿದ್ದರು ಹಳ್ಳದಲ್ಲಿ ಜಾಸ್ತಿ ಜನ ಇದ್ದರಿಂದ ಅವರು ಏನು ಮಾಡಲಿಲ್ಲ ಸುಮ್ಮನೆ ಆಗಿರುತ್ತಾರೆ. ಮೌನೇಶ, ನಿಂಗಪ್ಪ ಇವರು ನನಗೆ ಚುಡಾಯಿಸುವದು ಕೆಟ್ಟ ಕೆಟ್ಟದಾಗಿ ಬೈಯುವದು ಮಾಡುವದರಿಂದ ಚಿಮಣಿ ಎಣ್ಣೆ ಹಾಕಿಕೊಂಡು ಸುಟ್ಟುಕೊಂಡಿದ್ದು ಇರುತ್ತದೆ ಅಂತಾ ಕೊಟ್ಟ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 70/2018 ಕಲಂ: 504, 509 ಸಂ.34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ದುಃಖಾಪಾತ ಹೊಂದಿ ರಿಮ್ಸ್ ಭೋದಕ ಆಸ್ಪತ್ರೆ ರಾಯಚೂರದಲ್ಲಿ ಉಪಚಾರ ಪಡೆಯುತ್ತಿದ್ದ ಕುಃ ಸುಪ್ರಿಯಾ ತಂದೆ ಗುರುಸ್ವಾಮಿ ಹಿರೇಮಠ ಸಾ: ತಿಂಥಣಿ ಇವಳು ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕಃ 23/03/2018 ರಂದು 11-40 ಎ.ಎಮ್ ಸುಮಾರಿಗೆ ಮೃತಪಟ್ಟಿರುವ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ. 306 ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 56/2018 ಕಲಂ, 143, 147, 341, 447 ಸಂಗಡ 149 ಐ.ಪಿ.ಸಿ;- ದಿನಾಂಕ: 23/03/2018 ರಂದು 14:30 ಪಿಎಮ್ ಕ್ಕೆ ಸುಮಾರಿಗೆ ಪಿಯರ್ಾದಿ ಠಾಣೆಗೆ ಬಂದು ನೀಡಿದ್ದ ಅಜರ್ಿಯ ಸಾರಂಶಏನಂದರೆ, ನಾನು ಜ್ಞಾನಮಿತ್ರ ಪಿಡಿಒ ಗ್ರಾಮ ಪಂಚಾಯತಿ ನಾಗನಟಗಿ ತಮ್ಮಲ್ಲಿ ವಿನಂತಿಸಿಕೊಳ್ಳುವದೇನಂದರೆ, ನಾಗನಟಗಿ ಗ್ರಾಮದ ಸರಕಾರಿ ಕಮಿನಿಟಿ ಹಾಲ ಮುಂದಿನ 10 ಗುಂಟೆ ಖುಲ್ಲಾ ಜಾಗದಲ್ಲಿ ಗ್ರಾಮದ ಸಾರ್ವಜನಿಕರು ದಿನಾಂಕ 22/03/2018 ರಂದು 06.00 ಪಿಎಂ ಸುಮಾರಿಗೆ ಅನದಿಕೃತವಾಗಿ ಕಲ್ಲುಗಳನ್ನು ಹಾಕಿ ಮೂಖ್ಯೆ ರಸ್ತೆಯಿಂದ ಕಮಿನಿಟಿ ಹಾಲಗೆ ಹೋಗುವ ರಸ್ತೆಯಲ್ಲಿಯು ಕಲ್ಲುಗಳನ್ನು ಹಾಕಿ ಜನ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡಿರುತ್ತಾರೆ. ಆದ್ದರಿಂದ ಅನಧಿಕರತವಾಗಿ ಹಾಕಿದ ಕಲ್ಲುಗಳನ್ನು ತೆರವುಗೊಳಿಸುವ ಸಮಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ನೀಡಲು ಮಾನ್ಯರವರಲ್ಲಿ ವಿನಂತಿ. ಈ ಸಂಬಂದವಾಗಿ ತಾಲೂಕ ಪಂಚಾಯತಿಯ ಕಾರ್ಯನಿರ್ವಹಣ ಅಧಿಕಾರಿಗಳ ನೇತೃತ್ವದಲ್ಲಿ ಊರಿನ ಎಲ್ಲಾ ಸಮುದಾಯದ ಮುಖಂಡರುಗಳು ಕರೆಯಿಸಿ ಸಭೆ ಕೈಕೊಂಡು ಅನಧಿಕೃತವಾಗಿ ಹಾಕಿದ ಕಲ್ಲುಗಳನ್ನು ತೆಗೆಯಲು ಸೂಚಿಸಿದರು ಸದರಿಯವರು ಒಪ್ಪಿರುವದಿಲ್ಲ. ಆದ್ದದರಿಂದ ನಾವು ಸದರಿ ಕಲ್ಲುಗಳನ್ನು ತೆರವುಗೊಳಿಸುವ ವೇಳೆ ಊರಿನ ಕೆಲಸು ಕೀಡಿಗೇಡಿಗಳು ಗಲಾಟೆ ಮಾಡುವ ಹಾಗು ಕರ್ತವ್ಯಕ್ಕೆ ಅಡ್ಡಿಪಡಿಸುವ ಸಾದ್ಯತೆ ಇರುವದರಿಂದ ಸೂಕ್ತ ಪೊಲಿಸ್ ರಕ್ಷಣೆ ನೀಡಲು ವಿನಂತಿ ಹಾಗೂ ಮೇಲ್ಕಂಡ ಸ್ಥಳದಲ್ಲಿ ಅನಧಿಕೃತವಾಗಿ ಕಲ್ಲುಗಳನ್ನು ಹಾಕಿದ ಎಸ್.ಟಿ ಸಮುದಾಯದ ಸುಮಾರು 50 ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 56/2018 ಕಲಂ, 143, 147, 341, 447, ಸಂಗಡ 149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: