ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ
15-08-2018
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 143/2018, ಕಲಂ.
420 ಐಪಿಸಿ ಜೊತೆ 78(3) ಕೆ.ಪಿ ಕಾಯ್ದೆ :-
ದಿನಾಂಕ 14-08-2018 ರಂದು ಚಿಟಗುಪ್ಪಾ ಪಟ್ಟಣದ ಕರೀಮಲ್ಲೇಶ ದರ್ಗಾ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಕರೆದು ಅವರಿಗೆ ಒಂದು ರೂಪಾಯಿ ನೀಡಿರಿ ಮಟಕದ ನಂಬರ ಹತ್ತಿದರೆ ಒಂದು ರೂಪಾಯಿಗೆ 80 ರೂ ನೀಡುತ್ತೇನೆ ಅಂತ ಹೇಳಿ ಸರ್ವಜನಿಕರಿಂದ ಹಣ ಪಡೆದು ವಂಚನೆ ಮಾಡಿ ಅವರಿಗೆ ಮಟಕಾ ಚೀಟಿ ಬರೆದುಕೋಡುತ್ತಿದ್ದಾನೆಂದು ಮಾಹಾಂತೇಶ ಲಂಬಿ ಪಿ.ಎಸ್.ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು
ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ ಪಟ್ಟಣದ ಕರೀಮಲ್ಲೇಶ ದರ್ಗಾ ಹತ್ತಿರ ಒಂದು ಅಂಗಡಿ ಹತ್ತಿರ ದೂರಿನಿಂದ ಮರೆಯಾಗಿ ನಿಂತು ನೋಡಲು ಆರೋಪಿ ಮಹೆಬೂಬ ತಂದೆ ಹಮೀದಮೀಯ್ಯಾ ಮಾಸೂಮವಾಲೆ, ವಯ: 25 ವರ್ಷ, ಸಾ: ಹುಸೇನಿ ಆಲಂ ಚಿಟಗುಪ್ಪಾ ಇತನು ಮಟಕಾ ಚಿಟಿ ಬರೆದುಕೊಡುವುದನ್ನು ನೋಡಿ ಖಚಿತ ಮಾಡಿಕೊಂಡು ಅವನ ಮೇಲೆ ಎಲ್ಲರೂ ದಾಳಿ ಮಾಡಿ ಹಿಡಿದು ಸದರಿಯವನಿಗೆ ಮಟಕಾ ಬರೆದುಕೊಳ್ಳಲು ಸರಕಾರದ ಯಾವುದಾದರೂ ಪರವಾನಿಗೆ ಇದೆಯಾ ಅಂತ ಕೇಳಿದಾಗ ಅವನು ತನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇಲ್ಲಾ ಅಂತ ತಿಳಿಸಿದನು, ನಂತರ ಇವನ ಅಂಗ ಶೋಧನೆ ಮಾಡಲು ಕಿಸೆಯಿಂದ ಒಂದು ಬಾಲ ಪೇನ ಹಾಗು 15 ನಂಬರ ಬರೆದ ಮಟಕಾ ಚೀಟಗಳು ಹಾಗು ನಗದು ಹಣ ರೂ. 4100/-
ಸಿಕ್ಕಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 144/2018, ಕಲಂ.
420, 419 & 468 ಐಪಿಸಿ :-
ದಿನಾಂಕ 21-06-2010 ರಂದು ಫಿರ್ಯಾದಿ ಸುಭಾಷ ತಂದೆ ಝರಣಪ್ಪಾ ಚೌಧರಿ ವಯ: 65 ವರ್ಷ, ಸಾ: ಹೌಸಿಂಗ ಬೋರ್ಡ ಕಾಲೋನಿ ಚಿಟಗುಪ್ಪಾ ರವರ ಮನೆಯಿಂದ ಆರೋಪಿತನಾದ ಪ್ರಲ್ಹಾದ ತಂದೆ ಮಧುಸುಧನರಾವ ವಯ: 34 ವರ್ಷ, ಸಾ: ಪ್ಲಾಟ ನಂ. 213 ಮನೆ ನಂ. 5-3-989, ಎನ್.ಎಸ್. ರೋಡ ಹೈದ್ರಾಬಾದ [ತೇಲಂಗಾಣ] ಜೊತೆ ಗೋವಿಂದ (ಮೃತ) ರವರು ಮೋಸ ಮಾಡುವ ಉದ್ದೇಶದಿಂದ ಫಿರ್ಯಾದಿಯ ಮನೆಗೆ ಬಂದು ವಂಚನೆಯಿಂದ ಫಿರ್ಯಾದಿ ಮನೆಯಲ್ಲಿಟ್ಟಿದ್ದ ಚೆಕ ನಂ. 318775, 318777 ನೇದ್ದನ್ನು ತೆಗೆದುಕೊಂಡು ಹೋಗಿದ್ದು, ಸುಳ್ಳು ದಾಖಲೆ ಸೃಷ್ಠಿ ಮಾಡಿ ಮೋಸ ಮಾಡಿರುತ್ತಾರೆಂದು ನೀಡಿದ
ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 14-08-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment