Police Bhavan Kalaburagi

Police Bhavan Kalaburagi

Tuesday, August 14, 2018

Yadgir District Reported Crimes Updated on 14-08-2018

                                     
                                  Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 266/2018 ಕಲಂ 447, 323, 324, 504, 506 ಸಂಗಡ 149 ಐಪಿಸಿ;- ದಿನಾಂಕ 13.08.2018 ರಂದು ಬೆಳಿಗ್ಗೆ 8-15 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯ ಗಂಡ, ಸೊಸೆ, ಮಗಳು ನಾಲ್ಕುಜನರು ಸೇರಿ ಎಸರು ಹೊಲದಲ್ಲಿ ಎಸರು ಕಾಯಿ ಬಿಡಿಸುತ್ತಿದ್ದಾಗ ಆರೋಪಿತರೆಲ್ಲಾರು ಸೇರಿ ಫೀರ್ಯಾದಿಯ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿ ಮತ್ತು ಆಕೆಯ ಗಂಡ, ಮಗಳು, ಸೊಸೆ ಇವರಿಗೆ ಅವಾಚ್ಯವಾಗಿ ಬೈದು, ಕೈಯಿಂದ,ಕಲ್ಲಿನಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 266/2018 ಕಲಂ: 447, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 267/2018 ಕಲಂ 143, 147, 447, 323, 324, 504, 506 ಸಂಗಡ 149 ಐಪಿಸಿ;- ದಿನಾಂಕ 13.08.2018 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಆತನ ಹೆಂಡತಿ, ಮತ್ತು ಸೊಸೆ, ಮಗಳು ನಾಲ್ಕುಜನರು ಸೇರಿ ಜಮೀನು ಸವರ್ೆ ನಂ. 673 ರಲ್ಲಿ ಆ ಪೈಕಿ ಪಿರ್ಯಾಧಿಗೆ ಬಂದ ವಿಸ್ತೀರ್ಣ 2ಎ.15 ಗುಂಟೆ ಎಸರು ಹೊಲದಲ್ಲಿ ಎಸರು ಕಾಯಿ ಬಿಡಿಸುತ್ತಿದ್ದಾಗ ಆರೋಪಿತರೆಲ್ಲಾರು ಸೇರಿ ಅಕ್ರಮಕೂಟ ರಚಿಸಿಕೊಂಡು ಏಕ್ಕೊದ್ದೇಶದಿಂದ ಫೀರ್ಯಾದಿಯ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಈ ಹೊಲ ನಮಗೆ ಸೇರಿದ್ದು ಅಂತಾ ಫಿರ್ಯಾದಿ ಮತ್ತು ಹೆಂಡತಿಗೆ ಅವಾಚ್ಯವಾಗಿ ಬೈದು, ಕೈಯಿಂದ,ಕಲ್ಲಿನಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
ಗೋಗಿಪೊಲೀಸ್ ಠಾಣೆ ಗುನ್ನೆ ನಂ ;- 143/2018 ಕಲಂ, 87 ಕೆ.ಪಿ.ಆ್ಯಕ್ಟ್;- ದಿನಾಂಕ: 13/08/2018 ರಂದು 11.20 ಎ.ಎಮ್ ಕ್ಕೆ ಮಾನ್ಯ ಶ್ರೀ. ಹೇಮಾವತಿ ಎ.ಎಸ್.ಐ ಗೋಗಿ ಪೊಲೀಸ್ ಠಾಣೆ ರವರು 03 ಜನ ಆರೋಪಿತರನ್ನು ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ಒಂದು ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು ಸದರಿ ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 13/08/2018 ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಇದ್ದಾಗ 09.40 ಎ.ಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಗೋಗಿ ಕೆ ಗ್ರಾಮದ ವೇಟ್ನರ್ರಿ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 10.05 ಎ.ಎಮ್ ಕ್ಕೆ  ದಾಳಿ ಮಾಡಿದ್ದು, ದಾಳಿಯಲ್ಲಿ 03 ಜನ ಆರೋಪಿತರು ಮತ್ತು ಒಟ್ಟು 6080=00 ರುಪಾಯಿ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 10-05 ಎ.ಎಮ್ ದಿಂದ 11.05 ಎ.ಎಮ್ ದವರೆಗೆ ಜಪ್ತಿ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 11-20 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟು ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ ಎಪ್ ಸಿ ನ್ಯಾಯಾಲಯ ಶಹಾಪೂರ ರವರ ಅನುಮತಿ ಪಡೆದುಕೊಂಡು 12-20 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 143/2018 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: