Police Bhavan Kalaburagi

Police Bhavan Kalaburagi

Monday, August 20, 2018

BIDAR DISTRICT DAILY CRIME UPDATE 20-08-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-08-2018

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 148/2018, ಕಲಂ. 279, 337 ಐಪಿಸಿ :-
ದಿನಾಂಕ 19-08-2018 ರಂದು ಫಿರ್ಯಾದಿ ಬಳಿರಾಮ ತಂದೆ ತುಕಾರಾಮ ಹಂದಿಕೇರೆ, ವಯ: 65 ವರ್ಷ, ಜಾತಿ: ಕೊಳಿ, ಸಾ: ವಳಖಿಂಡಿ ರವರು ದಾಡಿ ಮಾಡಿಕೊಂಡು ಬರಲು ಇಟಗಾ ಗ್ರಾಮಕ್ಕೆ ಬಂದು ದಾಡಿ ಮಾಡಿಕೊಂಡು ವಳಖಿಂಡಿ ಗ್ರಾಮಕ್ಕೆ ಇಟಗಾದಿಂದ ಆಟೊ ನಂ. ಕೆಎ-39/0497 ನೇದರಲ್ಲಿ ಕುಳಿತುಕೊಂಡು ಹೋಗುವಾಗ ಇಟಗಾ-ವಳಖಿಂಡಿ ರೊಡಿನ ಮೇಲೆಮ್ಮೂರ ಖಯಿಮಸಾಬ ರಂಜೇರಿ ರವರ ಹೊಲದ ಹತ್ತಿರ ತಿರುವಿನಲ್ಲಿ ಸದರಿ ಆಟೋ ಚಾಲಕನಾದ ಆರೋಪಿ ಸಮೀರ ತಂದೆ ಸರವರಪಾಶಾ ಖತಿಫ್ ವಯ: 22 ವರ್ಷ, ಸಾ: ದುಬಲಗುಂಡಿ ಇತನು ತನ್ನ ಆಟೋವನ್ನು ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿ ರಸ್ತೆ ಎಡಕ್ಕೆ ತಗ್ಗಿನಲ್ಲಿ ಹಾಕಿ ಪಲ್ಟಿ ಮಾಡಿ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಎಡಗೈ ತೋರು ಬೇರಳಿಗೆ, ಮಧ್ಯ ಬೇರಳಿಗೆ ರಕ್ತಗಾಯ ಹಾಗೂ ಎಡಮೊಳಕೈಗೆ, ಎಡಗಾಲಣ್ಣಿನ ಹತ್ತಿರ ತರಚಿದ ಗಾಯಗಳಾಗಿದ್ದು, ಸದರಿ ಆಟೊದಲ್ಲಿದ್ದ ಇನ್ನೊಬ್ಬ ವ್ಯಕ್ತಿಯ ನಯಿಮ ಹಾಗೂ ಆರೋಪಿ ಇಬ್ಬರು ಪಲ್ಟಿಯಾದ ಆಟೋ ಎಬ್ಬಿಸಿ ಸದರಿ ಆಟೋದಲ್ಲಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 83/2018, ಕಲಂ. 323, 504, 506, 498(ಎ) ಜೊತೆ 149 ಐಪಿಸಿ :-
ಫಿರ್ಯಾದಿ ಸುನೀತಾ ಗಂಡ ಅವಿನಾಶ ಮೇತ್ರೆ ವಯ: 26 ವರ್ಷ, ಜಾತಿ: ಕಬ್ಬಲಿಗ, ಸಾ: ಶಕ್ತಿನಗರ ಕಲಬುರಗಿ, ಸದ್ಯ: ಕಿಣ್ಣಿ ವಾಡಿ, ತಾ: ಬಸವಕಲ್ಯಾಣ ರವರ ತಂದೆ ಪಾಂಡುರಂಗ ಮತ್ತು ತಾಯಿ ಪಾರ್ವತಿ ಇವರ ಸ್ವಂತ ಊರು ರೆಕುಳಗಿ ಗ್ರಾಮ, ಜಿ: ಬೀದರ ಇರುತ್ತದೆ, ರವರ ತಾಯಿ ಮತ್ತು ಅಜ್ಜಿ ಹಾಗೂ ತಾತನವರು ಸೇರಿ ಫಿರ್ಯಾದಿಗೆ ದಿನಾಂಕ 11-04-2016 ರಂದು ಶಕ್ತಿ ನಗರ ಶಹಬಾದ ರಿಂಗ್ ರೊಡ್ ಕಲಬುರ್ಗಿ ಅವಿನಾಶ ತಂದೆ ಗಣಪತಿ ಮೇತ್ರೆ ಇವರ ಜೋತೆ ಫಿರ್ಯಾದಿ ಮದುವೆಯನ್ನು ಬಸವಕಲ್ಯಾಣದ ಸಾಹೀಲ್ ಫಕ್ಷನ ಹಾಲನಲ್ಲಿ ಹಿರಿಯರ ಸಮಕ್ಷಮದಲ್ಲಿ ಸಂಪ್ರದಾಯಿಕವಾಗಿ ಗೃಹಪಯೋಗಿ ಸಾಮಾನುಗಳನ್ನು ಮತ್ತು ವರೋಪಚಾರ ನೀಡಿ ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಗಂಡ ಅವಿನಾಶ ತಂದೆ ಗಣಪತಿ ಮೇತ್ರೆ, ಅತ್ತೆ ಪಾರ್ವತಿ ಗಂಡ ಗಣಪತಿ ಮೇತ್ರೆ, ಭಾವನಾದ ಸುದೇಶ ತಂದೆ ಗಣಪತಿ ಮೇತ್ರೆ, ನೆಗಣಿ ಮಿನಾಕ್ಷಿ ಗಂಡ ಸುದೇಶ ಮೇತ್ರೆ ಹಾಗೂ ನಾದನಿಯಾದ ರಾಜಶ್ರೀ ತಂದೆ ಗಣಪತಿ ಮೇತ್ರೆ ಇವರೆಲ್ಲರು ಫಿರ್ಯಾದಿಗೆ 3-4 ತಿಂಗಳು ಸರಿಯಾಗಿ ನೊಡಿಕೊಂಡು ನಂತರ ದಿವಸಗಳಲ್ಲಿ ಎಲ್ಲರು ಸೇರಿ ನನಗೆ ನೀನು ಸರಿ ಇಲ್ಲಾ, ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ, ನೀನು ನಮ್ಮ ಮನೆಯಲ್ಲಿ ಇರಬೇಡಾ, ನೀನು ನಮ್ಮ ಆದೇಶದ ಪ್ರಕಾರ ನಾವು ಹೇಳಿದ ಪ್ರಕಾರ ಇರಬೇಕು, ಇಲ್ಲವಾದರೆ ನೀನು ನಿನ್ನ ತವರು ಮನೆಗೆ ಹೋಗು ಅಂತಾ ಎಲ್ಲರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನಿಡುತ್ತಿದ್ದರು, ಅದೇ ರೀತಿ ಅತ್ತೆ ನೀನು ನಮ್ಮ ಮಾತು ಕೇಳದಿದ್ದರೆ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಇಲ್ಲ ಸಲ್ಲದ ಮಾತುಗಳನ್ನು ಆಡಿ ಎಲ್ಲರು ಸೇರಿ ಹೋಡೆ ಬಡೆ ಮಾಡುತ್ತಿದ್ದರು, ಫಿರ್ಯಾದಿಯು ಸದರಿ ವಿಷಯದ ಬಗ್ಗೆ ಆಗಾಗ ಹಬ್ಬ ಹರಿದಿನಕ್ಕೆ ಕಿಣ್ಣಿವಾಡಿ ಗ್ರಾಮಕ್ಕೆ ಬಂದಾಗ ತಮ್ಮ ತಾಯಿಗೆ, ಅಣ್ಣನಿಗೆ, ತಾತ ಮತ್ತು ಅಜ್ಜಿಗೆ ಹೇಳಿದ್ದು, ಆಗ ಎಲ್ಲರು ಸೇರಿ ಫಿರ್ಯಾದಿಗೆ ಸಮದಾನ ಪಡಿಸಿ ಇವತ್ತಿಲ್ಲಾ ನಾಳೆ ಎಲ್ಲ ಸರಿ ಹೋಗಬಹುದು ಅಂತಾ ಹೇಳಿ ಗಂಡನ ಮನೆಗೆ ಕಳುಹಿಸಿಕೊಡುತ್ತಿದ್ದರು, ಫಿರ್ಯಾದಿಯು ತನ್ನ ಗಂಡನ ಮನೆಗೆ ಹೋದ ಮೇಲೆ ಸ್ವಲ್ಪ ದಿವಸ ಸರಿಯಾಗಿ ಇಟ್ಟುಕೊಂಡು ನಂತರ ಆರೋಪಿತರಾದ ಫಿರ್ಯಾದಿಯ ಗಂಡ, ಅತ್ತೆ, ಭಾವ, ನೆಗಣಿ, ನಾದನಿ, ಇವರೆಲ್ಲರು ಸೇರಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು, ಸದರಿ ಆರೋಪಿತರು ಸೇರಿ ಹಲವಾರು ಸಾರಿ ಫಿರ್ಯಾದಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿರುವುದನ್ನು ಫಿರ್ಯಾದಿಯು ಸಹಿಸಲಾರದೆ ಎರಡು ವರ್ಷಗಳ ಹಿಂದೆ ತನ್ನ ತಾತ, ಅಜ್ಜಿಯ ಮನೆಯಾದ ಕಿಣ್ಣಿವಾಡಿ ಗ್ರಾಮಕ್ಕೆ ಬಂದು ವಾಸವಾಗಿದ್ದು, ಫಿರ್ಯಾದಿಯು ಕಿಣ್ಣಿವಾಡಿಗೆ ಬಂದಾಗಿನಿಂದ ಗಂಡನಿಗೆ ಹಲವಾರು ಬಾರಿ ಕರೆ ಮಾಡಿದರು ಸಹ ಗಂಡನಾಗಲಿ ಅಥವಾ ಅವರ ಕುಟುಂಬದವರಾಗಲಿ ಕರೆಯನ್ನು ಸ್ವಿಕರಿಸುತ್ತಿಲ್ಲ, ನಂತರ 2017 ಸಾಲಿನ ಮೇ ತಿಂಗಳಲ್ಲಿ ಅತ್ತೆಯು ಸಂಬಂಧಿಯಾದ ಸುಭಾಷ ತಂದೆ  ಗುಂಡಪ್ಪಾ ಏಗಲಂಬೆ ಸಾ: ಮುಡಬಿ ಇವರಿಗೆ ಕರೆ ಮಾಡಿ ಸುನಿತಾ ಇವಳಿಗೆ ಕಲಬುರ್ಗಿಗೆ ಕರೆದುಕೊಂಡು ಬನ್ನಿ ಮಾತು ಕತೆ ಮುಗಿಸಿ ಇಟ್ಟುಕೊಳ್ಳುತ್ತೇವೆ ಅಂತಾ ಅಂದಾಗ ಇದನ್ನು ಅರಿತ ಫಿರ್ಯಾದಿಯ ತಾಯಿ ಮತ್ತು ಅಜ್ಜಿ, ಸೋದರ ಮಾವಂದಿರು ಮತ್ತು ಸಂಬಂಧಿಕರು ಎಲ್ಲರು ಸೇರಿ ಫಿರ್ಯಾದಿಯವರ ಮುಂದಿನ ಭವಿಷ್ಯದ ಬಗ್ಗೆ ವಿಚಾರಣೆ ಮಾಡಿ ಎಲ್ಲರು ಸೇರಿ ಫಿರ್ಯಾದಿಗೆ ಕಲಬುರಗಿಗೆ ಕರೆದುಕೊಂಡು ಬಂದು ಗಂಡನ ಮನೆಗೆ ಹೋದಾಗ ಸದರಿ ಆರೋಪಿತರೆಲ್ಲರೂ ಸೇರಿ ಫಿರ್ಯಾದಿಯ ಜೊತೆ ಯಾವುದೆ ರೀತಿ ಮಾತನಾಡದೆ ಎಲ್ಲರ ಜೊತೆ ತಕರಾರು ಮಾಡಿ ಫಿರ್ಯಾದಿಗೆ ಇಟ್ಟುಕೊಳ್ಳುವದಿಲ್ಲ ಅಂತಾ ಜಗಳ ಮಾಡಿದಾಗ, ಫಿರ್ಯಾದಿಯ ಜೊತೆ ಬಂದವರೆಲ್ಲರೂ ಏಕೆ ಇಟ್ಟುಕೊಳ್ಳುವದಿಲ್ಲ ಅಂತಾ ಕೇಳಲು ಹೊದಾಗ  ಸದರಿ ಆರೋಪಿತರು ಎಲ್ಲರಿಗೂ ಹೊಡೆ ಬಡಿ ಮಾಡಿ, ನಂತರ ಎಲ್ಲರ ವಿರುದ್ದಧ ಯುನಿವರಸಿಟಿ ಪೊಲೀಸ ಠಾಣೆ ಕಲಬುರ್ಗಿಯಲ್ಲಿ ವಿನಾಃ ಕಾರಣ ಪ್ರಕರಣ ದಾಖಲಿಸಿರುತ್ತಾರೆ, ಸದರಿ ಪ್ರಕರಣವು ವಿಚಾರಣೆಯಲ್ಲಿರುತ್ತದೆ, ನಂತರ ದಿನಾಂಕ 02-08-2018 ರಂದು ಸದರಿ ಆರೋಪಿತರು ಫಿರ್ಯಾದಿಯ ತವರು ಮನೆಗೆ ಬಂದು ಅತ್ತೆ ಫಿರ್ಯಾದಿಗೆ ನೀನು ನನ್ನ ಮಗನ ಜೊತೆ ಕಡಕಂತರ ಮಾಡಿಕೋ (ಬಿಟ್ಟುಬಿಡು), ನನ್ನ ಮಗನಿಗೆ ಇನ್ನೊಂದು ಮದುವೆ ಮಾಡಿಕೊಡುತ್ತೇವೆ ಅಂತಾ ಅಂದಾಗ ಫಿರ್ಯಾದಿಯು ಅತ್ತೆಗೆ ನನ್ನ ಗಂಡನ ಜೊತೆ ಬಾಳ್ವೆ ಮಾಡುತ್ತೇನೆ ಹೀಗೆಕೆ ಮಾತನಾಡುತ್ತಿದ್ದೀರಿ ಅಂತಾ ಅಂದಾಗ ಗಂಡ ಅವಾಚ್ಯವಾಗಿ ಬೈದು ಎಲ್ಲರು ಸೇರಿ ಫಿರ್ಯಾದಿಯ ಜೊತೆ ಜಿಂಜಾ ಮುಷ್ಠಿ ಮಾಡಿ ನಾವು ಹೇಳಿದ ಹಾಗೆ ಕೇಳದಿದ್ದರೆ, ನಾವು ನಿಮ್ಮ ಮೇಲೆ ಹಾಕಿದ ಕೇಸಿನ ಸಂಬಂಧವಾಗಿ ನ್ಯಾಯಾಲಕ್ಕೆ ಕಲಬುರಗಿಗೆ ಬಂದರೆ ನಿಮ್ಮಲ್ಲರಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-08-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: