¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 22-08-2018
§UÀzÀ® ¥ÉưøÀ oÁuÉ C¥ÀgÁzsÀ ¸ÀA.
87/2018, PÀ®A. 392 L¦¹ :-
ದಿನಾಂಕ 21-08-2018 ರಂದು ಫಿರ್ಯಾದಿ ಯುಸುಫ ಮಿಯ್ಯಾ ತಂದೆ ಮಹೇಬೂಬ ಸಾಬ ತೆಲಂಗೆ ವಯ: 65 ವರ್ಷ, ಜಾತಿ: ಮುಸ್ಲಿಂ, ಸಾ: ಸಿರ್ಸಿ(ಎ) ರವರ ಹೊಲದಲ್ಲಿ ಹೆಸರಿನ ಬೆಳೆಯ ಫಲ್ಯಾ ಕೊಯ್ದು ಹಾಕಿದ್ದು ಸದರಿ ಹೆಸರಿನ ಬೆಳೆಯ ಕೊಯ್ದ ಫಲ್ಯಾ ಹೊಲದಲ್ಲಿ ಪಲ್ಟಾಯಿಸಿ ಮನೆ ಕಡೆಗೆ ಫಿರ್ಯಾದಿಯು ಒಬ್ಬನೆ ವಾಪಸ್ಸು ನಡೆದುಕೊಂಡು ಬರುವಾಗ, ಬಾವುಗಿ ಮತ್ತು ಸಿರ್ಸಿ(ಎ) ರಸ್ತೆಯ ನಡೆವೆ ಇರುವ ಕೇನಾಲ್ ಹತ್ತಿರ ಬಾವುಗಿ ಕಡೆಯಿಂದ ಇಬ್ಬರು ಅಪರಿಚತ ಜನರು ಒಂದು ಮೋಟರ ಸೈಕಲ ಮೇಲೆ ಹತ್ತಿರ ಬಂದು, ಅದರಲ್ಲಿ ಒಬ್ಬವನು ಮೋಟರ ಸೈಕಲ ಚಲಾಯಿಸುತ್ತಿದ್ದ ವ್ಯಕ್ತಿ ಫಿರ್ಯಾದಿಗೆ ಎ ರಸ್ತಾ ಕಿದರ ಜಾತಾ ಅಂತ ಕೈ ಮಾಡಿ ಕೇಳಿದನು ಮೋಟರ ಸೈಕಲ ಹಿಂದೆ ಕುಳಿತವನು ಮೋಟರ ಸೈಲಕದ ಕೆಳಗೆ ಇಳಿದು, ಚಲ್ ಪೈಸೆ ನಿಕಾಲ್ ಸಾಲೆ ಅಂತ ಅಂಜಿಸಿ, ಜಬರದಸ್ತಿಯಿಂದ ಫಿರ್ಯಾದಿಯ ಹತ್ತಿರ ಇದ್ದ 2,000/- ರೂ. ಕಸಿದಿಕೊಂಡು ಬಾವುಗಿ ರಸ್ತೆಯ ಕಡೆಗೆ ಇಬ್ಬರು ತಮ್ಮ ಮೋಟರ ಸೈಕಲ ಮೇಲೆ ಕುಳಿತು ಓಡಿ ಹೋಗುತ್ತಿರುವಾಗ ಫಿರ್ಯಾದಿಯು ಚೋರ ಚೋರ ಅಂತ ಚಿರಾಡುತ್ತಾ ಅವರನ್ನು ಬೆನ್ನು ಹತ್ತಿದಾಗ ಅವರು ತಮ್ಮ ಮೋಟರ ಸೈಕಲ ವೇಗವಾಗಿ ಚಲಾಯಿಸಿಕೊಂಡು ಹೋಗುವಾಗ ಇಬ್ಬರು ಮೋಟರ ಸೈಕಲದಿಂದ ಕೆಳಗೆ ಬಿದ್ದರು, ನಂತರ ಮೋಟರ ಸೈಕಲ ಚಲಾಯಿಸುತ್ತಿದ್ದವನು ಎದ್ದು ಮೋಟರ ಸೈಕಲನ್ನು ತೆಗೆದುಕೊಂಡು ಅವನ ಜೊತೆಗೆ ಇದ್ದ ಹಿಂದೆ ಕುಳಿತಿರುವವನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು, ನಂತರ ಫಿರ್ಯಾದಿಯ ಗುಲ್ಲು ಗಾವಳಿ ಕೇಳಿ ಅಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಮ್ಮೂರ ರಾಮಣ್ಣಾ ತಂದೆ ಅಡೇಪ್ಪಾ ನಿಂಬೂರೆ, ವಯ: 70 ವರ್ಷ, ಜಾತಿ: ಕಬ್ಬಲಿಗ ಹಾಗು ಬಕ್ಕಪ್ಪಾ ತಂದೆ ಅಂಬಣ್ಣಾ ಚಿದಕ ವಯ: 75 ವರ್ಷ, ಜಾತಿ: ಎಸ್.ಸಿ. ಮಾದಿಗ ಹಾಗೂ ಇತರರು ಓಡುತ್ತಾ ಫಿರ್ಯಾದಿಯ ಹತ್ತಿರ ಬಂದು ಏನಾಯಿತು ಅಂತ ಕೇಳಲು ಪಿಯಾದಿಯು ಕೆಳಗೆ ಬಿದ್ದ ಮೋಟರ ಸೈಕಲ ವ್ಯಕ್ತಿಯನ್ನು ತೋರಿಸಿ ಇವನು ನನ್ನ ಹತ್ತಿರ ಬಂದು ರಸ್ತೆ ಕೇಳುವ ನೆಪದಲ್ಲಿ ನನ್ನ ಹತ್ತಿರ ಇದ್ದ 2000=00 ರೂಪಾಯಿಗಳನ್ನು ಹೆದರಿಸಿ ಕಸಿದುಕೊಂಡು ಇವನ ಜೊತೆ ಇದ್ದ ಮೋಟರ ಸೈಕಲ ಸವಾರ ಇವನಿಗೆ ಕೂಡಿಸಿಕೊಂಡು ಹೋಗುತ್ತಿರುವಾಗ ಮೋಟರ ಸೈಕಲದಿಂದ ಕೆಳಗೆ ಬಿದ್ದಿದ್ದು ಇನ್ನೊಬ್ಬ ತನ್ನ ಮೋಟರ ಸೈಕಲ ಸಮೇತ ಓಡಿ ಹೋಗಿರುತ್ತಾನೆ, ಸದರಿ ಕೆಳಗೆ ಬಿದ್ದ ವ್ಯಕ್ತಿಗೆ ಹೆಸರು ವಿಚಾರಿಸಲು ಅವನು ತನ್ನ ಹೆಸರು ಗುಲಾಮ ಅಬ್ಬಾಸ ತಂದೆ ನಾಸೀರ ಹುಸೇನ ವಯ: 35 ವರ್ಷ, ಸಾ: ಇರಾನಿ ಗಲ್ಲಿ ಬೀದರ ಸದರಿಯವನಿಗೆ ನೋಡಲು ಮೈಯಲ್ಲಿ ಮತ್ತು ಕೈ ಕಾಲುಗಳಿಗೆ ಪೆಟ್ಟಾಗಿರುತ್ತದೆ, ಓಡಿ ಹೋದವನ ಹೆಸರು ಕೆಳಲು ಸಾಬೇರ ಅಲಿ ತಂದೆ ಅಮಾಯಿನ ಸಾ: ಇರಾನಿ ಗಲ್ಲಿ ಬೀದರ ಅಂತ ಹೇಳಿದನು, ಆಗ ತಮ್ಮೂರ ರಾಮಣ್ಣಾ ನಿಂಬೂರ, ಬಕ್ಕಪ್ಪಾ ಚಿದಕಾ ಹಾಗು ಇತರರು ಕೂಡಿ ಸದರಿಯವನಿಗೆ ಚಿಕಿತ್ಸೆ ಕುರಿತು ಬಗದಲ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೇಮಳೇಡಾ ಪೊಲೀಸ್
ಠಾಣೆ ಅಪರಾಧ ಸಂ. 60/2018, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 21-08-2018
ರಂದು
ಚಾಂಗಲೇರಾ ಗ್ರಾಮದ ಮುಸ್ಲಿಂ ಘೋರಿ ಖುಲ್ಲಾ ಜಾಗದಲ್ಲಿ ಕೆಲವು ಜನರು ಅಂದರ ಬಾಹರ ಎಂಬ ನಸಿಬಿನ
ಜೂಜಾಟ ಆಡುತ್ತಿದ್ದಾರೆ ಅಂತಾ ಮನೋಹರ ಎ.ಎಸ್.ಐ ಬೇಮಳಖೇಡಾ ಪೊಲೀಸ್
ಠಾಣೆ ರವರಿಗೆ ಖಚಿತ
ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ
ಚಾಂಗಲೇರಾ ಗ್ರಾಮಕ್ಕೆ ಹೋಗಿ ಮರೆಯಾಗಿ ನೋಡಲು ಚಾಂಗಲೇರಾ ಗ್ರಾಮಕ್ಕೆ ಹತ್ತಿದ ಮುಸ್ಲಿಂ
ಘೋರಿದಲ್ಲಿ ಖುಲ್ಲಾ ಜಾಗದಲ್ಲಿ ಆರೋಪಿತರಾದ 1) ಎವನ ತಂದೆ ಭದ್ರಪ್ಪಾ
ಜಾಣಿ ವಯ: 35 ವರ್ಷ, ಜಾತಿ: ಎಸ್.ಸಿ ಮಾದಿಗ, 2)
ಈರಪ್ಪಾ
ತಂದೆ ಮೇಲಕೇರಿ ವಯ: 33 ವರ್ಷ, ಜಾತಿ: ಎಸ್.ಸಿ ಮಾದಿಗ, 3) ಮಾಣಿಕ ತಂದೆ ಇಸ್ಮಾಯಿಲ ಹಲಗೆನೋರ
ವಯ: 32 ವರ್ಷ, ಜಾತಿ: ಎಸ್.ಸಿ ಮಾದಿಗ, 4)
ಕವಿ
ತಂದೆ ಯಶ್ವಂತ ಡುಸ್ಕೆನೋರ ವಯ: 32 ವರ್ಷ, ಜಾತಿ: ಎಸ್.ಸಿ
ಮಾದಿಗ, 5) ನೀಲಕಂಠ ತಂದೆ ಹೊನ್ನಪ್ಪಾ
ಮೇಲಕೇರಿ ವಯ: 30 ವರ್ಷ, ಜಾತಿ: ಎಸ್.ಸಿ ಮಾದಿಗ, 6) ಮೋಹನ ತಂದೆ ಮಾಣಿಕ
ಬೀರನಳ್ಳಿ ವಯ: 32 ವರ್ಷ, ಜಾತಿ: ಎಸ್.ಸಿ ಮಾದಿಗ, 7)
ಶಿವಕುಮಾರ
ತಂದೆ ಪರಸಪ್ಪಾ ಗಟ್ಟೆನೋರ ವಯ: 37 ವರ್ಷ, ಜಾತಿ: ಎಸ್.ಸಿ
ಮಾದಿಗ ಎಲ್ಲರೂ ಸಾ: ಚಾಂಗಲೇರಾ ಇವರೆಲ್ಲರೂ ಗೋಲಾಕಾರವಾಗಿ ಕುಳಿತುಕೊಂಡು ಅಂದರ ಬಾಹರ ಎಂಬಾ ನಸಿಬಿನ
ಇಸ್ಪೀಟ ಜೂಜಾಟ ಹಣ ಹಚ್ಚಿ ಪಣತೊಟ್ಟು ಆಡುತ್ತಿರುವುದನ್ನು ನೋಡಿ ಅವರ ಮೇಲೆ ದಾಳಿ ಮಾಡಿದಾಗ ಆರೋಒಪಿ
ನಂ. 1 & 2 ಇಬ್ಬರಿಗೆ ಜನರಿಗೆ ಹಿಡಿದುಕೊಂಡಿದ್ದು, ಇನ್ನೂಳಿದ 5
ಜನರು
ಓಡಿ ಹೋಗಿರುತ್ತಾರೆ, ನಂತರ ಅವರಿಂದ ಒಟ್ಟು ಹಣ 560/- ರೂ. ಹಾಗೂ 52
ಇಸ್ಪಿಟ್
ಎಲೆಗಳು ಪಂಚರ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 198/2018, ಕಲಂ. 87 ಕೆ.ಪಿ
ಕಾಯ್ದೆ :-
ದಿನಾಂಕ 21-08-2018 ರಂದು
ಹಜನಾಳ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ
ಎಂಬ ನಸೀಬಿನ ಇಸ್ಪಿಟ ಜೂಜಾಟ ಪಣದಲ್ಲಿ ಹಣಕಟ್ಟಿ ಆಡುತ್ತಿದ್ದಾರೆ ರಘುವೀರಸಿಂಗ ಠಾಕೂರ ಪಿಎಸ್ಐ
ಧನ್ನೂರ ಪೊಲೀಸ್ ಠಾಣೆ ರವರಿಗೆ ಖಚಿತವಾದ ಬಾತ್ಮಿ ಬಂದಾಗ ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಹಜನಾಳ ಗ್ರಾಮದ ಸುನೀಲಕುಮಾರ ಕಂಠಾಣೆ ರವರ ಅಂಗಡಿಯಿಂದ ಸ್ವಲ್ಪ
ದೂರದಲ್ಲಿ ಮರೆಯಾಗಿ ನಿಂತು ನೊಡಲು ಸದರಿ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿತರಾದ
1) ಚಂದ್ರಕಾಂತ ತಂದೆ ಧನರಾಜ ರಕ್ಷಾಳೆ ವಯ: 27
ವರ್ಷ, ಜಾತಿ: ಲಿಂಗಾಯತ, 2) ಪ್ರಕಾಶ
ತಂದೆ ತಿಪ್ಪಣ್ಣಾ ಮಳಗೆ ವಯ: 28 ವರ್ಷ, ಜಾತಿ: ಲಿಂಗಾಯತ, 3) ರಾಚಪ್ಪಾ ತಂದೆ ಮಾರುತೆಪ್ಪಾ
ಖಾಜಾಪೂರೆ ವಯ: 36 ವರ್ಷ, ಜಾತಿ: ಲಿಂಗಾಯತ, ಮೂವರು ಸಾ: ಹಜನಾಳ ಹಾಗೂ 4) ಸೂರ್ಯಕಾಂತ ತಂದೆ ಕಾಶಿನಾಥ
ಬುಳ್ಳಾ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಬಾಳುರ ಇವರೆಲ್ಲರೂ ದುಂಡಾಗಿ ಕುಳಿತುಕೊಂಡು
ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಪಣದಲ್ಲಿ ಹಣಕಟ್ಟಿ ಆಡುತ್ತಿರುವುದು ನೋಡಿ ಖಚಿತ
ಪಡಿಸಿಕೊಂಡು ಇಸ್ಪೀಟ್ ಜೂಜಾಟ ಆಡುತ್ತಿರುವ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಂದ 3310/-
ರೂ. ಹಾಗೂ 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment