Police Bhavan Kalaburagi

Police Bhavan Kalaburagi

Thursday, August 16, 2018

KALABURAGI DISTRICT REPORTED CRIMES

ಇಸ್ಪೀಟ  ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.08.2018 ರಂದು ಸಾಯಂಕಾಲ 4;30 ಗಂಟೆಗೆ ಶ್ರೀ ಕಪೀಲದೇವ ಪಿ.ಐ. ಡಿಸಿಬಿ ಘಟಕ ಕಲಬುರಗಿ ರವರು ಪೋನ ಮಾಡಿ ನಮ್ಮ ಠಾಣಾ ವ್ಯಾಪ್ತಿಯ ಇದಗಾ ಮೈದಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ತಾನು ಮತ್ತು ತಮ್ಮ ಸಿಬ್ಬಂದಿಯವರನ್ನು ಕರೆದುಕೊಂಡು ಇದಗಾ ಮೈದಾನ ಹತ್ತಿರ ಬರುತ್ತಿದ್ದೆನೆ ನೀವು ಕೂಡಾ ಬರಲು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ  ಇದಗಾ ಮೈದಾನ ಹತ್ತಿರ ರಸ್ತೆಯ ಮೇಲೆ ಹೋಗಿದ್ದು ಅದೆ ವೇಳೆಗೆ ಶ್ರೀ ಕಪೀಲದೇವ ಪಿ.ಐ. ಡಿಸಿಬಿ ಘಟಕ ಕಲಬುರಗಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು  ಬಾತ್ಮಿಯಂತೆ ನಾವು ನಿಂತ ಸ್ಥಳದಿಂದ ನಿಧಾನವಾಗಿ ನಡೆದುಕೊಂಡು ಇದಗಾ ಮೈದಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಹೋಗುತ್ತಿದ್ದಂತೆ. ಇದಗಾ ಮೈದಾನ ಮುಂದಿನ ಸಾರ್ವಜನಿಕ ಸ್ಥಳಲ್ಲಿ 9 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು, ಸದರಿಯವರು ತಮ್ಮ ಹೆಸರು 1. ಗುರಲಿಂಗಪ್ಪ ತಂದೆ ವಿಜಯಕುಮಾರ ಮುಕರಂಬಿ ಸಾ: ಮಹಾಗಾವ ಹಾ:ವ: ಆದರ್ಶ ನಗರ ಸೇಡಂ ರೋಡ ಕಲಬುರಗಿ 2. ಶಿವಪುತ್ರಯ್ಯ ತಂದೆ ಬಸಯ್ಯ ಮಠಪತಿ ಸಾ: ಕೊಂಡೆದಗಲ್ಲಿ ಕಮಾನ ಹತ್ತಿರ ಬ್ರಹ್ಮಪೂರ ಕಲಬುರಗಿ 3. ನಾಗರಾಜ ತಂದೆ ಚನ್ನಬಸಪ್ಪ ಕಲಶೇಟ್ಟ ಸಾ: ಸುಭಾಷ ಚೌಕ ಬ್ರಹ್ಮಪೂರ ಕಲಬುರಗಿ 4. ಅಂಬಣ್ಣ ತಂದೆ ಚಂದಪ್ಪ ಪಾಟೀಲ ಸಾ: ನಿಂಬಾಳ ತಾ: ಆಳಂದ 5. ಶರಣು ತಂಧೆ ಶ್ಯಾಮರಾವ ಕಮಲಾಪೂರಕರ ಸಾ: ಕೂಸನೂರ ತಾ:ಜಿ: ಕಲಬುರಗಿ 6. ಬಸವರಾಜ ತಂದೆ ಮಲ್ಲಣ್ಣ ಪಾಟೀಲ ಸಾ: ನಾಲವಾರ ಹಾ:ವ: ವಿಠಲ ನಗರ ಕಲಬುರಗಿ. 7. ಬಾಪುಗೌಡ ತಂದೆ ಪ್ರಭಣ್ಣ ಪಾಟೀಲ ಸಾ: ಸಾಯಿಮಂದಿರ ಡಾ: ನವಣಿ ಲೆಔಟ ಕಲಬುರಗಿ 8. ಗುರುಲಿಂಗಪ್ಪ ತಂದೆ ಸಿದ್ದಣ್ಣ ಸನಗುಂದಿ ಸಾ: ಉದನೂರ ರಿಂಗ್ ರೋಡ ಕಲಬುರಗಿ 9. ಮಂಜುನಾಥ ತಂದೆ ಪ್ರಕಾಶ ಕೊಳ್ಳೆ ಸಾ: ಲಾಲಹನುಮಾನ ದೇವರಗುಡಿ ಹತ್ತಿರ ಶಹಾಬಜಾರ ಕಲಬುರಗಿ. ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 31,960/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸಪ್ಪ ತಂದೆ ಭೀಮಶ್ಯಾ ಪೂಜಾರಿ ಸಾ: ಧಂಗಾಪೂರ ತಾ: ಆಳಂದ ಜಿ: ಕಲಬುರಗಿ ಹಾ:ವ: ಸಮತಾ ಕಾಲೋನಿ ಕಲಬುರಗಿ ಇವರದು ಆಳಂದ ತಾಲೂಕಿ ದಂಗಾಪೂರ ಗ್ರಾಮ ಇದ್ದು ಈಗ ಸುಮಾರು 4 ವರ್ಷಗಳ ಹಿಂದೆ ನಾವು ಸಮತಾ ಕಾಲೋನಿಯಲ್ಲಿ ಸ್ವಂತ ಮನೆ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಸಾಗಿಸುತ್ತೆನೆ. ನಮ್ಮ ಮನೆಯಲ್ಲಿ ನಾನು, ನನ್ನ ಹೆಂಡತಿ ಶೋಭಾ ಮತ್ತು ಅತ್ತೆ ಮಲ್ಲಮ್ಮ ಮಾವ ಶ್ರೀಮಂತ ಪೂಜಾರಿ ಕೊಡಿಕೊಂಡು ಇರುತ್ತೆವೆ. ಈಗ ಕೆಲವು ದಿವಸಗಳಿಂದ ನಮ್ಮ ಬಡಾವಣೆಯಲ್ಲಿ ವಾಸವಾಗಿರುವ ಸೊಮಶೇಖರ @ ಸೊಮು ತಂದೆ ಕೆಂಚಪ್ಪ ಹದಗಲ (ಪೂಜಾರಿ) ಇತನು ತನ್ನ ಸಂಗಡ ತಿರುಗಾಡಲು ಮತ್ತು ತನ್ನ ಸಂಗಡ ಇರುವಂತೆ ಒತ್ತಾಯ ಮಾಡುತ್ತಾ ಬಂದಿದ್ದು ಸದರಿಯವನು ಜನರ ಸಂಗಡ ಜಗಳ ಮಾಡಿ ಹೊಡುವದು ಮಾಡುತ್ತಿದ್ದರಿಂದ ನಾನು ಸದರಿಯವನ ಸಂಗಡ ಹೋಗಲು ನಿರಾಕರಿಸುತ್ತಾ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ 14.08.2018 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಪಕ್ಕದಲ್ಲಿ ಇರುವ ಹನುಮಾನ ದೇವರ ಗುಡಿಗೆ ಹೋಗಿ ಗುಡಿಯಲ್ಲಿ ಕುಳಿತ್ತಿದ್ದು ನನ್ನಂತೆ ನಮ್ಮ ಬಡಾವಣೆಯ ನಾಗಪ್ಪ ಕಟ್ಟಿಮನಿ ಮತ್ತು ಅರ್ಜುನ ಬಬಲಾದ ಇವರು ಕೂಡಾ ಗುಡಿಯಲ್ಲಿ ಕುಳಿತ್ತಿದ್ದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಸೊಮಶೇಖರ @ ಸೊಮು ತಂದೆ ಕೆಂಚಪ್ಪ ಹದಗಲ (ಪೂಜಾರಿ) ಇತನು ಕಾರ ತೆಗೆದುಕೊಂಡು 2-3 ಜನ ಹುಡುಗರನ್ನು ಕರೆದುಕೊಂಡು ನಾನು ಕುಳಿತ್ತಿದ್ದ ಹನುಮಾನ ದೇವರ ಗುಡಿಯ ಮುಂದಿನ ರಸ್ತೆಯ ಮೇಲೆ ಬಂದು, ಸದರಿ ಸೊಮಶೇಖರ ಇತನು ಏ ಶರಣ್ಯಾ ಇಲ್ಲಿ ಬಾ ಅಂತ ನನಗೆ ಕರೆದಿದ್ದು ಆಗ ನಾನು ಅವನ ಹತ್ತಿರ ಹೋಗಿ ಯಾಕೆ ನನಗೆ ಕರೆಯುತ್ತಿದ್ದಿ ಅಂತ ಕೇಳಿದ್ದು ಆಗ ಸದರಿಯವನು ನನಗೆ ಹಿಡಿದುಕೊಂಡು ರಂಡಿ ಮಗನೆ ನಾನು ಕರೆದರೆ ಬರುವದಿಲ್ಲ ಭೋಸಡಿ ಮಗನೆ ನನ್ನ ಕಾರಿನಲ್ಲಿ ಕೂಡು ಹೋಗೊಣ ನಡೆ ಅಂತ ಹೇಳಿದ್ದು ಆಗ ನಾನು ಸದರಿಯವನಿಗೆ ನಿನ್ನ ಸಂಗಡ ನಾನು ಬರುವದಿಲ್ಲ ನನಗೆ ಕೆಲಸವಿದೆ ಅಂತ ಹೇಳಿದ್ದು  ಆಗ ಸದರಿ ಸೊಮಶೇಖರ ಇತನು ರಂಡಿ ಮಗನೆ ನೀನು ನನ್ನ ಮಾತು ಕೇಳುವದಿಲ್ಲ ಸೂಳಿ ಮಗನೆ ನಿನಗೆ ಸೊಕ್ಕು ಬಂದಿದೆ ಅಂತ ಬೈಯುತ್ತಾ ಅಲ್ಲೆ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಬಲಗೈ ಮುಂಗೈ ಹತ್ತಿರ, ಬಲ ಭಾಗದ ಹೊಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿದ್ದು ನನಗೆ ಬಹಳ ತ್ರಾಸ ಆಗುತ್ತಿದ್ದು ಸದರಿಯವನ ಹತ್ತಿರ ಇದ್ದರೆ ಅವನು ನನಗೆ ಇನ್ನೂ ಹೊಡೆಯುತ್ತಾನೆ ಅಂತ ಗೊತ್ತಾಗಿ ನಾನು ಚಿರಾಡುತ್ತಾ ಅಲ್ಲಿಂದ ಓಡಿ ಹೋಗುತ್ತಿದ್ದು ಆಗ ಸೊಮಶೇಖರ ಇತನು ಅಲ್ಲೆ ಕಲ್ಲು ತೆಗೆದುಕೊಂಡು ಬಿಸಿ ಹೊಡೆದಿದ್ದರಿಂದ ನನ್ನ ಬೆನ್ನಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಸೊಮಶೇಖರನ ಸಂಗಡ ಇದ್ದ ಹುಡುಗರು ನನಗೆ ಹಿಡಿದುಕೊಳ್ಳಲು ನನ್ನ ಬೆನ್ನು ಹತ್ತಿ ಓಡಿ ಬರುತ್ತಿದ್ದು ನಾನು ಚಿರಾಡುತ್ತಾ ಅವರಿಂದ ತಪ್ಪಿಸಿಕೊಂಡು ಓಡಿ ನಮ್ಮ ಮನೆ ಕಡೆಗೆ ಹೋಗುತ್ತಿದ್ದಾಗ, ನಾನು ಚಿರಾಡುವದನ್ನು ಕೇಳಿ ಪಕ್ಕದಲ್ಲೆ ನಮ್ಮ ಮನೆ ಇದ್ದರಿಂದ ನಮ್ಮ ಮನೆಯಲ್ಲಿದ್ದ ನನ್ನ ಹೆಂಡತಿ ಶೋಬಾ ಅತ್ತೆ ಮಲ್ಲಮ್ಮ ಇವರು ಹೋರಗೆ ಬಂದಿದ್ದು ನನ್ನ ಹೆಂಡತಿ ಮತ್ತು ಅತ್ತೆಯನ್ನು ಮನೆಯಿಂದ ಹೊರಗೆ ಬಂದಿರುವದನ್ನು ನೋಡಿ ಸೊಮಶೇಖರ ಮತ್ತು ಅವನ ಸಂಗಡ ಇದ್ದವರು ನನಗೆ ಬೆನ್ನು ಹತ್ತಿರ ಬರುವದನ್ನು ಬಿಟ್ಟು ರಂಡಿ ಮಗನೆ ಇಂದು ಉಳಿದಿದ್ದಿ ಮುಂದೆ ನೋಡಿಕೊಳ್ಳುತ್ತೆವೆ ಅಂತ ಬೇದರಿಕೆ ಹಾಕಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ವಿ.ಎಸ್.ಎಸ್.ಎಸ್.ಎನ್ ಬ್ಯಾಂಕ ಇದ್ದು,ಯಡ್ರಾಮಿ ಠಾಣೆ : ದಿನಾಂಕ: 15-08-18 ರಂದು ಬುಧುವಾರ ಬೆಳಗ್ಗೆ 6-10 ನಿಮಿಷ ಸುಮಾರಿಗೆ ನಾನು ಮತ್ತು ನಿಂಗನಗೌಢ ಚನ್ನಾಗೋಳ ಹಾಗೂ ಶರಣಪ್ಪ ಕುಂಬಾರ ಮೂರು ಜನರು ಸೇರಿಕೊಂಡು ಗ್ರಾಮ ಪಂಚಾಯತಿಗೆ ದ್ವಜಾರೋಹಣ ಮಾಡಲು ಹೋಗುವಾಗ ವಿ.ಎಸ್.ಎಸ್.ಎಸ್.ಎನ್ ಹತ್ತಿರ 1] ದಯಾನಂದ ಗುಜಗೊಂಡ 2] ಮಲ್ಲಪ್ಪಗೌಡ ತಂ ಶಿವಪ್ಪಗೌಡ ಬಿರಾದಾರ 3] ಶಿವಪ್ಪಗೌಡ ತಂ ಮಲ್ಲಪ್ಪಗೌಡ ಬಿರಾದಾರ 4] ಜಗನ್ನಾಥ ತಂ ಮಲ್ಲಪ್ಪಗೌಡ ಬಿರಾದಾರ ಈ ನಾಲ್ಕು ಜನರು ಬಂದವರೆ ಮಗನೆ ನಮ್ಮ ಮೇಲೆ ಕೇಸು ಮಾಡುತಿಯಾ ಅಂತಾ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ಅವರಲ್ಲಿಯ ದಯಾನಂದ ಗುಜಗೊಂಡ ಇತನು ತನ್ನ ಟೊಂಕದಲ್ಲಿದ್ದ ಚಾಕು ತೆಗೆದುಕೊಂಡು ಹೊಟ್ಟೆಗೆ ಚುಚ್ಚಲು ಬಂದು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾಗ ನಾನು ಅವರಿಂದ ಕಸಿದುಕೊಂಡು ಓಡಿ ಹೋಗಿದ್ದು ಇರುತ್ತದೆ. ದಯಾನಂದ ಗುಜಗೊಂಡ ಸಂಗಡ ಇತರೆ 4 ಜನರು ನನಗೆ ಹಳೆ ವೈಷಮ್ಯದ ಕಾರಣ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಚಾಕುವಿನಿಂದ ಹೊಡೆಯಲು ಕೊಲೆ ಮಾಡಲು ಪ್ರಯತ್ನಿಸಿದ 4 ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ಸಂಗನಗೌಡ ತಂ ಸಿದ್ದನಗೌಡ ಬಿರಾದಾರ ಸಾ: ಮಾಗಣಗೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: