ಮಟಕಾ
ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 28.09.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಮದಿನಾ ಕಾಲೋನಿಯ ಮಕ್ಕಾ ಮದಿನಾ ಮಜ್ಜಿದ ಹತ್ತಿರ ಇಬ್ಬರು
ವ್ಯಕ್ತಿಗಳು ರಸ್ತೆಯ ಪಕ್ಕದಲ್ಲಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ
ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ
ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ
ಹಾಗು ಸಿಬ್ಬಂ<ದಿ ಮತ್ತು ಪಂಚರೊಂದಿಗೆ ಮಕ್ಕಾ
ಮಜ್ಜಿದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತುಕೊಂಡು ನೋಡಲು ಮಕ್ಕಾ ಮಜ್ಜಿದ
ಮುಂದಿನ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು
ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ
ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ
ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ನಾನು ಮತ್ತು ಸಿಬ್ಬಂಧಿಯವರು ಕೂಡಿ
ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಮಹ್ಮದ ಇಕ್ಬಾಲ ತಂದೆ ಖಾಜಾ ಮೈನೊದಿನ್ ಬೀದರ ಸಾ: ಮಿಜಬಾ ನಗರ ಕಲಬುರಗಿ. ಅಂತ
ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 550/- ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. 2. ಇಮಾಮಸಾಬ ತಂದೆ ಗುಡುಸಾಬ ಇನಾಮದಾರ ಸಾ: ಮಿಜಬಾ ನಗರ ಕಲಬುರಗಿ ಅಂತ ತಿಳಿಸಿದ್ದು
ಸದರಿಯವನ ಹತ್ತಿರ ನಗದು ಹಣ 850 ರೂ,
2 ಮಟಕಾ ಬರೇದ ಚೀಟಿಗಳು ಒಟ್ಟು
ನಗದು ಹಣ 1,400/- ರೂ ಸದರಿಯವುಗಳನ್ನು
ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ಖಾಸಿಂಸಾಬ ತಂದೆ ಸೈಯದಸಾಬ ಸಾ : ಶ್ರೀಚಂದ ರವರು 5 ಜನ ಅಣ್ಣ-ತಮ್ಮಂದಿರಿದ್ದು ಇಬ್ಬರು ಹೊರದೇಶದಲ್ಲಿದ್ದು ಒಬ್ಬರು ಸೊಲಾಪೂರದಲ್ಲಿದ್ದು
ಒಬ್ಬರು ಕಲಬುರಗಿ ಯಲ್ಲಿದ್ದು ನಾನು ಒಬ್ಬನೆ ಊರಲ್ಲಿ ಹೆಂಡತಿ ರಿಯನಾಬಿ ಮತ್ತು ಮಕ್ಕಳೊಂದಿಗೆ
ಗೌಂಡಿ ಕೆಲಸ ಮಾಡಿಕೊಂಡು ಇರುತ್ತೇನೆ. ನಮ್ಮ ಅಣ್ಣ ತಮ್ಮರ ಮದ್ಯ 3ಎಕರೆ 60ಗುಂಟೆ ಹೊಲವಿದ್ದು ಅದು
ನಮ್ಮ ತಂದೆಯವರು ಉಪಭೋಗಿಸುತ್ತಿದ್ದಾರೆ. ಸದರ ಹೊಲದ ಪಾಲಿನ ವಿಚಾರದಲ್ಲಿ ನಮ್ಮ
ಅಣ್ಣತಮ್ಮಕಿಯಲ್ಲಿ ತಕರಾರ ನಡೆದಿರುತ್ತದೆ. ಅದರಂತೆ ದಿನಾಂಕ:-26/09/2018ರಂದು 3-30 ಪಿ.ಎಮ್ ಸುಮಾರಿಗೆ
ನಾನು ಮತ್ತು ನನ್ನ ಹೆಂಡತಿ ಮನೆಯಲ್ಲಿದ್ದಾಗ ನಮ್ಮ ಅಕ್ಕ ಸಜನಬೀ ಇವರಿಗೆ ಕಮಲಾನಗರಕ್ಕೆ
ಕೊಟ್ಟಿದ್ದು ಅವರ ಮಗನಾದ ಇಸೂಪ್ ಈತನು ತನ್ನ ಜೊತೆಗೆ 10-15 ಜನರನ್ನು ಕರೆದುಕೊಂಡು ಬಂದಿದ್ದು ನನಗೆ ಇಸೂಪ್ ಈತನು ನೀವಿಬ್ಬರು ಗಂಡ ಹೆಂಡತಿ
ಹೊರಗೆ ಬನ್ನಿ ಬೊಸಡಿ ಮಕ್ಕಳೆ ಹೊಲ ಪಾಲಿನ ವಿಚಾರದಲ್ಲಿ ತಕರಾರ ಮಾಡುತ್ತಿದ್ದಿರಿ ಅಂತಾ
ಚೀರಾಡಿದಾಗ ನಾವು ಗಂಡ ಹೆಂಡತಿ ಹೊರಗೆ ಬರುತ್ತಿದ್ದಂತೆ ಇಸೂಪ ಈತನು ಕಟ್ಟಿಗೆಯಿಂದ ನನ್ನ ಎಡಗೈಗೆ
ಹೊಡೆದಿದ್ದು ಅದರಿಂದ ನನ್ನ ಎಡಗೈ ಮುರಿದಂತಾಗಿರುತ್ತದೆ ಮತ್ತು ಅವನ ಜೊತೆಗಿದ್ದ ಒಬ್ಬ ವ್ಯಕ್ತಿಯ
ಹೆಸರು ಗೊತ್ತಿರುವುದಿಲ್ಲ ಆತನು ನನ್ನ ಹೆಂಡತಿ ಬಲಗಾಲು ಹಿಡಿದು ಹೊಳ್ಳಿಸಿದ್ದ ಅದರಿಂದ ಅವಳ
ಕಾಲು ಮುರಿದಂತಾಗಿರುತ್ತದೆ. ಅಷ್ಟರಲ್ಲಿ ಗ್ರಾಮದ ಕುಪ್ಪಣ್ಣ ತಂದೆ ರಾಯಪ್ಪಾ ಪೂಜಾರಿ, ಗಜಾನಂದ ಮಿಶ್ರ, ಸೈದಪ್ಪಾ ಬರಣೆ ಇವರು
ನೋಡಿ ಬಿಡಿಸಿರುತ್ತಾರೆ ಮತ್ತು ಇಸೂಪನ ಜೊತೆಗಿದ್ದವರು ನನ್ನ ಹೆಂಡತಿಯ ಮೈಮೇಲೆ ಕೈಹಾಕಿ
ಎಳೆದಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಶರಣಪ್ಪ ತಂದೆ ಚಂದಪ್ಪಾ ಜಮದಾರ ಸಾಃ ಕೊಳ್ಳೂರ ಗ್ರಾಮ ರವರು ದಿನಾಂಕ 28/09/18 ರಂದು ಹೊಲದಲ್ಲಿ ಅಲ್ಲಾ ಪಟೇಲ ಸಂಗಡ ಇನ್ನೂ 03 ಜನರು ಕುಡಿಕೊಂಡು ಹೊಲದ ದಾರಿಯ
ಸಂಬಂಧ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬಡಿಗೆಯಿಂದ, ಕಲ್ಲಿನಿಂದ ಹೊಡೆ ಬಡೆ
ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 27/09/18 ರಂದು ರಾಷ್ಟ್ರೀಯ ಹೇದ್ದಾರಿ 218 ಫಿರೋಜಾಬಾದ ಕ್ರಾಸ ಹತ್ತಿರ ಟ್ಯಾಂಕರ ನಂ ಕೆಎ-32 ಸಿ-8739 ನೇದ್ದರ ಚಾಲಕನು ತನ್ನ
ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೀ ಶಿವಾನಂದ ತಂದೆ
ಮುರಗೆಪ್ಪಾ ಶರನ್ ಸಾಃ ಹೊನವಾಡ ತಾ.ಜಿಃ ಕಲಬುರಗಿ ರವರಿಗೆ ಅಪಘಾತಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.
No comments:
Post a Comment