¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-10-2018
©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA.
130/2018, PÀ®A. 279, 338 L¦¹ :-
ದಿನಾಂಕ 28-10-2018 ರಂದು
ಫಿರ್ಯಾದಿ ಮೆಹಬೂಬ ಶಾಹ ತಂದೆ ಮದಾರ ಶಾಹ, ವಯ: 58 ವರ್ಷ, ಜಾತಿ: ಮುಸ್ಲಿಂ, ಸಾ: ಮಂಗಲಪೇಟ ಬೀದರ ರವರು ಸೈಕಲ
ರಿಕ್ಷಾ ಕೆಲಸ ಮುಗಿಸಿಕೊಂಡು ಪೊಲೀಸ ಚೌಕ ಕಡೆಯಿಂದ ಮಂಗಲಪೇಟದಲ್ಲಿರುವ ಮನೆಗೆ ಸೈಕಲ ರಿಕ್ಷಾ
ಚಲಾಯಿಸಿಕೊಂಡು ಹೋಗಲು ಡಿಪಿಓ ಕ್ರಾಸ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಮಾರ್ಕೆಟ ಪೊಲೀಸ ಠಾಣೆಯ
ಕಡೆಯಿಂದ ಮೊಟಾರ ಸೈಕಲ ನಂ. ಎಪಿ-12/ಜೆ-1175 ನೇದ್ದರ ಸವಾರನಾದ
ಆರೋಪಿ ಗೋಪಾಲ ಡಿಎಆರ್ ಪೊಲೀಸ ಕಾನ್ಸಟೆಬಲ್ ಇತನು ತನ್ನ ವಾಹನವನ್ನು ಅತೀವೇಗ ಹಾಗು
ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಪಿಓ ಕ್ರಾಸ ಹತ್ತಿರ ಫಿರ್ಯಾದಿಯ ಸೈಕಲ ರಿಕ್ಷಾಕ್ಕೆ
ಹಿಂದಿನಿಂದ ಡಿಕ್ಕಿ ಮಾಡಿ ತಾನು ಸಹ ಮೊಟಾರ ಸೈಕಲ ಸಮೇತ ಬಿದ್ದಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ
ಫಿರ್ಯಾದಿಗೆ ಬಲಗಾಲ ತೊಡೆಯ ಮೇಲೆ ಭಾರಿ ಗುಪ್ತಗಾಯ ಮತ್ತು ಎಡಗಣ್ಣಿನ ಮೇಲ್ಗಡೆ ರಕ್ತಗಾಯವಾಗಿರುತ್ತದೆ,
ಆರೋಪಿಗೂ ಸಹ ಸಣ್ಣಪುಟ್ಟ ಗಾಯಗಳು ಆಗಿರುತ್ತವೆ, ನಂತರ ಅಲ್ಲಿಂದ ಹೋಗುತ್ತಿದ್ದ ಫಿರ್ಯಾದಿಯ ಮಗನಾದ
ಮದಾರ ಶಾಹ ತಂದೆ ಮೆಹಬೂಬ ಶಾಹ ಮತ್ತು ಫಿರ್ಯಾದಿಗೆ ಪರಿಚಯದ ಇಸ್ಮಾಯಿಲ್ ತಂದೆ ಷಾಹನ ಶಾಹ ಸಾ: ಬಗದಲ್, ಸದ್ಯ: ಮಂಗಲಪೇಟ
ಬೀದರ ಮತ್ತು ಗೋಪಾಲ ಡಿಎಆರ್ ಕಾನ್ಸಟೆಬಲ್ ರವರು ಕೂಡಿ ಫಿರ್ಯಾದಿಗೆ ಖಾಸಗಿ ವಾಹನದಲ್ಲಿ
ಹಾಕಿಕೊಂಡು ಬೀದರ ಜಿಲ್ಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment