Police Bhavan Kalaburagi

Police Bhavan Kalaburagi

Monday, October 29, 2018

KALABURAGI DISTRICT REPORTED CRIMES

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 26-10-2018 ರಂದು ಬಳೂರ್ಗಿ ಗ್ರಾಮದ ಹೊರವಲಯದಲ್ಲಿ ದುಧನಿ ರೋಡಿಗೆ ಇರುವ ಡಾಬಾದ ಮುಂದೆ ಒಬ್ಬ ವ್ಯೆಕ್ತಿ ಅನದಿಕೃತವಾಗಿ ಮದ್ಯವನ್ನು ಮಾರಾಟ ಮಾಡಿ,  ಡಾಬಾದಲ್ಲಿ ಮದ್ಯವನ್ನು ಸೆವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಳೂರ್ಗಿ ಗ್ರಾಮದ ಹೊರವಲಯದಲ್ಲಿ ದುಧನಿ ರೋಡಿಗೆ ಇರುವ ಡಾಬಾದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ನೋಡಲು ಡಾಬಾದ ಮುಂದೆ ಒಬ್ಬ ವ್ಯೆಕ್ತಿ ಜನರಿಂದ ಹಣವನ್ನು ಪಡೆದು ತನ್ನ ಹತ್ತಿರವಿದ್ದ ಚೀಲದಲ್ಲಿ ಕೈ ಹಾಕಿ ಜನರಿಗೆ ಮದ್ಯ ವನ್ನು ಮಾರಾಟ ಮಾಡಿ ಮದ್ಯ ಖರಿದಿ ಮಾಡಿದ ಜನರಿಗೆ ಡಾಬಾದ ಒಳಗೆ ಕುಳಿತುಕೊಂಡು ಕುಡಿಯಿರಿ ಎಂದು ಜನರಿಗೆ ಹೇಳುತ್ತಿದ್ದನು. ಆಗ ನಾವು ಡಾಬಾದ ಕಡೆಗೆ ಹೋಗುತ್ತಿದ್ದಾಗ ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿ ಡಾಬಾದ ಮುಂದಿನ ಬೆಳಕಿನಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಡಾಬಾದ ಹಿಂದಿನ ಹೊಲದಲ್ಲಿ ಕತ್ತಲಲ್ಲಿ ಓಡಿ ಹೊದನು, ಆಗ ನಾವು ಸದರಿ ವ್ಯೆಕ್ತಿಯನ್ನು ಬೆನ್ನಟ್ಟಿದರೂ ನಮ್ಮಿಂದ ತಪ್ಪಿಸಿಕೊಂಡು ಹೋಗಿರುತ್ತಾನೆ. ಡಾಬಾದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಜನರು ಸಹ ನಮ್ಮನ್ನು ನೋಡಿ ಓಡಿ ಹೋಗಿರುತ್ತಾರೆ. ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿ ಸ್ಥಳದಲ್ಲಿ ಬಿಟ್ಟು ಹೋದ ಚೀಲವನ್ನು ಪರಿಶೀಲಿಸಿ ನೋಡಲು ಚೀಲದಲ್ಲಿ 1) 180 ಎಮ್ ಎಲ್ ಅಳತೆಯ BAGPIPER WHISKY  ಕಂಪನಿಯ ಒಟ್ಟು 13 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 1170/- ರೂ 2)  180 ಎಮ್ ಎಲ್ ಅಳತೆಯ OLD  TAVERN  WHISKY ಕಂಪನಿಯ ಒಟ್ಟು 09 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 666/- ರೂ 3) 180 ಎಮ್ ಎಲ್ ಅಳತೆಯ Officers Choice Special Whisky  ಕಂಪನಿಯ ಒಟ್ಟು 09 ಬಾಟಲಗಳು ಇದ್ದವು, ಅಂದಾಜು ಕಿಮ್ಮತ್ತು 810/- ರೂ ನಂತರ ಬಾತ್ಮಿದಾರರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಮತ್ತು ಡಾಬಾದ ಮಾಲಿಕನ ಹೆಸರು ವಿಳಾಸ ವಿಚಾರಿಸಲು, ಮದ್ಯ ಮಾರಾಟ ಮಾಡುತ್ತಿದ್ದವನ ಹೆಸರು ವಿಳಾಸ 1) ಪ್ರಕಾಶ ತಂದೆ ಶರಣಪ್ಪ ದೋಡ್ಡಮನಿ ಸಾ|| ಬಳೂರ್ಗಿ ತಾ|| ಅಫಜಲಪೂರ ಅಂತಾ ಹಾಗೂ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಂತಹ ಡಾಬಾದ ಮಾಲಿಕನ ಹೆಸರು ವಿಳಾಸ 2) ಜೈಭೀಮ ತಂದೆ ಶರಣಪ್ಪ ದೋಡ್ಡಮನಿ ಸಾ|| ಬಳೂರ್ಗಿ ತಾ|| ಅಫಜಲಪೂರ ಎಂದು ಗೊತ್ತಾಗಿರುತ್ತದೆ.  ನಂತರ ಸದರಿ ಒಟ್ಟು 2646/- ರೂ ಕಿಮ್ಮತ್ತಿನ ಒಟ್ಟು 31 ಮದ್ಯದ ಪೌಚಗಳನ್ನು / ಬಾಟಲಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಫರತಾಬಾದ ಠಾಣೆ : ದಿನಾಂಕ 27/10/18 ರಂದು ಟಿಪ್ಪರ ಮೂಲಕ ಆಕ್ರಮವಾಗಿ ಮರಳು ಸಾಗಿಸುತ್ತಿದ್ದು ಶ್ರೀ ಸೂರ್ಯಕಾಂತ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಟಿಪ್ಪರ ನಂ ಕೆಎ-35 ಬಿ-6364 ನೇದ್ದರ ಮಾಲಿಕ & ಚಾಲಕರು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮರಳು ಕಳ್ಳತನ ಮಾಡಿ ಸಾಗಾಣೆ ಮಾಡುವ ಕಾಲಕ್ಕೆ ಜಪ್ತಿ ಟಿಪ್ಪರ & ಮರಳು ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮ ಜರೂಗಿಸುವ ಕುರಿತು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ತಸ್ಲೀಮ್‌ ಆರೀಫ ತಂದೆ ಶೇಖ ಯೂಸುಫ ಸಾ:ಮನೆ.ನಂ.1041/9/3/8 ಇಕ್ಬಾಲ್‌ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ರವರ ತಂದೆ-ತಾಯಿಯವರು ಮೈಸೂರಿಗೆ ಹೋಗಿದ್ದು ನಾನು ದಿನಾಂಕ:23/10/2018 ರಂದು ಉಸ್ಮಾನಾಬಾದಕ್ಕೆ ಹೋಗಿದ್ದು ದಿನಾಂಕ:25/10/2018 ರಂದು 4.00 ಪಿ.ಎಂಕ್ಕೆ ನಮ್ಮ ಸಹೋದರಿಯಾದ ಶ್ರೀಮತಿ ಸಲ್ಮಾ ಬೇಗಂ ಗಂಡ ಅಬ್ದುಲ ಹಮೀದ್‌ ಇವರು ನಮ್ಮ ಮನೆಯಲ್ಲಿ ಇದ್ದು ಕೀಲಿ ಹಾಕಿಕೊಂಡು ಹೋಗಿದ್ದು ನಾನು ದಿನಾಂಕ:26/10/2018 ರಂದು 12.00 ಪಿ.ಎಂ ಸುಮಾರಿಗೆ ನನ್ನ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲ ಕೀಲಿ ಮುರಿದಿದ್ದು ನಾನು ಮನೆಯಲ್ಲಿ ಹೋಗಿ ಪರಿಶೀಲಿಸಿ ನೋಡಲಾಗಿ ಮನೆಯ ಅಲಮಾರಿದಲ್ಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ  ಒಟ್ಟು 93000/-ರೂ ಬೆಲೆ ಬಾಳುವ ಚಿನ್ನದ ಆಭರಣ, ಮೊಬೈಲ್‌, ನಗದು ಹಣ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿ ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ:27/10/2018 ರಂದು ಶ್ರೀಗುರುಶರಣ ತಂದೆ ಧರ್ಮರಾವ ಮಾಲಿಪಾಟೀಲ್ ಸಾ||ದಣ್ಣೂರ ಗ್ರಾಮ ರವರು ತಮ್ಮ ಕುರಿ ಕಾಯಲು ನಮ್ಮೂರಿನ ಯಲ್ಲಪ್ಪ ತಂದೆ ದಸರತ ಕಾಂಬಳೆ ಇವರಿಗೆ ಕೆಲಸಕ್ಕೆ ಇಟ್ಟಿಕೊಂಡಿದ್ದು ಪ್ರತಿ ದಿವಸ ಮುಂಜಾನೆ ನಮ್ಮ ದೊಡ್ಡಿಯಿಂದ ಕುರಿಗಳನ್ನು ಹೊಡೆದುಕೊಂಡು ಸಯಂಕಾಲ 6-00 ಗಂಟೆ ಸುಮಾರಿಗೆ ವಾಪಸ್ಸು ಮನೆಗೆ ತಂದು ಕಟ್ಟುತ್ತಾನೆ. ದಿನಾಂಕ: 26/10/2018 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ಯಲ್ಲಪ್ಪಾ ತಂದೆ ದಶರಥ ಕಾಂಬಳೆ ಈತನು ನಮ್ಮ 12 ಕುರಿಗಳನ್ನು ಮೆಯಸಿಕೊಂಡು ಬರಲು ಮನೆಯಿಂದ ಹೊಡೆದುಕೊಂಡು ಹೋಗಿ ವಾಪಸ್ಸು ಸಂಜೆ 6-00 ಗಂಟೆಗೆ ಬಂದು ಕುರಿಗಳನ್ನು ನಮ್ಮ ಹೊಸ ಮನೆಯ ಪಕ್ಕದಲ್ಲಿ ಕಟ್ಟಿ ಮನೆಗೆ ಹೊಗಿರುತ್ತಾನೆ. ನಾನು ಹಳೆ ಮನೆಯಲ್ಲಿ ಮಲಗಿರುವಾಗ ಮದ್ಯರಾತ್ರಿ 1-30 ಗಂಟೆ ಸುಮಾರಿಗೆ ನಮ್ಮ ಹೊಸಮನೆಯ ಪಕ್ಕದಲ್ಲಿ ವಾಸವಿರುವ ನಮ್ಮೂರಿನ ಕಮಲಾಕರ ತಂದೆ ಶಿವಲಿಂಗಪ್ಪ ಮೂಲಗೆ ಇವರು ಬಂದು ನಮ್ಮ ಹೊಸಮನೆಯ ಪಕ್ಕದಲ್ಲಿ ಕಟ್ಟಿರುವ 12 ಕುರಿಗಳಲ್ಲಿ 11 ಕುರಿಗಳನ್ನು  ಯಾರೋ ಕಳವು ಮಾಡಕೊಂಡು ಹೋಗಿರುತ್ತಾರೆ ಎಂದು ತಿಳಿಸಿದ ಮೇರೆಗೆ ನಾನು ತಕ್ಷಣವೆ ಹೊಸಮನೆಗೆ ಬಂದು ನನ್ನ ತಾಯಿಗೆ ವಿಚಾರಿಸಲು ರಾತ್ರಿ 10 ಗಂಟೆಗೆ ಕೊನೆಯದಾಗಿ ಕುರಿಗಳಿಗೆ ನೀರು ಕುಡಿಸಿ ಮನೆಯಲ್ಲಿ ಮಲಗಿದ್ದು, ಆನಂತರ ಮದ್ಯರಾತ್ರಿ 01-00 ಗಂಟೆ ಸುಮಾರಿಗೆ ಕುರಿ ವಳ್ಳುವ ಶಬ್ದಕೇಳಿ ಹೊರೆಗೆ ಬಂದು ನೋಡಲಾಗಿ 11 ಕುರಿಗಳನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿದ್ದು ಒಂದು ಕುರಿ ಮಾತ್ರ ಇರುವ ಬಗ್ಗೆ ತಿಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 26/10/18 ರಂದು ರಾಷ್ಟ್ರೀಯ ಹೇದ್ದಾರಿ 218ರ ಬ್ಲೂ ಸ್ಟಾರ ದಾಬಾದ ಹತ್ತಿರ ಟವೇರಾ ನಂ ಕೆಎ-32 ಎನ್-5628 ನೇದ್ದರ ಚಾಲಕ ವೀರಯ್ಯಾ ಹೆರೇಮಠ ಇವನು ತನ್ನ ಟವೇರಾ ವಾಹನವನ್ನು  ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ವಾಹನ ಪಲ್ಟಿ ಆಗಿ ಶ್ರೀ  ಚಂದ್ರಕಾಂತ ತಂದೆ ಗುರುಬಸಪ್ಪ ಸಾಃ ಜೇವರಗಿ ಮತ್ತು  ಮಗಳಿಗೆ & ಹೆಂಡತಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: