¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-11-2018
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 171/2018, ಕಲಂ.
287, 338 ಐಪಿಸಿ :-
ದಿನಾಂಕ 01-11-2018 ರಂದು ಫಿರ್ಯಾದಿ ಸಾಯಿಬಣ್ಣಾ ತಂದೆ ಮಾಣಿಕಪ್ಪಾ ನಿಂಗದಳ್ಳಿ, ಸಾ: ವಳಕಿಂಡಿ ರವರು
ತನ್ನ ಅಕ್ಕನಾದ ಸುನೀತಾ ಗಂಡ ಶಿವಾನಂದ ಪುಟಾಣಿ ವಯ: 45 ವರ್ಷ, ಸಾ: ಐನಳ್ಳಿ
ಇಬ್ಬರೂ ಕೂಡಿಕೊಂಡು ತಮ್ಮ ಮೋಟರ ಸೈಕಲ ನಂ. ಕೆ.ಎ-39/ಕೆ-6603 ನೇದ್ದರ ಮೇಲೆ ತಮ್ಮೂರಿನಿಂದ
ಅಕ್ಕನ ಊರಿಗೆ ಬಿಟ್ಟು ಬರಲು ಹೋಗುವಾಗ ಇಟಗಾ ಗ್ರಾಮ ದಾಟಿದ ನಂತರ ಇಟಗಾ-ಚಿಟಗುಪ್ಪಾ ರೋಡಿನ
ಬಲಕ್ಕೆ ಇರುವ ಚಿಟಗುಪ್ಪಾ ಮಹೆಮೂದ ಖುರೇಷಿ ರವರ ಹೊಸ ಪ್ಲಾಟಗಳ ಹತ್ತಿರ ರಸ್ತೆ ಬದಿಯ ನೀಲಗಿರಿ
ಗಿಡಗಳನ್ನು ಕಡೆಯುತ್ತಿದ್ದ ಜನ ರೋಡಿಗೆ ಅಡ್ಡಲಾಗಿ ಹಗ್ಗ ಕಟ್ಟಿದ್ದು ಅದನ್ನು ಒಮ್ಮೆಲೆ ನೋಡಿ ಫಿರ್ಯಾದಿಯು
ತಲೆ ಕೆಳಗೆ ಮಾಡಿದ್ದು ಸದರಿ ಹಗ್ಗ ಅಕ್ಕನ ಕುತ್ತಿಗೆಗೆ ತಗುಲಿ ಮೋಟರ ಸೈಕಲ ಮೇಲಿಂದ ಕೆಳಗೆ ಬಿದ್ದಾಗ
ಫಿರ್ಯಾದಿಯು ಮೋಟರ ಸೈಕಲ ನಿಲ್ಲಿಸಿ ಹೋಗಿ ನೋಡಲು ಅಕ್ಕನಿಗೆ ಬಲ ಕುತ್ತಿಗೆಗೆ ಹಗ್ಗ ತಟ್ಟಿ
ತರಚಿದ ರಕ್ತಗಾಯ ಹಾಗು ಗುಪ್ತಗಾಯವಾಗಿದ್ದು, ರೋಡಿನ ಮೇಲೆ ಬಿದ್ದಿದ್ದರಿಂದ ತಲೆ ಹಿಂದೆ ತರಚಿದ ರಕ್ತಗಾಯ
ಹಾಗು ಭಾರಿ ಗುಪ್ತಗಾಯ, ಎಡಗೈಗೆ, ಎಡಗಾಲಿಗೆ ತರಚಿದ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಬೇಹೋಷಾಗಿರುತ್ತಾಳೆ, ಅಲ್ಲೆ ಇದ್ದ
ಗಿಡಗಳನ್ನು ಕಡಿಸುವ ಗುತ್ತಿಗೆದಾರ ಹಾಗು ಕಟ್ಟಿಗೆ ಕಡಿಯುವವರ ಹೆಸರು ವಿಚಾರಿಸಲು ಗುತ್ತಿಗೆದಾರನಾದ
ಗುಲಾಮ ತಂದೆ ಮಲಂಗ ಬೇಪಾರಿ ಸಾ: ಚಿಟಗುಪ್ಪಾ ಅಂತಾ ತಿಳಿಸಿದ್ದು, ಹಗ್ಗ ಕಟ್ಟಿ, ಗಿಡ
ಕಡಿಯುತ್ತಿವರ ಹೆಸರು ವಿಚಾರಿಸಲು 1) ರಾಜು ತಂದೆ ಭೀಮಣ್ಣಾ ಕೋಳಾರ, 2) ವಿಠಲ ತಂದೆ
ನರಸಪ್ಪಾ ಚಿಣಗಿಪಳ್ಳಿ ಹಾಗೂ 3) ಮಸ್ತಾನಶಾಹ ತಂದೆ ಇಬ್ರಾಹಿಂ ಶಾಹ ಎಲ್ಲರೂ ಸಾ: ಕಮಠಾಣಾ
ಅಂತಾ ತಿಳಿಸಿದ್ದು ಇವರೆಲ್ಲರೂ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಬೇಜವಾಬ್ದಾರಿಯಿಂದ ರಸ್ತೆಗೆ
ಅಡ್ಡಲಾಗಿ ಹಗ್ಗ ಕಟ್ಟಿ, ಕಟ್ಟಿಗೆ ಕತ್ತರಿಸುವ ಯಂತ್ರದಿಂದ ಗಿಡ ಕತ್ತರಿಸುವಾಗ ಘಟನೆ ಜರುಗಿರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment