Police Bhavan Kalaburagi

Police Bhavan Kalaburagi

Saturday, November 3, 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನೀಲಮ್ಮ ಗಂಡ ಸಂತೋಷ ಇವರು ಆರೋಪಿ ಸಂತೋಷ ತಂದೆ ಶಿವಶರಣಪ್ಪ ಸಾ: ಕೂಕನೂರ ಇತನೊಂದಿಗೆ ಮದುವೆಯಾಗಿದ್ದು ಇರುತ್ತದೆ. ಸದ್ಯ ಪಿರ್ಯಾದಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇರುತ್ತದೆ. ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ನಿನ್ನ ಚರಾ ಆಸ್ತಿ ಮತ್ತು ಸ್ಥಿರ ಆಸ್ತಿ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಾ ದಿನಾಂಕ   23-01-2018 ರಂದು 9-30 ಎ ಎಂ ಕ್ಕೆ ಕೂಕನೂರ ಗ್ರಾಮದಲ್ಲಿ ಸಂತೋಷ ತಂದೆ ಶಿವಶರಣಪ್ಪ ಸಂಗಡ 3 ಜನರು ಸಾ: ಎಲ್ಲರೂ ಕೂಕನೂರ ಗ್ರಾಮ. ರವರು  ನನ್ನ ಮನೆಗೆ ಬಂದು ಅವಾಚ್ಯವಾಗಿ ಬೈದು, ಅವಳಿಗೆ ಹಲ್ಲೆ ಮಾಡಿ, ಜೀವ ಬೇದರಿಕೆ ಹಾಕಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿರಾಜ್ ತಂದೆ ಇಸ್ಮಾಯಿಲ್ ನಗರ್ಚಿ ಸಾ||ನಿಚೆಗಲ್ಲಿ ಅಫಜಲಪೂರ ರವರ ತಂದೆಯಾದ ಇಸ್ಮಾಯಿಲ್ ತಂದೆ ಉಮರಸಾಬ ನಗರ್ಚಿ ರವರು ಆಗಾಗ ಗ್ಯಾರೇಜಕ್ಕೆ ಬಂದು ಹೋಗುತಿದ್ದರುದಿನಾಂಕ 02-11-2018 ರಂದು ಬೆಳಿಗ್ಗೆ ನಾನು ಹಾಗು ಮಹಿಬೂಬಪಾಶಾ ತಂದೆ ಸೊಂದುಸಾಬ ನಗರ್ಚಿ ಇಬ್ಬರು ನಮ್ಮ ಗ್ಯಾರೇಜದಲ್ಲಿದ್ದಾಗ ನಮ್ಮ ತಂದೆ ನಮ್ಮ ಮೋಟಾರ್ ಸೈಕಲ್ ಬಜಾಜ ಪ್ಲಾಟಿನಾ ನಂ ಕೆಎ-32 ಇಎಸ್-4466 ನೇದ್ದನ್ನು ತಗೆದುಕೊಂಡು ನಮ್ಮ ಗ್ಯಾರಜಗೆ  ಬಂದು ಅಲ್ಲೆ ಸ್ವಲ್ಪ ಸಮಯ ನಿಂತು ನಂತರ ನಮ್ಮ ತಂದೆ ನಮ್ಮ ಗ್ಯಾರೇಜ್ ಮುಂದೆ ರೋಡಿನ ಬಾಜು ನಮ್ಮ ಮೋಟಾರ್ ಸೈಕಲ್ ಮೇಲೆ ಕುಳಿತು ನನಗೆ ಮಡ್ನಳ್ಳಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮೋಟಾರ್ ಸೈಕಲ್ ಚಾಲು ಮಾಡಿದಾಗ ಎದುರಿನಿಂದ ಅಂದರೆ ಬಸವೇಶ್ವರ ವೃತ್ತದ ಕಡೆಯಿಂದ ಮೌಂಟವೇವ್ ಶಾಲೆಯ ವಾಹನದ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ವಾಹನ ಚಲಾಯಿಸಿಕೊಂಡು ಬಂದು ನಮ್ಮ  ತಂದೆ ಕುಳಿತಿದ್ದ ಮೋಟಾರ್ ಸೈಕಲ್ ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಮ್ಮ ಮೋಟಾರ್  ಸೈಕಲದಿಂದ ಕೆಳಗೆ ಬಿದ್ದರು ಸದರಿ ಶಾಲಾ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು ಆಗ ಅಲ್ಲೆ ಇದ್ದ ನಾನು ಹಾಗು  ಮಹಿಬೂಬಪಾಶಾ ಹಾಗು ಅಲ್ಲೆ ಆಜು ಬಾಜು ಅಂಗಡಿಯ ಜನರು ಓಡಿ ಬಂದು ನಮ್ಮ ತಂದೆಗೆ ನೋಡಲಾಗಿ ತಲೆಗೆ ಭಾರಿ ರಕ್ತಗಾಯವಾಗಿ   ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸೋರುತಿತ್ತು ನಮ್ಮ ತಂದೆಯ ಎಡಗಾಲಿನ ಪಾದಕ್ಕೆ ಭಾರಿ ರಕ್ತಗಾಯವಾಗಿ ನಮ್ಮ ತಂದೆ ಮಾತನಾಡುವ ಸ್ಥೀತಿಯಲ್ಲಿರಲಿಲ್ಲಾ ನಾನು ಹಾಗು ಮಹಿಬೂಬಪಾಶಾ ಅಲ್ಲೆ ಇದ್ದ ಕೆಲವು ಜನರು ಕೂಡಿ ನಮ್ಮ ತಂದೆಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರಗೆ ಬಂದು ಅಲ್ಲಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ 108 ಅಂಬ್ಯೂಲೆಸ್ನದಲ್ಲಿ ನಮ್ಮ ತಂದೆಗೆ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನಮ್ಮ ತಂದೆ ಉಪಚಾರ ಫಲಕಾರಿಯಾಗದೆ ದಿನಾಂಕ 02-11-2018 ರಂದು  ಮೃತಪಟ್ಟಿರುತ್ತಾರೆ  ಮೌಂಟವೇವ್ ಶಾಲಾ ವಾಹನ ನಂ ಕೆಎ32 ಸಿ-6422 ನೇದ್ದರ ಚಾಲಕ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮ ತಂದೆ ಕುಳಿತಿದ್ದ ಮೋಟಾರ್ ಸೈಕಲ್ ನಂ ಕೆಎ-32 ಇಎಸ್-4466 ನೇದ್ದಕ್ಕೆ ಜೋರಾಗಿ ಡಿಕ್ಕಿ ಪಡಿಸಿ ನಮ್ಮ ತಂದೆಗೆ ತಲೆಗೆ ಭಾರಿ ರಕ್ತಗಾಯ ಪಡಿಸಿದ್ದು ನಮ್ಮ ತಂದೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ. ಸದರಿ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆರಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 31/10/18 ರಂದು 10.30 ಪಿ.ಎಮಕ್ಕೆ ಫಹತಾಬಾದ ಗ್ರಾಮದ ನ್ಯೂ ಶಕ್ತಿ ವೈನ ಶಾಪ ಹತ್ತಿರ ಶ್ರೀ ಸಿದ್ದಪ್ಪ ತಂದೆ ಹುಲ್ಲೆಪ್ಪ ಸನಾದಿ ಸಾಃ ಮಾಹೂರ ತಾಝ ಜೇವರಗಿ ಹಾ.ವಃ ಫರಹತಾಬಾದ ಗ್ರಾಮ  ರವರು  ಮಹ್ಮದ ಬಂಕೂರ  ರವರಿಗೆ  ಕುಡಿಯಲು ಸಾರಾಯಿ ಕೇಳಿದ್ದು, ಬಾರ್ ಬಂದ್ ಆಗಿರುತ್ತದೆ ಅಂತಾ ತಿಳಿಸಿದ್ದರಿಂದ, ಸಂಗಡ ಇನ್ನೂ 6 ಜನರು ಕುಡಿಕೊಂಡು  ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಖಾಲಿ ಬೀಯರ ಬಾಟಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದಲ್ಲದೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ಮಾಹಾಗಾಂವ ಠಾಣೆ :  ಠಾಣೆ : ಶ್ರೀ ಶರಣಪ್ಪಾ ಹೆಚ್.ಸಿ 74 ಮಹಾಗಾಂವ ಪೊಲೀಸ ಠಾಣೆ ರವರು ದಿನಾಂಕ:01/11/2018 ರಂದು ನಾನು ಮಧ್ಯಾಹ್ನ 12-00 ಗಂಟೆಗ ಮಾನ್ಯ ಪಿಎಸ್ಐ ಸಾಹೇಬರ ಆದೇಶದಂತೆ ಏರಿಯಾದಲ್ಲಿ ಪೆಟ್ರೋಲಿಂಗ್ ಕುರಿತು ಹೊರಟು ಚಂದ್ರನಗರ, ಮಹಾಗಾಂವ ಕ್ರಾಸ ಭೇಟಿ ನೀಡಿ ನಂತರ 2-00 ಪಿಎಂಕ್ಕೆ ಕುರಿಕೋಟಾ ಗ್ರಾಮಕ್ಕೆ ಹೋದಾಗ ಬಾತ್ಮಿ ತಿಳಿದು  ಬಂದಿದ್ದೇನೆಂದರೆ. ಕುರಿಕೋಟಾ ಹೊಸ ಸೇತುವೆ ಸಮೀಪ ಒಬ್ಬ ಅನಾಮಧೇಯ ಹೆಣ್ಣು ಮಗಳು ಯಾವುದೋ ಕಾರಣಕ್ಕಾಗಿ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ ಅಂತಾ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ, ಒಬ್ಬ ಹೆಣ್ಣು ಮಗಳ ಶವವು ನೀರಿನಲ್ಲಿ ಬೋರಲಾಗಿ ಬಿದ್ದು ಕಂಡು ಬಂದಿದ್ದು ನಂತರ ಕುರಿಕೋಟಾ ಗ್ರಾಮದ ಮೀನುಗಾರರ ಸಹಾಯದಿಂದ ನೀರಿನಲ್ಲಿ ಮುಳಗಿ ಮೃತಪಟ್ಟ ಹೆಣ್ಣು ಮಗಳ ಶವವನ್ನು ಹೊರಗೆ ತೆಗೆದು ನೋಡಲಾಗಿ, ಸುಮಾರು 20 ವರ್ಷದ ವಯಸ್ಸಿನ ಹೆಣ್ಣು ಮಗಳಿದ್ದು ಅಂದಾಜು 4' 7 ಎತ್ತರವಿದ್ದು ಸದೃಡ ಮೈಕಟ್ಟು ದುಂಡನೆ ಮುಖ, ಗೋದಿ ಮೈಬಣ್ಣ ಹೊಂದಿದ್ದು, ಕಪ್ಪು & ಕೆಂಪು ಬಣ್ಣದ ಚೂಡಿದಾರ ಮತ್ತು ಕಪ್ಪು ಬಣ್ಣದ ಲೇಗಿನ್ಸ ಮತ್ತು ಕಂದು ಬಣ್ಣದ ಸ್ವಟರ್ ಧರಿಸಿದ್ದು ಕೊರಳಲ್ಲಿ ತಾಳಿ, ಕಿವಿಯಲ್ಲಿ ಬಂಗಾರದ ಝುಮಕಿ ಮತ್ತು ಬೆಳ್ಳಿ ಕಾಲುಂಗುರ ಹಾಗು ಬೆಳ್ಳಿಯ ರಿಂಗ್ ಇರುತ್ತದೆ. ಮೃತಳ ಹೆಸರು & ವಿಳಾಸ ಗೊತ್ತಾಗಿರುವುದಿಲ್ಲಾ. ಮತ್ತು ಯಾವುದೋ ಕಾರಣದಿಂದ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ. ಇವಳ ಮರಣದಲ್ಲಿ ಸಂಶಯವಿರುತ್ತದೆ ಅಂತಾ ವರದಿ ಹಾಜರು ಪಡಿಸಿದ ಸಾರಾಂಶದ ಮೇಲಿಂದ  ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಬಸವಲಿಂಗ ತಂದೆ ವಾಸುದೇವ ದೇವದುರ್ಗ ಸಾ: ಗಂಗಾ ನಗರ ಕಲಬುರಗಿ ರವರ ತಂದೆಯಾದ ವಾಸುದೇವ ತಂದೆ ಶಶಿಗಿರಿರಾವ ದೇವದುರ್ಗ ಇವರು ಅತಿಯಾಗಿ ಮಧ್ಯ ಸೇವನೆ ಮಾಡುತ್ತಾ ಬಂದಿದ್ದು ಅವರಿಗೆ ನಾನು ಹಾಗೂ ನಮ್ಮ ಮನೆಯವರು ಹೇಳಿ ನಮ್ಮ ತಂದೆಗೆ ಸುಮಾರು ಸಲ ತಿಳಿ ಹೇಳಿದರು ಕೂಡಾ ನಮ್ಮ ತಂದೆಯವರು ಮಧ್ಯ ಸೇವನೆ ಮಾಡುವದನ್ನು ಬಿಟ್ಟಿರುವದಿಲ್ಲ ದಿನಾಂಕ 29.10.2018 ರಂದು ಸಾಯಂಕಾಲ 5: ಗಂಟೆಯ ಸುಮಾರಿಗೆ ನಮ್ಮ ತಂದೆಯವರು ಅತಿಯಾಗಿ ಮಧ್ಯ ಸೇವನೆ ಮಾಡಿ ಮನೆಗೆ ಬಂದಿದ್ದು ಮನೆಯಲ್ಲಿ ವಾಂತಿ ಮಾಡಿಕೊಳ್ಳುವದು ಮಾಡುತ್ತಿದ್ದು ಅವರಿಗೆ ತ್ರಾಸ ಆಗುತ್ತಿದ್ದರಿಂದ ನಾನು, ನಮ್ಮ ತಾಯಿ ರಾಜೇಶ್ವರಿ ಹಾಗೂ ನಮ್ಮ ದೊಡ್ಡಮ್ಮಳಾದ ಯಶೋದಾ ಕೂಡಿಕೊಂಡು ನಮ್ಮ ತಂದೆಯವರಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೇಗೆ ಸೇರಿಕೆ ಮಾಡಿದ್ದು ಇರುತ್ತದೆ. ದಿನಾಂಕ 29.10.2018 ನಮ್ಮ ತಂದೆಯವಗೆ ಜಿಲ್ಲಾ ಸರಕಾರಿ ಆಸ್ಪತ್ರೇಯಲ್ಲಿ ಉಪಚಾರ ನೀಡುತ್ತಿದ್ದು ಇಂದು ದಿನಾಂಕ 01.11.2018 ರಂದು ನಮ್ಮ ತಂದೆಯವರು ಉಪಚಾರ ದಿಂದ ಗುಣ ಮುಖ ಹೊಂದದೆ ಆಸ್ಪತ್ರೇಯಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: