ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕಃ
27/12/2018 ರಂದು 04-00 ಪಿಎಂ ಸುಮಾರಿಗೆ ನಮ್ಮೂರಿನ ರಾಹುಲ ತಂದೆ ಶ್ರೀಕಾಂತ ಪವಾರ ಮತ್ತು ನನ್ನ
ಮಗ ಅರ್ಜುನ ಇಬ್ಬರು ರಾಹುಲ ಈತನ ಹೊಸ ಹಿರೋ ಸ್ಲೇಂಡರ ಮೇಲೆ ನನ್ನ ಮಗ ಮೊ.ಸೈಕಲ ಚಲಾಯಿಸಿಕೊಂಡು ಆಳಂದ
ಸಂತೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿದ್ದು, ನಂತರ ಅದೇ ದಿನ 06-00 ಪಿಎಂಕ್ಕೆ
ನಮ್ಮೂರಿನ 1) ಉಮೇಶ ತಂದೆ ರೂಪಸಿಂಗ ಪವಾರ, 2) ಪ್ರಕಾಶ ತಂದೆ ಧನಸಿಂಗ ಪವಾರ
ರವರು ನನಗೆ ಫೋನ್ ಮಾಡಿ ಹೇಳಿದ್ದೇನೆಂದರೆ, ನನ್ನ ಮಗ ಅರ್ಜುನ & ರಾಹುಲ ಇಬ್ಬರೂ ಸಂತೆ ಮಾಡಿಕೊಂಡು ಅವರ ಹೊಸ ಮೊ.ಸೈಕಲ ಮೇಲೆ ಅರ್ಜುನ ಮೊ.ಸೈಕಲ ಚಲಾಯಿಸಿಕೊಂಡು
ಆಳಂದದಿಂದ ಗುಳ್ಳೊಳ್ಳಿಗೆ ಬರುವಾಗ ಆಳಂದದ ಚೆಕ್ ಪೊಸ್ಟ್ ದಾಟಿ ಅಕ್ಕಲಕೋಟ ರೋಡಿನ ಮೇಲೆ ಹೋಗುತ್ತಿರುವಾಗ
ಲಾರಿ ನಂ. MH 26 AD 1338 ನೇದ್ದರ ಚಾಲಕನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅರ್ಜುನ ಚಲಾಯಿಸುತ್ತಿದ್ದ ಮೊ.ಸೈಕಲಿಗೆ ಡಿಕ್ಕಿಪಡಿಸಿದ್ದು
ಅರ್ಜುನನ ತಲೆಯ ಹಿಂಭಾಗಕ್ಕೆ, ಮುಖದ ಮೇಲೆ ಭಾರಿ ರಕ್ತಗಾಯವಾಗಿ ರಕ್ತ ಸ್ರಾವವಾಗುತ್ತಿದೆ.
ಹಿಂದೆ ಕುಳಿತಿದ್ದ ರಾಹುಲ ಪವಾರ ಈತನಿಗೆ ಗದ್ದದ ಮೇಲೆ, ಹಣೆಯ ಮೇಲೆ, ಎಡ ಮೇಲುಕಿನ ಮೇಲೆ & ಎಡಕಾಲಿನ ಹಿಮ್ಮಡಿಯ ಮೇಲೆ ಭಾರಿ ರಕ್ತಗಾಯವಾಗಿ
ಬೇಹೊಷ ಆಗಿ ಒದ್ದಾಡುತ್ತಿದ್ಧಾನೆ. ಅವರಿಗೆ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ
ತೆಗೆದುಕೊಂಡು ಹೋಗುತ್ತಿದ್ದೇವೆ ಅಂತ ತಿಳಿಸಿದ ಮೇರೆಗೆ ನಾನು ಅದೇ ದಿನ ರಾತ್ರಿ ಜಿಲ್ಲಾ ಸರ್ಕಾರಿ
ಆಸ್ಪತ್ರೆಯ ಆವರಣದಲ್ಲಿ ಬಂದು ನನ್ನ ಮಗನಿಗೆ ನೋಡಲಾಗಿ ರಸ್ತೆ ಅಪಘಾತದಲ್ಲಿ ಮುಖದ ಮೇಲೆ, ತಲೆಗೆ ಭಾರಿ ರಕ್ತಗಾಯವಾಗಿ ಭೇಧಿ ಆಗಿ ಮೃತಪಟ್ಟಿದ್ದು ನಿಜವಿತ್ತು. ಮತ್ತು ಅವನ ಹಿಂದೆ
ಕುಳಿತ ರಾಹುಲ ಈತನ ಗದ್ದಕ್ಕೆ, ಹಣೆಯ ಮೇಲೆ & ಎಡಕಾಲಿನ ಹಿಮ್ಮಡಿಯ ಮೇಲೆ ರಕ್ತಗಾಯವಾಗಿತ್ತು ಆತನಿಗೆ ಉಪಚಾರ ಕುರಿತು ಸನ್‌ರೈಜ್ ಆಸ್ಪತ್ರೆ
ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ನಿನ್ನೆ ದಿನಾಂಕಃ 27/12/2018 ರಂದು ಹೊಸ ಸ್ಲೇಂಡರ
ಮೊ.ಸೈಕಲ ಅದರ ಚೆಸ್ಸಿ NO. MBLHAR07XJHJ19646 ನೇದ್ದನ್ನು ನನ್ನ ಮಗನು
ಚಲಾಯಿಸಿಕೊಂಡು ಹಿಂದೆ ರಾಹುಲ ಈತನಿಗೆ ಕೂಡಿಸಿಕೊಂಡು ಆಳಂದ ಚೆಕ್ ಪೊಸ್ಟ್ ದಾಟಿ ಅಕ್ಕಲಕೋಟ ರೋಡಿನ
ಮೇಲೆ ಸಂತೆ ಮಾಡಿಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಲಾರಿ ನಂ. MH 26 AD
1338 ನೇದ್ದರ ಚಾಲಕನು ತನ್ನ ವಶದಲ್ಲಿನ ಲಾರಿಯನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೊ.ಸೈಕಲಕ್ಕೆ ಡಿಕ್ಕಿ ಪಡಿಸಿ ತನ್ನ ವಾಹನವನ್ನು
ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ನನ್ನ ಮಗನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತರುವಾಗ ಮಾರ್ಗಮಧ್ಯೆ
ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಭಾರತ ತಂದೆ ಲಕ್ಷ್ಮಣ ಪವಾರ, ಸಾ- ಗುಳ್ಳೊಳ್ಳಿ
ತಾಂಡಾ ತಾ- ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 27/12/18 ರಂದು 8.30 ಪಿ.ಎಮಕ್ಕೆ ರಾಷ್ಟ್ರೀಯಹೇದ್ದಾರಿ
18ರ ಸಿರನೂರ ಕ್ರಾಸ ಹತ್ತಿರ ಮಹೇಶ ತಂದೆ ಶಾಂತರೆಡ್ಡಿ ಮೋಟಾರ ಸೈಕಲ ನಂ
ಕೆಎ-32 ಇಜಿ-8219 ನೇದ್ದರ ಚಾಲಕ ತನ್ನ ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷ್ಯತತನದಿಂದ
ಚಾಲಾಯಿಸಿದ್ದರಿಂದ ಮೋಟಾರ ಸೈಕಲ ಹಿಂದೆ ಕುಳಿತ ಶ್ರೀ ಶಾಂತರೆಡ್ಡಿ ತಂದೆ ಸಾಹೇಬರೆಡ್ಡಿ ಸಾಃ ಯಮುನ
ನಗರ ಕಲಬುಗಿ ರವರ ಹೆಂಡತಿ ಕಲಾವತಿ ಇವರು ಕೆಳಗೆ
ಬಿದ್ದು ಭಾರಿ ರಕ್ತಗಾಯಗಳಾಗಿರುತ್ತವೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ
ಠಾಣೆ : ದಿನಾಂಕ 28/12/18 ರಂದು 10.30 ಎ.ಎಮಕ್ಕೆ ಕಡಣಿ
ಗ್ರಾಮದ ರೋಡಿನ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-32 ಎಫ್-1393
ನೇದ್ದರ ಚಾಲಕ ಬಸ್ಸನು ಅತೀ ವೇಗ & ಅಲಕ್ಷ್ಯತನದಿಂದ
ಚಲಾಯಿಸಿದ್ದರಿಂದ ಬಸ್ಸಿನ ಟೈರ ಒಮ್ಮೇಲೆ ಬ್ಲಾಷ್ಟ ಆಗಿದ್ದರಿಂದ ಬಸ್ಸಿನ ಪಾಟಾ ಶ್ರೀ ಮಲ್ಲಪ್ಪ ತಂದೆಸಿದ್ದಪ್ಪ
ನಾಟಿಕರ್ ಸಾಃ ಮಿಣಜಗಿ ಗ್ರಾಮ ರವರ ಕಾಲಿಗೆ ಬಡಿದು
ಭಾರಿ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment