ಆಕ್ರಮವಾಗಿ ಗಾಂಜಾ ಬೆಳೆಸಿದವನ ಬಂಧನ :
ಯಡ್ರಾಮಿ ಠಾಣೆ
: ದಿನಾಂಕ 09-01-2019 ರಂದು ಮಾಗಣಗೇರಿ ಗ್ರಾಮದ ಮಲ್ಲಪ್ಪ ತಂದೆ ಸಿದ್ದಪ್ಪ ದನಶೇಟ್ಟಿ
ಇತನು ತನ್ನ ಹೊಲ ಸರ್ವೆ ನಂ 214 ನೇದ್ದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುತ್ತಾರೆ ಅಂತಾ ಖಚಿತ
ಬಾತ್ಮಿ ಬಂದ ಮೇರೆಗೆ ಶ್ರೀ ನಾಗಪ್ಪ ಪಿ.ಎಸ್.ಐ. ಯಡ್ರಾಮಿ ಪೊಲೀಸ
ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಎಸ್.ಹುಲ್ಲೂರ ಡಿ.ವ್ಹಾಯ್.ಎಸ್.ಪಿ. ಸಾಹೇಬರು ಗ್ರಾಮಾಂತರ
ಉಪ ವಿಭಾಗ ಕಲುಬರಗಿ ರವರಿಗೆ ಬರಮಾಡಿಕೊಂಡು ಪತ್ರಾಂಕಿತ ಅಧಿಕಾರಿಗಳಾದ ಶ್ರೀ ರಾಜಕುಮಾರ ಜಾಧವ ತಹಸೀಲ್ದಾರರು
ಯಡ್ರಾಮಿ ರವರಿಗೆ ಮಾಗಣಗೇರಿ ಗ್ರಾಮಕ್ಕೆ ಬರಮಾಡಿಕೊಂಡು ವಿಷಯ ತಿಳಿಸಿ ದಾಳಿ ಕಾಲಕ್ಕೆ ಹಾಜರಿದ್ದು
ಪಂಚನಾಮೆಯನ್ನು ಜರುಗಿಸಿ ಕೊಡಲು ಕೋರಿಕೋಂಡೆನು, ನಂತರ ನಾನು ಮತ್ತು ಡಿ.ವ್ಹಾಯ್.ಎಸ್.ಪಿ. ಸಾಹೇಬರು,ತಹಸೀಲ್ದಾರ
ಸಾಹೇಬರು ಯಡ್ರಾಮಿ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಇಲಾಖಾ ವಾಹನದಲ್ಲಿ ಹೊರಟು ನಂತರ ಪಂಚರ ಸಹಾಯದಿಂದ
ಆರೋಪಿತರ ಹೊಲಕ್ಕೆ ಹೋಗಿ ನೋಡಿದಾಗ ಆ ಹೊಲದಲ್ಲಿ ಒಬ್ಬ ವ್ಯಕ್ತಿ ಕೆಲಸ ಮಾಡುತ್ತಿದ್ದನು, ಅವನು ನಮ್ಮನ್ನು
ನೋಡಿ ಓಡಲು ಪ್ರಾರಂಭಿಸಿದರು, ನಂತರ ಸಿಬ್ಬಂದಿಯವರೊಂದಿಗೆ ಆ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ
ತನ್ನ ಹೆಸರು ಮಲ್ಲಪ್ಪ ತಂದೆ ಸಿದ್ದಪ್ಪ ದನಶೇಟ್ಟಿ ಸಾ|| ಮಾಗಣಗೇರಿ ಅಂತಾ ತಿಳಿಸಿದನು ಆಗ ನಾವು ಯಾಕೆ ನಮ್ಮನ್ನು ನೋಡಿ ಓಡುತ್ತಿದ್ದಿಯಾ
ಅಂತಾ ಕೇಳಲಾಗಿ ಅವನು ನಾನು ನನ್ನ
ತಮ್ಮನಾದ ಜಗ್ಗು ಇವನ ಹೊಲವನ್ನು ಗುತ್ತಿಗೆಗೆ ಹಾಕಿಕೊಂಡಿದ್ದು ಸದರಿ ಹೊಲದಲ್ಲಿ ನಾನು ಯಾವುದೆ ಪರವಾನಿಗೆ ಇಲ್ಲದೆ ಗಾಂಜಾ ಗಿಡಗಳನ್ನು
ಬೆಳೆದಿರುತ್ತೇನೆ, ಇದರಿಂದ ಭಯಗೊಂಡು ನಾನು ಓಡುತ್ತಿದ್ದೆನು ಅಂತಾ ಹೇಳಿ ಹೊಲದಲ್ಲಿಯೇ ಬೆಳೆದ ಗಾಂಜಾ ಗಿಡಗಳನ್ನು
ತೋರಿಸಿದನು, ನಂತರ ಪಂಚರು ಹಾಗು ತಹಸೀಲ್ದಾರ ಸಾಹೇಬರ ಸಮಕ್ಷಮ ನೋಡಲಾಗಿ ಅಂದಾಜು 100 ಆಸು ಪಾಸು ಹಸಿ ಗಾಂಜಾ ಗಿಡಗಳು ಇದ್ದವು, ಅಲ್ಲದೆ ಅಲ್ಲಿಯೇ
ಒಂದು ಬಿಳಿ ಪ್ಲಾಸ್ಟಿಕ ಚೀಲದಲ್ಲಿ ಹಸಿ ಗಾಂಜಾವನ್ನು ಸಂಗ್ರಹಿಸಿ ಇಟ್ಟಿದ್ದನು. ನಂತರ ಮಾಗಣಗೇರಿ
ಗ್ರಾಮದ ವ್ಯಾಪಾರಿಯಾದ ಚನ್ನಪ್ಪ ತಂದೆ ಮೇಲಪ್ಪಗೌಡ ಮಾಲಿಪಾಟೀಲ ರವರಿಗೆ ಸದರಿ ವಿಷಯವನ್ನು ತಿಳಿಸಿ
ಪಂಚನಾಮೆ ಜರುಗಿಸಲು ಸ್ಥಳಕ್ಕೆ ಬರಮಾಡಿಕೊಂಡೆನು, ನಂತರ ಪಂಚರ
ಸಮಕ್ಷಮ 1] ಹಸೀ ಗಾಂಜಾ ಗಿಡಗಳನ್ನು ಬುಡ ಸಮೇತ ಕಿತ್ತಿ ಎಣಿಸಿದಾಗ 100 ಗಿಡಗಳಾಗಿದ್ದು, ಅದನ್ನು ಬುಡ ಸಮೇತ ತೂಕ ಮಾಡಿಸಲಾಗಿ 154 ಕೇ.ಜಿ ಅದರ ಕಿಮ್ಮತ್ತು 6,16,000/- ಸಾವಿರ ರೂ 2] ಒಂದು ಬಿಳಿ
ಪ್ಲಾಸ್ಟಿಕ ಚೀಲದಲ್ಲಿ ಹಸಿ ಗಾಂಜಾ ಅದರ ಅಂದಾಜು ತೂಕ 4 ಕೇ.ಜಿ ಅದರ ಅ.ಕಿ 16000/- ರೂ ಹೀಗೆ ಒಟ್ಟು ಮೊತ್ತ
6,32,000/- ರೂ, ನೇದ್ದನ್ನು
ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ಆರೋಪಿತನೊಂದಿಗೆ
ಯಡ್ರಾಮಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪರಿಚಿತ ವ್ಯಕ್ತಿ ಬಾವಿಯಲ್ಲಿ ಬಿದ್ದು ಸಾವು ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ಸೂರ್ಯಕಾಂತ ತಂದೆ ಶಿವಯ್ಯ ಗುತ್ತೇದಾರ ಸಾ|| ಚಿಂಚೋಳಿ ಗ್ರಾಮ
ರವರದು ಚಿಂಚೋಳಿ ಸೀಮಾಂತರದಲ್ಲಿ ಹೊಲ ಸರ್ವೆ ನಂಬರ 206 ರಲ್ಲಿ 4 ಎಕರೆ 9 ಗುಂಟೆ ಜಮೀನು ಇರುತ್ತದೆ. ಸದರಿ ಹೊಲದಲ್ಲಿ
ಅಂದಾಜು 65 ರಿಂದ 70 ಪೀಟ್ ಆಳವಾದ ಬಾವಿ ಇದ್ದು, ಭಾವಿಯಲ್ಲಿ
ಸದ್ಯ ಅಂದಾಜು 3 ಪೀಟದಷ್ಟು ನೀರು ಇರುತ್ತವೆ, ನಾನು ಆಗಾಗ ಹೊಲಕ್ಕೆ ಹೋಗಿ ಬರುವುದು ಮಾಡುತ್ತೇನೆ. ದಿನಾಂಕ 08-01-2019 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಪ್ರಕಾಶ ತಂದೆ ಹಣಮಂತ ಭಜಂತ್ರಿ
ಈತನು ನಮ್ಮ ಮನೆಗೆ ಬಂದು ನಿಮ್ಮ ಹೊಲದಲ್ಲಿನ ಭಾವಿಯಲ್ಲಿ ಮುಖ ಕೆಳಗೆ ಮಾಡಿ ಒಬ್ಬ ವ್ಯೆಕ್ತಿಯ ಶವ
ಬಿದ್ದಿದೆ ನಾನು ಸಾಯಂಕಾಲ 4:30 ಗಂಟೆ ಸುಮಾರಿಗೆ ಕುರಿ ಮೇಯಿಸುತ್ತಾ ನಿಮ್ಮ ಭಾವಿಯ ಕಡೆಗೆ
ಹೋದಾಗ ನೋಡಿರುತ್ತೇನೆ ಎಂದು ತಿಳಿಸಿದ ಮೇರೆಗೆ. ನಾನು ಮತ್ತು ನಮ್ಮೂರಿನವರಾದ ಮಡಿವಾಳ ಲೋಣಿ, ಶ್ರೀಶೈಲ ಗುತ್ತೇದಾರ, ಸಂತೋಷ ಯಳಸಂಗಿ, ನಾಗಯ್ಯ ಗುತ್ತೇದಾರ, ಅಪ್ಪಾಶಾ ಜಗದಿ
ಇನ್ನಿತರರೂ ಕೂಡಿ ನಮ್ಮ ಹೊಲಕ್ಕೆ ಹೋಗಿ ಬಾವಿಯಲ್ಲಿ ನೋಡಲು, ನಮ್ಮ ಭಾವಿಯಲ್ಲಿ
ಒಬ್ಬ ಗಂಡು ವ್ಯೆಕ್ತಿಯ ಶವ ಬೋರಲಾಗಿ ಬಿದ್ದಿದ್ದು ಇತ್ತು. ನಮ್ಮ ಭಾವಿಯಲ್ಲಿ
ಕೆಳಗೆ ಇಳಿಯಲು ಸರಿಯಾದ ಸಿಡಿಗಳು ಇಲ್ಲದೆ ಇರುವುದರಿಂದ ಹಾಗೂ ಕತ್ತಲಾಗಿದ್ದರಿಂದ, ಬಾವಿಯಿಂದ ಶವವನ್ನು
ತಗೆಯಲು ದಿನಾಂಕ 09-01-2019 ರಂದು ಬೆಳಿಗ್ಗೆ 08:00 ಗಂಟೆಗೆ ಮೇಲೆ ತಿಳಿಸಿದವರೆಲ್ಲರೂ ಕೂಡಿ ಅಫಜಲಪೂರದ ಅಗ್ನಿ ಶಾಮಕ ಇಲಾಖೆಯವರಿಂದ ಹಾಗೂ
ನಮ್ಮೂರಿನ ಮಲ್ಲಿಕಾರ್ಜುನ ತಡಲಗಿ, ಗುಂಡಯ್ಯ ಹಿರೇಮಠ, ಶ್ರೀಮಂತ ಗೌರ, ಬಾಬು ಕಾಳೆ
ರವರಿಂದ ಬಾವಿಯಲ್ಲಿದ್ದ ಶವವನ್ನು ಮೇಲೆ ತಗೆಸಿ ನೋಡಲಾಗಿ ಅಂದಾಜು 35-40 ವಯಸ್ಸಿನ ಗಂಡು ವ್ಯೆಕ್ತಿಯ ಶವ ಇದ್ದು, ಶವದ ಮೈ ಮೇಲಿನ
ಬಟ್ಟೆಗಳನ್ನು ನೋಡಲಾಗಿ ಬಿಳಿಯ ಬಣ್ಣದ ಕಪ್ಪು ಗೆರೆ ಗಳಿರುವ ಹಾಪ್ ಶರ್ಟ್, ನೀಲಿ ಬಣ್ಣದ
ಜೀನ್ಸ ಪ್ಯಾಂಟ್, ಚಾಕಲೇಟ್ ಬಣ್ಣಾದ ಅಂಡರವೇರ್ ಇರುತ್ತದೆ. ಶವವನ್ನು ಪರಿಶೀಲಿಸಿ
ನೋಡಲಾಗಿ ತಲೆಯ ಹಿಂದೆ ರಕ್ತಗಾಯ ಹಾಗೂ ಬಲ ಹುಬ್ಬಿನ ಮೇಲೆ ರಕ್ತಗಾಯ, ಹಾಗೂ ಎಡಗೈ
ಮುಂಗೈಗೆ ರಕ್ತಗಾಯ ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಇದ್ದಿರುತ್ತವೆ. ಸದರಿ ವ್ಯೆಕ್ತಿ
ಅಂದಾಜು ದಿನಾಂಕ 07-01-2019 ರಿಂದ ದಿನಾಂಕ 08-1-2019 ರ ಸಾಯಂಕಾಲ 4:30 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಹೋಲದಲ್ಲಿನ ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾನೆ. ಸದರಿ ವ್ಯೆಕ್ತಿಯ
ಮೈ ಮೇಲೆ ಇದ್ದ ಗಾಯಗಳು, ಸದರಿ ಮೃತ ವ್ಯೆಕ್ತಿ ಬಾವಿಯಲ್ಲಿ ಬೀಳುವಾಗ ಆದ ಗಾಯಗಳೊ ಅಥವಾ
ಅದಕ್ಕಿಂತಲು ಮುಂಚೆ ಆದ ಗಾಯಗಳು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಆದ್ದರಿಂದ ಸದರಿ
ವ್ಯೆಕ್ತಿಯ ಸಾವಿನಲ್ಲಿ ನಮಗೆ ಅನುಮಾನ ಇರುತ್ತದೆ. ಕಾರಣ ಸದರಿ
ಅಪರಿಚತ ವ್ಯೆಕ್ತಿ ಮೃತಪಟ್ಟ ಬಗ್ಗೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ಚನ್ನಬಸಪ್ಪ ತಂದೆ ವೀರಪ್ಪ ಬಟಗೇರಿ ಸಾ|| ಬರದ್ವಾಡ ತಾ||
ಕುಂದಗೋಳ ಜಿ|| ಧಾರವಾಡ ರವರ ಮಗನಾದ ಪರಶುರಾಮನು ಕಲಬುರಗಿ ಜಿಲ್ಲೆಯ ಅಫಜಲಪೂರ ತಹಹಸಿಲ ಕಾರ್ಯಾಲಯದಲ್ಲಿ
ಗ್ರಾಮ ಲೆಕ್ಕಾಧಿಕಾರಿ ಅಂತಾ ಸುಮಾರು 9 ವರ್ಷಗಳಿಂದ ಸರ್ಕಾರಿ ನೌಕರಿ ಮಾಡಿಕೊಂಡಿದ್ದು, ಸದ್ಯ ರೇವೂರ
(ಬಿ) ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅಂತ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾನೆ. ದಿನಾಂಕ 09-01-2019
ರಂದು ರಾತ್ರಿ 10:00 ಗಂಟೆಗೆ ಅಫಜಲಪೂರದಲ್ಲಿ ನನ್ನ ಮಗನಾದ ಪರಶುರಾಮನ ಜೋತೆಗೆ ಕೆಲಸ ಮಾಡುವ ಶರಣಪ್ಪ
ನಡಗಟ್ಟಿ (ವಿಎ) ಇವರು ನನಗೆ ಪೋನ್ ಮಾಡಿ ನಿಮ್ಮ ಮಗನಾದ ಪರಶುರಾಮನಿಗೆ ಎಕ್ಸಿಡೆಂಟ್ ಆಗಿದೆ ನೀವು
ಅಫಜಲಪೂರಕ್ಕೆ ಬನ್ನಿ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹಿರಿಯ ಮಗನಾದ ಶರಣಪ್ಪ ಹಾಗೂ
ನಮ್ಮೂರಿನವರಾದ ಶೋಕತ್ತಅಲಿ ಮುಲ್ಲಾ, ಮಾರುತಿ ಕಲ್ಲೂರ, ಮಾಹಾದೇವಪ್ಪ ಮಾಡಳ್ಳಿ ಇನ್ನಿತರರೂ ಕೂಡಿ
ಒಂದು ಖಾಸಗಿ ವಾಹನ ಮಾಡಿಕೊಂಡು ಬೆಳಗಿನ ಜಾವ ಅಫಜಲಪೂರಕ್ಕೆ ಬಂದು ಅಫಜಲಪೂರದ ಶವಗಾರದಲ್ಲಿದ್ದ ನನ್ನ
ಮಗನ ಮೃತ ದೇಹವನ್ನು ನೋಡಲಾಗಿ ನನ್ನ ಮಗನ ಎದೆಗೆ ಭಾರಿ ಗುಪ್ತಗಾಯವಾಗಿ ಕಂದುಗಟ್ಟಿರುತ್ತದೆ ಹಾಗೂ
ಮುಖಕ್ಕೆ ಭಾರಿ ಗುಪ್ತಗಾಯ ಹಾಗೂ ತರಚಿದ ಗಾಯಗಳು ಆಗಿರುತ್ತವೆ. ನಂತರ ಅಲ್ಲೆ ಇದ್ದ ನನ್ನ ಮಗನ ಸಹದ್ದೋಗಿಗಳಿಗೆ
ವಿಚಾರಿಸಿದಾಗ, ನನ್ನ ಮಗನ ಜೋತೆಗೆ ಕೆಲಸ ಮಾಡುವ ಸಿದ್ರಾಮ ಕುಂಬಾರ ಗ್ರಾಮ ಲೆಕ್ಕಾಧಿಕಾರಿ ಇವರು ತಿಳಿಸಿದ್ದೆನೆಂದರೆ,
ನಿಮ್ಮ ಮಗನಾದ ಪರಶುರಾಮ ಹಾಗೂ ನಾನು ಮತ್ತು ಗಿರೀಶ ಸರ್ಕಾರಿ ಕೆಲಸದ ಮೇಲೆ ನಾವು ಮೂರು ಜನರು ನಮ್ಮ
ನಮ್ಮ ಗ್ರಾಮಗಳ ಸಾಲ ಮನ್ನಾದ ಸರ್ವೆ ಮಾಡಿಕೊಂಡು ಮರಳಿ ಎಲ್ಲರೂ ಮಲ್ಲಾಬಾದ ಗ್ರಾಮಕ್ಕೆ ಬಂದು ರಾತ್ರಿ
8:30 ಗಂಟೆಗೆ ಚಹಾ ಕುಡಿದು ಮಲ್ಲಾಬಾದ ಗ್ರಾಮದಿಂದ ನಾನು ಮತ್ತು ಗಿರೀಶ ಇಬ್ಬರು ನನ್ನ ಮೋಟರ ಸೈಕಲ
ಮೇಲೆ ಹಾಗೂ ನಿಮ್ಮ ಮಗ ಅವನ ಮೋಟರ ಸೈಕಲ ಮೇಲೆ ಕುಳಿತು ಅಫಜಲಪೂರಕ್ಕೆ ಹೊರಟಿರುತ್ತೇವೆ. ರಾತ್ರಿ 8:45
ಗಂಟೆ ಸುಮಾರಿಗೆ ಕಲಬುರಗಿ – ಅಫಜಲಪೂರ ರೋಡಿಗೆ ಇರುವ ನಿರಾವರಿ ಆಫೀಸ್ ಹತ್ತಿರ ನಿಮ್ಮ ಮಗ ಮೋಟರ ಸೈಕಲ
ಮೇಲೆ ನಮ್ಮ ಮುಂದೆ ಹೋಗುತ್ತಿದ್ದನು. ಅವನ ಮುಂದೆ ಒಂದು ಕಬ್ಬಿನ ಟ್ಯಾಕ್ಟರ ಹೋಗುತ್ತಿತ್ತು. ಆಗ ಸದರಿ
ಕಬ್ಬಿನ ಟ್ಯಾಕ್ಟರ ಚಾಲಕ ಯಾವುದೆ ಸೂಚನೆಗಳನ್ನು ನೀಡದೆ ಹಾಗೂ ಟ್ಯಾಕ್ಟರ ನಿಲ್ಲಿಸುವಂತಹ ಸೂಚನೆಗಳನ್ನು
ಸಹ ಇಂಡಿಕೇಟರ ಲೈಟಗಳನ್ನು ಸಹ ಹಾಕದೆ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಒಮ್ಮೆಲೆ ಬ್ರೇಕ್ ಹಾಕಿದಾಗ
ನಿಮ್ಮ ಮಗನ ಮೋಟರ ಸೈಕಲ ಟ್ಯಾಕ್ಟರ ಹಿಂದಿನ ಟ್ರೈಲಿಗೆ ಡಿಕ್ಕಿಯಾಗಿ ನಿಮ್ಮ ಮಗನ ಮುಖಕ್ಕೆ ಹಾಗೂ ಎದೆಗೆ
ಭಾರಿ ಗುಪ್ತಗಾಯ ಹಾಗೂ ರಕ್ತಗಾಯಗಳು ಆಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ಟ್ಯಾಕ್ಟರ ಚಾಲಕ ಟ್ಯಾಕ್ಟರಗೆ
ಯಾವುದೆ ರೀತಿ ಗುರುತು ಪಟ್ಟಿಗಳು ಹಾಗೂ ಸಿಗ್ನಲ್ ಲೈಟಗಳು ಹಾಕಿರುವುದಿಲ್ಲ, ಘಟನೆಯ ನಂತರ ಸದರಿ ಟ್ಯಾಕ್ಟರ
ಚಾಲಕ ಟ್ಯಾಕ್ಟರ ನಿಲ್ಲಿಸಿ ಓಡಿ ಹೋಗಿರುತ್ತಾನೆ ಎಂದು ತಿಳಿಸಿದರು. ನಂತರ ನಾವು ಅಪಘಾತವಾದ ಸ್ಥಳಕ್ಕೆ
ಹೋಗಿ ಟ್ಯಾಕ್ಟರ ನೋಡಲಾಗಿ ಸೋನಾಲಿಕಾ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಇರುವುದಿಲ್ಲ ಹಾಗೂ
ಟ್ರೈಲಿಗಳಿಗೂ ಸಹ ನಂಬರ ಇರುವುದಿಲ್ಲ. ನನ್ನ ಮಗನ ಮೋಟರ ಸೈಕಲ ನೋಡಲು ಹೊಂಡಾ ಶೈನ್ ಕಂಪನಿಯ ಹೊಸ ಮೋಟರ
ಸೈಕಲ ಇದ್ದು ಅದರ ನಂ CH NO:- ME4JC65VCJT026174 ENG NO:-
JC65E-T-2070143 ಅಂತಾ ಇರುತ್ತದೆ. ದಿನಾಂಕ 09-01-2019 ರಂದು 8:45 ಪಿ ಎಮ್ ಕ್ಕೆ ನನ್ನ ಮಗನಾದ
ಪರಶುರಾಮ ತಂದೆ ಚನ್ನಬಸಪ್ಪ ಬಟಗೇರಿ ಸಾ|| ಬರದ್ವಾಡ ತಾ|| ಕುಂದಗೋಳ ಜಿ|| ಧಾರವಾಡ ಹಾ|| ವ|| ಅಫಜಲಪೂರ
ಈತನು ಸರ್ಕಾರಿ ಕೆಲಸದ ಮೇಲೆ ಕಲಬುರಗಿ – ಅಫಜಲಪೂರ ರೋಡಿಗೆ ಇರುವ ನೀರಾವರಿ ಆಫೀಸ್ ಹತ್ತಿರ ಮೋಟರ
ಸೈಕಲ ಮೇಲೆ ಅಫಜಲಪೂರಕ್ಕೆ ಬರುತ್ತಿದ್ದಾಗ, ಕಬ್ಬು ಸಾಗಾಟ ಮಾಡುವ ಸೋನಾಲಿಕಾ ಕಂಪನಿಯ ಟ್ಯಾಕ್ಟರ ನೇದ್ದರ
ಚಾಲಕ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹೊಡೆದರಿಂದ ನನ್ನ ಮಗನ ಮೋಟರ
ಸೈಕಲ ಟ್ಯಾಕ್ಟರಕ್ಕೆ ಡಿಕ್ಕಿಯಾಗಿ ಅವನ ಮುಖಕ್ಕೆ ಹಾಗೂ ಎದೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯವಾಗಿ
ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment