ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ
21/01/2019 ರಂದು ಶ್ರೀ ಮಂಜುನಾಥ ತಂದೆ ಕಲ್ಯಾಣರಾವ
ಬರುಡೆ ಸಾ : ರಾಮತೀರ್ಥ ನಗರ ಆಳಂದ ಚಕ್ಕಪೋಸ್ಟ ಕಲಬುರಗಿ ರವರು ಆಳಂದ ಪಟ್ಟಣದ ಅಕ್ಕ ಮಾಹಾದೇವಿ ಕಾಲೇಜನಲ್ಲಿ
ಡಿಗ್ರಿ ಪರಿಕ್ಷೇ ಸಂಬಂಧವಾಗಿ ಮೀಟಿಂಗ ಹಾಜರಾಗಲು ತನ್ನ ಹೊಂಡಾ ಸೈನ KA 32 EG 4334 ರ ಹಿಂದೆ ತಮ್ಮ
ಕಾಲೇಜನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಿ.ಎ.ಎರಡನೇ ವರ್ಷದ ಹುಡುಗ ಶರಣಪ್ಪ ತಂದೆ ಜಗದೇವಪ್ಪ
ಅಂಕಲಗಿ ಸಾ: ಕಲ್ಲಬೇನೂರ ಗ್ರಾಮ ಇತನನ್ನು ಕೂಡಿಸಿಕೊಂಡು ಆಳಂದಕ್ಕೆ ಹೋಗಿ ಮೀಟಿಂಗ ಮುಗಿದ ನಂತರ
ವಾಪಸ್ಸು ಕಲಬುರಗಿ ಕಡೆ ತನ್ನ ಮೋಟಾರ ಸೈಕಲ ಹಿಂದೆ ಶರಣಪ್ಪ ಅಂಕಲಗಿ ಇತನನ್ನು ಕೂಡಿಸಿಕೊಂಡು
ತನ್ನ ಸೈಡ ಹಿಡಿದುಕೊಂಡು ರೋಡ ಬದಿಯಿಂದ ನಡೆಸುತ್ತಾ ಸುಂಟನೂರ ಕ್ರಾಸ ದಾಟಿ ಅರ್ಧ ಕಿ.ಮೀ. ದೂರ ಶಿವಶರಣಪ್ಪ ಬುಳ್ಳಾ ಇವರ ಹೊಲದ
ಹತ್ತಿರ ಬಂದಾಗ ಎದುರುನಿಂದ ಯಾವುದೋ ಒಬ್ಬ ವಾಹನ
ಚಾಲಕ ತನ್ನ ವಶದಲ್ಲಿದ್ದ ವಾಹನವನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ
ಅಡ್ಡಾತಿಡ್ಡಿಯಾಗಿ ನಡೆಸುತ್ತಾ ತನ್ನ ಸೈಡಿಗೆ ಹೋಗದೇ ನನ್ನ ಸೈಡಿಗೆ ಬಂದು ನನ್ನ ಮೋಟಾರ ಸೈಕಲಿಗೆ
ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದೇವು. ಅಪಘಾತ
ಪಡಿಸಿದ ಯಾವುದೋ ವಾಹನ ಚಾಲಕ ಸ್ವಲ್ಪ ಮುಂದೆ
ಹೋಗಿ ವಾಹನ ನಿಲ್ಲಿಸಿದನು. ಅಪಘಾತಪಡಿಸಿದ ವಾಹನ ನಂಬರ ನೋಡಬೇಕುನ್ನುಷ್ಟರಲ್ಲಿ ವಾಹನ ಚಾಲು
ಮಾಡಿಕೊಂಡು ಆಳಂದ ಕಡೆಗೆ ಓಡಿಸಿಕೊಂಡು ಹೋದನು. ಇದರಿಂದಾಗಿ ನನಗೆ ಅಪಘಾತಪಡಿಸಿದ ವಾಹನ ಮತ್ತು
ಅದರ ನಂಬರ ನೋಡಲು ಆಗಿರುವುದಿಲ್ಲಾ. ಈ ಅಪಘಾತದಿಂದಾಗಿ ನನಗೆ ಮತ್ತು ಶರಣಪ್ಪ ಅಂಕಲಗಿ ಇಬ್ಬರಿಗೂ
ಭಾರಿ ರಕ್ತಗಾಯಗಳಾಗಿದ್ದು. ಶರಣಪ್ಪ ಅಂಕಲಗಿ ಇತನಿಗೆ ಅವನ ಬಲತಲೆಗೆ, ಬಲಗಣ್ಣಿನ ಹತ್ತಿರ,
ಗದ್ದಕ್ಕೆ ಮತ್ತು ಬಲಗಾಲ ತೊಡೆ ಮೂಳೆ ಮುರಿದು ಮಾಂಸ ಖಂಡ ಹೊರ ಬಂದು ಭಾರಿ ರಕ್ತಗಾಯವಾಗಿ ಬೇಹುಷ ಸ್ಥಿತಿಯಲ್ಲಿ
ಬಿದ್ದಿದ್ದನು. ಈ ವಿಷಯ ಕಾರಿನಲ್ಲಿ ಹೊರಟ ನಮ್ಮ ಪ್ರಿನ್ಸಿಪಾಲ ಅಂಬಾರಾವ ಹಾಗರಗಿ ಇವರಿಗೆ ಪೋನ
ಮಾಡಿ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ನಮಗೆ ಆದ ಗಾಯಗಳು ನೋಡಿ 108 ಅಂಬುಲೈನ್ಸ ಗಾಡಿಗೆ ಪೋನ ಮಾಡಿ ವಿಷಯ ತಿಳಿಸಿದಾಗ ಸ್ವಲ್ಪ ಸಮಯದಲ್ಲಿ 108 ಅಂಬುಲೈನ್ಸ
ಗಾಡಿ ಬರಲು ಅದರಲ್ಲಿ ನನಗೆ ಮತ್ತು ಶರಣಪ್ಪ ಅಂಕಲಗಿ ಇಬ್ಬರಿಗೂ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ರಾತ್ರಿ 08-30
ಗಂಟೆಗೆ ತಂದಿದ್ದು ವೈದ್ಯರು ಶರಣಪ್ಪ ಇತನಿಗೆ ನೋಡಿ ಈಗಾಗಲೇ ಮೃತಪಟ್ಟಿದ್ದಾನೆ ಅಂತಾ
ತಿಳಿಸಿರುತ್ತಾರೆ. ಕಾರಣ ಈ ಮೇಲೆ ಹೇಳಿದಂತೆ ನನಗೆ ಮತ್ತು ಶರಣಪ್ಪ ಇಬ್ಬರಿಗೂ ಅಪಘಾತಪಡಿಸಿ ನನಗೆ
ಭಾರಿ ರಕ್ತಗಾಯ ಮತ್ತು ಶರಣಪ್ಪ ಇತನಿಗೆ
ಮರಣವನ್ನುಂಟು ಮಾಡಿ ಹಾಗೇ ಓಡಿಸಿಕೊಂಡು ಹೋದ ಯಾವುದೋ ವಾಹನ ಮತ್ತು ಅದರ ಚಾಲಕನನ್ನು
ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ :
ದಿನಾಂಕ 21.01.2019 ರಂದು ಸಾಯಂಕಾಲ 4-00 ಗಂಟೆ
ಸುಮಾರಿಗೆ ಬಬ್ಲೂ ಇತನು ಹಳೆ ಅರ.ಟಿ.ಓ ಅಪೀಸ್ ಹತ್ತಿರ ಬರುವ ವಾತ್ಸಲ್ಯ
ಆಸ್ಪತ್ರೆ ಎದುರುಗಡೆ ಪುಟ್ ಪಾತ್ ಪಕ್ಕದಲ್ಲಿ
ವಾಹನಗಳ ಸಿಟ್ ಕವರ್ ಮಾರಾಟ ಮಾಡುವ ಕೆಲಸದ ಮೇಲೆ
ಇದ್ದು ವಾತ್ಸಲ್ಯ ಆಸ್ಪತ್ರೆಯ ಪಕ್ಕದಲ್ಲಿ ಇರುವ ಬಂಡಿ ಹೋಟೆಲನಲ್ಲಿ ನೀರು ಮತ್ತು ಚಹಾ
ಕುಡಿಯುವ ಸಲುವಾಗಿ ನಡೆದುಕೊಂಡು ಹೋಗುತ್ತಿರುವಾಗ ಸೇಡಂ ರಿಂಗ್ ರೋಡ ಕಡೆಯಿಂದ ಜಿಜಿಹೆಚ. ಸರ್ಕಲ್
ಕಡೆಗೆ ಹೋಗುವ ಕುರಿತು ಚಂದ್ರಕಾಂತ ಪಾಟೀಲ ಶಾಲೆಯ ಬಸ್ಸ ನಂಬರ ಕೆಎ32/ಡಿ-6764 ನೇದ್ದರ ಚಾಲಕನು
ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಬ್ಲೂ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ
ಗಾಯಗೊಳಿಸಿದ್ದರಿಂದ ಬಬ್ಲೂ ಇತನಿಗೆ ಎದುರಿನ
ವಾತ್ಸಲ್ಯ ಆಸ್ಪತ್ರೆಗೆ ಕರೆದುಕೊಂಡು
ಹೋದಾಗ ವಾತ್ಸಲ್ಯ ಆಸ್ಪತ್ರೆ ವೈದ್ಯರು ಬಬ್ಲೂ ಇತನಿಗೆ ನೋಡಿ ಅಪಘಾತ ಸ್ಥಳದಲ್ಲಿ ಮೃತ
ಪಟ್ಟಿರುತ್ತಾರೆ ಅಂತಾ ತಿಳಿಸಿದ್ದು ಬಬ್ಲೂ ಇತನಿಗೆ ಬಸ್ಸ ಚಾಲಕ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ
ಗಾಯಗೊಳಸಿದ್ದರಿಂದ ಬಬ್ಲೂ ಇತನು ಸ್ಥಳದಲ್ಲಿ ಮೃತ ಪಟ್ಟಿದ್ದು ಬಸ್ಸ ಚಾಲಕನ ಮೇಲೆ ಕಾನೂನು
ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಕಮಲಾ
ಗಂಡ ಸಹದೇವ ಪಾಸೋಡಿ ಸಾ ಬಬಲಾದ ಐಕೆ ಹಾಲ ವಸತಿ
ಆಶ್ರಯ ಕಾಲೂನಿ ಸೈಯದ ಚಿಂಚೂಳಿ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ
ವಾಹನ ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ಗುರಪ್ಪ
ತಂದೆ ಸಂಗಪ್ಪ ಮೇತ್ರಿ ಸಾ||ಉಡಚಣ ತಾ||ಅಫಜಲಪೂರ ರವರು ಕಳೆದ ವರ್ಷ ಅಂದರೆ
2018 ನೇ ಸಾಲಿನಲ್ಲಿ ಹೀರೋ ಸ್ಪ್ಲೇಂಡರ ಪ್ಲಸ್ ಕಂಪನಿಯ ಮೋಟರ ಸೈಕಲ್ ಖರಿದಿ ಮಾಡಿರುತ್ತೇನೆ.
ಸದರಿ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ಅಂತಾ ಮತ್ತು ಚೆಸ್ಸಿ ನಂ-MBLHAR077JHC49063, ಹಾಗೂ ಇಂಜಿನ ನಂ-HA10AGJHC56922 ಅಂತಾ ಇರುತ್ತದೆ. ನನ್ನ ಮಗ ಆಕಾಶನಿಗೆ ಭಾರತಿ ವಿಧ್ಯಾಕೇಂದ್ರ ಶಿರನೂರದಲ್ಲಿ
ವಿಧ್ಯಾಭ್ಯಾಸಕ್ಕಾಗಿ ಸೇರಿಕೆ ಮಾಡಿರುತ್ತೇನೆ. ಕಲಬುರಗಿಯಲ್ಲಿ ನನ್ನ ಕೆಲಸ ಇದ್ದ ನಿಮೀತ್ಯ
ಮತ್ತು ನನ್ನ ಮಗನಿಗೆ ಮಾತನಾಡಿಸಲು ಬರಲು ನಾನು ದಿನಾಂಕ-14/01/2019 ರಂದು ಸಾಯಂಕಾಲ
ನನ್ನ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ನೇದ್ದರ ಮೇಲೆ ನಮ್ಮೂರಿನಿಂದ ಬಿಟ್ಟಿರುತ್ತೇನೆ. ಭೋಗನಳ್ಳಿ
ಕ್ರಾಸ್ ಹತ್ತಿರ ಬಂದಾಗ ದಾಬಾದಲ್ಲಿ ಊಟ ಮಾಡಲು 7-30 ಪಿಎಮ್
ಸುಮಾರಿಗೆ ರಸ್ತೆಯ ಪಕ್ಕದಲ್ಲಿರುವ ಮತ್ತು ದಾಬಾದ ಮುಂದಿರುವ ಜಾಗದಲ್ಲಿ ಮೋಟರ ಸೈಕಲ ನಿಲ್ಲಿಸಿ
ಊಟಕ್ಕೆ ದಾಬಾದಲ್ಲಿ ಹೋಗಿರುತ್ತೇನೆ. ಊಟ ಮುಗಿಸಿಕೊಂಡು ಮರಳಿ 8-10 ಪಿಎಮ್ ಕ್ಕೆ
ಹೋರಗೆ ಬಂದು ನೋಡಲು ನನ್ನ ಮೋಟರ ಸೈಕಲ ಇರಲಿಲ್ಲಾ, ಅಲ್ಲಿರುವ
ಜನರಿಗೂ ಮತ್ತು ದಾಬಾದಲ್ಲಿರುವ ಜನರಿಗೂ ವಿಚಾರಿಸಿದರು ಅವರು ತಮಗೆ ಗೊತ್ತಿರುವುದಿಲ್ಲಾ ಅಂತಾ ತಿಳಿಸಿದರು. ನಾನು ಊಟಕ್ಕೆ ಹೋದ
ಸಮಯದಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ನೇದ್ದನ್ನು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ನನ್ನ ಗೆಳೆಯ ಯಾಗಪ್ಪ ತಂದೆ ಮಹಾದೇವಪ್ಪಾ
ಹಲಸಂಗಿ ಇಬ್ಬರೂ ದಿನಾಂಕ-14/01/2019 ರಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಿದರು ಎಲ್ಲಿಯು
ಸಿಕ್ಕಿರುವುದಿಲ್ಲಾ. ಸದರಿ ಹೀರೋ ಸ್ಪ್ಲೇಂಡರ ಪ್ಲಸ್ ಕಂಪನಿಯ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ನೇದ್ದರ
ಅಂ||ಕಿ|| 45,000 ರೂಪಾಯಿ ಇರುತ್ತದೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment