Police Bhavan Kalaburagi

Police Bhavan Kalaburagi

Tuesday, January 22, 2019

BIDAR DISTRICT DAILY CRIME UPDATE 22-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-01-2019

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 08/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 21-01-2019 ರಂದು ಚಿಟಗುಪ್ಪಾ ಪಟ್ಟಣದ ಜಬ್ಬಾರ ಫಂಕ್ಷನ ಹಾಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕರೆದು ಅವರಿಗೆ ಒಂದು ರೂಪಾಯಿ ನೀಡಿರಿ ಮಟಕದ ನಂಬರ ಹತ್ತಿದರೆ ಒಂದು ರೂಪಾಯಿಗೆ 80/- ರೂ ನೀಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಚೀಟಿ ಬರೆದುಕೋಡುತ್ತಿದ್ದಾನೆಂದು ಅಂತ ಜಿ.ಎಮ್ ಪಾಟೀಲ ಪಿ.ಎಸ್. ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ ಪಟ್ಟಣದ ಜಬ್ಬಾರ ಫಕ್ಷನ ಹಾಲ ಹತ್ತಿರ ದೂರಿನಿಂದ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಮಕಬೂಲ್ ತಂದೆ ಫತ್ರುಸಾಬ ಕೂಲಿ, ವಯ: 49 ವರ್ಷ, ಜಾತಿ: ಮುಸ್ಲಿಂ, ಸಾ: ಗರೀಬಶಾಹ ತಕಿಯಾ ಚಿಟಗುಪ್ಪಾ ಇತನು ಮಟಕಾ ಚಿಟಿ ಬರೆದುಕೊಡುವುದನ್ನು ನೋಡಿ ಖಚಿತ ಮಾಡಿಕೊಂಡು ಅವನ ಮೇಲೆ ಎಲ್ಲರೂ ದಾಳಿ ಮಾಡಿ ಹಿಡಿದು ಅವನಿಂದ ಒಂದು ಬಾಲ ಪೇನ ಹಾಗು 8 ನಂಬರ ಬರೆದ ಮಟಕಾ ಚೀಟಗಳು ಹಾಗು ನಗದು ಹಣ ರೂ. 13,240/- ಸಿಕ್ಕಿದ್ದು, ನೇದವುಗಳನ್ನು ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 09/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 21-01-2019 ರಂದು ಚಿಟಗುಪ್ಪಾ ಪಟ್ಟಣದ ಹೈದರಲಿ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕರೆದು ಅವರಿಗೆ ಒಂದು ರೂಪಾಯಿ ನೀಡಿರಿ ಮಟಕದ ನಂಬರ ಹತ್ತಿದರೆ ಒಂದು ರೂಪಾಯಿಗೆ 80/- ರೂ. ನೀಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಚೀಟಿ ಬರೆದುಕೋಡುತ್ತಿದ್ದಾನೆಂದು ಜಿ.ಎಮ್ ಪಾಟೀಲ ಪಿ.ಎಸ್. ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ ಪಟ್ಟಣದ ಹೈದರಲಿ ಚೌಕ ಹತ್ತಿರ ದೂರಿನಿಂದ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಮಹ್ಮದ ಮಕದೂಮ ತಂದೆ ಮಹ್ಮದ ಮೈನೋದ್ದಿನ ಪಟೇಲಾ, ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಗರೀಬಶಾಹ ತಕಿಯಾ ಚಿಟಗುಪ್ಪಾ ಇತನು ಮಟಕಾ ಚಿಟಿ ಬರೆದುಕೊಡುವುದನ್ನು ನೋಡಿ ಖಚಿತ ಮಾಡಿಕೊಂಡು ಅವನ ಮೇಲೆ ಎಲ್ಲರೂ ದಾಳಿ ಮಾಡಿ ಹಿಡಿದು ಅವನಿಂದ ಒಂದು ಬಾಲ ಪೇನ ಹಾಗು 3 ನಂಬರ ಬರೆದ ಮಟಕಾ ಚೀಟಗಳು ಹಾಗು ನಗದು ಹಣ ರೂ. 5500/- ಸಿಕ್ಕಿದ್ದು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 06/2019, ಕಲಂ. 279, 338 ಐಪಿಸಿ :-
ದಿನಾಂಕ 21-01-2019 ರಂದು ಫಿರ್ಯಾದಿ ನಸರೀನ ಗಂಡ ಅಮಜದಖಾನ ವಯ: 30 ವರ್ಷ, ಸಾ: ಠಾಣಾ ಕುಸನೂರ, ಸದ್ಯ: ಔರಾದ ರವರ ಗಂಡನಾದ ಅಮಜದಖಾನ ತಂದೆ ಸಾದಕಅಲಿ ಖಾನ ಸಾ: ಠಾಣಾ ಕುಸನೂರ ಸದ್ಯ: ಔರಾದ ಇಬ್ಬರೂ ಕೂಡಿ ಠಾಣಾ ಕುಶನೂರಕ್ಕೆ ಹೋಗುವ ಕುರಿತು ಔರಾದದಿಂದ ಒಂದು ಖಾಸಗಿ ಜೀಪಿನಲ್ಲಿ ಸಂತಪೂರಕ್ಕೆ ಬಂದು ಕುಶನೂರಕ್ಕೆ ಹೋಗುವ ಕ್ರೂಸರ ವಾಹನ ಸಂ. ಕೆಎ-51/ಎಂ.ಬಿ- 9032 ನೇದ್ದರಲ್ಲಿ ಕುಳಿತ್ತಿದ್ದು, ಸದರಿ ಕ್ರೂಸರ ಚಾಲಕ ನಾಗೂರ ಕ್ರಾಸ್ ಕಡೆಯಿಂದ ರಸ್ತೆ ಹಾಳಾಗಿದ್ದರಿಂದ ಮಸ್ಕಲ್ ಗ್ರಾಮದ ಕಡೆಯಿಂದ ಕುಶನೂರಕ್ಕೆ ಹೋಗುತ್ತೇನೆಂದು ತಿಳಿಸಿ ಕ್ರೂಸರ ವಾಹನದಲ್ಲಿ ಮಸ್ಕಲ ಮಾರ್ಗವಾಗಿ  ಬರುವಾಗ ಸದರಿ ಕ್ರೂಸರ ಚಾಲಕನಾದ ಆರೋಪಿ ಶ್ರೀಮಂತ ತಂದೆ ಬಸವರಾಜ ಪಾಟೀಲ ಸಾ: ಬಸನಾಳ ಇತನು ತನ್ನ ವಾಹನವನ್ನು ಅತೀವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿ ಮಸ್ಕಲ ಶಿವಾರದ ಹಳ್ಳದ ಹತ್ತಿರ ಜಂಪಿನಲ್ಲಿ ಆರೋಪಿಯು ಅದೇ ವೇಗದಲ್ಲಿ ವಾಹನ ಓಡಿಸಿದ್ದು, ಕ್ರೂಸರನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಫಿರ್ಯಾದಿಯ ಗಂಡ ಅಮಜದಖಾನ ಇವರು ಜಂಪಿನಲ್ಲಿ ವಾಹನದಿಂದ ಹೊರಗೆ ರೋಡಿನ ಮೇಲೆ ಬಿದ್ದಿರುತ್ತಾರೆ, ಸ್ವಲ್ಪ ಮುಂದೆ ಹೋದ ತಕ್ಷಣ ಆರೋಪಿಯು ವಾಹನ ನಿಲ್ಲಿಸಿದಾಗ ಜೀಪಿನಲ್ಲಿದ್ದ ಜನರು ಕೆಳಗೆ ಇಳಿದು ಗಂಡನಿಗೆ ಎಬ್ಬಿಸಿ ನೋಡಲು ಅವರ ಗಟಾಯಿಗೆ, ತಲೆಗೆ ರಕ್ತಗಾಯ, ಬಲ ತೊಡೆಗೆ ತರಚಿದ ಗಾಯ, ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಗಂಡನಿಗೆ ಅದೇ ಕ್ರೂಸರನಲ್ಲಿ ಕೂಡಿಸಿಕೊಂಡು ಚಿಕಿತ್ಸೆಗಾಗಿ ಸಂತಪೂರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: