ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ರುಬಿನಾ ಬೇಗಂ ಗಂಡ ಅಬ್ದುಲ ಸತ್ತಾರ ಸಾ; ಬೇಲೂರ (ಕೆ) ತಾ;ಕಮಲಾಪೂರ ಜಿ; ಕಲಬುರಗಿ ಸದ್ಯ ಜವರಹಿಂದ ಸ್ಕೂಲ್ ಹತ್ತಿರ ನಯಾಮೊಹಲ್ಲಾ
ಕಲಬುರಗಿ ರವರ ಗಂಡ ಹೊರಗಡೆ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದನು ರಾತ್ರಿಯಾದರು
ನನ್ನ ಗಂಡ ಮನೆಗೆ ಬರಲಿಲ್ಲಾ ದಿನಾಂಕ.16-01-2019 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಕಮಲಾಪೂರದ ನಮ್ಮ ಸಂಭಂದಿಕನಾದ
ಅಬ್ದುಲ ಸತ್ತಾರ ತಂದೆ ರೆಹಮಾನ ಚೇರಮನ ಇತನು ನನಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ ನನ್ನ
ಗಂಡ ಅಬ್ದುಲ ಸತ್ತಾರ ಇವರು ಅಪಘಾತದಲ್ಲಿ ಗಾಯಗೊಂಡಿದ್ದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ
ಐ.ಸಿ.ಯು.ವಾರ್ಡನಲ್ಲಿ ಉಪಚಾರ ಪಡೆಯುತಿದ್ದಾನೆ ಬೇಗನೆ ಬರುವಂತೆ ತಿಳಿಸಿದನು ಆಗ ನನು ಮತ್ತು
ನನ್ನ ಅಕ್ಕ ರಿಹಾನ ಬೇಗಂ ಇಬ್ಬರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯ ಐ.ಸಿ.ಯು. ವಾರ್ಡಗೆ
ಹೋಗಿ ನೋಡಲಾಗಿ ನನ್ನ ಗಂಡನಿಗೆ ಗುರುತಿಸಿದ್ದು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಅವನಿಗೆ ಹಣೆಯ
ಬಲಭಾಗದಲ್ಲಿ ಚರಚಿದ ಕಂದು ಗಟ್ಟಿದಗಾಯ,ಬಲಗಣ್ಣಿನ ಪಕ್ಕದಲ್ಲಿ ಮೆಲಕಿನ ಪಕ್ಕದಲ್ಲಿ ಚರಚಿ
ರಕ್ತಗಾಯವಾಗಿದ್ದು , ಬಲಕಿವಿಯ ಕೆಳಭಾಗದಲ್ಲಿ ಗುಪ್ತ ಪೆಟ್ಟಾಗಿದ್ದು ಎದೆಯ ಭಲಭಾಗದಲ್ಲಿ
ಅಲ್ಲಲ್ಲಿ ಚರ್ಚಿದ ಕಂದು ಗಂಟಿದ ಗಾಯಗಳಾಗಿರುತ್ತವೆ, ಎಡಬುಜಕ್ಕೆ ಅಲಲ್ಲಿ ಚರಚಿದಗಾಯ, ಬಲಗಾಲು ಮೊಳಕಾಲು ಕೆಳಗೆ ಕಂದುಗಟ್ಟಿದ ಚರಚಿದ
ಗಾಯಗಳಾಗಿರುತ್ತವೆ.ಆಗ ನನ್ನಗಂಡ ಅಬ್ದುಲಸತ್ತಾರೆನಿಗೆ ಅಂಬುಲೆನ್ಸನಲ್ಲಿ ಹಾಕಿ ಆಸ್ಪತ್ರೆಗೆ
ಕಳುಹಿಸಿದವರು ಹಾಜರಿದ್ದು ಅವನ ಹೆಸರು ಅಬ್ದುಲರಶೀದ ತಂದೆ ಸೈಯದ ಇಮಾಮ ಅಂತಾ ಗೊತ್ತಾಗಿದ್ದು
ಅವನಿಗೆ ವಿಚಾರಿಸಲು ದಿನಾಂಕ. 15-01-2019 ರಂದು.ಲಂಗಾರಹನುಮಾನ ನಗರ ಕ್ರಾಸ ರಿಂಗ ರೋಡ ಮೇಲೆ ಯಾವುದೋ ವಾಹನದ
ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ನನ್ನ ಗಂಡನಿಗೆ
ಡಿಕ್ಕಿಹೊಡೆದು ಭಾರಿ ಗಾಯಗೊಳಿಸಿ ತನ್ನ ವಾಹನ ಹಾಗೆ ಓಡಿಸಿಕೊಂಡು ಹೊಗಿರುತ್ತಾನೆ ಅಂತಾ
ತಿಳಿಸಿದ್ದು ಅದು ನಿಜವಿದ್ದು ದಿನಾಂಕ. 22-02-2019 ರಂದು ಮಧ್ಯಾಹ್ನ 2-00 ಪಿ.ಎಂ.ದ ಸುಮಾರಿಗೆ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ
ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣ
ಅಫಜಲಪೂರ
ಠಾಣೆ : ಶ್ರೀ ಹಣಮಂತ ತಂದೆ ಲಕ್ಕಪ್ಪ ಜಮಾದಾರ ಸಾ||ಶಿವಪೂರ ತಾ||ಅಫಜಲಪೂರ ರವರು ತಮ್ಮ ಗ್ರಾಮದ ಸಿದ್ದಪ್ಪ ತಂದೆ ಗುರಪ್ಪಾ ಜಮಾದಾರ ರವರ ಹೋಲ ಪಾಲದಿಂದ ಮಾಡಿದ್ದು ಇರುತ್ತದೆ ಸಧ್ಯ ಸದರಿ ಹೊಲದಲ್ಲಿ ಕಬ್ಬಿನ ಬೆಳೆ ಇರುತ್ತದೆ ನಿನ್ನೆ ದಿನಾಂಕ 21/01/2019 ರಂದು ರಾತ್ರಿ 9.00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಊಟ ಮಾಡಿ ಕಬ್ಬಿಗೆ ನೀರು ಬಿಡಲು ನನ್ನ ಸಂಗಡ ನನ್ನ ಗೆಳೆಯರಾದ ಮಲ್ಕಪ್ಪ ತಂದೆ ಶಂಕರ ಜಮಾದಾರ, ಪ್ರಕಾಶ ತಂದೆ ಶರಣಪ್ಪ ಜಮಾದಾರ, ರಾಮಣ್ಣ ತಂದೆ ಸಿದ್ದಪ್ಪ ಜಮಾದಾರ ಹಾಗು ಲಕ್ಷಣ ತಂದೆ ಕುಪ್ಪಣ್ಣ ಜಮಾದಾರ ರವರೇಲ್ಲರು ಕೂಡಿ ಹೊಲಕ್ಕೆ ಹೋಗುತಿದ್ದಾಗ ಹೊಳೆಯ ಹತ್ತಿರ ಮರಳು ಟೆಂಡರ ಪಾಯಿಂಟ್ ಆಫಿಸ್ ಹತ್ತಿರ ರಾತ್ರಿ 10.00 ಗಂಟೆ ಸುಮಾರಿಗೆ ಹೋದಾಗ 6 ಜನರು ನಾವು ಹೋಗುವ ದಾರಿಗೆ ಟಿಪ್ಪರ ಅಡ್ಡವಾಗಿ ನಿಲ್ಲಿಸಿದರು ನಾವು ಸದರಿಯವರ ಹತ್ತಿರ ಹೋಗಿ ನೋಡಲಾಗಿ ಅವರು ನಮಗೆ ಪರಿಚಯದವರೇಯಾದ ದೇವಣಗಾಂವ ಗ್ರಾಮ ರವಿ ಗಂಗನಳ್ಳಿ, ಮಲ್ಲು ಮೇತ್ರೆ, ಶರಣು ಹಾಳಕಿ, ಸದ್ದಾಮ್ ಅವಟೆ ಹಾಗು ಇನ್ನೂ ಇಬ್ಬರ ಹೆಸರು ನನಗೆ ಗೋತ್ತಿರುವುದಿಲ್ಲ ನಾವು ಸದರಿಯವರಿಗೆ ನಾವು ಹೊಲಕ್ಕೆ ಹೋಗುವದಿದೆ ನೀವು ಈ ರೀತಿಯಾಗಿ ಟಿಪ್ಪರ ಅಡ್ಡಲಾಗಿ ನಿಲ್ಲಿಸಿದರೆ ನಾವು ಹೇಗೆ ಹೋಗುವದು ಅಂತ ಹೇಳುತಿದ್ದಾಗ ಮಲ್ಲು ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನಗೆ ತಡೆದು ನಿಲ್ಲಿಸಿ ರಂಡಿ ಮಗನೆ ನಮಗೆ ಎದುರ ಮಾತಾಡ್ತಿ ಅಂತ ಅಂದಾಗ ರವಿ ಈತನು ತನ್ನ ಟೊಂಕದ ಬೆಲ್ಟನಿಂದ ಪಿಸ್ತೂಲ ತಗೆದು ನನ್ನ ಎಡ ಮೆಲಕಿನ ಹತ್ತಿರ ಹಿಡಿದನು ಮಲ್ಲು ಈತನು ತನ್ನ ಪ್ಯಾಂಟಿನ ಜೆಬಿನಿಂದ ಪಿಸ್ತೂಲ ತಗೆದು ನನ್ನ ಎಡ ಮಗ್ಗಲಿನ ಹೊಟ್ಟೆಯ ಹತ್ತಿರ ಹಿಡಿದನು ಶರಣು ಈತನು ನನ್ನ ಬೆನ್ನ ಹಿಂದೆ ತನ್ನ ಹತ್ತಿರ ಇದ್ದ ಪಿಸ್ತೂಲನ್ನು ತಗೆದು ನನ್ನ ತಲೆಯ ಹತ್ತಿರ ಹಿಡಿದನು ಆಗ ಅಲ್ಲೆ ಇದ್ದ ಮಲ್ಕಪ್ಪ ಜಮಾದಾರ, ಪ್ರಕಾಶ ಜಮಾದಾರ, ರಾಮಣ್ಣ ಜಮಾದಾರ ಹಾಗು ಲಕ್ಷಣ ಜಮಾದಾರ ರವರು ಬಂದು ಸದರಿಯರಿಗೆ ತಿಳುವಳಿಕೆ ಹೇಳುತಿದ್ದಾಗ ಸದ್ದಾಮ್ ಈತನು ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ಎಡಗಣ್ಣಿನ ಪಕ್ಕ ಹೊಡೆದು ರಕ್ತಗಾಯ ಪಡಿಸಿದ ಆಗ ನಾನು ಕೆಳಗೆ ಬಿದ್ದಾಗ ಎಲ್ಲರು ಮನ ಬಂದಂತೆ ನನ್ನ ಹೊಟ್ಟೆಗೆ ಎದೆಗೆ ತಮ್ಮ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು
ಪ್ರಕರಣ :
ಅಫಜಲಪೂರ ಠಾಣೆ :
ಶ್ರೀಮತಿ ಧಾನಮ್ಮಾ ಗಂಡ ಶಿವಶರಣಪ್ಪ ಕುಮಸಗಿ ಸಾ||ಅಳ್ಳಗಿ(ಬಿ) ರವರ ಗಂಡನಾದ ಶಿವಶರಣಪ್ಪ ರವರ ಹೆಸರಿನಲ್ಲಿ ಅಳ್ಳಗಿ (ಬಿ) ಸಿಮಾಂತರ ಹೊಲ ಸರ್ವೆ ನಂ 259 ರಲ್ಲಿ 10 ಏಕರೆ ಹೊಲ ಇರುತ್ತದೆ ನನ್ನ ಗಂಡ ಒಕ್ಕಲುತನ ಕೆಲಸಕ್ಕೆಂದು ಅಫಜಲಪೂರ Corporation Bank
ದಲ್ಲಿ 4,00,000/-ರೂಪಾಯಿ ಸಾಲ ಹಾಗು ಖಾಸಗಿಯಾಗಿ
6,00,000/-ರೂಪಾಯಿ ಸಾಲ ಮಾಡಿಕೋಂಡಿದ್ದು ಇರುತ್ತದೆ ಈ ವರ್ಷ ಮಳೆ ಸರಿಯಾಗಿ ಇಲ್ಲದ ಕಾರಣ ಹೊಲದಲ್ಲಿ ಬೆಳೆ ಬೆಳೆದಿರುವುದಿಲ್ಲ ನನ್ನ ಗಂಡ ಈ ಸಲ ಮಳೆ ಬಂದಿಲ್ಲ ಸಾಲ ಹೇಗೆ ಮರಳಿಸುವದು ಅಂತ ನನ್ನ ಮುಂದೆ ಆಗಾಗ ಹೇಳುತಿದ್ದರು ನಾನು ಹೇಗಾದರು ಮಾಡಿ ಸಾಲ ಮುಟ್ಟಿಸಿದರಾಯಿತು ಅಂತ ಹೇಳಿದರು ನನ್ನ ಗಂಡ ಹೇಳದೆ ಅದೆ ಚಿಂತೆಯಲ್ಲಿ ಇರುತಿದ್ದರು ದಿನಾಂಕ 22/01/2019 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ನನ್ನ ಗಂಡ ಇಬ್ಬರು ಮನೆಯಲಿದ್ದಾಗ ನನ್ನ ಗಂಡ ಸಾಲ ಹೇಗೆ ಮುಟ್ಟಿಸಲಿ ನನಗೆ ಜೀವನ ಸಾಕಾಗಿದೆ ಅಂತ ಹೇಳಿದರು ನಾನು ಚಿಂತೆ ಮಾಡಬೇಡಿ ಅಂತ ಹೇಳಿದ್ದು ನನ್ನ ಗಂಡ ಹೊಲಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾರೆ. ಇಂದು 1.00 ಪಿಎಮ್ ಸುಮಾರಿಗೆ ನಮ್ಮ ಗ್ರಾಮದ ಮಂಜುನಾಥ ತಂದೆ ಶಿವಶಂಕರ ನಿಂಬಾಳ ರವರು ನಮ್ಮ ಮನೆಗೆ ಬಂದು ನನಗೆ ತಿಳಿಸಿದ್ದೆನೆಂದರೆ ನಾನು ಬೋರಿ ಹಳ್ಳದ ಹತ್ತಿರ ನಮ್ಮ ಮೋಟಾರ ಚಾಲು ಮಾಡಲು ಹೋದಾಗ ಬೋರಿ ಹಳ್ಳದ ಹತ್ತಿರ ನಿಮ್ಮ ವಿದ್ಯೂತ್ ಮೋಟಾರ ಹತ್ತಿರ ಯಾರೋ ಬಿದ್ದಿದ್ದರು ನಾನು ಸಮೀಪ ಹೋಗಿ ನೋಡಲಾಗಿ ಸದರಿ ವ್ಯಕ್ತಿ ನಿಮ್ಮ ಗಂಡ ಶಿವಶರಣಪ್ಪ ರವರಿದ್ದು ವಿದ್ಯೂತ್ ತಗುಲಿ ಮೃತ ಪಟ್ಟಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment