Police Bhavan Kalaburagi

Police Bhavan Kalaburagi

Monday, January 28, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ ಬಸಲಿಂಗಪ್ಪ ತಂದೆ ಮಲ್ಲಣ್ಣ ಗುಂಡಗುರ್ತಿ  ಸಾ|| ವೆಂಕಟೇಶ ನಗರ ಸೇಡಂ, ತಾ|| ಸೇಡಂ. ರವರ ತಾಯಿಯಾದ  ಶರಭಾವತಿ ಇವರು ಸೇಡಂ ಸಂತೆಯಲ್ಲಿ ತರಕಾರಿ ತರಲು ಹೋದಾಗ ನಮ್ಮ ತಾಯಿಯ ಕಾಕಾನ ಮಕ್ಕಳಾದ ಮಹೇಶ ತಂದೆ ನಾಗೆಂದ್ರಪ್ಪ ಪೇಚಟ್ಟಿ, ದಿನೇಶ ತಂದೆ ನಾಗೆಂದ್ರಪ್ಪ ಪೇಚಟ್ಟಿ, ಸತೀಷ ತಂದೆ ನಾಗೆಂದ್ರಪ್ಪ ಪೇಚಟ್ಟಿ ಹಾಗು ಕಾಕನಾದ ನಾಗೆಂದ್ರಪ್ಪ ಪೇಚಟ್ಟಿ ಎಲ್ಲರೂ ಸಾ|| ಕೊಡದೂರ, ತಾ|| ಕಾಳಗಿ, ಜಿ|| ಕಲಬುರಗಿ. ಇವರುಗಳು ನಮ್ಮ  ತಾಯಿ ಮಾನ್ಯ ನ್ಯಾಯಾಲಯದಲ್ಲಿ ಹೊಲದ ಆಸ್ತಿ ಸಂಬಂಧ ಕೇಸ ಹಾಕಿದ್ದು, ಸದರಿ ಕೇಸ ತಾಯಿಯಂತೆ ಎಲ್ಲಾ ನ್ಯಾಯಾಲಯಗಳಲ್ಲಿ ತೀರ್ಪು ಆಗಿದ್ದು, ಇದನ್ನು ಸಹಿಸದೆ ಆರೋಪಿತರು ನನ್ನ ತಾಯಿಗೆ ಕೊಲೆ ಮಾಡಬೇಕೆಂದು ಒಳಸಂಚು ರೂಪಿಸಿ ಕುತ್ತಿಗೆಯ ಗಂಟಲಿನ ಮೇಲೆ ಚಾಕುವಿನಿಂದ ಕೊಯ್ದು ಭಾರಿ ರಕ್ತಗಾಯ ಪಡಿಸಿದ್ದು, ಉಪಚಾರಕ್ಕಾಗಿ ಸೇಡಂ ಸರಕಾರಿ ಆಸ್ಪತ್ರೆಗೆ ಸೇರಿಸಿ, ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋದಾಗ ನನ್ನ ತಾಯಿ ಶರಭವತಿ ಇವಳು ಮೃತಪಟ್ಟಿರುತ್ತಾಳೆ ನನ್ನ  ತಾಯಿಯ ಪರವಾಗಿ ಆಸ್ತಿ ವಿಷಯದಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿ ಪರವಾಗಿ ತೀರ್ಪು ಆಗಿದ್ದನ್ನು ಸಹಿಸದೆ ಆರೋಪಿತರೆಲ್ಲರು ಒಳಸಂಚು ರೂಪಿಸಿ ನನ್ನ  ತಾಯಿಗೆ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀಮತಿ. ತೇಜಮ್ಮಾ ಗಂಡ ಬಸಣ್ಣಾ ನಾಗೂರೆ ಸಾ:ಲಾಡಮುಗಳಿ ಇವರದು ಲಾಡಮುಗಳಿ ಸೀಮಾಂತರದಲ್ಲಿ ಹೊಲ ಸರ್ವೆ ನಂ:99ರಲ್ಲಿ 4ಎಕರೆ, 14 ಗುಂಟೆ ಜಮೀನು ಇರುತ್ತದೆ. ಸದರಿ ಹೊಲದ ಸಾಗುವಳಿ ಹಾಗೂ ಆಗುಹೋಗುವಗಳನ್ನು ನನ್ನ ಮಗನಾದ ಬಂಡೆಪ್ಪಾ ತಂದೆ ಬಸಣ್ಣಾ ನಾಗೂರೆ, ಈತನೆ ನೋಡಿಕೊಳ್ಳುತ್ತಾನೆ. ಸದರಿಯವನ ವಿವಾಹವಾಗಿದ್ದು, ಅವನಿಗೆ 3ಗಂಡು ಮಕ್ಕಳು ಇರುತ್ತವೆ. ಅಲ್ಲದೇ ನಮ್ಮ ಇಡಿ ಕುಟುಂಬದ ನಿರ್ವಹಣೆ ಅವನೆ ನೋಡಿಕೊಳ್ಳತ್ತಿದ್ದನು. ನನ್ನ ಹೆಸರಿಗೆ ಇರುವ ಹೊಲದ ಸಾಗುವಳಿಗಾಗಿ ಹಾಗೂ ಲಾಗೋಡಿ ಲಂಚಿಟಿ ಅಂತಾ ಹೊಲದ ಮೇಲೆ 150000/- ಲಕ್ಷ ಸಾಲವನ್ನು ನಮ್ಮೂರಿನ ಕೆ.ಜಿ.ಬಿ ಬ್ಯಾಂಕಿನಿಂದ ಮಾಡಿ ಹೊಲಕ್ಕೆ ಹಾಕಿದ್ದನು. ಅಲ್ಲದೇ ಕೃಷಿ ಕೆಲಸಕ್ಕೆ ಅಂತಲೇ ಅವರಿವರ ಹತ್ತಿರ ಅಂದಾಜು 300000/- ಲಕ್ಷ ರೂಪಾಯಿ ಸಾಲಮಾಡಿದ್ದನು.  ಈ ವರ್ಷ ಹೊಲದಲ್ಲಿ ತೋಗರಿ ಸೊಯಾಬಿನ್ ಮುಂತಾದ ಬೆಳೆಗೆ ಸಿಕ್ಕಾಪಟ್ಟಿ ಖರ್ಚು ಮಾಡಿದ್ದು ಸರಿಯಾಗಿ ಮಳೆ ಬರದ ಕಾರಣ ಬೆಳನಷ್ಟವಾಗಿ ಯಾವುದೇ ಪೀಕು ಬರದ ಕಾರಣ ಹಾಗೂ ತಾನು ಪಡೆದ ಸಾಲ ಹೇಗೆ ತಿರಿಸುವುದು ಅಂತಾ ದಿಕ್ಕು ತೋಚದೆ ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ಜಿಗುಪ್ಸೆ ಹೊಂದಿ ತಿರುಗಾಡುತ್ತಿದ್ದನು.        ದಿನಾಂಕ: 27/01/2019 ರಂದು ಮಧ್ಯಾಹ್ನ 1-00 ಪಿ.ಎಂ ಸುಮಾರಿಗೆ ಹೊಲದ ಕಡೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು, ಅಂದಾಜು 1-40 ಪಿ.ಎಂ ಸುಮಾರಿಗೆ ನಮ್ಮೂರಿನ ಅನೀಲ ತಂದೆ ಸಿದ್ರಾಮ ಕೊಡದೂರ ನಮ್ಮ ಮನೆಯ ಬಂದು ನನ್ನ ಮಗ ಬಂಡೆಪ್ಪನು ನಮ್ಮ ಹೊಲದ ಹುಣಸೆ ಗಿಡಕ್ಕೆ ಊರುಲು ಹಾಕಿಕೊಂಡ ವಿಷಯ ನಮಗೆ ತಿಳಿಸದ್ದರಿಂದ ನಾನು ಹಾಗೂ ನನ್ನ ಇನ್ನೊಬ್ಬ ಮಗನಾದ ಗುಂಡಪ್ಪಾ ಸೊಸೆಯಾದ ಪುಷ್ಪಾ ಇವರು ಹೊಲಕ್ಕೆ ಬಂದು ನೋಡಲಾಗಿ ನನ್ನ ಮಗ ಬಂಡಪ್ಪನು ನೈಲಾನ್ ಹಗ್ಗದಿಂದ ತನ್ನ ಕುತ್ತಿಗೆಗೆ ಬಿಗಿದಿಕೊಂಡು ನಮ್ಮ ಹೊಲದಲ್ಲಿ (ಡಾಂಬರ್ ರಸ್ತೆಗೆ ಹೊಂದಿಕೊಂಡ) ಬೆವಿನ ಮರಕ್ಕೆ ಊರಲು ಹಾಕಿಕೊಂಡು ನೇತಾಡುತ್ತಿದ್ದನು. ಕೂಡಲೆ ನಾವು ಎಲ್ಲರೂ ಸದರಿಯವನಿಗೆ ಮರದಿಂದ ಕೆಳಗೆ ಇಳಿಸಿ ನೋಡಲಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಇಸ್ಮಾಯಿಲ್ ತಂದೆ ಬಸೀರಸಾಬ ಮುಲ್ಲಾ ಸಾ; ನ್ಯೂ ಅನ್ಸಾರಿ ಮೊಹಲ್ಲಾ ಆಳಂದ ಇವರು ದಿನಾಂಕ  25/01/2019 ರಂದು ನಮ್ಮ ಸಂಬಂದಿಕರ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮದ ಪ್ರಯುಕ್ತ ನಾನು & ನನ್ನ ಹೆಂಡತಿ ಅಲಿಯಾ ಬೇಗಂ ಹಾಗು ಮಕ್ಕಳೊಂದಿಗೆ ಆಳಂದ ಪಟ್ಟಣದ ಬಂದವಾರಡ ಗಲ್ಲಿಯಲ್ಲಿನ ಸಂಬಂದಿಕರ ಮನೆಗೆ ಕಾರ್ಯಕ್ರಮಕ್ಕೆ ಹೋಗಿ ಸದರಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸ ರಾತ್ರಿ 10;00 ಗಂಟೆ ಸುಮಾರಿಗೆ ಆಳಂದ ಬಸ್ಸ ನಿಲ್ದಾಣದ ಹತ್ತೀರ ಕರ್ನಾಟಕ ಮೇಡಿಕಲ ಮುಂದಿನ ಡಾಂಬರ ರೋಡಿನ ಮೇಲೆ ನಾನು ಮತ್ತು ನನ್ನ ಅಣ್ಣ ಮೊಹ್ಮದ ಮುಲ್ಲಾ ಹಾಗು ನಮ್ಮ ಮುಂದೆ ನನ್ನ ಹೆಂಡತಿ ಕಾಲ್ನುಡಿಯ ಮುಖಾಂತರ ನಮ್ಮ ಮನೆಗೆ ನಡೆದುಕೊಂಡು ಬರುತ್ತಿರುವಾಗ ನಮ್ಮ ಹಿಂದಿನಿಂದ ಒಬ್ಬ ಅಟೋ ರಿಕ್ಷಾ ಚಾಲಕನು ತನ್ನ ಅಟೋವನ್ನು ಅತೀ ವೇಗ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮುಂದೆ ಹೊಗುತ್ತಿದ್ದ ನನ್ನ ಹೆಂಡತಿಗೆ ಒಮ್ಮಿಲೇ ಕಟ್ ಹೊಡೆದು ಡಿಕ್ಕಿಪಡಿಸಿದ್ದು ಆಗ ನನ್ನ ಹೆಂಡತಿ ಕೆಳಗೆ ಸಿಡಿದು ಬಿದ್ದಾಗ ಸದರಿ ಅಟೋ ರಿಕ್ಷಾಕ್ಕೆ ನೊಡಲಾಗಿ ಅದರ ನಂಬರ ಕೆಎ-32, ಎ-5705 ಇದ್ದು ನಾನು ಚಿರಾಡುತ್ತಾ ಓಡಿ ಹೊಗುವದನ್ನು ನೋಡಿ ಸದರಿ ಆಟೋ ಚಾಲಕನು ತನ್ನ ಅಟೋವನ್ನು ನಿಲ್ಲಿಸಿದಂತೆ ಮಾಡಿ ತನ್ನ ಅಟೋ ಸಮೇತ ಓಡಿ ಹೋಗಿದ್ದು ಸದರಿ ಘಟನೆಯಲ್ಲಿ ನನ್ನ ಹೆಂಡತಿ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಬೇಹೋಷ ಆಗಿದ್ದರಿಂದ ಅವಳಿಗೆ ಉಪಚಾರ ಕುರಿತು ನಾನು ಮತ್ತು ನನ್ನ ಅಣ್ಣ ಮೋಹ್ಮದಸಾಬ ತಂದೆ ಬಸೀರಸಾಬ ಮುಲ್ಲಾ ರವರುಗಳು ಕೂಡಿಕೊಂಡು ನಮ್ಮ ಸಂಬಂದಿಕರ ಅಟೋ ಚಾಲಕನಾದ ತಾಯರ ಅನ್ಸಾರಿ ತಂದೆ ರಸೀದ ಅನ್ಸಾರಿ ಇತನಿಗೆ ಫೋನ ಮಾಡಿ ವಿಷಯ ತಿಳಿಸಿದ್ದು ಆಗ ತನ್ನ ಅಟೋವನ್ನು ತಗೆದುಕೊಂಡು ಬಂದಿದ್ದು, ನನ್ನ ಹೆಂಡತಿಗೆ ಅವನ ಅಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಪಿ.ಎನ್.ಶಹಾ ಖಾಸಗಿ ಆಸ್ಪತ್ರೆಗೆ ಆಳಂದಕ್ಕೆ ತಂದು ತೋರಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಸನ್ರೈಜ ಆಸ್ಪತ್ರೆ ಕಲಬುರಗಿ ತಂದು ಸೇರಿಕೆ ಮಾಡಿರುತ್ತೇನೆ. ಸನರೈಸ್ ಆಸ್ಪತ್ರೆ ಕಲಬುರಗಿಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಆಲಿಯಾ ಬೇಗಂ ಇವಳು ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27/01/2019 ರಂದು ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ದಿನಾಂಕ: 24/01/2019 ರಂದು ಹುಮನಾಬಾದನಲ್ಲಿ ಲೋಡ್ ಖಾಲಿ ಮಾಡಿಕೊಂಡು ರಾತ್ರಿ 8:00 ಗಂಟೆ ಸುಮಾರಿಗೆ ನೂರ್ ದಾಭಾದಲ್ಲಿ ಊಟ ಮಾಡಿ ಕಲಬುರಗಿ ಕಡೆಗೆ ಬರುತ್ತಿದ್ದಾಗ ಕುದುರೆಮುಖ ಒಡ್ಡು ದಾಟಿ ಚಿಂದಿ ಬಸವಣ್ಣನ ದೇವರ ಗುಡಿ ದಾಟಿ ಇಳಿಜಾರಿನಲ್ಲಿ ಬರುತ್ತಿದ್ದಾಗ ರೋಡಿನ ಬದಿಗೆ ಬಂದು ಲಾರಿ ಪಲ್ಟಿ ಮಾಡಿ ಬಿದ್ದಿದ್ದು ಅದರ ಚಾಲಕ ಯಾವುದೇ ಇಂಡಿಕೇಟರ್ ಲೈಟ್ ವಗೈರೆ ಹಾಕದೆ ಹೋಗಿ ಬರುವ ವಾಹನಗಳಿಗೆ ತೊಂದರೆಯಾಗುವಂತೆ ತನ್ನ ಲಾರಿ ರೋಡಿನ ಮೇಲೆ ಬಿಟ್ಟು ಹೋಗಿದ್ದು ನಮ್ಮ ವಾಹನ ಚಾಲಕ ಹಣಮಂತ ಗೌರಕ್ಕನವರ ಇತನು ತನ್ನ ಸೈಡಿಗೆ ಹೋಗುತ್ತಿದ್ದಾಗ ಅಂದಾಜು ರಾತ್ರಿ 11:00 ಗಂಟೆ ಸುಮಾರಿಗೆ ಎದುರುಗಡೆ ಪಲ್ಟಿಯಾಗಿ ಬಿದ್ದಿದ ಯಾವುದೋ ಇಂಡಿಕೇಟರ್ ಲೈಟ್ ಹಾಕದೇ ಇರುವ ಕಬ್ಬು ತುಂಬಿದ ಲಾರಿಗೆ ಹಿಂದೆನಿಂದ ಡಿಕ್ಕಿಯಾಗಿ ಅಪಘಾತವಾಗಿದ್ದು ನನಗೆ ಹಣೆಯ ಮೇಲೆ ತರಚಿದ ಗಾಯವಾಗಿದ್ದು ಹಣಮಂತ ಗೌರಕ್ಕೆನವರ ಇವರಿಗೆ ನೋಡಲಾಗಿ ಎಡತಲೆಗೆ ತರುಚಿದ ರಕ್ತಗಾಯ, ಬಲಗೈ ರಟ್ಟೆಯ ಹತ್ತಿರ ಕೈ ಮುರಿದಿದ್ದು ಬಲಪಕ್ಕೆಗೆ ಸೊಂಟದ ಹತ್ತಿರ ಭಾರಿರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಮತ್ತು ಮಗ್ಗಲಿನ ಬಗಲಲ್ಲಿ ಅಲ್ಲಲ್ಲಿ ತರಚಿದ ರಕ್ತಗಾಯವಾಗಿ ನರಳಾಡುತ್ತಿದ್ದನು. ನಾನು ನಿಧಾನವಾಗಿ ನಮ್ಮ ವಾಹನದಿಂದ ಕೆಳಗೆ ಇಳಿದು ಕಬ್ಬು ತುಂಬಿದ ಲಾರಿ ನಂಬರ ನೋಡಲಾಗಿ ಕೆ.ಎ-39-0890 ಇದ್ದು ಅದರ ಚಾಲಕ ಇರಲಿಲ್ಲ ನಂತರ ದಾರಿಗೆ ಹೋಗುವ ಜನರು ನೆರೆದಿದ್ದು ಯಾರೋ ಆಂಬುಲೇನ್ಸ್ ಗಾಡಿಗೆ ಫೋನ್ ಮಾಡಿದ್ದರಿಂದ ಸ್ವಲ್ಪ ಸಮಯದ ನಂತರ ಆಂಬುಲೇನ್ಸ್ ಬಂದಿದ್ದು ಅದರಲ್ಲಿ ಹಣಮಂತ ಗೌರಕೆನವರ ಇತನಿಗೆ ಹಾಕಿಕೊಂಡು ನಾನು ಉಪಚಾರ ಕುರಿತು ಕಲಬುರಗಿ ಸರ್ಕಾರಿ ಆಸ್ಪತೆಗೆ ತಂದಿರುತ್ತೆನೆ. ಆಗ ವೈದ್ಯಾಧಿಕಾರಿಗಳು ನೋಡಿ ಈಗಾಗಲೇ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ನಂತರ ನಾನು ಸದರಿ ವಿಷಯವನ್ನು ನಮ್ಮ ಊರಿಗೆ ಫೋನ್ ಮಾಡಿ ಹಣಮಂತ ಗೌರಕೆನವರ ಇವರ ಸಂಬಂಧಿಕರಿಗೆ ತಿಳಿಸಿರುತ್ತೇನೆ ಲಾರಿ ನಂ: ಕೆ.ಎ-39-0890 ನೇದ್ದರ ಚಾಲಕನ್ನು ತನ್ನ ಲಾರಿಯನ್ನು ರೋಡಿನ ಬದಿಗೆ ಪಲ್ಟಿ ಮಾಡಿ ಯಾವುದೇ ಇಂಡಿಕೇಟರ್ ಲೈಟ್ ವಗೈರೆ ಹಾಕದೇ ಬಿಟ್ಟು ಹೋಗಿದ್ದರಿಂದ ಸದರಿ ಅಪಘಾತ ಸಂಭವಿಸಿರುತ್ತದೆ ಅಂತಾ ಶ್ರೀ. ಪ್ರಶಾಂತ ತಂದೆ ಅಶೋಕ ಶಿರಹಟ್ಟಿ ಸಾ:ಮುಳಗುಂದಾ ತಾ.ಜಿ ಗದಗ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸೇಡಂ ಠಾಣೆ : ಶ್ರೀಮತಿ ಶರಣಮ್ಮ ಗಂಡ ಶರಣಪ್ಪ ದೊಡ್ಡಮನಿ, ಸಾ|| ಬಟಗೇರಾ (ಕೆ) ಗ್ರಾಮ, ತಾ|| ಸೇಡಂ ರವರು ತಮಗೆ  ಆರಾಮ ಇಲ್ಲದ ಕಾರಣ ಸರಕಾರಿ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಮರಳಿ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ರೈಲ್ವೆ ಗೇಟ್ ಹತ್ತಿರ ಮಹೇಶ್ ತಂದೆ ದೇವಿಂದ್ರಪ್ಪ ಕೋಡ್ಲಿಲಿ, ಸಾ|| ಸುರಪೂರ, ತಾ||ಸುರಪೂರ, ಜಿಲ್ಲಾ|| ಯಾದಗಿರ ಇತನು ತನ್ನ ಟ್ಯಾಂಕರ್ ನಂ. ಕೆಎ32ಡಿ1812 ನೇದ್ದನ್ನು ಅತೀವೇಗ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡೆಸಿ ರಕ್ತ ಗಾಯ ಮತ್ತು ಗುಪ್ತ ಗಾಯ ಪಡೆಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 24-01-2019 ರಂದು ಮಣೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಣೂರ ಗ್ರಾಮಕ್ಕೆ ಹೋಗಿ, ಮಣೂರ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಶಾಂತಪ್ಪ ಎಮ್ಮೆನವರ ಸಾ: ಮಣೂರ ಅಂತಾ ತಿಳಿಸಿದನು. ನಂತರ ಸದರಿಯವನ ಅಂಗ ಶೋಧನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 890/- ರೂ ನಗದು ಹಣ, ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ, ಒಂದು ಪೇನ್ನ ದೋರೆತವು. ಸದರಿಯವುಗಳನ್ನು ಪಂಚರ ಸಮಕ್ಷಮ 5:20 ಪಿಎಮ್ ದಿಂದ 6:20 ಪಿ.ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 26/01/2019 ರಂದು ಶ್ರೀ ಸಜಾಬಂದಿ ನಂ 250 ಸುಭಾಷ ತಂದೆ ಶಂಕರರಾವ ಮೇತ್ರಿ ಸಾಃ ನಿರ್ಣಾ ಗ್ರಾಮ ತಾಃ ಹುಮನಾಬಾದ ಜಿಃ ಬೀದರ ಹಾ.ವಃ ಕೇಂದ್ರ ಕಾರಾಗೃಹ ಕಲಬುರಗಿ ರವರು  ಕಲಬುರಗಿ ಕೇಂದ್ರ ಕಾರಾಗೃಹದೊಳಗಿನ ಅರಳಿ ಕಟ್ಟೆಯ ಮೇಲೆ ಮಲಗಿಕೊಂಡಾಗ ವಿಚಾರಣಾ ಬಂದಿ ನಂ 10 ನಿಂಗಪ್ಪ ಕೇಂದ್ರ ಕಾರಾಗೃಹ ಕಲಬುರಗಿ ಈತನು  ಬಂದು ವಿನಾಃ ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಬಡಿಗೆಯಿಂದ ಬಲಗಣ್ಣಿಗೆ & ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ, ಕಾಲಿನಿಂದ ಒದ್ದು, ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಕೃಷ್ಣಾ ತಂದೆ ಬಗವಾನ್ ಮುಂಡೆ ಸಾ|| ನಾಗಜರಿ ಪೋಸ್ಟ್|| ದಾರೂರ ತಾ|| ಖೇಜ್ ಜಿ|| ಬೀಡ್ ಹಾ|| || ರೇಣುಕಾ ಸಕ್ಕರೆ ಕಾರ್ಖಾನೆ ಹವಳಗಾ ರವರು ಈಗ 2 ತಿಂಗಳ ಹಿಂದೆ ನಾನು ಮತ್ತು ನನ್ನ ಹೆಂಡತಿಯಾದ ಅರ್ಚನಾ ಹಾಗೂ ನನ್ನ ಅಣ್ಣನಾದ ಜಿತೇಶ ಹಾಗೂ ನನ್ನ ಹೆಂಡತಿಯ ಅಣ್ಣನಾದ ಅಭಿಮಾನ ತೊಂಡೆ ಹಾಗೂ ನಮ್ಮೂರಿನ ವಶಿಷ್ಟ ಮತ್ತು ಇನ್ನು ಕೆಲವು ಜನರು ಕೂಡಿ ಹವಳಗಾ ರೇಣುಕಾ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಲು ಬಂದಿರುತ್ತೇವೆ. ನಾವು ರೇಣುಕಾ ಸಕ್ಕರೆ ಕಾರ್ಖಾನೆಯ ಬಾಜು ಇರುವ ಹೊಲದಲ್ಲಿ ಕೊಂಪಿ ಹಾಕಿಕೊಂಡು ವಾಸವಾಗಿರುತ್ತೇವೆ. ದಿನಾಂಕ 21-01-2019 ರಂದು ಸಾಯಂಕಾಲ 6:00 ಗಂಟೆಗೆ ನಾವು ಕಬ್ಬು ಕಟಾವು ಮಾಡಿ ಮರಳಿ ನಮ್ಮ ಕೊಂಪಿಗೆ ಬಂದು ನಾನು ಮತ್ತು ನಮ್ಮ ಟೋಳಿಯ ಮಕಾದಮ್ಮ ಆದ ಅಭಿಮಾನ್ ತೊಂಡೆ (ನನ್ನ ಹೆಂಡತಿಯ ಅಣ್ಣ) ಇಬ್ಬರು ಕೂಡಿ ಕೋಯ್ತಾಗಳನ್ನು ಶಾಣಿ ಹಿಡಿಸಲು ಕಾರ್ಖಾನೆಯಲ್ಲಿ ತಗೆದುಕೊಂಡು ಹೋಗಿರುತ್ತೇವೆ, ನಾನು ಹೋಗುವಾಗ ನಮ್ಮ ಕೊಂಪಿಯಲ್ಲಿ ನನ್ನ ಹೆಂಡತಿ ಅರ್ಚನಾ ಹಾಗೂ ನನ್ನ ಮಕ್ಕಳಾದ ಗೋಪಾಲ ಹಾಗೂ ಆಕಾಂಕ್ಷಾ ಮೂರು ಜನರು ಇದ್ದಿರುತ್ತಾರೆ. ನಾವು ಕಾರ್ಖಾನೆಯಲ್ಲಿ ಕೋಯ್ತಾಗಳನ್ನು ಶಾಣಿ ಹಿಡಿದುಕೊಂಡು ಮರಳಿ 7:30 ಗಂಟೆಗೆ ನಮ್ಮ ಕೊಂಪಿಗೆ ಬಂದು ನೋಡಲಾಗಿ ಮನೆಯಲ್ಲಿ ನನ್ನ ಎರಡು ಮಕ್ಕಳು ಇದ್ದು, ನನ್ನ ಹೆಂಡತಿ ಇರಲಿಲ್ಲ. ನಂತರ ನನ್ನ ಹೆಂಡತಿಯನ್ನು ನಾನು ಮತ್ತು ನನ್ನ ಅಣ್ಣನಾದ ಜಿತೇಶ ಹಾಗೂ ನನ್ನ ಹೆಂಡತಿಯ ಅಣ್ಣನಾದ ಅಭಿಮಾನ ತೊಂಡೆ ಹಾಗೂ ನಮ್ಮೂರಿನ ವಶಿಷ್ಟ ಮತ್ತು ಇನ್ನು ಕೆಲವು ಜನರು ಕೂಡಿ ಕಾರ್ಖಾನೆಯ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿರುತ್ತೇವೆ ಹಾಗೂ ನಮ್ಮ ಊರಿಗೆ ಮತ್ತು ನಮ್ಮ ಸಂಭಂದಿಕರ ಊರುಗಳಿಗೆ ಪೋನ್ ಮಾಡಿ ವಿಚಾರಿಸಿದ್ದು, ನನ್ನ ಹೆಂಡತಿ ಎಲ್ಲಿಯೂ ಪತ್ತೆ ಆಗಿರುವುದಿಲ್ಲ. ನನ್ನ ಹೆಂಡತಿಯನ್ನು ಹುಡುಕಾಡಿ ಎಲ್ಲಿಯೂ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: