Police Bhavan Kalaburagi

Police Bhavan Kalaburagi

Thursday, March 14, 2019

KALABURAGI DISTRICT REPORTED CRIMES

ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 10-03-2019 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು  ನಮ್ಮ ಹೊಲದಲ್ಲಿ ಜೋಳದ ರಾಶೀ ಇದ್ದುದಿಂದ ಹೊಲಕ್ಕೆ ಹೋಗಿರುತ್ತೇವೆ. ಹೊಲದಿಂದ ಸಾಯಂಕಾಲ 7:00 ಗಂಟೆಯ ಸುಮಾರಿಗೆ ನಾವು ಮನೆತಗೆ ಬಂದಾಗ ಮನೆಯಲ್ಲಿ ನನ್ನ ಮಗಳು ಇದ್ದಿರಲಿಲ್ಲ. ಆಗ ನಾವು ಹುಡುಕಾಡುತ್ತಿದ್ದಾಗ ನನ್ನ ತಮ್ಮನು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಸಿದ್ದಾರೋಡ ತಂದೆ ಶ್ರೀರಾಮ ಮನ್ಮಿ ಎಂಬಾತನು ಮೋಟರ ಸೈಕಲ ನಂ ಕೆಎ-32 -0777 ನೇದ್ದರ ಮೇಲೆ ನಿಮ್ಮ ಮನೆಗೆ ಬಂದು ನಿಮ್ಮ ಮಗಳಿಗೆ ಮೋಟಾರ ಸೈಕಲ್ ಮೇಲೆ ಕರೆದುಕೊಂಡು ಹೋಗಿರುವುದನ್ನು ನಾನು ನೋಡಿರುತ್ತೇನೆ ಎಂದು ತಿಳಿಸಿದನು. ಮತ್ತೆ ನಾವು ಸಿದ್ದಾರೋಡ ಮನ್ಮಿ ರವರ ಮನೆಗೆ ಹೋದಾಗ ಅವನು ತಮ್ಮ ಮನೆಯಲ್ಲಿ ಇದ್ದಿರಲಿಲ್ಲ. ನಂತರ ನಾವು ಊರಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ನಮ್ಮ ಸಂಭಂದಿಕರ ಊರುಗಳಾದ ಮಾದನ ಹಿಪ್ಪರಗಾ, ಯಳಸಂಗಿ, ಮತ್ತು ಚಿಂಚೋಳಿ ಗ್ರಾಮಗಳಿಗೆ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ.  ದಿನಾಂಕ 12-03-2019 ರಂದು ಮದ್ಯಾಹ್ನ 1:30 ಗಂಟೆಯ ಸುಮಾರಿಗೆ ನನ್ನ ಮಗಳು ಮರಳಿ ಮನೆಗೆ ಬಂದು ನಮಗೆ ತಿಳಿಸಿದ್ದೆನೆಂದರೆ, ದಿನಾಂಕ 10-03-2019 ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ಸಿದ್ದಾರೋಡ ಮನ್ಮಿ ಈತನು ಮೋಟರ ಸೈಕಲ ಮೇಲೆ ನಮ್ಮ ಮನೆಗೆ ಬಂದು ನನಗೆ ತನ್ನೊಂದಿಗೆ ಬರಲು ಹೇಳಿದ್ದು ನಾನು ಒಪ್ಪದಿದ್ದರು ನನಗೆ ಹೇದರಿಸಿ ಸುಮ್ಮನೆ ಬಂದರೆ ಸರಿ ಇಲ್ಲದಿದ್ದರೆ ನಿನಗೆ ಇಲ್ಲಿಯೆ ಹೊಡೆದು ಖಲಾಸ ಮಾಡಿ ಹೋಗುತ್ತೇನೆ ಅಂತ ಹೆದರಿಕೆ ಹಾಕಿ ನನಗೆ ಒತ್ತಾಯ ಪೂರ್ವಕವಾಗಿ ತಾನು ತಂದಿದ್ದ ಮೋಟರ ಸೈಕಲ ಮೇಲೆ ನನ್ನನ್ನು ಅಪಹರಿಸಿಕೊಂಡು ಹೋಗಿ, ಸೋನ್ನ ಬ್ರೀಜ ಹತ್ತಿರ ಭೀಮಾ ನದಿಯ ಪಕ್ಕದಲ್ಲಿರುವ ಗಿಡಗಂಟೆಗಳ ಮರೆಯಲ್ಲಿ ಮದ್ಯಾಹ್ನ ನನಗೆ ಒತ್ತಾಯ ಪೂರ್ವಕದಿಂದ ಸಂಬೋಗ ಮಾಡಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ನಂತರ ತನ್ನ ಮೋಟರ ಸೈಕಲ ಭೀಮಾ ನದಿಯ ಬ್ರೀಜ ಪಕ್ಕದಲ್ಲಿ ನಿಲ್ಲಿಸಿ ವಿಜಯಪೂರದ ಕಡೆಗೆ ಹೋಗುವ ಬಸ್ಸಿಗೆ ಹತ್ತಿಸಿಕೊಂಡು ವಿಜಯಪೂರಕ್ಕೆ ಕರೆದುಕೊಂಡು ಅಲ್ಲಿ ಜನರು ಇರಲಾರದ ಪ್ರದೇಶದಲ್ಲಿ ಉಳಿದುಕೊಂಡಿದ್ದು ಅಲ್ಲಿಯೂ ನನಗೆ ಒತ್ತಾಯದಿಂದ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ಇಂದು ದಿನಾಂಕ 12-03-2019 ರಂದು ಬೆಳಿಗ್ಗೆ 09:00 ಗಂಟೆಯ ಸುಮಾರಗೆ ವಿಜಯಪೂರದಿಂದ ಕರೆದುಕೊಂಡು ಹೊರಟು ಮದ್ಯಾಹ್ನ 1:15 ಗಂಟೆಯ ಸುಮಾರಿಗೆ ಅಫಜಲಪೂರದ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದು ಬಿಟ್ಟು ಹೋಗಿರುತ್ತಾನೆ. ದಿನಾಂಕ 10-03-2019 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ಪುಸಲಾಯಿಸಿ ಹೆದರಿಸಿ ಮೋಟರ ಸೈಕಲ ಮೇಲೆ ಅಪಹರಿಸಿಕೊಂಡು ಹೋಗಿ ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯೆ ಎಸಗಿದ ಸಿದ್ದಾರೋಡ ತಂದೆ ಶ್ರೀರಾಮ ಮನ್ಮಿ ಸಾ|| ಅಫಜಲಪೂರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ರವಿಂದ್ರ ತಂದೆ ಶಿವಪ್ಪಾ ಭಂಡಾರಿ ಸಾ; ಸಂಜೀವ ನಗರ ಕಲಬುರಗಿ ರವರು ದಿನಾಂಕ.13-4-2019 ರಂದು ಬೆಳಗ್ಗೆ ಮುಂಜಾನೆ 3 ಗಂಟೆಯ ಸುಮಾರಿಗೆ ನಾನು ಹುಮನಾಬಾದ ರಿಂಗರೋಡ ಹತ್ತಿರ ಕ್ರೋಜರ ಮೇಲೆ ಹೋಗುವ ಕುರಿತು ಕಾಯಿತ್ತಾ ನಿಂತಿರುವಾಗ ಅದೇ ವೇಳೆಗೆ  ಹುಮನಾಬಾದ ರಿಂಗರೋಡದಿಂದ ಆಳಂದ ಚಕ್ಕ ಪೋಸ್ಟ ಕಡೆಗೆ ಹೋಗುವ ರಿಂಗರೋಡ ಮೇಲೆ ಯಾವುದೋ ವಾಹನ ಒಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದ ಸಪ್ಪಳ ಬಂದಿತು ಆಗ ನಾನು ಓಡುತ್ತಾ ಹೋಗಿನೋಡಲು ಒಂದು ದೊಡ್ಡದಾದ ಗೂಡ್ಸ ವಾಹನ ಹೋಗುತ್ತಾ ಇತ್ತು ಕತ್ತಲಲ್ಲಿ ಅದರ ನಂಬರ ಕಾಣಲಿಲ್ಲಾ ಆಗ ಅಲ್ಲಿಯೇ ಬಿದ್ದ ವ್ಯಕ್ತಿಯನ್ನು ನೋಡಲಾಗಿ ವಯಸ್ಸು ಅಂದಾಜು 35-40 ವರ್ಷದವನಿದ್ದು ತಲೆ ಬುರುಡೆ ಒಡೆದು ಮೆದಳು  ಮತ್ತು ಮಾಂಸಖಂಡಗಳು ಹೊರಬಂದಿರುತ್ತವೆ. ಹಾಗೂ ಎಡಗಣ್ಣಿನ ಪಕ್ಕದಲ್ಲಿ ಮೆಲಕಿಗೆ ತಲೆಗೆ ಭಾರಿ ಪೆಟ್ಟಾಗಿ ಭಾರಿ ರಕ್ತಸ್ರಾವವಾಗಿ ಮಾಂಸಖಂಡಗಳು ಹೊರಬಂದಿರುತ್ತವೆ. ಎಡಗೈ ಮುರಿದ್ದು ಎಡಗೈ ಭುಜಕ್ಕೆ ಪೆಟ್ಟಾಗಿ ಮಾಸಖಂಡ ಹೊರಬಂದಿದ್ದು,ಎಡಗೈ ಮೋಳಕೈ ಹತ್ತಿರ ಮುರಿದಂತೆ ಆಗಿರುತ್ತದೆ. ಸದರಿಯವನು ಮೃತ ಪಟ್ಟಿದ್ದು ಅವನ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲಾ,ಸದರಿ ವ್ಯಕ್ತಿಯ ವಯಸ್ಸು 35-40 ವರ್ಷದ ವನಿದ್ದು, ಎತ್ತರ ಅಂದಾಜು 5' 6''ಇದ್ದು ಸಾದಗಪ್ಪು ಮೈ ಬಣ್ಣ ಹೊಂದಿದ್ದು ಬಲಗೈ ರಟ್ಟೆಗೆ ಆಸ್ಪತ್ರೆಯಲ್ಲಿ ಸಲಾಯಿನ ಹಚ್ಚಿಕೊಂಡ ಗಾಯ ಮತ್ತು ಪಟ್ಟಿ ಇರುತ್ತದೆ. ಆದುದರಿಂದ ದಿನಾಂಕ.13-03-2019ರಂದು ಬೆಳಗಿನ ಜಾವ3-00ಎ.ಎಂ.ದ ಸುಮಾರಿಗೆ ಸದರಿ ಅಪರಿಚಿತ ವ್ಯಕ್ತಿಯು  ರಸ್ತೆಯ ಮೇಲೆ ಹೋಗುತ್ತಿದ್ದಾಗ ಅದೇವೇಳಗೆ ಹುಮನಾಬಾದ ರಿಂಗರೋಡ ಕಡೆಯಿಂದ ಯಾವೂದೋ ಗೂಡ್ಸ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ಸದರಿ ವ್ಯಕ್ತಿಗೆ ಡಿಕ್ಕಿ ಹೊಡೆದು ಸದರಿ ವಾಹನದ ಟೈರ ಆತನ ತಲೆಯ  ಮೇಲಿಂದ ಹೋಗಿದ್ದು ತಲೆ ಬುರೆಡೆ ಒಡೆದು ಮಾಂಡ ಖಂಡಗಳು ಹೊರಬಂದಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದು ಅಪಘಾತ ಪಡಿಸಿದ ವಾಹನ ಚಾಲಕನು ತನ್ನ ವಾಹನವನ್ನು ಹಾಗೆ ಓಡಿಸಿಕೊಂಡು ಹೋಗಿದ್ದು ಇರುತ್ತದೆ . ಕಾರಣ ಸದರಿ ಮೃತ ಅಪರಿಚಿತ ವ್ಯಕ್ತಿ ಸಂಬಧಿಕರನ್ನು  ಪತ್ತೆ ಮಾಡುವದು ಹಾಗೂ ಅಪಘಾತ ಪಡಿಸಿದ ವಾಹನ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: