ಕೊಲೆ ಪ್ರಕರಣ :
ಮಾಡಬೂಳ
ಠಾಣೆ : ಶ್ರೀ ಅಣ್ಣನಾದ ಸಿದ್ದಪ್ಪ
ತಂದೆ ದುರ್ಗಪ್ಪ ತಳಕೇರಿ ಸಾ:ಬೇಳಗುಂಪಾ ರವರ ತಮ್ಮನಾದ ಶಿವಯೋಗಿ ಇತನು ದಿನಾಂಕ 09/03/2019 ರಂದು
ಮದ್ಯಾಹ್ನ 3-30 ಪಿ.ಎಂ ಸುಮಾರಿಗೆ ನಮ್ಮ ಮನೆಯ ಮುಂದಿನ ಸಿ.ಸಿ ರಸ್ತೆಯ ಮೇಲೆ ನಮ್ಮ ಮನೆಯ ಸ್ವಲ್ಪ
ದೂರದಲ್ಲಿದ್ದ ನಾಗಮ್ಮ ಇವಳ ಚಿಕ್ಕ ಮಗ ಜದೀಶ ಇವನು ಕೇಲವು ಹುಡುಗರೊಂದಿಗೆ ಆಟವಾಡುತ್ತಿದ್ದಾಗ ನನ್ನ
ತಮ್ಮ ಮನೆಯ ಮುಂದೆ ಆಟವಾಡಬೇಡಿ ಅಂತಾ ಹೇಳಿ ಬೆದರಿಸಿ ಕಳುಹಿಸಿಕೊಟ್ಟಿದ್ದರಿಂದ ಜಗದೀಶನು ತನ್ನ ತಾಯಿ
ನಾಗಮ್ಮಳಿಗೆ ಕರೆದುಕೊಂಡು ನನ್ನ ತಮ್ಮ ಶಿವಯೋಗಿ ಇತನಿಗೆ ಯಾಕೇ ಬೆದರಿಸಿದ್ದಿರಿ ಅಂತಾ ಕೇಳಲು ಹೋದಾಗ
ಆಗ ನಾಗಮ್ಮಳ ಹಿರಿಯ ಮಗನಾದ ನಾಗರಾಜ ತಂದೆ ಸಾಬಣ್ಣ ಕಟ್ಟಿಮನಿ ಇತನು ತನ್ನ ಕೈಯಲ್ಲಿದ್ದ ಬಡಿಗೆ ಹಿಡಿದುಕೊಂಡು
ಬಂದವನೇ ಶಿವಯೋಗಿ ಇತನಿಗೆ ಖಲಾಸ ಮಾಡುತ್ತೆನೆ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಮ್ಮನ
ಬಲ ಮೇಲಕಿಗೆ ಹಾಗೂ ತಲೆಯ ಮೇಲೆ ಜೋರಾಗಿ ಹೊಡೆದನು ಇದರಿಂದ್ದ ನನ್ನ ತಮ್ಮನಿಗೆ ಭಾರಿ ಗುಪ್ತ
ಗಾಯವಾಗಿ ಸ್ಥಳದಲ್ಲಿಯೇ ಬೇಹೋಶ ಆಗಿ ಬಿದ್ದಿರುತ್ತಾನೆ ಈ ಘಟನೆಯನ್ನು ನೋಡಿದ
ನಾನು ನನ್ನ ಹೆಂಡತಿ ಮಲ್ಲಮ್ಮ ಹಾಗೂ ನನ್ನ ಮಕ್ಕಳಾದ ಮಲ್ಲಿಕಾರ್ಜುನ, ಶ್ರೀಶೈಲ, ಹಾಗೂ ನಮ್ಮೂರಿನ
ಜಗಳದ ಕಾಲಕ್ಕೆ ಅಲ್ಲೆ ಇದ್ದ ಸುಬ್ಬಣ್ಣ ತಂದೆ ಭೀಮಶಾ ಕಟ್ಟಿಮನಿ, ಅರ್ಜುನ ತಂದೆ ಕಾಳಪ್ಪ ಎದರುಮನಿ
ಎಲ್ಲರೂ ಕೂಡಿ ಬಂದು ಹೊಡೆಯುವುದನ್ನು ಬಿಡಿಸಿಕೊಂಡಿರುತ್ತೆವೆ ನನ್ನ ತಮ್ಮನಿಗೆ ಒಂದು ಖಾಸಗಿ ವಾಹನ
ಮಾಡಿಕೊಂಡು ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿದ್ದು.ಕಾರಣ ನನ್ನ ತಮ್ಮನಿಗೆ ನಮ್ಮ ಗ್ರಾಮದ
ನಾಗರಾಜ ತಂದೆ ಸಾಬಣ್ಣ ಕಟ್ಟಿಮನಿ ಇತನು ಕೊಲೆ ಮಾಡುವ ಉದ್ದೇಶದಿಂದ ಬೈದು ಬಡಿಗೆಯಿಂದ ತಲೆಯ ಮೇಲೆ
ಮೇಲಕಿನ ಮೇಲೆ ಹೊಡೆದು ಭಾರಿ ಗುಪ್ತ ಗಾಯ ಮಾಡಿದ್ದು ನನ್ನ ತಮ್ಮನನನ್ನು
ಚಿಕಿತ್ಸೆಗೋಸ್ಕರ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ತಮ್ಮನಾದ ಶಿವಯೋಗಿತಂದೆ
ದುರ್ಗಪ್ಪ ತಳಕೇರಿ ಇತನು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14-03-2019 ರಂದು ಮಧ್ಯಾಹ್ನ
ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಳವು ಪ್ರಕರಣ :
ಸೇಡಂ ಠಾಣೆ
: ಶ್ರೀ
ಸದಾಶಿವಯ್ಯ ತಂದೆ ಮಲ್ಲಿನಾಥ ಹಿರೇಮಠ ಸಾ:ಬಿದರಚೇಡ ಗ್ರಾಮ, ಹಾ.ವ: ವಿಶ್ವನಗರ ಸೇಡಂ, ರವರು ದಿನಾಂಕ 13/03/2019 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಾನು
ನನ್ನ ಹೆಂಡತಿ ಶ್ರೀದೇವಿ, ಮಗಳು ದಾಕ್ಷಾಯಿಣಿ ಎಲ್ಲರೂ ಊಟ ಮಾಡಿಕೊಂಡು ಮನೆಯ
ಬಾಗಿಲು ಮುಚ್ಚಿ ಕೀಲಿ ಹಾಕಿ ಮನೆಯ ಛತ್ತಿನ ಮೇಲೆ ಹೋಗಿ ಮಲಗಿಕೊಂಡಿದ್ದು, ಇಂದು ದಿನಾಂಕ 14/03/2019 ರಂದು ಮುಂಜಾನೆ 05-00 ಗಂಟೆಯ ಸುಮಾರಿಗೆ ನನ್ನ
ಹೆಂಡತಿ ಶ್ರೀದೇವಿ ಇವಳು ಎದ್ದು ಛತ್ತಿನ ಮೇಲಿಂದ ಕೆಳಗೆ ಮನೆಗೆ ಬಂದು ನೋಡಲಾಗಿ ನಮ್ಮ ಮನೆಗೆ
ಹಾಕಿದ ಕೀಲಿಯು ಮುರಿದು ಬಾಗಿಲು ತೆರೆದಿದ್ದು ಕಂಡುಬಂದು ಗಾಬರಿಯಾಗಿ ನನಗೆ ಎಬ್ಬಿಸಿದ್ದು, ನಾನು ಮತ್ತು ನನ್ನ
ಹೆಂಡತಿ ಕೂಡಿಕೊಂಡು ಮನೆಯಲ್ಲಿ ಬಂದು ನೋಡಲಾಗಿ ನಮ್ಮ ಮನೆಯಲ್ಲಿ ಅಡುಗೆ ಮನೆಯಲ್ಲಿಟ್ಟಿದ್ದ
ಅಲಮಾರಿಯ ಕೀಲಿ ಮುರಿದು, ಅಲಮಾರಿ ಲಾಕರ ಒಳಗಡೆ ಇಟ್ಟಿದ್ದ, ಬಂಗಾರದ ಮತ್ತು ಬೆಳ್ಳಿಯ ಆಭರಣಗಳು
ನಗದು ಹಣ ಹೀಗೆ ಒಟ್ಟು 1,58,000-00 ರೂ.ಗಳು, ಬೆಲೆಬಾಳುವ ಬಂಗಾರದ
ಆಭರಣಗಳು, ಮತ್ತು ನಗದು ಹಣ, ಯಾರೋ ಕಳ್ಳರು ನಿನ್ನೆ ದಿನಾಂಕ 13/03/2019 ರ ರಾತ್ರಿ 10-30 ಗಂಟೆಯಿಂದ ಇಂದು ದಿನಾಂಕ 14/03/2019 ರಂದು ಬೆಳಿಗ್ಗೆ 5-00 ಗಂಟೆಯ ಮಧ್ಯದ
ಅವಧಿಯಲ್ಲಿ ನಮ್ಮ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ
ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ
ಠಾಣೆ : ಶ್ರೀ ಸಿದ್ದಪ್ಪ ವಿ ಹೊದಲುರ ಕಂದಾಯ ನಿರೀಕ್ಷಕರು ಕರಜಗಿ ರವರು ದಿನಾಂಕ
14/03/2019 ರಂದು ನಸುಕಿನ ಜಾವ ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಮೌಖಿಕ ಆದೇಶದ ಮೇರೆಗೆ ನಾನು ಮತ್ತು ಮೋದಿನಸಾಬ ಗ್ರಾಮ ಲೇಕ್ಕಾಧಿಕಾರಿ ಮಣೂರ ಇಬ್ಬರೂ ಕೂಡಿ ಶೇಷಗಿರಿ ದಾರಿಯಲ್ಲಿ ಭಿಮಾನದಿಯ ದಡಕ್ಕೆ ಬೇಟಿ ನೀಡಿದಾಗ ಅಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿದ್ದ ಟ್ಯಾಕ್ಟರ ಸಂಖ್ಯೆ ಕೆಎ-28 ಟಿ- ಇಂಜೆನ್ ನಂ
NNWY02452 ನೇದ್ದನ್ನು ಜಪ್ತಿ ಮಾಡಲಾಗಿರುತ್ತದೆ. ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿರುತ್ತಾನೆ. ಸದರಿ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರಿಂದ ಸದರಿ ಟ್ಯಾಕ್ಟರ ಮಾಲಿಕ ಮತ್ತು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ 14/03/2019 ರಂದು ರಾತ್ರಿ 09-30 ಗಂಟೆ ಸುಮಾರಿಗೆ ಹೀರಾಪೂರ ಮಜೀದ ಎದುರುಗಡೆ
ಹೋದಾಗ ಅಲ್ಲಿ ಹೀರಾಪೂರ ಮಜೀದ ಹತ್ತಿರ ಇರುವ ಒಂದು ಲೈಟಿನ ಕಂಬದ ಬೆಳಕಿನಲ್ಲಿ 1)ಆನಂದ ತಂದೆ
ಹಣಮಂತ ರಾಂಪೂರೆ ಸಾ: ಕಾಂತಾ ಕಾಲನಿ ಕಲಬುರಗಿ 2)ವಾಜೀದ ಪಟೇಲ್ ತಂದೆ ಲಾಡ್ಲೆ ಪಟೇಲ್ ಸಾ:
ಹೀರಾಪೂರ 3) ವೈಭವ ಸಾ: ಹೀರಾಪೂರ 4)ಅಸದ ಸಾ: ಹೀರಾಪೂರ 5) ಜೈಭೀಮ ಸಾ: ರಾಜಾಪೂರ 6) ಇಲ್ಲು
ಸಾ:ಹೀರಾಪೂರ 7)ಸಾಜೀದ ಸಾ: ಹೀರಾಪೂರ ಮತ್ತು ಇತರರು ನಿಂತಿದಿದ್ದನ್ನು ನೋಡಿ ಅವರ ಹತ್ತಿರ ನಾನು
ಮತ್ತು ಈ ಮೇಲಿನ ಎಲ್ಲಾ ಜನರು ಹೋಗಿ ಆನಂದ ರಾಂಪೂರೆ ಇತನಿಗೆ ಶಿವುಕುಮಾರ ಮೋಟಾರ ಸೈಕಲ ವಾಪಸ್ಸು
ಕೊಡು ಅಂತಾ ಹೇಳಿದಾಗ ಆಗ ಆನಂದ ಮತ್ತು ವೈಭವ ಹಾಗೂ ವಾಜೀದ ಅಸದ ನಾಲ್ಕು ಜನರು ನನಗೆ ನಮ್ಮ
ವ್ಯವಹಾರದಲ್ಲಿ ಯಾಕೇ ನಡುವೆ ಬರುತ್ತೀ ಭೋಸಡಿ ಮಗನೇ ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲಾ
ಅನ್ನುತ್ತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ಆನಂದ ರಾಂಪೂರೆ ಇತನು ತನ್ನ ಹತ್ತಿರವಿದ್ದ ಚಾಕು
ನನ್ನ ಬಲ ಹೊಟ್ಟೆ ಪಕ್ಕೆಗೆ ಹೊಡೆದನು. ವಾಜೀದ ಇತನು ಕೂಡಾ ತನ್ನ ಹತ್ತಿರವಿದ್ದ ಚಾಕುದಿಂದ ನನ್ನ
ಬಲ ಬೆನ್ನ ಹಿಂದೆ ಹೊಡೆದನು. ವೈಭವ ಇತನು ಕಲ್ಲಿನಿಂದ ಎಡಗೈ ಭುಜದ ಮೇಲೆ ಹೊಡೆದು
ಗುಪ್ತಗಾಯಗೊಳಿಸಿದನು. ಅಸದ ಇತನು ಕೈ ಮುಷ್ಟಿ ಮಾಡಿ ನನ್ನ ಬಲ ಮೆಲಕಿನ ಮೇಲೆ ಹೊಡೆದು
ಗುಪ್ತಗಾಯಗೊಳಿಸಿದನು. ಜೈಭೀಮ ಇತನು ಕೂಡಾ ಕೈ ಮುಷ್ಟಿ ಮಾಡಿ ಹೊಟ್ಟೆಯಲ್ಲಿ ಹೊಡೆದನು.ಇಲ್ಲು
ಮತ್ತು ಸಾಜೀದ ಮತ್ತು ಇತರರು ಕೂಡಿಕೊಂಡು ಕೈ
ಮುಷ್ಟಿ ಮಾಡಿ ಬೆನ್ನ ಮೇಲೆ ಹೊಡೆ ಬಡೆ ಮಾಡುತ್ತಿದ್ದಾಗ ನನ್ನ ಜೊತೆಯಲ್ಲಿದ್ದ ಗೆಳೆಯರಾದ
ಶಿವುಕುಮಾರ, ಸುಭಾಷ, ರವಿ, ಅಂಬರೀಷ ಹಡಪದ ಇವರೆಲ್ಲರೂ ಬಿಡಿಸಿಕೊಂಡಾಗ ಅವರಿಂದ ತಪ್ಪಿಸಿಕೊಂಡು
ಅಲ್ಲಿಂದ ಓಡಿ ಹೋದೆನು. ಇಲ್ಲದಿದ್ದರೆ ಈ ಮೇಲಿನ ಎಲ್ಲಾ ಜನರು ನನಗೆ ಕೊಲೆ ಮಾಡಿಯೇ
ಬಿಡುತ್ತಿದ್ದರು. ಅಂತಾ ಶ್ರೀ ಸಚೀನ ತಂದೆ ಶ್ರೀಮಂತ ಹೂಗಾರ ಸಾ : ಬಿದ್ದಾಪೂರ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment