Police Bhavan Kalaburagi

Police Bhavan Kalaburagi

Friday, May 10, 2019

KALABURAGI DISTRICT REPORTED CRIMES


ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 09-05-2019 ರಂದು ಕೂಡಿಗನೂರ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೂಡಿಗನೂರ ಗ್ರಾಮದ ನದಿಯಲ್ಲಿ ಹೋಗಿ ನೋಡಲಾಗಿ ಭೀಮಾ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಸದರಿ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ತನ್ನ ಟ್ರಾಕ್ಟರನಲ್ಲಿದ್ದ ಮರಳನ್ನು ನದಿಯಲ್ಲೆ ಡಂಪ ಎತ್ತಿ ಓಡಿ ಹೋದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ಬಿದ್ದತ್ತು. ನಂತರ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಜಾನ ಡಿಯರ್ ಕಂಪನಿಯ ಟ್ರ್ಯಾಕ್ಟರ ಇದ್ದು ಪಾಸಿಂಗ್ ನಂಬರ ಹಾಕಿರದಿರುವದಿಲ್ಲ ಅದರ ಎಂಜಿನ ನಂಬರ:PY3029D110566 ಚೆಸ್ಸಿ ನಂಬರ-3029DPY01 ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ಶ್ರೀ ಕಲ್ಲಪ್ಪ ತಂದೆ ಶಿವಲಿಂಗಪ್ಪಾ ಹುಡಗಿಕರ ಸಾ : ಹಸರಗುಂಡಗಿ ತಾ : ಚಿಂಚೋಳಿ  ರವರು ದಿನಾಂಕ 09-05-2019 ರಂದು ಬೆಳಿಗ್ಗೆ ತಾನು ಮತ್ತು ತಮ್ಮೂರಿನ ದೊಂಡೆರಾವ ಹಾಗೂ ಅವರ ಮಗ ಅರುಣಕುಮಾರ ಮೂರು ಜನರು ಕೂಡಿಕೊಂಡು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ   ಉಪಚಾರ ಕುರಿತು ಸೇರಿಕೆಯಾಗಿದ್ದ ನನ್ನ ಮಗಳ ಗಂಡನಾದ ಮಲ್ಲಿಕಾರ್ಜುನ ಇತನಿಗೆ ಮಾತನಾಡಿಸುವ ಸಲುವಾಗಿ ನಮ್ಮೂರಿನಿಂದ ಬಸ್ಸ ಮೂಲಕ ನೆಹರು ಗಂಜಗೆ ಬಂದು ಅಲ್ಲಿಂದ ಸಿಟಿ ಬಸ್ಸ ಮೂಲಕ ಕಾಮರೆಡ್ಡಿ ಆಸ್ಪತ್ರೆ ಹತ್ತೀರ ಇಳಿದು ಎಸ.ವಿ ಪಿ ಸರ್ಕಲ ಮತ್ತು ಆರ,ಪಿ ಸರ್ಕಲ ಮುಖ್ಯ ರಸ್ತೆಯ ಮೇಲೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ಕಾಮರೆಡ್ಡಿ ಆಸ್ಪತ್ರೆಗೆ ನಡೆದುಕೊಂಡು ರಸ್ತೆ ದಾಟುತ್ತೀರುವಾಗ ಕಾಮರೆಡ್ಡಿ ಆಸ್ಪತ್ರೆ ಹತ್ತೀರ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32/ಇಡಿ-5182 ನೇದ್ದರ ಸವಾರ ಸಿದ್ರಾಮ ಇತನು ಆರ.ಪಿ ಸರ್ಕಲ ಕಡೆಯಿಂದ ಎಸ.ವಿ.ಪಿ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿದ್ದು ಸಿದ್ರಾಮ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.

No comments: